ಅರ್ಜುನ್‌ ಕಪೂರ್‌ಗೆ ಮಲೈಕಾ ಸಹವಾಸ ಸಾಕಾಯ್ತಾ? ನಟಿ ಕುಶಾ ಜೊತೆ ಏನಿದು ವಿಷ್ಯ?

ಮಲೈಕಾ ಅರೋರಾ ಜೊತೆ ಇಷ್ಟು ವರ್ಷ ಡೇಟಿಂಗ್​  ಮಾಡ್ತಿದ್ದ ಅರ್ಜುನ್​ ಕಪೂರ್​ ಈಗ ಹೊಸ ಜೋಡಿ ಹುಡುಕಿಕೊಂಡಿದ್ದಾರಾ? ಏನಿದು ವಿಷ್ಯ?
 

Did Kusha Kapila just react to dating rumours with Arjun Kapoor

ಮಲೈಕಾ ಅರೋರಾ (Malaika Arora) ಮತ್ತು ಅರ್ಬಾಜ್ ಖಾನ್ ಅವರನ್ನು ಹಿಂದಿನ ದಿನದ ಹಾಟೆಸ್ಟ್ ಜೋಡಿಗಳಲ್ಲಿ ಒಂದು ಎಂದೇ ಕರೆಯಲಾಗುತ್ತಿತ್ತು. ಆದರೆ ಅವರು ಬೇರ್ಪಟ್ಟು ಹಲವು ವರ್ಷಗಳೇ ಕಳೆದಿವೆ. 2017ರಲ್ಲಿ ಈ ಜೋಡಿ ಬೇರ್ಪಟ್ಟಿದೆ. ಮಲೈಕಾ ಅರೋರಾಗೆ ಈಗ 49 ವರ್ಷ ವಯಸ್ಸು. ಅರ್ಬಾಜ್​ ಖಾನ್​ ಜೊತೆ ಬೇರ್ಪಟ್ಟ ಬಳಿಕ 12 ವರ್ಷ ಚಿಕ್ಕವಾಗಿರುವ ನಟ ಅರ್ಜುನ್ ಕಪೂರ್ (Arjun Kapoor) ಜೊತೆ ಕೆಲ ವರ್ಷಗಳಿಂದ ಡೇಟಿಂಗ್​ ಮಾಡುತ್ತಿದ್ದಾರೆ ಮಲೈಕಾ. ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಾಗ ಆಗುವಷ್ಟು ಟ್ರೋಲ್​ ಇನ್ನಾವುದಕ್ಕೂ ಆಗುತ್ತಿಲ್ಲ ಎನ್ನಬಹುದೇನೋ. ಅದೇನೇ ಇದ್ದರೂ ಇವರಿಬ್ಬರೂ ಯಾರಿಗೂ ಡೋಂಟ್​ಕೇರ್​ ಎನ್ನದೇ  ಜೀವನ ನಡೆಸುತ್ತಿದ್ದಾರೆ. ಮಲೈಕಾ ಅರ್ಜುನ್​ ಕಪೂರ್​ ಜೊತೆ ಡೇಟಿಂಗ್​ನಲ್ಲಿದ್ದರೂ ಮಗನಿಗಾಗಿ ಆಗಾಗ್ಗೆ ಅರ್ಬಾಜ್​ ಖಾನ್​ರನ್ನು ಭೇಟಿಯಾಗುವುದು, ತಬ್ಬಿಕೊಳ್ಳುವುದು ನಡೆದಿದ್ದು, ಇವುಗಳ ವಿಡಿಯೋಗಳೂ ವೈರಲ್​ ಆಗುತ್ತಲೇ ಇರುತ್ತವೆ. ಆದರೆ ಇದರ ಬೆನ್ನಲ್ಲೇ ಇವರಿಬ್ಬರೂ ಬ್ರೇಕಪ್​ ಆಗಿದ್ದಾರೆ ಎಂಬ ಭಾರಿ ಸುದ್ದಿ ಬಿ ಟೌನ್​ನಲ್ಲಿ ಹರಿದಾಡುತ್ತಿದೆ. ಇಷ್ಟು ದಿನ ಮಲೈಕಾ ಜೊತೆ  ಟ್ರಿಪ್​ಗೆ ಹೋಗುತ್ತಿದ್ದ ಅರ್ಜುನ್​ ಈಗ ಒಂಟಿಯಾಗಿ ತಿರುಗಾಡಲು ಶುರು ಮಾಡಿದ್ದೇ ಈ ಗಾಳಿ ಸುದ್ದಿಗೆ ಕಾರಣವಾಗಿದೆ. 

ಇದು ಒಂದೆಡೆಯಾದರೆ, ಇತ್ತ  ಕೆಲವು ದಿನಗಳಿಂದ ನಟಿ ಕುಶಾ ಕಪಿಲಾ ಅವರ ಹೆಸರು ಅರ್ಜುನ್ ಕಪೂರ್ ಜತೆ ಥಳುಕು ಹಾಕಿಕೊಂಡಿದೆ. ಕುಶಾ ಜೊತೆ ಅರ್ಜುನ್‌ ಕಪೂರ್‌ (Arjun Kapoor) ಡೇಟಿಂಗ್‌ ನಡೆಸುತ್ತಿದ್ದಾರೆ ಎನ್ನಲಾಗಿದೆ. ವಯಸ್ಸಿನಲ್ಲಿ ಅತಿ ದೊಡ್ಡವರಾಗಿರುವ ಮಲೈಕಾ ಜೊತೆ ಹಲವಾರು ವರ್ಷಗಳಿಂದ ಡೇಟಿಂಗ್‌ ಮಾಡಿ ದೇಶ-ವಿದೇಶ ಸುತ್ತಿದ ಅರ್ಜುನ್‌ ಕಪೂರ್‌ಗೆ ಈಗ ಜ್ಞಾನೋದಯ ಆಯ್ತಾ ಎಂದು ಫ್ಯಾನ್ಸ್‌ ಕೇಳುತ್ತಿದ್ದಾರೆ. ಈಗ ಚಿಕ್ಕ ವಯಸ್ಸಿನ ಕುಶಿ ಜೊತೆ ಹೆಸರು ಕೇಳಿಬರುತ್ತಿದ್ದಂತೆಯೇ ಅವರಿಬ್ಬರ ಸುದ್ದಿ ಸಕತ್‌ ಕೇಳಿಬರುತ್ತಿದೆ. ಅಷ್ಟಕ್ಕೂ ಇವರಿಬ್ಬರ ಹೆಸರು ಥಳಕು ಹಾಕಲು ಕಾರಣ ಏನೆಂದರೆ,   ಈ ಹಿಂದೆ, ಅರ್ಜುನ್ ಕಪೂರ್ ಮತ್ತು ಕುಶಾ ಕಪಿಲಾ ನಿರ್ದೇಶಕ ಕರಣ್ ಜೋಹರ್ ಅವರ ಮನೆಯಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇಲ್ಲಿ ಮಲೈಕಾ ಅರೋರಾ ಬಂದಿರಲಿಲ್ಲ. ಅಷ್ಟೇ ಅಲ್ಲದೇ, ಅರ್ಜುನ ಕಪೂರ್‌ ಸೋಲೋ ಟ್ರಿಪ್‌ ಮಾಡುತ್ತಿದ್ದಾರೆ. ಇವೆಲ್ಲವನ್ನೂ ಒಂದಕ್ಕೊಂದು ಜೋಡಿಸಿ ಈ ರೂಮರ್ಸ್ ಹರಡಲಾಗುತ್ತಿದೆ. 

ಅರ್ಜುನ್​ ಕಪೂರ್​ ಬ್ರೇಕಪ್​ ಸುದ್ದಿ ಬೆನ್ನಲ್ಲೇ ಮಾಜಿ ಪತಿಯ ಲವ್​ ಸ್ಟೋರಿ ನೆನಪಿಸಿಕೊಂಡ ಮಲೈಕಾ! ​

ಇದಕ್ಕೆ ಮೊದಲ ಬಾರಿಗೆ  ಕುಶಾ ಕಪಿಲಾ (Kusha Kapila) ಮೌನ ಮುರಿದಿದ್ದಾರೆ. ತಮ್ಮ ಬಗ್ಗೆ ದಿನನಿತ್ಯವೂ ಕೇಳಿಬರುತ್ತಿರುವ ಸುದ್ದಿಯಿಂದ ಅಸಮಾಧಾನ ಹಾಗೂ ಆಕ್ರೋಶಗೊಂಡಿರುವ ನಟಿ, ಈ ರೀತಿಯ ಸುದ್ದಿ ಹರಡಲು ನಾಚಿಕೆ ಆಗಲ್ವಾ ಎಂದು ಕೇಳುತ್ತಿದ್ದಾರೆ. ದಿನನಿತ್ಯವೂ ಅಸಹ್ಯ ಸುದ್ದಿಗಳನ್ನು ಕೇಳಿ ಕೇಳಿ ನನಗೂ ಸಾಕಾಗಿ ಹೋಗಿದೆ. ಹೋದಲ್ಲಿ, ಬಂದಲ್ಲಿ ಇದೇ ಪ್ರಶ್ನೆಯನ್ನು ನನ್ನ ಮುಂದೆ ಇಡಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿಯೂ ಈ ವಿಷಯವಾಗಿ ಚರ್ಚಿಸಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿರುವ ಕುಶಾ, ನನ್ನ ಅಮ್ಮ ಏನಾದರೂ ಈ ಸುದ್ದಿಗಳನ್ನು ನೋಡಿದರೆ ಅಷ್ಟೇ. ಅವರಿಗೆ ಎಷ್ಟು ನೋವಾಗುತ್ತದೆ ಎಂದಿದ್ದಾರೆ. ದಯವಿಟ್ಟು ಇಂಥ ರೂಮರ್ಸ್ ಹರಡುವುದನ್ನು  ನಿಲ್ಲಿಸಿ ಎಂದಿದ್ದಾರೆ. 

ಮಲೈಕಾ- ಅರ್ಜುನ್​ ನೈಟ್​ ಔಟ್​: ಮುದಿ ಕುದುರೆಗೆ ಯುವ ಜಾಕಿ ಅನ್ನೋದಾ ನೆಟ್ಟಿಗರು!
 
ಅದೇ ಇನ್ನೊಂದೆಡೆ,  ಮಲೈಕಾ, ತಮ್ಮ ವಿಚ್ಛೇದಿತ ಪತಿ ಅರ್ಬಾಜ್‌ ಖಾನ್‌, ಪ್ರೇಮ ನಿವೇದನೆ ಮಾಡಿಕೊಂಡ ದಿನಗಳ ಕುರಿತು ಮಾತನಾಡಿದ್ದರು. ತಾವು ಅರ್ಬಾಜ್‌ ಅವರ ಪ್ರೇಮದಲ್ಲಿ ಹೇಗೆ ಸಿಲುಕಿದ್ದು ಎನ್ನುವ ಕುರಿತು ತಿಳಿಸಿದ್ದರು. ಅರ್ಬಾಜ್‌ ಖಾನ್‌ ತಮ್ಮ ಹುಟ್ಟುಹಬ್ಬದ ದಿನವೇ  ವಜ್ರದ ಉಂಗುರ ಹಾಕಿ ಪ್ರಪೋಸ್‌ ಮಾಡಿದ ಕ್ಷಣ ಇಂದಿಗೂ ಕಣ್ಣಮುಂದೆಯೇ ಇದೆ ಎಂದಿದ್ದರು. ಕುತೂಹಲದ ವಿಷಯವೆಂದರೆ, ಹೀಗೆ ಪ್ರಪೋಸ್‌ ಮಾಡಿದ ಸಂದರ್ಭದಲ್ಲಿ ಅರ್ಬಾಜ್‌ ಖಾನ್‌ (Arbaz Khan) ವಿಪರೀತ ಜ್ವರದಿಂದ ಬಳಲುತ್ತಿದ್ದಂತೆ. ಈ ಕುರಿತು ಹೇಳಿಕೊಂಡಿರುವ ಮಲೈಕಾ, "ನನ್ನ ಮತ್ತು ಅರ್ಬಾಜ್‌ ನಡುವೆ ಪ್ರೇಮಾಂಕುರವಾದದ್ದು ಕಾಫಿ ಬ್ರಾಂಡ್‌ ಶೂಟಿಂಗ್‌ ವೇಳೆ. ಅಲ್ಲಿಂದಲೇ ಅನ್ಯೋನ್ಯತೆ ಶುರುವಾಗಿತ್ತು.  ನಾವಿಬ್ಬರೂ ಬೇರೆ ಬೇರೆ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದೆವು,  ಫೋನ್‌ ಕಾಲ್‌ನಲ್ಲಿಯೂ  ಮಾತನಾಡುತ್ತಿದ್ದೆವು. ನಿಧಾನಕ್ಕೆ ಇಬ್ಬರಲ್ಲೂ ಒಂದು ಹೊಸ ಭಾವ ಮೂಡಲಾರಂಭಿಸಿತು ಎಂದಿದ್ದರು ಮಲೈಕಾ.

Latest Videos
Follow Us:
Download App:
  • android
  • ios