Dimple Kapadia Birthday: 16ಕ್ಕೆ ಮದ್ವೆ, 17ಕ್ಕೆ ಮಗು: ಡಿಂಪಲ್, ರಾಜೇಶ್ ಖನ್ನಾ ದಾಂಪತ್ಯದ ಕಥೆ-ವ್ಯಥೆ!
ಹಿಂದೊಮ್ಮೆ ಭಾರಿ ಖ್ಯಾತಿ ಪಡೆದಿದ್ದ ನಟಿ ಡಿಂಪಲ್ ಕಪಾಡಿಯಾ ಅವರು ತಮಗಿಂದ ಡಬಲ್ ವಯಸ್ಸಿನ ಸೂಪರ್‌ಸ್ಟಾರ್ ರಾಜೇಶ್ ಖನ್ನಾರನ್ನು ಮದುವೆಯಾಗಿ ಪಟ್ಟ ಪಾಡೇನು? ಡಿಂಪಲ್ ಹುಟ್ಟುಹಬ್ಬದ ನಿಮಿತ್ತ ಈ ಸ್ಟೋರಿ.
80-90ರ ದಶಕದಲ್ಲಿ ಬಾಲಿವುಡ್ ಆಳಿದ್ದ ನಟಿಯರಲ್ಲಿ ಒಬ್ಬರು ಡಿಂಪಲ್ ಕಪಾಡಿಯಾ (Dimple Kapadia). ಇವತ್ತು ಅಂದರೆ ಜೂನ್ 8 ಅವರ 66ನೇ ಹುಟ್ಟುಹಬ್ಬ. ಡಿಂಪಲ್ ಕಪಾಡಿಯಾ ಅವರ ಚೊಚ್ಚಲ ಚಿತ್ರ ಬಾಬಿ ಬಿಡುಗಡೆಯಾದ 48 ವರ್ಷಗಳ ನಂತರವೂ ಹೆಚ್ಚು ಮಾತನಾಡುವ ಚಿತ್ರಗಳಲ್ಲಿ ಒಂದಾಗಿದೆ. ಅವರು ಖ್ಯಾತಿಗೆ ಏರಿದಾಗ ಡಿಂಪಲ್ ಕಪಾಡಿಯಾ ಅವರಿಗೆ ಕೇವಲ 17 ವರ್ಷ. ಆದರೆ ಆಕೆಯ ವೈಯಕ್ತಿಕ ಜೀವನ ಕೂಡ ಬದಲಾದದ್ದು ಇದೇ ವಯಸ್ಸಿನಲ್ಲಿಯೇ. ಡಿಂಪಲ್ ಕಪಾಡಿಯಾ ಬಾಬಿ ಬಿಡುಗಡೆಗೆ ಆರು ತಿಂಗಳ ಮೊದಲು ಸೂಪರ್‌ಸ್ಟಾರ್ ರಾಜೇಶ್ ಖನ್ನಾ ಅವರನ್ನು ವಿವಾಹವಾದರು, ಇದು ರಿಷಿ ಕಪೂರ್ ಅವರ ಚೊಚ್ಚಲ ಚಿತ್ರವನ್ನೂ ಸಹ ಗುರುತಿಸಿತು. ಆಗಿನ ಸೂಪರ್‌ಸ್ಟಾರ್ ರಾಜೇಶ್ ಖನ್ನಾ ಅವರನ್ನು ಮೊದಲ ನೋಟದಲ್ಲೇ ಪ್ರೀತಿಸಿದ್ದರು ಡಿಂಪಲ್. ಅದಕ್ಕೂ ಮುನ್ನ ಡಿಂಪಲ್ ಮೊದಲ ಬಾರಿಗೆ ರಾಜೇಶ್ ಖನ್ನಾ ಅವರನ್ನು ವಿಮಾನದಲ್ಲಿ ಭೇಟಿಯಾಗಿದ್ದರು.
ಕಾರ್ಯಕ್ರಮವೊಂದಕ್ಕೆ ಅಹಮದಾಬಾದ್‌ಗೆ ತೆರಳುತ್ತಿದ್ದ ವೇಳೆ ಈ ಭೇಟಿ ನಡೆದಿತ್ತು. ಆಗಲೇ ಇಬ್ಬರ ನಡುವೆ ಕುಚ್ ಕುಚ್ ಶುರುವಾಗಿತ್ತು. ಆದರೆ ಅದು ಮುಂದುವರೆದದ್ದು ಬಾಬಿ ಚಿತ್ರದ ಶೂಟಿಂಗ್ ವೇಳೆ. ಚಿತ್ರ ಬಿಡುಗಡೆಯಾಗುವ ಮೊದಲೇ ರಾಜೇಶ್ ಖನ್ನಾ ಮತ್ತು ಡಿಂಪಲ್ ಕಪಾಡಿಯಾ ವಿವಾಹವಾದರು. ಆಗ ಡಿಂಪಲ್ ಅವರಿಗೆ 16 ವರ್ಷ ಮತ್ತು ರಾಜೇಶ್ ಖನ್ನಾ ಅವರಿಗೆ ಡಬಲ್ ವಯಸ್ಸು ಅಂದರೆ 32 ವರ್ಷ.
ಡಿಂಪಲ್ ಕಪಾಡಿಯಾ ಬಾಬಿ ಚಿತ್ರೀಕರಣದಲ್ಲಿದ್ದಾಗ, ರಾಜೇಶ್ ಖನ್ನಾ (Rajesh Khanna) ಅವರೇ ಮದುವೆಗೆ ಪ್ರಸ್ತಾಪಿಸಿದರು. ಅಂತಹ ದೊಡ್ಡ ಸೂಪರ್ ಸ್ಟಾರ್ ಅನ್ನು ಡಿಂಪಲ್ ನಿರಾಕರಿಸಲು ಸಾಧ್ಯವಾಗಲಿಲ್ಲ. ಬಾಬಿ ಚಿತ್ರದ ಶೂಟಿಂಗ್ ಶೆಡ್ಯೂಲ್ ಬಿಗಿಯಾಗಿತ್ತು. ಆದರೆ ರಾಜೇಶ್ ಅವರಿಗೆ ಮದುವೆಯಾಗುವ ತರಾತುರಿ ಉಂಟಾಗಿತ್ತು. ಆದ್ದರಿಂದ ರಾಜೇಶ್ ಖನ್ನಾ ಮದುವೆ ನಿಲ್ಲಿಸಲು ಬಯಸಲಿಲ್ಲ. ಇಬ್ಬರೂ ತರಾತುರಿಯಲ್ಲಿ ಮದುವೆಯಾಗಲು ನಿರ್ಧರಿಸಿದ್ದರು. ಮದುವೆಯ ದಿನ ಡಿಂಪಲ್ ಕಪಾಡಿಯಾ ಅವರ ಕೈಗೆ ಮೆಹಂದಿ ಹಾಕಿದ್ದರು. ಅದು ಮಾಸುವ ಮೊದಲೇ ಬಾಬಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳಬೇಕಿತ್ತು. ಅದೇ ಸಮಯದಲ್ಲಿ, ಈ ಚಿತ್ರದ ಹಾಡೊಂದರಲ್ಲಿ, ಡಿಂಪಲ್ ತಮ್ಮ ಕೈಯಲ್ಲಿದ್ದ ಮೆಹಂದಿ ಮರೆಮಾಡಲು ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಯಿತು ಎಂದು ಹೇಳಿಕೊಂಡಿದ್ದರು.
ಈ ವರ್ಷವೇ ಅಪ್ಪ-ಅಮ್ಮ ಆಗ್ತಿರೋ ಐವರು ಬಾಲಿವುಡ್ ತಾರೆಯರು!
16 ನೇ ವಯಸ್ಸಿನಲ್ಲಿ ರಾಜೇಶ್ ಖನ್ನಾ ಅವರನ್ನು ಮದುವೆಯಾದ ನಂತರ, ಡಿಂಪಲ್ ಕಪಾಡಿಯಾ 17 ನೇ ವಯಸ್ಸಿನಲ್ಲಿ ಟ್ವಿಂಕಲ್ ಖನ್ನಾಗೆ (Twinkle Khanna) ಜನ್ಮ ನೀಡಿದರು. 1977ರಲ್ಲಿ ಮತ್ತೊಬ್ಬ ಮಗಳು ರಿಂಕೆ ಖನ್ನಾ ಈ ಲೋಕಕ್ಕೆ ಬಂದಳು. ಬಾಬಿ ಬಿಡುಗಡೆಯಾದ ನಂತರ ಡಿಂಪಲ್ ಕಪಾಡಿಯಾ ರಾತ್ರೋರಾತ್ರಿ ಸ್ಟಾರ್ ಆದರು. ಆದರೆ, ರಾಜೇಶ್ ಖನ್ನಾ ಅವರ ಒತ್ತಾಯದಿಂದಾಗಿ ಅವರು ಚಲನಚಿತ್ರಗಳಿಂದ ನಿವೃತ್ತಿ ಹೊಂದಬೇಕಾಯಿತು. ಏಕೆಂದರೆ ಚಿತ್ರರಂಗದಲ್ಲಿ ಉತ್ತುಂಗದಲ್ಲಿ ಇರುವಾಗಲೇ ಪತ್ನಿ ಚಿತ್ರದಲ್ಲಿ ನಟಿಸುವುದನ್ನು ರಾಜೇಶ್ ಸಹಿಸಲಿಲ್ಲ. ಆದ್ದರಿಂದ 12 ವರ್ಷಗಳ ಡಿಂಪಲ್ ಚಿತ್ರದಲ್ಲಿ ಪಾಲ್ಗೊಳ್ಳಲಿಲ್ಲ. ನಂತರ ಅವರು ಸಾಗರ್ ಚಿತ್ರದ ಮೂಲಕ ಪುನರಾಗಮನ ಮಾಡಿದರು.
ಆದರೆ ಇದಾಗಲೇ ಡಿಂಪಲ್ ಅವರಿಗೆ ದಾಂಪತ್ಯದಿಂದ ಸುಸ್ತಾಗಿ ಹೋಗಿದ್ದರು. ತಮ್ಮ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಯಶಸ್ವಿ ನಟಿಯಾಗಿರುವ ಸಮಯದಲ್ಲಿಯೇ ಚಿತ್ರರಂಗದಿಂದ ದೂರ ಉಳಿಯಬೇಕಾದದ್ದೂ ಅವರನ್ನು ಖಿನ್ನತೆಗೆ ತಳ್ಳಿತ್ತು. ಆಕೆ ಎಲ್ಲವನ್ನೂ ಪತಿ ರಾಜೇಶ್ ಖನ್ನಾ ಅವರನ್ನು ಕೇಳಿಯೇ ಮಾಡಬೇಕಿತ್ತು. ಇದರಿಂದ ಆಕೆಗೆ ಜೈಲುವಾಸ ಎನ್ನಿಸಲು ಶುರುವಾಯಿತು. ಅಂತಿಮವಾಗಿ, 1982 ರಲ್ಲಿ, ರಾಜೇಶ್ ಖನ್ನಾ ಮತ್ತು ಡಿಂಪಲ್ ಕಪಾಡಿಯಾ ಬೇರೆಯಾಗಲು ನಿರ್ಧರಿಸಿದರು. ಈ ಕುರಿತು ಮಾತನಾಡಿದ್ದ ಡಿಂಪಲ್, 'ನಾವಿಬ್ಬರು ವಿಭಿನ್ನ ರೀತಿಯ ಜನರು ಎಂದು ನಾನು ಭಾವಿಸುತ್ತೇನೆ. ಸೂಪರ್‌ಸ್ಟಾರ್ ಆಗಿದ್ದ ರಾಜೇಶ್ ಅವರಿಗೆ ಏನಾಗುತ್ತಿದೆ ಎಂದು ಅರ್ಥಮಾಡಿಕೊಳ್ಳಲು ನಾನು ಬಹುಶಃ ತುಂಬಾ ಚಿಕ್ಕವಳಾಗಿದ್ದೆ. ಸೂಪರ್ ಸ್ಟಾರ್ ನಡವಳಿಕೆಯನ್ನು ಅರ್ಥಮಾಡಿಕೊಳ್ಳಲು ನನಗೆ ಎಂದಿಗೂ ಸಾಧ್ಯವಾಗಲಿಲ್ಲ. ಆದ್ದರಿಂದ ಬಿಡುಗಡೆಯೊಂದೇ ದಾರಿ ಎನ್ನಿಸಿತು ಎಂದಿದ್ದರು.
Viral Video: ಸದ್ದಿಲ್ಲದೇ ಸ್ನೇಹಿತನ ಮದುವೆಯಾದ ಬಾಲಿವುಡ್ ಚೆಲುವೆ ಸೋನಾಲಿ ಸೆಹಗಲ್
ಇದಾದ ನಂತರ ಡಿಂಪಲ್ ಹೆಸರು ಕೂಡ ಸನ್ನಿ ಡಿಯೋಲ್ (Sunny deol) ಜೊತೆ ಸೇರಿಕೊಂಡಿತ್ತು. ಇಬ್ಬರೂ ಅನೇಕ ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಇಬ್ಬರೂ ತಮ್ಮ ಸಂಬಂಧವನ್ನು ಎಂದಿಗೂ ದೃಢಪಡಿಸಲಿಲ್ಲ.