ಅಶ್ಲೀಲ ಸಿನಿಮಾ ಚಿತ್ರೀಕರಣ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ರಾ ಉರ್ಫಿ? ವಿಡಿಯೋ ವೈರಲ್
ಚಿತ್ರವಿಚಿತ್ರ ಕಾಸ್ಟೂಮ್ ಗಳ ಮೂಲಕವೇ ಸದ್ದು ಮಾಡುತ್ತಿರುವ ಉರ್ಫಿ ಇದೀಗ ಅಶ್ಲೀಲ ಸಿನಿಮಾ ಚಿತ್ರೀಕರಣ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಬಳಿಕ ಪೊಲೀಸರ ಬಳಿ ಕೋಗಾಡುತ್ತಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕಿರುತೆರೆ ನಟಿ ಮತ್ತು ಬಿಗ್ ಬಾಸ್ ಒಟಿಟಿ(OTT) ಸ್ಪರ್ಧಿ ಉರ್ಫಿ ಜಾವೇದ್(Urfi Javed) ಯಾರಿಗೆ ತಾನೆ ಗೊತ್ತಿಲ್ಲ. ಉರ್ಫಿ ತನ್ನ ಚಿತ್ರ ವಿಚಿತ್ರ ಉಡುಗೆಗಳ ಮೂಲಕವೇ ಗುರುತಿಸಿಕೊಂಡಿದ್ದಾರೆ. ಪ್ರತಿಬಾರಿ ಉರ್ಫಿ ವಿಚಿತ್ರ ಡ್ರೆಸ್ ನಲ್ಲಿ ಕಾಣಿಸಿಕೊಳ್ಳುತ್ತಾರೆ. ಅರೆಬರೆ ಬಟ್ಟೆ ತೊಟ್ಟು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಉರ್ಫಿ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಾರೆ. ಆದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಉರ್ಫಿ ಪ್ರತಿ ಬಾರಿಯೂ ವಿಚಿತ್ರವಾಗಿ ದರ್ಶನ ನೀಡುತ್ತಾರೆ. ಚಿತ್ರವಿಚಿತ್ರ ಕಾಸ್ಟೂಮ್ ಗಳ ಮೂಲಕವೇ ಸದ್ದು ಮಾಡುತ್ತಿರುವ ಉರ್ಫಿ ಇದೀಗ ಅಶ್ಲೀಲ ಸಿನಿಮಾ ಚಿತ್ರೀಕರಣ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಬಳಿಕ ಪೊಲೀಸರ ಬಳಿ ಕೋಗಾಡುತ್ತಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ವಿಡಿಯೋವನ್ನು ಕಂಟೆಂಟ್ ಕ್ರಿಯೇಟರ್ ರೋಹಿತ್ ಗುಪ್ತಾ ಶೇರ್ ಮಾಡಿದ್ದಾರೆ. ಉರ್ಫಿ ಜಾವೇದ್ ನಿರ್ದೇಶಕರ ಕಚೇರಿಗೆ ಭೇಟಿ ನೀಡುತ್ತಾರೆ. ಅಲ್ಲಿ ನಿರ್ದೇಶಕರ ಜೊತೆ ಸಿನಿಮಾ ಬಗ್ಗೆ ಮಾತನಾಡುತ್ತಾರೆ. ನಿರ್ದೇಶಕರು ಉರ್ಫಿ ಬಳಿ ಇದು ತುಂಬಾ ರಹಸ್ಯವಾದ ಪ್ರಾಜೆಕ್ಟ್ ಆಗಿದೆ. ರಣಬೀರ್ ಕಪೂರ್ ವಿಲನ್ ಆಗಿ ನಟಿಸುತ್ತಿದ್ದಾರೆ ಎಂದು ಹೇಳುತ್ತಾರೆ. ನಿರ್ದೇಶಕರ ಮಾತು ಕೇಳಿ ಉರ್ಫಿ ಫುಲ್ ಎಕ್ಸಾಯಿಟ್ ಆಗುತ್ತಾರೆ. ಅಲ್ಲದೆ ನಿರ್ದೇಶಕರ ಬಳಿ ಉರ್ಫಿ ಫಾರಿನ್ ನಾಯಕನ್ನು ಆಯ್ಕೆ ಮಾಡಿ ಎಂದು ಹೇಳುತ್ತಾರೆ.
Urfi Javed; ಈಕೆಯ ವಿಚಿತ್ರ ಅವತಾರಗಳನ್ನು ನೋಡೋಕೆ ಆಗ್ತಿಲ್ಲ ಗುರು ..
ಮತ್ತೋರ್ವ ನಿರ್ದೇಶಕ ಎಂಟ್ರಿ ಕೊಡುತ್ತಾರೆ. ಆತ ನಾಯಕನ ಪಾತ್ರ ಮಾಡುವುದಾಗಿ ನಿರ್ದೇಶಕರು ಹೇಳುತ್ತಾರೆ. ಆಗ ಉರ್ಫಿ ಉಗಾಂಡದಿಂದ ಬಂದಿದ್ದ ಎಂದು ಕೇಳುತ್ತಾರೆ. ಇದೇ ಸಮಯದಲ್ಲಿ ಹೀರೋ ಜೊತೆ ಆಡಿಶನ್ ಮಾಡುವಂತೆ ಹೇಳುತ್ತಾರೆ. ಜೊತೆಗೆ ವಿಚಿತ್ರವಾದ ಸಂಭಾಷಣೆ ನೀಡುತ್ತಾರೆ. ಆಗ ಪೊಲೀಸ್ ಎಂಟ್ರಿ ಕೊಟ್ಟಿದ್ದಾರೆ. ಮೂವರು ಸೇರಿಕೊಂಡು ಅಶ್ಲೀಲ ಸಿನಿಮಾ ಚಿತ್ರೀಕರಣ ಮಾಡುತ್ತಿದ್ದೀರಾ ಎಂದು ಆರೋಪ ಮಾಡುತ್ತಾರೆ. ಆಗ ಉರ್ಫಿ ಪೊಲೀಸ್ ಬಳಿ ಜೋರಾಗಿ ಕೂಗಾಡುತ್ತಾರೆ. ಬಳಿಕ ತನ್ನ ಮ್ಯಾನೇಜರ್ ಕರೆದು ಹೇಳುತ್ತಾರೆ. ಈ ಆಡಿಶನ್ ಫಿಕ್ಸ್ ಮಾಡಿದ್ದು ಯಾಕೆ ಎಂದು ಕೂಗಾಡುತ್ತಾರೆ. ಇಷ್ಟು ದೊಡ್ಡ ಡ್ರಾಮ ನಡೆಯುತ್ತಿರುವಾಗಲೇ ನೋಡುಗರಿಗೆ ಫೂಲ್ ಮಾಡುತ್ತಿದ್ದಾರೆ ಎನ್ನುವ ಸತ್ಯ ಅರಿವಾಗುತ್ತದೆ. ಅದರಲ್ಲೂ ಉರ್ಫಿ ಇದ್ದಾರೆ ಅಂದ್ಮಲೆ ಇದು ಪಕ್ಕಾ ರೀಲ್ ಎನ್ನುವುದು ಗೊತ್ತಾಗಿದೆ. ವಿಡಿಯೋ ಕೊನೆಯಲ್ಲಿ ಎಲ್ಲರೂ ಜೋರಾಗಿ ನಗುತ್ತಾರೆ. ಉರ್ಫಿ ನಿರಾಳರಾಗುತ್ತಾರೆ. ಇದು ನಿಜಕ್ಕೂ ಉರ್ಫಿಗೆ ಗೊತ್ತಿರಲಿಲ್ವಾ ಅಥವಾ ಉರ್ಫಿ ಕೂಡ ನಟಿಸಿದ್ದಾರಾ ಎನ್ನುವುದು ಅನುಮಾನ ಮೂಡಿಸಿದೆ. ಆದರೆ ಈ ವಿಡಿಯೋ ಈಗ ವೈರಲ್ ಆಗುತ್ತಿದೆ.
ಎಲ್ಲಾ ಮುಗೀತು, ಈಗ ಹೂವಿನಿಂದ ಮಾನ ಮುಚ್ಕೊಂಡ ಉರ್ಫಿ ಜಾವೇದ್
ಪದೇ ಪದೇ ಅಭಿಮಾನಿಗಳನ್ನು ಫೂಲ್ ಮಾಡುತ್ತಿರುವ ಉರ್ಫಿಯನ್ನು ಯಾರು ನಂಬುತ್ತಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಇದ್ಯಾವುದರ ಬಗ್ಗೆಯೂ ಉರ್ಫಿ ತಲೆಕೆಡಿಸಿಕೊಳ್ಳುವುದಿಲ್ಲ. ಪದೇ ಪದೇ ಟ್ರೋಲ್ ಆಗುತ್ತಿದ್ದರು ಉರ್ಫಿ ಯಾವುದರ ಬಗ್ಗೆಯೂ ಗಮನಹರಿಸದೆ ತನ್ನ ವಿಚಿತ್ರ ಬಟ್ಟೆಗಳ ಮೂಲಕವೇ ಹೆಚ್ಚು ತಲೆಕೆಡಿಸಿಕೊಂಡಿರುತ್ತಾರೆ.