Asianet Suvarna News Asianet Suvarna News

ಯಶ್‌ಗೆ ಉರ್ದುಲ್ಲಿ ವಿಶ್ ಮಾಡಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗೆ ಪ್ರಶಾಂತ್ ನೀಲ್ ಗುಡ್ ಬೈ

ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಸಾಮಾಜಿಕ ಜಾಲತಾಣಕ್ಕೆ ಗುಡ್ ಬೈ ಹೇಳಿದ್ದಾರೆ. ಆಗಾಗ ಪೋಸ್ಟ್‌ಗಳನ್ನು ಶೇರ್ ಮಾಡುತ್ತಿದ್ದ ಪ್ರಶಾಂತ್ ನೀಲ್ ದಿಢೀರ್ ಅಂತ ಸೋಶಿಯಲ್ ಮೀಡಿಯಾ ತೊರೆದಿರುವುದು ಅಚ್ಚರಿ ಮೂಡಿಸಿದೆ. 

KGF Director prashanth neel quits social media after birthday wish to Yash sgk
Author
First Published Jan 10, 2023, 11:17 AM IST

ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಸಾಮಾಜಿಕ ಜಾಲತಾಣಕ್ಕೆ ಗುಡ್ ಬೈ ಹೇಳಿದ್ದಾರೆ. ಆಗಾಗ ಪೋಸ್ಟ್‌ಗಳನ್ನು ಶೇರ್ ಮಾಡುತ್ತಿದ್ದ ಪ್ರಶಾಂತ್ ನೀಲ್ ದಿಢೀರ್ ಅಂತ ಸೋಶಿಯಲ್ ಮೀಡಿಯಾ ತೊರೆದಿರುವುದು ಅಚ್ಚರಿ ಮೂಡಿಸಿದೆ. ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮ್ ಎರಡನ್ನೂ ಪ್ರಶಾಂತ್ ನೀಲ್ ಡಿಆಕ್ಟೀವ್ ಮಾಡಿದ್ದಾರೆ. ಕೆಜಿಎಫ್ ನಿರ್ದೇಶಕರ ನಡೆ ಈಗ ಅಚ್ಚರಿಗೆ ಕಾರಣವಾಗಿದೆ. ಸಲಾರ್ ಅಪ್‌ಡೇಟ್‌ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಪ್ರಶಾಂತ್ ನೀಲ್ ಸಾಮಾಜಿಕ ಜಾಲತಾಣವನ್ನೇ ತೊರೆಯುವ ಮೂಲಕ ಶಾಕ್ ನೀಡಿದ್ದಾರೆ. 

ಪ್ರಶಾಂತ್ ನೀಲ್ ಕೊನೆಯದಾಗಿ ರಾಕಿಂಗ್ ಸ್ಟಾರ್‌ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದರು. ರಾಕಿಭಾಯ್‌ಗೆ ಉರ್ದುವಿನಲ್ಲಿ ವಿಶ್ ಮಾಡಿದ್ದರು. ಪ್ರಶಾಂತ್ ನೀಲ್ ಉರ್ದುನಲ್ಲಿ ಶುಭಾಶಯ ಕೋರಿದ್ದು ಕನ್ನಡ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಕನ್ನಡ ಅಭಿಮಾನಿಗಳು ಗರಂ ಆಗಿದ್ದರು.  

ಪ್ರಶಾಂತ್ ನೀಲ್ ಕೊನೆಯ ಟ್ವೀಟ್ 

ಪ್ರಶಾಂತ್ ನೀಲ್ ಕೊನೆಯದಾಗಿ ಯಶ್‌ಗೆ ಕೆಜಿಎಫ್ ಸಿನಿಮಾದಲ್ಲಿ ನಟಿ ಈಶ್ವರಿ ರಾವ್ ಹೇಳಿರುವ ಉರ್ದು ಸಾಲನ್ನು ಬರೆದು ಶುಭಕೋರಿದ್ದರು. 'ಫಲಕ್‌ ಕಾ ದಸ್ತೂರ್..ಖುದಾ ಕಾ ಹುಕುಮ್..ಔರ್‌ ಏಕ್ ಭಾಯಿ ಕೀ ದುವಾ ಹೈ..ಕೀ ಹಾತೋಂ ಕೀ.. ಲಕೀರೋ ಕೋ ಭೀ ರುಕ್ಸತ್‌ ಕರ್..ರೋಕ್ನೇಸೆ ಭೀ ನಹೀ ರುಕೇಗಿ..ತುಮ್ಹಾರಿ ಯೇ ಸಲ್ತನತ್....'ಎಂದಿದ್ದರು. ಜೊತೆಗೆ 'ಹುಟ್ಟುಹಬ್ಬದ ಶುಭಾಶಯಗಳು ಬಾಸ್' ಎಂದಿದ್ದರು. ಯಶ್ ಜೊತೆಗಿರುವ ಫೋಟೋವನ್ನೂ ಶೇರ್ ಮಾಡಿದ್ದರು.

ನಿಮ್ಮ ಸಲ್ತನತ್, ಬಾಸ್; KGF ಸ್ಟೈಲ್‌ನಲ್ಲೇ ರಾಕಿಭಾಯ್‌ಗೆ ಉರ್ದುನಲ್ಲಿ ಪ್ರಶಾಂತ್ ನೀಲ್ ಬರ್ತಡೇ ವಿಶ್

ಪ್ರಶಾಂತ್ ನೀಲ್ ಪೋಸ್ಟ್‌ಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿ ತರಾಟೆ ತೆಗೆದುಕೊಂಡಿದ್ದರು. ಕೆಲವರು ಈ ಪೋಸ್ಟ್ ಅರ್ಥ ಆಗಿಲ್ಲ ಎಂದು ಹೇಳಿದ್ರೆ ಇನ್ನು ಕೆಲವರು ಸಂಪೂರ್ಣ ಕನ್ನಡ ಬಳಸಿದ್ದಕ್ಕೆ ಧನ್ಯವಾದಗಳು ಎಂದು ವ್ಯಂಗ್ಯವಾಡುತ್ತಿದ್ದರು. ಹೀಗೆ ಅನೇಕ ಕಾಮೆಂಟ್ ಗಳು ಹರಿದು ಬಂದಿತ್ತು. ಇದಾದ ಬಳಿಕ ಪ್ರಶಾಂತ್ ನೀಲ್ ಸಾಮಾಜಿಕ ಜಾಲತಾಣ ತೊರೆದಿರುವುದು ಅಚ್ಚರಿ ಮೂಡಿಸಿದೆ.  

ಪ್ರಶಾಂತ್ ನೀಲ್ ಈ ನಿರ್ಧಾರಕ್ಕೆ ಕಾರಣವೇನು ಎನ್ನುವುದು ಬಹಿರಂಗವಾಗಿಲ್ಲ. ಟ್ರೋಲ್‌ಗಳ ಕಾರಣಕ್ಕೆ ಪ್ರಶಾಂತ್ ನೀಲ್ ಸಾಮಾಜಿಕ ಜಾಲತಾಣಲ್ಲಿ ಗುಡ್ ಬೈ ಹೇಳಿದ್ರಾ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಕೆಜಿಎಫ್ ನಿರ್ದೇಶಕ ಟ್ರೋಲ್ ಆಗುತ್ತಿರುವುದು ಇದೇ ಮೊದಲಲ್ಲ. ಈ ಮೊದಲು ತೆಲುಗು ಸಿನಿಮಾಗೆ ಜಿಗಿದಾಗಲೇ ಪ್ರಶಾಂತ್ ನೀಲ್ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಕನ್ನಡ ಬಿಟ್ಟು ಪರಭಾಷೆಗೆ ಹಾರಿದ್ರಾ ಕನ್ನಡ ಅಭಿಮಾನಿಗಳು ಕಿಡಿ ಕಾರಿದ್ದರು. ಪ್ರಭಾಸ್ ಬಳಿಕ ಜೂ.ಎನ್‌ ಟಿ ಆರ್ ಹೀಗೆ ಬ್ಯಾಕ್ ಟು ಬ್ಯಾಕ್ ತೆಲುಗಿನಲ್ಲಿ ಸಿನಿಮಾ ಮಾಡುತ್ತಿರುವ ಪ್ರಶಾಂತ್ ವಿರುದ್ಧ ಬೇಸರ ಹೊರಹಾಕಿದ್ದರು. ಆದರೆ ಪ್ರಶಾಂತ್ ನೀಲ್ ಯಾವುದಕ್ಕೂ ತಲೆಕೆಡಿಸಿಕೊಂಡಿರಲಿಲ್ಲ. ಆದರೀಗ ಸಾಮಾಜಿಕ ಜಾಲತಾಣ ತೊರೆದಿದ್ದು ಅಭಿಮಾನಿಗಳಿಗೆ ಶಾಕ್ ನೀಡಿದೆ. 

Follow Us:
Download App:
  • android
  • ios