Kichcha Sudeep: 36 ವರ್ಷದ ಹಳೆಯ ಕನಸನ್ನು ನನಸು ಮಾಡಿಕೊಂಡ ಕಿಚ್ಚ

ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಕ್ರಿಕೆಟ್ ಎಂದರೆ ತುಂಬಾ ಇಷ್ಟ. 1983ರಲ್ಲಿ ಭಾರತ ಕ್ರಿಕೆಟ್​ ತಂಡ ವಿಶ್ವಕಪ್​ ಗೆದ್ದ ಘಟನೆಯನ್ನು ಆಧರಿಸಿ 83 ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಆ ಸಿನಿಮಾವನ್ನು ಕರ್ನಾಟಕದಲ್ಲಿ ಕಿಚ್ಚ ಸುದೀಪ್ ಅರ್ಪಿಸುತ್ತಿದ್ದಾರೆ.

kannada actor kichcha sudeep waited 36 years to take photo with kapil dev gvd

ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಅವರಿಗೆ ಕ್ರಿಕೆಟ್ ಎಂದರೆ ತುಂಬಾ ಇಷ್ಟ. 1983ರಲ್ಲಿ ಭಾರತ ಕ್ರಿಕೆಟ್​ ತಂಡ ವಿಶ್ವಕಪ್​ ಗೆದ್ದ ಘಟನೆಯನ್ನು ಆಧರಿಸಿ 83 ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಆ ಸಿನಿಮಾವನ್ನು ಕರ್ನಾಟಕದಲ್ಲಿ ಕಿಚ್ಚ ಸುದೀಪ್ ಅರ್ಪಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕಪಿಲ್​ ದೇವ್​ (Kapil Dev) ಪಾತ್ರವನ್ನು ಬಾಲಿವುಡ್‌ನ ಸ್ಟೈಲಿಷ್ ನಟ ರಣವೀರ್​ ಸಿಂಗ್ (Ranveer Singh)​ ಮಾಡಿದ್ದಾರೆ. ವಿಶೇಷವಾಗಿ ಕ್ರಿಕೆಟ್‌ನಲ್ಲಿ ಕಪಿಲ್ ದೇವ್ ಎಂದರೆ ಸುದೀಪ್ ಅವರಿಗೆ ಬಹಳ ಅಚ್ಚುಮೆಚ್ಚು ಎಂದು ಅವರೇ ಹೇಳಿಕೊಂಡಿದ್ದು, ಅವರ ಜತೆ ಫೋಟೋ ಕ್ಲಿಕಿಸಿಕೊಳ್ಳಬೇಕು ಎಂಬ ಆಸೆ ಚಿಕ್ಕವಯಸ್ಸಿನಲ್ಲೇ ಸುದೀಪ್​ ಅವರಿಗೆ ಇತ್ತು.

ಈ ಬಗ್ಗೆ ಕಿಚ್ಚ ಸುದೀಪ್ ತಮ್ಮ ಇನ್‍ಸ್ಟಾಗ್ರಾಮ್‌ (Instagram) ಖಾತೆಯಲ್ಲಿ 'ನಾನು ಸುಮಾರು 36 ವರ್ಷಗಳಿಂದ ಕಾಯುತ್ತಿದ್ದ ಚಿತ್ರವಿದು. ನನ್ನ ಕನಸನ್ನು ನನಸು ಮಾಡಿದ್ದಕ್ಕೆ ಧನ್ಯವಾದ ಕಪಿಲ್ ಸರ್. ನೀವು ನಮ್ರತೆಯ ಪ್ರತಿರೂಪ' ಎಂದು ಕ್ಯಾಪ್ಷನ್ ಬರೆದು ಕಪಿಲ್ ಅವರ ಜೊತೆ ಇರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಈ ಮೂಲಕ  36 ವರ್ಷದ ಕನಸನ್ನು ನನಸು ಮಾಡಿಕೊಂಡಿದ್ದಾರೆ. 83 ಸಿನಿಮಾ ಕನ್ನಡದಲ್ಲಿ ಬಿಡುಗಡೆಯಾಗುತ್ತಿದ್ದು, ಈ ಸಿನಿಮಾವನ್ನು ಕಿಚ್ಚ ಸುದೀಪ್ ವಿತರಿಸುತ್ತಿದ್ದಾರೆ. ಶನಿವಾರ (ಡಿ.18) ಬೆಂಗಳೂರಿನಲ್ಲಿ ಈ ಚಿತ್ರದ ಸುದ್ದಿಗೋಷ್ಠಿಯನ್ನು ನಡೆಸಲಾಯಿತು. ಈ ವೇಳೆ ಕಪಿಲ್ ಕುರಿತು ಮಾತನಾಡಿದ ಸುದೀಪ್, ತಮ್ಮ ಬಾಲ್ಯದಲ್ಲಿ ನಡೆದ ಘಟನೆಯನ್ನು ವಿವರಿಸಿದರು.

83 Movie: ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ತೆರೆ ಕಾಣಲಿದೆ ರಣವೀರ್ ಸಿಂಗ್ ಚಿತ್ರ

ತುಂಬಾ ವರ್ಷಗಳ ಹಿಂದೆ ನಾನು 1987-88ರಲ್ಲಿ ಕಪಿಲ್ ದೇವ್ ಅವರನ್ನು ನೋಡೋಕೆ ಹೋಗಿದ್ದೆ. ಅಲ್ಲಿ ಅವರ ಜೊತೆ ಫೋಟೋ ಕೇಳಿದೆ. ಆದರೆ ನನ್ನ ಬ್ಯಾಡ್ ಲಕ್ ಕ್ಯಾಮೆರಾ ವರ್ಕ್ ಆಗಿಲ್ಲ. ಆಗ ನಾನು ಅಳ್ತಾ ಇದ್ದೆ. ಅವಾಗ ನನ್ನ ಕಣ್ಣನ್ನು ಒರೆಸಿ ಎತ್ತುಕೊಂಡಿದ್ದರು. ಆದರೆ ಈಗ ಇವರ ಸಿನಿಮಾ ವಿತರಣೆ ಮಾಡುವ ಭಾಗ್ಯ ನನಗೆ ಸಿಕ್ಕಿದೆ ಎಂದರು. ನನಗೆ ಕಪಿಲ್ ಅಂದರೆ ತುಂಬಾ ಇಷ್ಟ. ಆ ದಿನ ನನಗೆ ತುಂಬಾ ವಿಶೇಷ, ನನಗೆ ಅವರು ಹೀರೋ ಆದವರು. ತುಂಬಾ ವರ್ಷ ಅವರ ಜೊತೆ ಫೋಟೋ ತೆಗೆಸಿಕೊಳ್ಳಲು ಕಾಯ್ದಿದ್ದೀನಿ. ನಾನು ಪ್ರೀತಿ ಮಾಡುವ ಗೇಮ್, ಆಡೋಕೆ ಸಿಕ್ಕಿರೋ ಗೇಮ್ ಕ್ರಿಕೆಟ್. ಕನ್ನಡಕ್ಕೆ 83 ಸಿನಿಮಾ ಅರ್ಪಿಸುತ್ತಿರುವುದಕ್ಕೆ ನನಗೆ ಖುಷಿಯಾಗಿದೆ ಎಂದು ಹೇಳಿದರು.

83 ಚಿತ್ರದ ಬಗ್ಗೆ ಸುದೀಪ್ ಅವರು '1983ರ ವಿಶ್ವಕಪ್​ ಬಗ್ಗೆ ಮಾತನಾಡಲು ಹಲವು ವಿಚಾರಗಳಿವೆ. ಅದರಲ್ಲೊಂದು ಕಥೆ ಇದೆ ಎಂದು ಒಂದು ತಂಡ ನಂಬಿದೆ. ಆ ಕಥೆ ಮಹತ್ವದ್ದಾಗಲಿದೆ ಎಂಬ ನಂಬಿಕೆ ಆ ತಂಡಕ್ಕೆ ಇದೆ. ಆ ನಂಬಿಕೆಯೇ ನನಗೆ ಒಂದು ಅದ್ಭುತ ಕಥೆಯಂತೆ ಕಾಣಿಸುತ್ತಿದೆ. ಒಬ್ಬ ಕ್ರಿಕೆಟ್​ ಪ್ರೇಮಿಯಾಗಿ, ಭಾರತೀಯನಾಗಿ ಚಿತ್ರಮಂದಿರದಲ್ಲಿ ಈ ಚಿತ್ರವನ್ನು ನೋಡಿ ಎಂಜಾಯ್​ ಮಾಡಲು ಬಯಸುತ್ತೇನೆ. ಇಂತಹ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ನಿರ್ದೇಶಕ ಕಬೀರ್​ ಖಾನ್​ ಮತ್ತು ಇಡೀ ತಂಡಕ್ಕೆ ನನ್ನ ಅಭಿನಂದನೆಗಳು. ಭಾರತ ವಿಶ್ವಕಪ್​ ಗೆದ್ದಾಗ ಎಷ್ಟು ಖುಷಿ ಆಗಿತ್ತೋ ಅದೇ ರೀತಿ ಈ ಸಿನಿಮಾ ಬಿಡುಗಡೆಯಾಗುತ್ತಿರುವುದಕ್ಕೆ ಸಂತಸವಾಗುತ್ತಿದೆ ಎಂದು ಹೇಳಿರುವ  ವಿಡಿಯೋವೊಂದನ್ನು ತಮ್ಮ ಟ್ವೀಟರ್‌ (Twitter) ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.

83 Trailer: 1983ರ ವಿಶ್ವಕಪ್‌ ಹಿಂದಿನ ಕಥೆ, ಮೈ ಜುಮ್‌ ಎನಿಸುವ ಟ್ರೇಲರ್ ಇದು...

ಕಬೀರ್ ಖಾನ್ (Kabir Khan) ನಿರ್ದೇಶನದ ಸಿನಿಮಾ ಕಪಿಲ್ ದೇವ್ ನೃತೃತ್ವದಲ್ಲಿ 1983ರಲ್ಲಿ ಭಾರತದ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದ ಕುರಿತಾಗಿದೆ. ರಣವೀರ್ ಸಿಂಗ್ ಕಪಿಲ್ ದೇವ್ ಅವರ ಪಾತ್ರ ಮಾಡಿದರೆ, ಅವರ ನಿಜವಾದ ಪತ್ನಿ ದೀಪಿಕಾ ಪಡುಕೋಣೆ (Deepika Padukone) ಕಪಿಲ್ ದೇವ್ ಅವರ ಪತ್ನಿ ರೋಮಿ ಭಾಟಿಯಾ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಪಂಕಜ್ ತ್ರಿಪಾಠಿ, ಬೊಮನ್ ಇರಾನಿ, ಹಾರ್ಡಿ ಸಂಧು, ಆಮಿ ವಿರ್ಕ್ ಸೇರಿ ಹಲವಾರು ಕಲಾವಿದರು ನಟಿಸಿದ್ದಾರೆ. ಕರ್ನಾಟಕದಲ್ಲಿ ಶಾಲಿನಿ ಆರ್ಟ್ಸ್ ಹಾಗೂ ರಿಲಯನ್ಸ್ ಎಂಟರ್​ಟೇನ್ಮೆಂಟ್​ ಸಂಸ್ಥೆಗಳು ವಿತರಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿವೆ. ಡಿಸೆಂಬರ್ 23, 2021 ರಂದು  83 ಚಿತ್ರ ಬಿಡುಗಡೆಯಾಗಲಿದೆ.
 

Latest Videos
Follow Us:
Download App:
  • android
  • ios