ಬಾಲಿವುಡ್ ನಟಿ ಕಂಗನಾ ರಣಾವತ್ ರೈತ ಪ್ರತಿಭಟನೆ ಬಗ್ಗೆ ಮಾತನಾಡುತ್ತಲೇ ಬಂದಿದ್ದಾರೆ. ಇದೀಗ ರಿಹಾನಾ ಮಾಡಿರೋ ಟ್ವೀಟ್ ಬಗ್ಗೆಯೂ ಬಾಲಿವುಡ್ ಕ್ವೀನ್ ಪ್ರತಿಕ್ರಿಯಿಸಿದ್ದಾರೆ.

ಇತ್ತೀಚಿನ ಇಂಟರ್‌ವ್ಯೂನಲ್ಲಿ ಕಂಗನಾ ರಣಾವತ್ ಪಾಪ್ ಸಿಂಗರ್ ರಿಹನ್ನಾ ಮತ್ತು ಸಮಾಜಿಕ ಕಾರ್ಯಕರ್ತೆ ಗ್ರೆಟಾ ವಿರುದ್ಧ ಕಿಡಿ ಕಾರಿದ್ದಾರೆ. ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ರೈತ ಪ್ರತಿಭಟನೆಯನ್ನು ಬೆಂಬಲಿಸಿ ವಿದೇಶಿ ಸೆಲೆಬ್ರಿಟಿಗಳ ಬೆಂಬಲವನ್ನು ನಟಿ ಖಂಡಿಸಿದ್ದಾರೆ.

ರೈತ ಪ್ರತಿಭಟನೆ ಬಗ್ಗೆ ನಟಿ ಮಾತು: ಪ್ರಣಿತಾ ಹೇಳಿದ್ದಿಷ್ಟು..!

ರೈತ ಪ್ರತಿಭಟನೆ ಬಗ್ಗೆ ವಿವಾದಾತ್ಮಕ ಟ್ವೀಟ್ ಮಾಡಿದ್ದಕ್ಕಾಗಿ ಆಕೆ 100 ಕೋಟಿ ಪಡೆದಿರಬಹುದು ಎಂದು ಹೇಳಿದ್ದಾರೆ ಕಂಗನಾ. ಕಂಗನಾ ಮಾತ್ರವಲ್ಲದೆ ಭಾರತದ ಬಹಳಷ್ಟು ಸೆಲೆಬ್ರಿಟಿಗಳು ಈ ವಿಚಾರವಾಗಿ ವಿದೇಶಿಗರ ಮೂಗುತೂರಿಸುವಿಕೆಯನ್ನು ಖಂಡಿಸಿದ್ದಾರೆ.