ಈ ದಿನಗಳಲ್ಲಿ ಕಂಗನಾಳನ್ನು ಗೊತ್ತಿಲ್ಲದವರೇ ಇಲ್ಲ. ಇತ್ತೀಚೆಗೆ ಆಕೆ ನಟಿಸಿದ್ದಕ್ಕಿಂತ ಕೂಗಾಡಿದ್ದೇ ಹೆಚ್ಚು. ಟ್ವಿಟ್ಟರ್ ತುಂಬಾ ಯಾವಾಗಲೂ ಈಕೆಯ ರೋಷಾವೇಶದ ಹೇಳಿಕೆಗಳೇ ತುಂಬಿರುತ್ತವೆ. ಇತ್ತೀಚೆಗೆ ಈಕೆ ಹಾಲಿವುಡ್ ಸೆಲೆಬ್ರಿಟಿಗಳಾದ ರಿಹಾನಾ ಮತ್ತು ಪೋರ್ನ್ ತಾರೆ ಮಿಯಾ ಖಲೀಫಾರನ್ನೂ ತರಾಟೆಗೆ ತೆಗೆದುಕೊಂಡಳು. ಅದಕ್ಕೆ ಕಾರಣ ಅವರಿಬ್ಬರೂ ದಿಲ್ಲಿಯಲ್ಲಿ ನಡೆಯುತ್ತಿರೋ ರೈತ ಪ್ರತಿಭಟನೆಗಳನ್ನು ಬೆಂಬಲಿಸಿ ಮಾತಾಡಿದ್ದು.

ಇಂಥ ಕಂಗನಾ, ಮುಂಬಯಿಯ ಕರಾವಳಿ ಹವೆ ಹೆಚ್ಚು ಬಿಸಿ ಆಗಿಬಿಟ್ಟಾಗ ತಮ್ಮ ಹುಟ್ಟೂರು ಹಿಮಾಚಲ ಪ್ರದೇಶಕ್ಕೆ ಹಾರಿಹೋಗುತ್ತಾರೆ. ಒಂದೆರಡು ವಾರ, ತಿಂಗಳು ಅಲ್ಲಿ ಕೂಲಾಗಿ ಇದ್ದು ಬರುತ್ತಾರೆ. ಮನಾಲಿಯಲ್ಲಿ ಈಕೆಗೆ ಸೇರಿದ ಒಂದು ಭವ್ಯ ಬಂಗಲೆ ಇದೆ. ಅದು ಎಷ್ಟು ಅದ್ಭುತವಾಗಿದೆ ಅಂದರೆ, ಅದರ ವೆರಾಂಡದಲ್ಲಿ ಕೂತರೆ ಹಿಮ ಬೆಟ್ಟಗಳ ಮುಂದೆ ಕುಳಿತ ಹಾಗೇ ಇರುತ್ತದೆ. ಮನೆಯ ಎಲ್ಲ ಕಿಟಕಿಗಳಿಂದಲೂ ಹಿಮಪರ್ವತಗಳ ದರ್ಶನ ಆಗುತ್ತದೆ.

ರೈತ ಪ್ರತಿಭಟನೆ ವಿರೋಧಿಸಿ ಕಂಗನಾ ಕಳ್ಕೊಂಡಿದ್ದು 15 ಕೋಟಿ ...

ಚಳಿ ಸಮಯದಲ್ಲಂತೂ ಆಕೆಗೆ ತಮ್ಮ ಮನಾಲಿಯ ಮನೆಯೇ ಅತ್ಯಂತ ಪ್ರೀತಿ. ಅಲ್ಲಿಗೇ ಹೋಗಿ ಚಳಿಯನ್ನು ಅನುಭವಿಸಿ ಬರುತ್ತಾರೆ. ಹಿಮ ಬೆಟ್ಟಗಳ ಡಿಸೈನ್ ಅನ್ನೇ ಹೋಲುವ ವಿನ್ಯಾಸವನ್ನು ಈ ಮನೆಗೆ ಮಾಡಲಾಗಿದೆ. ಸಮುದ್ರ ಮಟ್ಟದಿಂದ ಸುಮಾರು 2000 ಮೀಟರ್ ಎತ್ತರದಲ್ಲಿ ಇರುವ ಈ ಮನೆಯ ಮೇಲೆ ಚಳಿಗಾಲದ ಆರಂಭದಿಂದ ಹಿಮ ಸುರಿಯಲು ಆರಂಭವಾಗುತ್ತದೆ.

ಡಿಸೆಂಬರ್ನಲ್ಲಂತೂ ಈ ಮನೆ ಹಿಮದಿಂದ ಮುಚ್ಚಿಯೇ ಹೋಗಿರತ್ತದಂತೆ. ಮನೆಯ ವಿನ್ಯಾಸ ಮಾಡಿದವರು ಶಬ್ನಮ್ ಗುಪ್ತಾ ಎಂಬ ಆರ್ಕಿಟೆಕ್ಟ್. ೨೦೧೭ರಲ್ಲಿ ಈ ಮನೆಯನ್ನು ಕಟ್ಟಲಾಯಿತು. ಈಕೆಯ ಹೆತ್ತವರು, ಅಂಕಲ್ ಎಲ್ಲ ಇಲ್ಲೇ ಸನಿಹದಲ್ಲಿ ಇದ್ದಾರೆ. ತನಗೆ ಸೇರಿದ ಅತ್ಯಂತ ಹಳೆಯ ವಸ್ತುಗಳನ್ನು, ಫ್ಯಾಮಿಲಿ ಫೋಟೋಗಳು ಕಂಗನಾ ಜತನವಾಗಿ ಇಲ್ಲಿ ಇಟ್ಟಿದ್ದಾಳೆ. 

ರಿಹಾನಾಳ ಟ್ವೀಟ್‌ಗೆ 100 ಕೋಟಿ ಸಿಕ್ತಾ..? ಕಂಗನಾ ಕೆಂಗಣ್ಣು ...

ಮನೆಯ ಇಂಟೀರಿಯರ್ ಡಿಸೈನ್ ನೋಡಿದರೆ ಯಾವುದೋ ಇಂಗ್ಲಿಷ್ ಮನೆಯನ್ನು ನೋಡಿದಂತೆ ಆಗುತ್ತದೆ. ಚಳಿಪ್ರದೇಶವಾದ ಇಂಗ್ಲಿಷ್ ಮನೆಗಳ ವಿನ್ಯಾಸ ಹೆಚ್ಚುಕಡಿಮೆ ಹೀಗೇ ಇರುತ್ತದೆ. ಫೈರ್‌ಪ್ಲೇಸ್, ಅಟ್ಟಿಕ್‌, ಲೈಬ್ರರಿ, ಫ್ಯಾಮಿಲಿ ಕೋರ್ಟ್, ಬಾರ್‌- ಹೀಗೇ ಎಲ್ಲ.

ಜಯಲಲಿತಾ ನಂತರ ಇಂದಿರಾ ಗಾಂಧಿಯಾದ್ರಾ ಕಂಗನಾ..? ...

ಅಂತೂ ಮುಂಬಯಿಯಲ್ಲಿ ಬೆಂಕಿ ಹಚ್ಚುವ ಕಂಗನಾ ಅಲ್ಲಿಂದ ತಪ್ಪಿಸಿಕೊಂಡು ಕೂಲಾಗಿ ಇರಲು ಓಡಿ ಬರುವುದು ಇಲ್ಲಿಗೆ ಎಂದು ನಿಮಗೆ ಗೊತ್ತಾಯಿತಲ್ಲ. ಅಂದ ಹಾಗೆ, ಕೆಲವು ತಿಂಗಳ ಹಿಂದೆ ಈಕೆಯ ಮನೆಯ ಮುಂದೆ ಯಾರೋ ದುಷ್ಕರ್ಮಿಗಳು ಗುಂಡೆಸೆತ ನಡೆಸಿದ್ದರು. ಕಂಗನಾಳ ಎನರ್ಜಿಯ ಮೂಲ ಇಲ್ಲಿಯೇ ಇದೆಯಂತೆ. ಇಲ್ಲಿನ ಹಿಮಪರ್ವತಗಳಂತೆ ತಣ್ಣಗೆ ಕಾಣುವ ಕಂಗನಾ ಸಿಟ್ಟಿಗೆದ್ದರೆ ಮಾತ್ರ ಜ್ವಾಲಾಮುಖಿ.