Asianet Suvarna News Asianet Suvarna News

83 Movie: ರಣವೀರ್‌ ಸಿಂಗ್‌ ಸಂಭಾವನೆ ಬಿಟ್ಟುಕೊಡುವ ಸಾಧ್ಯತೆ

ಬಿಡುಗಡೆಗೂ ಮುನ್ನ ಭಾರಿ ನಿರೀಕ್ಷೆ ಹುಟ್ಟುಹಾಕಿದ್ದ ‘83’ ಸಿನಿಮಾ, ನಂತರ ಗಳಿಕೆಯಲ್ಲಿ ಹಿಂದೆ ಬಿದ್ದಿದೆ. ಹೀಗಾಗಿ ಕಪಿಲ್‌ದೇವ್‌ ಪಾತ್ರ ವಹಿಸಿರುವ ನಾಯಕ ನಟ ರಣವೀರ್‌ ಸಿಂಗ್‌ ತಮಗೆ ನೀಡಬೇಕಿರುವ ಬಾಕಿ ಸಂಭಾವನೆಯನ್ನು ಬಿಟ್ಟುಕೊಡುವ ಸಾಧ್ಯತೆ ಇದೆ ಎಂದು ಕೆಲವು ಮಾಧ್ಯಮ ವರದಿಗಳು ತಿಳಿಸಿವೆ.

Ranveer Singh to Forego 83 Remuneration After Makers Run Into Losses gvd
Author
Bangalore, First Published Dec 31, 2021, 8:45 AM IST | Last Updated Dec 31, 2021, 8:45 AM IST

ಮುಂಬೈ (ಡಿ.31): ಬಿಡುಗಡೆಗೂ ಮುನ್ನ ಭಾರಿ ನಿರೀಕ್ಷೆ ಹುಟ್ಟುಹಾಕಿದ್ದ ‘83’ ಸಿನಿಮಾ, ನಂತರ ಗಳಿಕೆಯಲ್ಲಿ ಹಿಂದೆ ಬಿದ್ದಿದೆ. ಹೀಗಾಗಿ ಕಪಿಲ್‌ದೇವ್‌ (Kapil Dev) ಪಾತ್ರ ವಹಿಸಿರುವ ನಾಯಕ ನಟ ರಣವೀರ್‌ ಸಿಂಗ್‌ (Ranveer Singh) ತಮಗೆ ನೀಡಬೇಕಿರುವ ಬಾಕಿ ಸಂಭಾವನೆಯನ್ನು ಬಿಟ್ಟುಕೊಡುವ ಸಾಧ್ಯತೆ ಇದೆ ಎಂದು ಕೆಲವು ಮಾಧ್ಯಮ ವರದಿಗಳು ತಿಳಿಸಿವೆ.

1983ರ ವಿಶ್ವಕಪ್‌ ಗೆಲುವಿನ ಸುತ್ತ ಹೆಣೆದ ಕಥೆ ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನು ಕರೆತರುವಲ್ಲಿ ಸೋತಿದೆ. ಒಮಿಕ್ರೋನ್‌ ಸೋಂಕಿನ ಭೀತಿಯಿಂದಾಗಿ ಜನರು ಚಿತ್ರಮಂದಿರಗಳತ್ತ ಬರುತ್ತಿಲ್ಲ. ಈ ಸಿನಿಮಾ ಸಾಕ್ಷ್ಯಚಿತ್ರದಂತಿದೆ ಎಂದು ಹಲವರು ಹೇಳಿದ್ದಾರೆ. ಅಲ್ಲದೆ, ಈ ಸಿನಿಮಾದೊಂದಿಗೆ ಬಿಡುಗಡೆಯಾದ ತಮಿಳು ನಟ ಧನುಷ್‌ (Dhanush) ಮತ್ತು ಅಕ್ಷಯ್‌ ಕುಮಾರ್‌ (Akshay Kumar) ಅಭಿನಯದ ಅತ್ರಂಗಿ ರೇ (Atrangi Re) ಸಿನಿಮಾ ಇದಕ್ಕೆ ಭಾರಿ ಹೊಡೆತ ನೀಡಿದೆ. 

ಹೀಗಾಗಿ ಬಿಡುಗಡೆಯಾದ 6 ದಿನಗಳ ನಂತರ ಈ ಸಿನಿಮಾ 106 ಕೋಟಿ ರು. ಮಾತ್ರ ಗಳಿಕೆ ಮಾಡಿದೆ. ಚಿತ್ರದ ಬಜೆಟ್‌ 125 ಕೋಟಿ ರು. ಎಂದು ಹೇಳಲಾಗಿದೆ. ಸಿನಿಮಾಗಾಗಿ ರಣವೀರ್‌ಗೆ 20 ಕೋಟಿ ಸಂಭಾವನೆ ನೀಡಲು ಒಪ್ಪಂದವಾಗಿತ್ತು. ಪ್ರಸ್ತುತ ಪೂರ್ಣ ಪ್ರಮಾಣದ ಸಂಭಾವನೆ ಅವರಿಗೆ ಪಾವತಿಯಾಗಿಲ್ಲ. ನಷ್ಟಅನುಭವಿಸಿರುವುದರಿಂದ ಬಾಕಿ ಸಂಭಾವನೆ ಬಿಟ್ಟುಕೊಡುವ ಎಲ್ಲಾ ಸಾಧ್ಯತೆಗಳಿವೆ ಎಂದು ವರದಿಗಳು ಹೇಳಿವೆ.

Locked In Kiss: ಕಪಿಲ್‌ ದೇವ್‌ಗೆ ರಣವೀರ್‌ ಸಿಹಿಮುತ್ತು..! Awkward ಎಂದ ಜನ

ಭಾರತದ ಕ್ರಿಕೆಟ್‌ಗೆ ಜನಪ್ರಿಯತೆಯ ಹೊಸ ರೂಪ ಕೊಟ್ಟ, ಭಾರತೀಯ ಕ್ರಿಕೆಟ್‌ನ ಅತಿದೊಡ್ಡ ಆರಂಭಿಕ ಮೈಲುಗಲ್ಲಾದ 1983 ಏಕದಿನ ಕ್ರಿಕೆಟ್‌ ವಿಶ್ವಕಪ್‌ (1983 World Cup) ಗೆದ್ದ ರೋಚಕ ಕಥೆಯನ್ನು ಆಧರಿಸಿದ ಸಿನಿಮಾ ‘83’. ಸಲ್ಮಾನ್‌ ಅಭಿನಯದ ಭಜರಂಗಿ ಭಾಯಿಜಾನ್‌ ಖ್ಯಾತಿಯ ಕಬೀರ್‌ ಖಾನ್‌ ಈ ಸಿನಿಮಾವನ್ನೂ ನಿರ್ದೇಶನ ಮಾಡಿದ್ದಾರೆ. ರಣವೀರ್‌ಸಿಂಗ್‌, ತಂಡದ ನಾಯಕ ಕಪಿಲ್‌ದೇವ್‌ ಪಾತ್ರ ನಿರ್ವಹಿಸಿದ್ದಾರೆ. ಇನ್ನು ಕಪಿಲ್‌ ಪತ್ನಿ ರೋಮಿ ಪಾತ್ರವನ್ನು ಸ್ವತಃ ರಣವೀರ್‌ ಪತ್ನಿ ದೀಪಿಕಾ ಪಡುಕೋಣೆ ನಿರ್ವಹಿಸಿದ್ದಾರೆ.

ಇಂಗ್ಲೆಂಡ್‌ನಲ್ಲಿ ನಡೆದ 1983ರ ಏಕದಿನ ವಿಶ್ವಕಪ್‌ ಭಾರತದ ಪಾಲಿಗೆ ಅತ್ಯಂತ ಸಂಭ್ರಮ ಮತ್ತು ರೋಚಕ ಕ್ಷಣವಾಗಿತ್ತು. ಯಾವುದೇ ನಿರೀಕ್ಷೆ ಇಲ್ಲದೇ ಚಾಂಪಿಯನ್‌ಶಿಪ್‌ಗೆ ತೆರಳಿದ್ದ ಕಪಿಲ್‌ ನೇತೃತ್ವದ ಪಡೆಯನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಮೊದಲ ಪಂದ್ಯದಲ್ಲೇ, ಎರಡು ಬಾರಿ ವಿಶ್ವ ಚಾಂಪಿಯನ್‌ ವೆಸ್ಟ್‌ ಇಂಡೀಸ್‌ (West Indies) ಸೋಲಿಸಿ ಇಡೀ ವಿಶ್ವಕ್ಕೆ ನೀಡಿದ್ದ ಭಾರತ ನಂತರ ಟೂರ್ನಿಯುದ್ದಕ್ಕೂ ಸಂಘಟಿತ ಹೋರಾಟದ ಮೂಲಕ ವಿಶ್ವಕಪ್‌ ಗೆದ್ದುಕೊಂಡಿತ್ತು. ಅದರಲ್ಲೂ ಲೀಗ್‌ ಹಂತದಲ್ಲಿ ಅತ್ಯಂತ ದುರ್ಬಲ ತಂಡ ಎನ್ನಿಸಿಕೊಂಡಿದ್ದ ಜಿಂಬಾಬ್ವೆ (Zimbabwe) ವಿರುದ್ಧ 9 ರನ್‌ಗೆ ತಂಡ 4 ವಿಕೆಟ್‌ ಕಳೆದುಕೊಂಡು ಹೀನಾಯ ಸ್ಥಿತಿಯಲ್ಲಿದಾಗ ಕ್ರೀಸ್‌ಗೆ ಆಗಮಿಸಿದ್ದ ನಾಯಕ ಕಪಿಲ್‌ದೇವ್‌ ಕೇವಲ 138 ಬಾಲ್‌ಗಳಲ್ಲಿ ಅಜೇಯ 175ರನ್‌ ಗಳಿಸುವ ಮೂಲಕ ಕ್ರಿಕೆಟ್‌ ಇತಿಹಾಸದಲ್ಲೇ ಅತ್ಯಂತ ಸ್ಮರಣೀಯ ಗೆಲುವಿಗೆ ಸಾಕ್ಷಿಯಾಗಿದ್ದರು.

Kichcha Sudeep: 36 ವರ್ಷದ ಹಳೆಯ ಕನಸನ್ನು ನನಸು ಮಾಡಿಕೊಂಡ ಕಿಚ್ಚ

6 ತಿಂಗಳುಗಳ ಕಾಲ ಪರಿಶ್ರಮ ಪಟ್ಟಿರುವ ರಣವೀರ್‌!: ಹೀಗೆ ನಿರೀಕ್ಷೆ ಇಲ್ಲದೆ ಟೂರ್ನಿ ಪ್ರವೇಶಿಸಿ ವಿಶ್ವಕಪ್‌ ಗೆಲ್ಲುವ ಮೂಲಕ, ಕಪಿಲ್‌ ನೇತೃತ್ವದ ತಂಡ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಮತ್ತೊಮ್ಮೆ ನಿರೂಪಿಸಿತ್ತು. ನಂತರದ ದಿನಗಳಲ್ಲಿ ಭಾರತದಲ್ಲಿ ಕ್ರಿಕೆಟ್‌ ರೂಪವೇ ಬದಲಾಗಿತ್ತು. ಇಂಥ ರೋಚಕ ಘಟನೆಯ ಚಿತ್ರಣಗಳನ್ನು ಒಳಗೊಂಡ ಕಥೆ ಆಧರಿಸಿ ‘83’ ಸಿನಿಮಾ ತಯಾರು ಮಾಡಲಾಗಿದೆ. ವಿಶ್ವಕಪ್‌ ತಂಡದ ನಾಯಕನಾಗಿದ್ದ ಕಪಿಲ್‌ ದೇವ್‌ ಅವರ ಪಾತ್ರವನ್ನು ರಣವೀರ್‌ ಸಿಂಗ್‌ ನಿರ್ವಹಿಸಿದ್ದಾರೆ. ಇದಕ್ಕಾಗಿ ಸುಮಾರು 6 ತಿಂಗಳುಗಳ ಕಾಲ ಪರಿಶ್ರಮ ಪಟ್ಟಿರುವ ರಣವೀರ್‌ ನಟನೆ ಈಗಾಗಲೇ ಜನರ ಮನಸ್ಸು ಗೆದ್ದಿದೆ.

Latest Videos
Follow Us:
Download App:
  • android
  • ios