Asianet Suvarna News Asianet Suvarna News

ಪ್ರಶಾಂತ್ ನೀಲ್ ಮತ್ತೊಂದು ತೆಲುಗು ಸಿನಿಮಾ ಘೋಷಣೆ, ಟೈಟಲ್ ಬಹಿರಂಗ; ಟಾಲಿವುಡ್‌ಗೆ ಫಿಕ್ಸ್ ಆದ್ರಾ KGF ನಿರ್ದೇಶಕ?

ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಮತ್ತೊಂದು ತೆಲುಗು ಸಿನಿಮಾ ಒಪ್ಪಿಕೊಂಡಿದ್ದು ಟೈಟಲ್ ಕೂಡ ಅನೌನ್ಸ್ ಆಗಿದೆ. 

Dil Raju announces Ravanam film with KGF director Prashanth Neel sgk
Author
First Published Jan 17, 2023, 2:53 PM IST

ಕೆಜಿಎಫ್ ಸಿನಿಮಾ ಮೂಲಕ ಸ್ಟಾರ್ ನಿರ್ದೇಶಕರಾಗಿ ಹೊರಹೊಮ್ಮಿರುವ ಪ್ರಶಾಂತ್ ನೀಲ್ ಸದ್ಯ ಸಲಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಕೆಜಿಎಫ್ ಬಳಿಕ ತೆಲುಗಿಗೆ ಹಾರಿದ್ದ ಪ್ರಶಾಂತ್ ನೀಲ್ ಪ್ರಭಾಸ್ ಜೊತೆ ಸಲಾರ್ ಹಾಗೂ ಜೂ.ಎನ್ ಟಿ ಆರ್ ಜೊತೆ ಇನ್ನು ಹೆಸರಿಡದ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಎರಡು ಸಿನಿಮಾ ಮುಗಿಸಿ ಪ್ರಶಾಂತ್ ನೀಲ್ ಸ್ಯಾಂಡಲ್ ವುಡ್‌ಗೆ ವಾಪಾಸ್ ಆಗ್ತಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೀಗ ಕನ್ನಡ ಅಭಿಮಾನಿಗಳಿಗೆ ಪ್ರಶಾಂತ್ ನೀಲ್ ಶಾಕ್ ನೀಡಿದ್ದಾರೆ. ಕೆಜಿಎಫ್ ನಿರ್ದೇಶಕ ತೆಲುಗಿನಲ್ಲಿ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. 

ಈ ಬಗ್ಗೆ ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ಬಹಿರಂಗ ಪಡಿಸಿದ್ದಾರೆ. ತೆಲುಗು ಮಾಧ್ಯಮದ ಜೊತೆ ಮಾತನಾಡಿದ ದಿಲ್ ರಾಜು ಮುಂದಿನ ಬಹುನಿರೀಕ್ಷೆಯ ಪ್ರಾಜೆಕ್ಟ್ ಬಗ್ಗೆ ರಿವೀಲ್ ಮಾಡಿದ್ದಾರೆ. ಸದ್ಯ ದಿಲ್ ರಾಜು ವಾರಿಸು ಸಿನಿಮಾದ ಸಕ್ಸಸ್‌ನ ಖುಷಿಯಲ್ಲಿದ್ದಾರೆ. ಇದೇ ಖುಷಿಯಲ್ಲಿ ಕೆಜಿಎಫ್ ಫ್ರಾಂಚೈಸ್ ಖ್ಯಾತಿಯ ಪ್ರಶಾಂತ್ ನೀಲ್ ಜೊತೆ ಸಿನಿಮಾ ಮಾಡುವ ಬಗ್ಗೆ ಮಾತನಾಡಿದ್ದಾರೆ. ಕೆಜಿಎಫ್ ನಿರ್ದೇಶಕ ಪ್ರಶಾಂತ್ ಜೊತೆ ಬಿಗ್ ಬಜೆಟ್ ಸಿನಿಮಾ ಮಾಡುತ್ತಿರುವುದಾಗಿ ಹೇಳಿದರು. ಸಿನಿಮಾಗೆ 'ರಾವಣಂ' ಎಂದು ಟೈಟಲ್ ಇಡಲಾಗಿದ್ದು ದೊಡ್ಡ ಬಜೆಟ್‌ನ ಸಿನಿಮಾ ಜೊತೆಗೆ ಅತ್ತ್ಯುಮ ವಿಎಫ್‌ಎಕ್ಸ್  ಕೂಡ ಇರಲಿದೆ ಎಂದು ಹೇಳಿದ್ದಾರೆ. ಸದ್ಯ ನಾಯಕ, ನಾಯಕಿ, ತಂತ್ರಜ್ಞರು ಮತ್ತು ಇತರ ವಿವರಗಳನ್ನು ಸದ್ಯದಲ್ಲಿಯೇ ಬಹಿರಂಗ ಪಡಿಸುವುದಾಗಿ ಹೇಳಿದ್ದಾರೆ. 

ಯಶ್‌ಗೆ ಉರ್ದುಲ್ಲಿ ವಿಶ್ ಮಾಡಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗೆ ಪ್ರಶಾಂತ್ ನೀಲ್ ಗುಡ್ ಬೈ

ಈ ಮೂಲಕ ಪ್ರಶಾಂತ್ ನೀಲ್ ತೆಲುಗು ಸಿನಿಮಾರಂಗಕ್ಕೆ ಫಿಕ್ಸ್ ಆದ್ರಾ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ತೆಲುಗಿನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿರುವ ಪ್ರಶಾಂತ್ ನೀಲ್ ಇನ್ಮುಂದೆ ಕನ್ನಡ ಸಿನಿಮಾ ಮಾಡುವುದು ಅನುಮಾನ  ಎನ್ನುವ ಮಾತುಗಳು ಕೇಳಿಬರುತ್ತಿದೆ. ಅಂದಹಾಗೆ ಪ್ರಶಾಂತ್ ನೀಲ್ ಮತ್ತು ದಿಲ್ ರಾಜು ಅವರ ಸಿನಿಮಾಗೆ ಪ್ರಭಾಸ್ ನಾಯಕನಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಯಾಕೆಂದರೆ ದಿಲ್ ರಾಜು ಈಗಾಗಲೇ ಪ್ರಭಾಸ್ ಕಾಲ್ ಶೀಟ್ ಕೂಡ ಇದೆ. ಹಾಗಾಗಿ ಮತ್ತೊಂದು ಪ್ರಶಾಂತ್ ನೀಲ್ ಹಾಗು ಪ್ರಭಾಸ್ ಒಟ್ಟಿಗೆ ಕೆಲಸ ಮಾಡಲಿದ್ದಾರೆ ಎನ್ನುವ ಮಾತು ಟಾಲಿವುಡ್ ಅಂಗಳದಲ್ಲಿ ವೈರಲ್ ಆಗಿದೆ.  

ನಿಮ್ಮ ಸಲ್ತನತ್, ಬಾಸ್; KGF ಸ್ಟೈಲ್‌ನಲ್ಲೇ ರಾಕಿಭಾಯ್‌ಗೆ ಉರ್ದುನಲ್ಲಿ ಪ್ರಶಾಂತ್ ನೀಲ್ ಬರ್ತಡೇ ವಿಶ್

ಪ್ರಶಾಂತ್ ನೀಲ್ ಸಲಾರ್ ಮತ್ತು ಜೂ.ಎನ್ ಟಿ ಆರ್ ಸಿನಿಮಾ ಮುಗಿಸಿ ಕೆಜಿಎಫ್-3 ಮಾಡಲಿದ್ದಾರೆ, ಶ್ರೀಮುರಳಿ ಜೊತೆ ಸಿನಿಮಾ ಮಾಡ್ತಾರೆ ಎನ್ನಲಾಗಿತ್ತು. ಆದರೀಗ ಸಾಲು ಸಾಲು ತೆಲುಗು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿರುವ ಕಾರಣ ಕೆಜಿಎಫ್-3 ಮತ್ತಷ್ಟು ತಡವಾಗುವ ಸಾಧ್ಯತೆ ಇದೆ. ಇನ್ನು ನಿರ್ಮಾಪಕ ದಿಲ್ ರಾಜು  ಸದ್ಯ ಬಹುನಿರೀಕ್ಷೆಯ RC15 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ರಾಮ್ ಚರಣ್ ಮತ್ತು ಕಿಯಾರಾ ಅಡ್ವಾನಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಸಾರಥ್ಯದಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಈ ಸಿನಿಮಾ ಬಳಿಕ ಪ್ರಶಾಂತ್ ನೀಲ್ ಜೊತೆ ಸಿನಿಮಾ ಮಾಡುವ ಸಾಧ್ಯತೆ ಇದೆ. 

 

Follow Us:
Download App:
  • android
  • ios