Asianet Suvarna News Asianet Suvarna News

Viral Video: ಸದ್ದಿಲ್ಲದೇ ಸ್ನೇಹಿತನ ಮದುವೆಯಾದ ಬಾಲಿವುಡ್​ ಚೆಲುವೆ ಸೋನಾಲಿ ಸೆಹಗಲ್​

ಬಹುವರ್ಷಗಳ ಡೇಟಿಂಗ್​ ಬಳಿಕ ಬಾಲಿವುಡ್​ ನಟಿ ಸೋನಾಲಿ ಸೆಹಗಲ್, ಉದ್ಯಮಿ ಆಶಿಷ್​ ಎಲ್ ಸಜ್ನಾನಿ ಅವರ ಜೊತೆ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ.
 

Sonnalli Seygall  wedding vedio viral reception to take place tomorrow with Kartik Aaryan suc
Author
First Published Jun 7, 2023, 5:31 PM IST

ಕಾರ್ತಿಕ್ ಆರ್ಯನ್ ಅವರ ಜನಪ್ರಿಯ ಬಾಲಿವುಡ್ ಚಿತ್ರ ಪ್ಯಾರ್ ಕಾ ಪಂಚನಾಮಾದ ನಟಿ ಸೋನಾಲಿ ಸೆಹಗಲ್ (Sonali Sehagal) ಅವರು ತಮ್ಮ 34 ನೇ ವಯಸ್ಸಿನಲ್ಲಿ ಹೆಚ್ಚಿನ ಪ್ರಚಾರವಿಲ್ಲದೇ ಮದುವೆಯಾಗಿದ್ದಾರೆ. ಕೆಲ ವರ್ಷಗಳಿಂದ ಈಕೆ ಸಂಬಂಧದಲ್ಲಿದ್ದಾರೆ ಮತ್ತು ಹೋಟೆಲ್ ಉದ್ಯಮಿ ಆಶಿಷ್​ ಎಲ್ ಸಜ್ನಾನಿ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು.  ಕೆಲ ವರ್ಷಗಳವರೆಗೆ ಅವರು  ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ದೃಢೀಕರಿಸದಿದ್ದರೂ, ಇಬ್ಬರೂ ನಾಲ್ಕು-ಐದು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿರುವುದಾಗಿ ಹೇಳಲಾಗಿತ್ತು. ಅದೀಗ ಮದುವೆಯ ಬಂಧನಕ್ಕೆ ಒಳಪಟ್ಟಿದ್ದು, ಇದರ ವಿಡಿಯೋ ವೈರಲ್​ ಆಗಿದೆ.   ವಾಸ್ತವವಾಗಿ, ನಟಿ ಮುಂಬೈನ (Mumbai) ಗುರುದ್ವಾರದಲ್ಲಿ ತನ್ನ ಬಹುಕಾಲದ ಗೆಳೆಯ ಅಶಿಷ್ ಎಲ್.ಸಜ್ನಾನಿಯೊಂದಿಗೆ ಮದುವೆಯಾಗಿದ್ದು, ಇದರ  ವೀಡಿಯೊ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ, ನಟಿ ಗುಲಾಬಿ ಮತ್ತು ಬಿಳಿ ಸಂಯೋಜನೆಯೊಂದಿಗೆ ಸೀರೆಯಲ್ಲಿ ಕಾಣಬಹುದು. 

Voompla ಹಂಚಿಕೊಂಡಿರುವ ವಿಡಿಯೋದಲ್ಲಿ ನಟಿ ಸೋನಾಲಿ ಸೆಹಗಲ್ ಅವರು ಸುಂದರವಾದ ಗುಲಾಬಿ ಉಡುಪಿನಲ್ಲಿ ಡಾಗ್ಗಿಯೊಂದಿಗೆ ಗುರುದ್ವಾರವನ್ನು (Gurudwara) ಪ್ರವೇಶಿಸುತ್ತಿರುವುದನ್ನು ನೋಡಬಹುದು. ಮದುವೆ ಸಮಾಋಂಭದಲ್ಲಿ ಚಲನಚಿತ್ರ ನಿರ್ಮಾಪಕ ಲವ್ ರಂಜನ್, ನಟ ಸನ್ನಿ ಸಿಂಗ್, ಸಾಹಿಲ್ ಸಲಾಥಿಯಾ, ಶಾಮಾ ಸಿಕಂದರ್ ಮುಂತಾದ ತಾರೆಗಳು ಉಪಸ್ಥಿತರಿದ್ದರು. ಜೂನ್ 8 ರಂದು, ದಂಪತಿ ಅದ್ದೂರಿ ಆರತಕ್ಷತೆಯನ್ನು ನಡೆಸಲಿದ್ದಾರೆ ಎನ್ನಲಾಗುತ್ತಿದೆ.  ಇದರಲ್ಲಿ ಬಾಲಿವುಡ್ ತಾರೆಯರು ಭಾಗವಹಿಸುವ ನಿರೀಕ್ಷೆಯಿದೆ. ಅದೇ ಸಮಯದಲ್ಲಿ ಕಾರ್ತಿಕ್ ಆರ್ಯನ್ ಹೆಸರೂ ಈ ಪಟ್ಟಿಯಲ್ಲಿ ಸೇರಿದೆ.

Viral Vedio: ಫ್ಲರ್ಟ್​ ಮಾಡಲು ಬಂದ ಶಾರುಖ್​ಗೆ ವಯಸ್ಸಿನ ಅಂತರ ನೆನಪಿಸಿದ ​ದೀಪಿಕಾ

ವೀಡಿಯೋ ಶೇರ್ ಆದ ಕೂಡಲೇ ಅಭಿಮಾನಿಗಳು ಮತ್ತು ಜನ ತಮ್ಮ ಪ್ರತಿಕ್ರಿಯೆಗಳನ್ನು ಕಾಮೆಂಟ್‌ಗಳಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ನಟಿಯನ್ನು ಒಳ್ಳೆಯ ಜೋಡಿ ಎಂದು ಕರೆದು ಅಭಿನಂದಿಸಿದರೆ, ಮದುವೆಗೆ ನಾಯಿಮರಿಯನ್ನು ಕರೆತಂದಿದ್ದಕ್ಕಾಗಿ ಅವರು ಟ್ರೋಲ್ ಆಗುತ್ತಿದ್ದಾರೆ. ಅಷ್ಟಕ್ಕೂ ಇವರು  ಸುಮಾರು ನಾಲ್ಕೈದು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರೂ  ಸಂಬಂಧವನ್ನು ಮರೆಮಾಡಿದ್ದೇಕೆ ಎಂದು ಫ್ಯಾನ್ಸ್​ ಪ್ರಶ್ನಿಸುತ್ತಿದ್ದಾರೆ. ಸೋನಾಲಿ ಅವರ ಬಗ್ಗೆ ಹೇಳುವುದಾದರೆ  ಅವರು ಯಾವಾಗಲೂ ತಮ್ಮ ವೈಯಕ್ತಿಕ ಜೀವನವನ್ನು ಖಾಸಗಿಯಾಗಿಡಲು ಇಷ್ಟಪಡದೇ  ಕೆಲಸದ ಮೇಲೆ ಕೇಂದ್ರೀಕರಿಸಲು ಬಯಸುತ್ತಾರೆ. ಇದರಿಂದಾಗಿಯೇ ಈ ಸಂಬಂಧ ಇಲ್ಲಿಯವರೆಗೆ ಗುಟ್ಟು ಮಾಡಲಾಗಿತ್ತು ಎನ್ನಲಾಗಿದೆ.
 
ಇನ್ನು ಆಶಿಷ್​ ಎಲ್. ಸಜ್ನಾನಿ (Ashish L. Sajnani) ಅವರ ಬಗ್ಗೆ ಹೇಳುವುದಾದರೆ, ಇವರು ಒಬ್ಬ ವಾಣಿಜ್ಯೋದ್ಯಮಿ ಮತ್ತು ಹೋಟೆಲ್ ಉದ್ಯಮಿ. ಇದಲ್ಲದೆ, ಅವರು ಬಾಂಬೆ ಫುಡ್ ಟ್ರಕ್‌ನ ಸಂಸ್ಥಾಪಕರೂ ಹೌದು. ದೇಶದ ಅನೇಕ ನಗರಗಳಲ್ಲಿ ಅವರ ವ್ಯಾಪಾರ ಹರಡಿದೆ. 2017 ರಲ್ಲಿ ಆಶಿಶ್ ಎಲ್ ಸಜ್ನಾನಿ ಅವರು ಬಾಲಿವುಡ್ ನಟಿ ಕಾಜಲ್ ಅಗರ್ವಾಲ್ (Kajol Agarwal) ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದರು ಎಂದೂ ಹೇಳಲಾಗಿತ್ತು.  ಅದಾದ ಬಳಿಕ ಸೋನಾಲಿ ಅವರನ್ನು ಡೇಟಿಂಗ್​ ಮಾಡುತ್ತಿದ್ದರು. ಈ ಬಗ್ಗೆ ಕೇಳಿದ್ದಾಗ ಅವರು ಒಮ್ಮೆ  ನೋ ಕಮೆಂಟ್ಸ್​ ಎಂದು ಹೇಳಿದ್ದರು. ಇನ್ನು ಸೋನಾಲಿ ಸೆಹಗಲ್ ಅವರ ಬಗ್ಗೆ ಹೇಳುವುದಾದರೆ 2011 ರಲ್ಲಿ 'ಪ್ಯಾರ್ ಕಾ ಪಂಚನಾಮಾ' ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಇದರ ನಂತರ, ಅವರು 2015 ರಲ್ಲಿ 'ಪ್ಯಾರ್ ಕಾ ಪಂಚನಾಮಾ 2' ನಲ್ಲಿ ಕಾಣಿಸಿಕೊಂಡರು. ಸೋನಾಲಿ ಈ ದಿನಗಳಲ್ಲಿ ಅನೇಕ ಯೋಜನೆಗಳಲ್ಲಿ ನಿರತರಾಗಿದ್ದಾರೆ.

ಮೂರು ಮದುವೆ, ಹಲವರ ಜೊತೆ ಲಿವ್​ ಇನ್​... ಹೀಗಿದ್ರೂ ಕಮಲ ಹಾಸನ್​ ಒಂಟಿಯಾಕೆ?

 
 
 
 
 
 
 
 
 
 
 
 
 
 
 

A post shared by Voompla (@voompla)

Follow Us:
Download App:
  • android
  • ios