ಆಗಸ್ಟ್‌ 10ರಂದು ತೆರೆ ಕಂಡ 'ಜೈಲರ್‌' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಈ ಮಧ್ಯೆ ಸನ್ ಪಿಕ್ಚರ್ಸ್‌ನ ಅಧಿಕೃತ ಖಾತೆಯು ಟ್ವಿಟರ್‌ನಲ್ಲಿ ರಜನಿಕಾಂತ್‌ಗೆ ಚೆಕ್‌ ಹಸ್ತಾಂತರಿಸಿದ ಫೋಟೋವನ್ನು ಹಂಚಿಕೊಂಡಿದೆ: ತಲೈವಾ ಸಂಭಾವನೆ ಎಷ್ಟು ಅಂತ ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದಾರೆ.

ರಜನಿಕಾಂತ್ ಅವರು ಇತ್ತೀಚೆಗೆ ಬಿಡುಗಡೆಯಾದ ಜೈಲರ್ ಚಲನಚಿತ್ರದ ಅದ್ಭುತ ಯಶಸ್ಸಿನ ನಂತರ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರೆಂದು ಗುರುತಿಸಿಕೊಂಡಿದ್ದಾರೆ. 'ಜೈಲರ್' ಸಿನಿಮಾ ಪ್ರಪಂಚದಾದ್ಯಂತ ಒಟ್ಟು 564.35 ಕೋಟಿ ರೂ.ಗಿಂತ ಹೆಚ್ಚಿನ ಕಲೆಕ್ಷನ್ ಗಳಿಸಿದೆ ಎಂದು ಹೇಳಲಾಗುತ್ತದೆ. ಜೈಲರ್ ಐತಿಹಾಸಿಕ ಯಶಸ್ಸನ್ನು ಗಳಿಸುತ್ತಿದ್ದಂತೆ, ಸನ್ ಪಿಕ್ಚರ್ಸ್‌ನ ನಿರ್ಮಾಪಕ ಕಲಾನಿಧಿ ಮಾರನ್ ರಜನಿಕಾಂತ್ ಅವರನ್ನು ಭೇಟಿಯಾಗಿ ದಿಗ್ಗಜ ನಟನಿಗೆ ಚೆಕ್ ಹಸ್ತಾಂತರಿಸಿದರು. ಆಗಸ್ಟ್‌ 10ರಂದು ತೆರೆ ಕಂಡ 'ಜೈಲರ್‌' ಸಿನಿಮಾ ಭರ್ಜರಿ ಬಾಕ್ಸಾಫೀಸ್ ಕಲೆಕ್ಷನ್ ಮಾಡುತ್ತಿದೆ.

ಸನ್ ಪಿಕ್ಚರ್ಸ್‌ನ ಅಧಿಕೃತ ಖಾತೆಯು ಟ್ವಿಟರ್‌ನಲ್ಲಿ ಈ ಫೋಟೋವನ್ನು ಹಂಚಿಕೊಂಡಿದೆ: 'ಕಲಾನಿಧಿ ಮಾರನ್, ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಭೇಟಿ ಮಾಡಿ ಚೆಕ್ ಹಸ್ತಾಂತರಿಸಿ, ಜೈಲರ್ ಐತಿಹಾಸಿಕ ಯಶಸ್ಸಿನ (Jailer sucess) ಸಂಭ್ರಮಾಚರಣೆ ಮಾಡಿದ್ದಾರೆ' ಎಂದು ಶೀರ್ಷಿಕೆ ನೀಡಿ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗಿದೆ. ಒಂದು ಫೋಟೋದಲ್ಲಿ ಕಲಾನಿಧಿ ಮಾರನ್, ರಜನೀಕಾಂತ್‌ಗೆ ಚೆಕ್‌ ನೀಡುತ್ತಿದ್ದರೆ, ಮತ್ತೊಂದರಲ್ಲಿ ತಲೈವಾಗೆ ಹೂವಿನ ಬೊಕ್ಕೆ ನೀಡುತ್ತಿದ್ದಾರೆ.

ಎಲ್ಲಾ ಮಹಿಳೆಯರ ಬಳಿ ನನ್ನ ಜೊತೆ ಮಲಗ್ತೀರಾ ಅಂತ ಕೇಳ್ತೀನಿ, ತಪ್ಪೇನು ಎಂದ 'ಜೈಲರ್' ನಟ

200 ಕೋಟಿ ಬಜೆಟ್‌ನಲ್ಲಿ ತಯಾರಾದ ಚಿತ್ರ, ರಜಿನಿ ಸಂಭಾವನೆ ಎಷ್ಟು?
ಜೈಲರ್‌ ಸಿನಿಮಾ 200 ಕೋಟಿ ಬಜೆಟ್‌ನಲ್ಲಿ ತಯಾರಾದ ಚಿತ್ರ. ಇದುವರೆಗೂ ಸಿನಿಮಾ 560 ಕೋಟಿಗೂ ಹೆಚ್ಚು ಲಾಭ (Profit) ಮಾಡಿದೆ. ಚಿತ್ರಕ್ಕಾಗಿ ತಲೈವಾ ಎಷ್ಟು ಸಂಭಾವನೆ ಪಡೆದಿರಬಹುದು ಎಂಬ ಚರ್ಚೆಯೂ ಶುರುವಾಗಿದೆ. ರಜನಿಕಾಂತ್‌ ದಕ್ಷಿಣ ಭಾರತದ ಹಿರಿಯ, ಬೇಡಿಕೆಯ ನಟರಲ್ಲಿ ಪ್ರಮುಖರು. ಅವರಿಗೆ 72 ವರ್ಷ ವಯಸ್ಸಾದರೂ (Age) ಡಿಮ್ಯಾಂಡ್‌ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆ ಆಗಿಲ್ಲ. ಜೈಲರ್‌ ಚಿತ್ರ ಹಿಟ್‌ ಆಗಿದ್ದು ಅವರ ಸಂಭಾವನೆ ಎಷ್ಟಿರಬಹುದು ಎಂದು ತಿಳಿಯಲು ಅಭಿಮಾನಿಗಳು (Fans) ಹರ ಸಾಹಸ ಮಾಡುತ್ತಿದ್ದಾರೆ. ಈ ನಡುವೆ ಸನ್‌ ಪಿಕ್ಚರ್ಸ್‌ನ ಕಲಾನಿಧಿ ಮಾರನ್‌ ರಜನಿಕಾಂತ್‌ಗೆ ಚೆಕ್‌ ಹಸ್ತಾಂತರಿಸುತ್ತಿದ್ದಾರೆ ಎನ್ನಲಾದ ಫೋಟೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ.

ಕಲಾನಿಧಿ ಮಾರನ್ ಅವರು ಸೂಪರ್‌ಸ್ಟಾರ್ ರಜನಿಕಾಂತ್ ಅವರಿಗೆ ಹಸ್ತಾಂತರಿಸಿದ ಲಕೋಟೆಯಲ್ಲಿ ಸಿಟಿ ಯೂನಿಯನ್ ಬ್ಯಾಂಕ್, ಮಂಡವೇಲಿ ಶಾಖೆ, ಚೆನ್ನೈನಿಂದ 100 ಕೋಟಿ ರೂ. ಎಂದು ನಮೂದಿಸಲಾಗಿದೆ. ಇದು ಜೈಲರ್ ಲಾಭ ಹಂಚಿಕೆಯ ಚೆಕ್ ಆಗಿದ್ದು, ಈಗಾಗಲೇ ಚಲನಚಿತ್ರಕ್ಕಾಗಿ ರಜನೀಕಾಂತ್ ಅವರಿಗೆ ಸಂಭಾವನೆಯಾಗಿ 110 ಕೋಟಿ ರೂ. ಪಾವತಿಸಲಾಗಿದೆ. ಈ ಮೂಲಕ ಇಲ್ಲಿಯವರೆಗೆ ಜೈಲರ್ ಚಿತ್ರಕ್ಕಾಗಿ ಸೂಪರ್ ಸ್ಟಾರ್ ರಜನಿಕಾಂತ್ ಒಟ್ಟು 210 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದಾರೆ. ಈ ಮೂಲಕ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎಂದು ಗುರುತಿಸಿಕೊಂಡಿದ್ದಾರೆ. 

ಜೈಲರ್ ಪಾರ್ಟ್‌ 2 ಸಿನಿಮಾ ಬರ್ತಿದೆ.... ಹೀರೋ ಯಾರು?

ಜೈಲರ್, ಮೂರನೇ ಅತಿ ಹೆಚ್ಚು ಗಳಿಕೆಯ ದಕ್ಷಿಣ ಭಾರತೀಯ ಸಿನಿಮಾ
Sacnilk ಪ್ರಕಾರ, 'ಜೈಲರ್' ಗಲ್ಫ್ ಸಹಕಾರ ಮಂಡಳಿ (GCC) ಪ್ರದೇಶದಲ್ಲಿ ಇದುವರೆಗೆ ಮೂರನೇ ಅತಿ ಹೆಚ್ಚು ಗಳಿಕೆಯ (Colection) ದಕ್ಷಿಣ ಭಾರತೀಯ ಚಲನಚಿತ್ರವಾಗಿದೆ. KGF- ಚಾಪ್ಟರ್‌ 2 ಮತ್ತು ಬಾಹುಬಲಿ 2, ದಿ ಕನ್‌ಕ್ಲೂಷನ್ ಎರಡನೇ ಸ್ಥಾನದಲ್ಲಿದೆ. ಆಗಸ್ಟ್ 10 ರಂದು ಬಿಡುಗಡೆಯಾದ ಜೈಲರ್ ಕೇವಲ 10 ದಿನಗಳಲ್ಲಿ ವಿಶ್ವದಾದ್ಯಂತ 500 ಕೋಟಿ ರೂ. ಕಲೆಕ್ಷನ್ ಮಾಡಿದೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಚಿತ್ರವು ಭಾರತ ಮತ್ತು ವಿದೇಶಗಳಲ್ಲಿ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ.

ಜೈಲರ್‌ನ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಕಲಾನಿಧಿ ಮಾರನ್ ಅವರ ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್ ನೆಟ್‌ಫ್ಲಿಕ್ಸ್ ಸಹಯೋಗದೊಂದಿಗೆ ಪಡೆದುಕೊಂಡಿದೆ ಎಂದು ಇತ್ತೀಚೆಗೆ ವರದಿಯಾಗಿದೆ. ಚಲನಚಿತ್ರವು Sun NXT ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಿರುತ್ತದೆ. ಇದಲ್ಲದೆ, ಸನ್ ನೆಟ್‌ವರ್ಕ್ ತನ್ನ ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಆವೃತ್ತಿಗಳಲ್ಲಿ ಜೈಲರ್‌ನ ಸ್ಯಾಟ್‌ಲೈಟ್‌ ಹಕ್ಕುಗಳನ್ನು ಪಡೆದುಕೊಂಡಿದೆ ಎಂದು ತಿಳಿದುಬಂದಿದೆ..

Scroll to load tweet…