Urfi Javed; ಈಕೆಯ ವಿಚಿತ್ರ ಅವತಾರಗಳನ್ನು ನೋಡೋಕೆ ಆಗ್ತಿಲ್ಲ ಗುರು ..
ಕಿರುತೆರೆ ನಟಿ ಮತ್ತು ಬಿಗ್ ಬಾಸ್ ಒಟಿಟಿ ಸ್ಪರ್ಧಿ ಉರ್ಫಿ ಜಾವೇದ್ ಯಾರಿಗೆ ತಾನೆ ಗೊತ್ತಿಲ್ಲ. ಉರ್ಫಿ ತನ್ನ ಚಿತ್ರ ವಿಚಿತ್ರ ಉಡುಗೆಗಳ ಮೂಲಕವೇ ಗುರುತಿಸಿಕೊಂಡಿದ್ದಾರೆ. ಪ್ರತಿಬಾರಿ ಉರ್ಫಿ ವಿಚಿತ್ರ ಉಡುಪಿನಲ್ಲಿ ಕಾಣಿಸಿಕೊಳ್ಳುತ್ತಾರೆ.
ಕಿರುತೆರೆ ನಟಿ ಮತ್ತು ಬಿಗ್ ಬಾಸ್ ಒಟಿಟಿ ಸ್ಪರ್ಧಿ ಉರ್ಫಿ ಜಾವೇದ್ ಯಾರಿಗೆ ತಾನೆ ಗೊತ್ತಿಲ್ಲ. ಉರ್ಫಿ ತನ್ನ ಚಿತ್ರ ವಿಚಿತ್ರ ಉಡುಗೆಗಳ ಮೂಲಕವೇ ಗುರುತಿಸಿಕೊಂಡಿದ್ದಾರೆ. ಪ್ರತಿಬಾರಿ ಉರ್ಫಿ ವಿಚಿತ್ರ ಉಡುಪಿನಲ್ಲಿ ಕಾಣಿಸಿಕೊಳ್ಳುತ್ತಾರೆ.
ಅರೆಬರೆ ಬಟ್ಟೆ ತೊಟ್ಟು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಉರ್ಫಿ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಾರೆ. ಆದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಉರ್ಫಿ ಪ್ರತಿ ಬಾರಿಯೂ ವಿಚಿತ್ರವಾಗಿ ದರ್ಶನ ನೀಡುತ್ತಾರೆ.
ಎಲ್ಲಾ ರೀತಿಯ ಬಟ್ಟೆ ಧರಿಸಿ ಓಡಾಡಿದ ಉರ್ಫಿ ಇತ್ತೀಚಿಗೆ ಹೂವಿನಿಂದ ಮಾನ ಮುಚ್ಚಿಕೊಂಡು ಬಂದಿದ್ದರು. ಹೂವಿನ ಉಡುಪು ಧರಿಸಿ ಬಂದಿದ್ದ ಉರ್ಫಿ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ. ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ.
ಇದಕ್ಕೂ ಮೊದಲು ಉರ್ಫಿ ಜಾವೇದ್ ಪ್ಲಾಸ್ಟಿಕ್ ಧರಿಸಿ ಬಂದಿದ್ದರು. ರೈನ್ ಕೋಟ್ ಹಾಗೆ ಇದ್ದ ಬಟ್ಟೆ ಧರಿಸಿ ಕ್ಯಾಮರಾಗೆ ಪೋಸ್ ನೀಡಿದ್ದರು. ಉರ್ಫಿಯ ಪ್ಲಾಸ್ಟಿಕ್ ಉಡುಪಿನ ಲುಕ್ ಕೂಡ ವೈರಲ್ ಆಗಿತ್ತು.
ಇನ್ನು ವಿಚಿತ್ರವೆಂದರೆ ಉರ್ಫಿ ಫೋಟೋಗಳನ್ನೇ ಬಟ್ಟೆಯಾಗಿ ಹಾಕಿಕೊಂಡಿದ್ದರು. ಮೈತುಂಬ ಫೋಟೋ ಅಂಟಿಸಿಕೊಂಡು ಬಂದಿದ್ದ ಉರ್ಫಿ ನೋಡಿ ನೆಟ್ಟಿಗರು ಕಂಗಾಲಾಗಿದ್ದರು. ಉರ್ಫಿಯ ಫೋಟೋ ಉಡುಪು ಕೂಡ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು.
ಕೆಂಪು ಬಿಕಿನಿ ಧರಿಸಿ ಪಡ್ಡೆಗಳ ನಿದ್ದೆ ಗೆಡಿಸಿದ್ದ ಉರ್ಫಿಯ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಬಿಕಿನಿ ವಿಡಿಯೋ ಮಾಡಿ ಉರ್ಫಿ ಶೇರ್ ಮಾಡಿದ್ದರು. ಉರ್ಫಿಯ ಕೆಂಪು ಬಿಕಿನಿ ವಿಡಿಯೋ ವೈರಲ್ ಆಗಿತ್ತು.
ಉರ್ಫಿ ಜಾವೇದ್ ಮುಸ್ಲಿಂ ಕುಟುಂಬದಿಂದ ಬಂದವರು. ಉತ್ತರ ಪ್ರದೇಶದ ಉರ್ಫಿ ಈಗ ತನ್ನ ವಿಚಿತ್ರ ಉಡುಪಿನ ಮೂಲಕವೇ ಪ್ರಸಿದ್ಧರಾಗಿದ್ದಾರೆ. ಎಷ್ಟು ಬಾರಿ ಟ್ರೋಲ್ ಆದರು ತಲೆಕೆಡಿಸಿಕೊಳ್ಳದ ಉರ್ಫಿ ಪದೇ ಪದೇ ವಿಚಿತ್ರ ಲುಕ್ ನಲ್ಲೇ ದರ್ಶನ ನೀಡುತ್ತಾರೆ.
ನಟಿ ಉರ್ಫಿ ಜಾವೇದ್ ಕಿರುತೆರೆ ಮೂಲಕ ಬಣ್ಣದ ಲೋಕ ಪ್ರವೇಶ ಮಾಡಿದರು. ಅನೇಕ ಧಾರಾವಾಹಿಗಳಲ್ಲಿ ನಟಿಸಿರುವ ಉರ್ಫಿ ಬಳಿಕ ಬಿಗ್ ಬಾಸ್ ಒಟಿಟಿಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತಷ್ಟು ಖ್ಯಾತಿಗಳಿಸಿದರು.