ಗುಡ್ ಲಕ್ ಎಂದು ಭಾವಿಸುವ ತಮ್ಮ ಬ್ರೇಸ್ಲೈಟ್ ಅನ್ನು ನಟ ಸಲ್ಮಾನ್ ಖಾನ್ ಸ್ವಲ್ಪ ಹೊತ್ತಿನ ಮಟ್ಟಿಗೆ ಆಮೀರ್ ಖಾನ್ಗೆ ನೀಡಿದ್ರಾ? ಏನಿದು ವಿಷಯ?
ಬಾಲಿವುಡ್ನ ಮೋಸ್ಟ್ ಎಲಿಬಿಜಬ್ ಬ್ಯಾಚುಲರ್ ಎಂದು ಕರೆಸಿಕೊಳ್ಳುತ್ತಿರುವ ಸಲ್ಮಾನ್ ಖಾನ್ (Salman Khan) ಅವರ ಕೈಯನ್ನು ನೋಡಿರುವಿರಾ? ಹೌದು. ಅವರ ಬಲಗೈನಲ್ಲಿ ಸದಾ ಒಂದು ಬ್ರೆಸ್ಲೈಟ್ ಇರುತ್ತದೆ. ನೀಲಿ ಹರಳು ಇರುವ ಬ್ರೆಸ್ಲೈಟ್ ಇದು. ನಕಾರಾತ್ಮಕ ಶಕ್ತಿಯನ್ನು ಹೊರಕ್ಕೆ ಹಾಕುತ್ತದೆ, ಆದ್ದರಿಂದ ಇದನ್ನು ನಾನು ಸದಾ ಧರಿಸುತ್ತೇನೆ ಎಂದು ಹಿಂದೊಮ್ಮೆ ಸಲ್ಲುಭಾಯಿ ಹೇಳಿದ್ದರು. ತಮ್ಮ ತಂದೆ ಇದನ್ನು ಸದಾ ಧರಿಸುತ್ತಿದ್ದರು. ಚಿಕ್ಕವರಿರುವಾಗಿನಿಂದಲೂ ಅದರ ಜೊತೆ ಆಟವಾಡುತ್ತಾ ಭಾವನಾತ್ಮಕ ಸಂಬಂಧ ಹೊಂದಿದ್ದೇನೆ. ನಂತರ ಅದನ್ನು ನಾನು ಧರಿಸಲು ಶುರು ಮಾಡಿದೆ. ಇದು ನನ್ನ ಲಕ್ಕಿ ಬ್ರೇಸ್ಲೈಟ್ ಎಂದು ಅವರು ಹೇಳಿದ್ದರು. ಅದರ ಸುದ್ದಿ ಈಗೇಕೆ ಅಂದರೆ ಅದೇ ಬ್ರೇಸ್ಲೈಟ್ ನಿನ್ನೆ ನಟ ಆಮೀರ್ ಖಾನ್ ಕೈಯಲ್ಲಿ ಕಾಣಿಸಿಕೊಂಡಿದೆ. ಅದು ಇದೇನಾ? ಒಂದು ದಿನದ ಮಟ್ಟಿಗೆ ಸಲ್ಮಾನ್ ತಮ್ಮ ಜೀವದ ಗೆಳೆಯ ಆಮೀರ್ಗೆ ಇದನ್ನು ಕೊಟ್ಟಿದ್ದಾರಾ ಎನ್ನುವ ಚರ್ಚೆ ಶುರುವಾಗಿದೆ.
ಎಲ್ಲರಿಗೂ ತಿಳಿದಿರುವಂತೆ ಆಮಿರ್ ಖಾನ್ (Amir Khan)ಮತ್ತು ಸಲ್ಮಾನ್ ಖಾನ್ ನಡುವೆ ಉತ್ತಮ ಗೆಳೆತನ ಇದೆ. ಅವರಿಬ್ಬರೂ ಸಿಕ್ಕಾಗಲೆಲ್ಲಾ ಒಟ್ಟಿಗೇ ಫೋಟೋಗೆ ಪೋಸ್ ಕೊಡುವುದು ಇದೆ. ಹೇಳಿ ಹೇಳಿ ಇಬ್ಬರೂ ಖಾನ್ಗಳು. ಇನ್ನೊಬ್ಬರು ಶಾರುಖ್ ಖಾನ್. ಈ ಖಾನ್ ತ್ರಯರು ಬಹಳ ಕ್ಲೋಸ್ ಫ್ರೆಂಡ್ಸ್ ಎನ್ನುವ ಮಾತು ಮೊದಲಿನಿಂದಲೂ ಬಿ-ಟೌನ್ನಲ್ಲಿ ಇದೆ. ಅದೇ ರೀತಿ ಸಲ್ಮಾನ್ ಮತ್ತು ಆಮೀರ್ ಆತ್ಮೀಯತೆ ಹೆಚ್ಚಿಗೆ ಇದೆ. ಇತ್ತೀಚೆಗಷ್ಟೇ, ಇಬ್ಬರೂ ಜೊತೆಯಾಗಿ ಇರುವ ಫೋಟೋವನ್ನು ಸಲ್ಮಾನ್ ಖಾನ್ ಶೇರ್ ಮಾಡಿಕೊಂಡಿದ್ದರು. ಅದರ ಮರುದಿನವೇ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ (Arpita Khan) ಈದ್ ಪಾರ್ಟಿ ಆಯೋಜಿಸಿದ್ದರು. ಆ ಪಾರ್ಟಿಯಲ್ಲಿ ಸಹಜವಾಗಿ ಆಮಿರ್ ಖಾನ್ ಹಾಜರಿದ್ದರು.
ಎರಡು ವರ್ಷ ಕದ್ದುಮುಚ್ಚಿ ಹಿಂದೂ ಯುವತಿ ಜೊತೆ ಸಂಸಾರ ಮಾಡಿದ್ದ ಆಮೀರ್ ಖಾನ್!
ಪಾಪರಾಜಿಗಳು ಮುತ್ತಿಕೊಂಡು ಕ್ಯಾಮೆರಾ ಆನ್ ಮಾಡಿದ್ದಾರೆ. ಆಗ ಅವರ ಕಣ್ಣು ಆಮೀರ್ ಖಾನ್ ಅವರ ಬ್ರೇಸ್ಲೈಟ್ ಮೇಲೆ ಹೋಗಿದೆ. ಇದಕ್ಕೆ ಕಾರಣ ಆಮೀರ್ ಖಾನ್ ಫೋಟೋಗೆ ಪೋಸ್ ನೀಡುವಾಗ ಬ್ರೇಸ್ಲೈಟ್ ಲೂಸ್ ಆಗಿ ಬೀಳುವ ಹಾಗೆ ಆಗಿತ್ತು. ಅದನ್ನು ಅವರು ಸರಿಪಡಿಸಿಕೊಂಡಿದ್ದರು. ಆದ್ದರಿಂದ ಇದು ವಿಡಿಯೋದಲ್ಲಿ ಫೋಕಸ್ ಆಗಿದೆ. ಈ ಬ್ರೇಸ್ಲೈಟ್ ಸಲ್ಮಾನ್ ಖಾನ್ ಹಾಕಿಕೊಳ್ಳುವ ಬ್ರೇಸ್ಲೈಟ್ ರೀತಿಯೇ ಇದ್ದುದರಿಂದ ಇದು ಅವರದ್ದೇ ಎಂದು ಕಮೆಂಟ್ಸ್ಗಳ ಸುರಿಮಳೆಯಾಗುತ್ತಿದೆ. ಹಾಗಿದ್ದರೆ ಒಂದೇ ರೀತಿಯ ಬ್ರೇಸ್ಲೈಟ್ ಇಬ್ಬರ ಬಳಿಯೂ ಇರಬಾರದಾ ಎಂದು ಕೆಲವರು ಪ್ರಶ್ನಿಸಿದ್ದಾರೆ. ಅಲ್ಲಿಯೇ ಇರುವುದು ಕುತೂಹಲದ (Interesting) ವಿಷಯ.
ಅದೇನೆಂದರೆ, ಪಾರ್ಟಿ ಮುಗಿಸಿ ವಾಪಸ್ ಹೊರಡುವಾಗ ಆಮಿರ್ ಖಾನ್ ಕೈಯಲ್ಲಿ ಆ ಬ್ರೇಸ್ಲೆಟ್ ಕಾಣಿಸಲಿಲ್ಲ. ಅದನ್ನು ಪುನಃ ಅವರು ಸಲ್ಮಾನ್ ಖಾನ್ಗೆ ನೀಡಿದ್ದಾರೆ ಎಂದು ಫ್ಯಾನ್ಸ್ ಊಹಿಸಿದ್ದಾರೆ. ಒಂದಾದ ಮೇಲೊಂದಂರೆ ಫ್ಲಾಪ್ ಸಿನಿಮಾ ನೀಡಿ ಸಿನಿಮಾದಲ್ಲಿನ ನಟನೆಯಿಂದಲೇ ದೂರ ಹೋಗುವ ಯೋಚನೆಯಲ್ಲಿರುವ ಆಮೀರ್ ಖಾನ್ಗೆ ಶುಭವಾಗಲಿ ಎಂದು ಸಲ್ಲುಭಾಯಿ ಅದನ್ನು ನೀಡಿರಬಹುದಾ ಎಂದು ಕಮೆಂಟ್ನಲ್ಲಿ ಫ್ಯಾನ್ಸ್ ಪ್ರಶ್ನಿಸುತ್ತಿದ್ದು, ತಮ್ಮ ನಟನಿಗೆ ಶುಭ ಹಾರೈಸಿದ್ದಾರೆ. ಸಿನಿಮಾಗಳಲ್ಲೂ ಸಲ್ಮಾನ್ ಖಾನ್ ಈ ಬ್ರೇಸ್ಲೈಟ್ ಧರಿಸುತ್ತಾರೆ. ಅದಕ್ಕಾಗಿಯೇ ಅವರ ಚಿತ್ರಗಳು ಹಿಟ್ ಆಗುತ್ತವೆ ಎನ್ನುವ ನಂಬಿಕೆ ಇದೆ. ಇದೇ ಕಾರಣಕ್ಕೆ ಒಂದು ದಿನದ ಮಟ್ಟಿಗಾದರೂ ಅದನ್ನು ಸೋಕಿರುವ ಆಮೀರ್ಗೆ ಅದೃಷ್ಟ ಬರಲಿ (Good Firtune) ಎಂದು ಸ್ನೇಹಿತ ಬಯಸಿರುವುದಾಗಿ ಫ್ಯಾನ್ಸ್ ಹೇಳುತ್ತಿದ್ದಾರೆ. ಆದರೂ ಇದರ ಬಗ್ಗೆ ಥಹರೇವಾರಿ ಕಮೆಂಟ್ಗಳು ಬರುತ್ತಿವೆ.
Salman Khan: ಹೊಟ್ಟೆಗಿಲ್ಲದೇ ತೋಟಕ್ಕೆ ನುಗ್ತಿದ್ದೆ, ಛಡಿ ಏಟು ಬೀಳ್ತಿತ್ತು... ಎಂದು ನೆನಪಿಸಿಕೊಂಡ ನಟ
ಅಂದಹಾಗೆ ಸದ್ಯ ಸಲ್ಮಾನ್ ಖಾನ್ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಏಪ್ರಿಲ್ 21ರಂದು ಬಿಡುಗಡೆಯಾದ ಈ ಚಿತ್ರ ಮೊದಲ ದಿನ ಈ ಚಿತ್ರಕ್ಕೆ ಕೇವಲ 15.81 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಏಪ್ರಿಲ್ 22ರಂದು 25.75 ಕೋಟಿ ರೂಪಾಯಿ ಬಾಚಿಕೊಂಡಿದೆ. ಭಾನುವಾರ ಕೂಡ ಉತ್ತಮ ಪ್ರದರ್ಶನ ಕಂಡಿದೆ. ಆ ಮೂಲಕ ಶೀಘ್ರದಲ್ಲೇ 100 ಕೋಟಿ ರೂಪಾಯಿ ಕಲೆಕ್ಷನ್ ಆಗುವ ಸೂಚನೆ ಸಿಕ್ಕಿದೆ.
