ಆದಿತ್ಯ ಧರ್ ನಿರ್ದೇಶನದ 'ಧುರಂಧರ್' ಚಿತ್ರವು ಪಾಕಿಸ್ತಾನದಲ್ಲಿ ತಲ್ಲಣ ಸೃಷ್ಟಿಸಿದೆ. ಈ ಚಿತ್ರವು ಪಾಕಿಸ್ತಾನ ವಿರೋಧಿ ಎಂದು ಆರೋಪಿಸುತ್ತಿರುವ ಪಾಕ್ ಮಾಧ್ಯಮಗಳು, ಇದರ ಚಿತ್ರಕಥೆಯನ್ನು ಪ್ರಧಾನಿ ನರೇಂದ್ರ ಮೋದಿಯವರೇ ಬರೆದಿದ್ದಾರೆ ಎಂಬ ಅಚ್ಚರಿಯ ಚರ್ಚೆಯನ್ನು ಹುಟ್ಟುಹಾಕಿವೆ.

ಆದಿತ್ಯ ಧರ್ ಅವರ ಧುರಂಧರ್ ಸಿನಿಮಾ ಪಾಕಿಸ್ತಾನಿಗಳ ನಿದ್ದೆಗೆಡಿಸಿದೆ. ಭಾರತೀಯರನ್ನು ಪಾಕಿಗಳು ನಡೆಸಿಕೊಂಡ ಒಂದೊಂದು ಇಂಚನ್ನೂ ತೋರಿಸಿರುವ ಈ ಚಿತ್ರವನ್ನು ನೋಡಿದ ನಿಜವಾದ ಭಾರತೀಯರಿಗೆ ರಕ್ತ ಕೊತಕೊತ ಕುದಿಯುತ್ತಿದ್ದರೆ, ಭಾರತದಲ್ಲಿಯೂ ಕೆಲವರು ಇದರಲ್ಲಿ ತೋರಿಸಿರುವುದೆಲ್ಲಾ ಕಪೋಕಲ್ಪಿತ ಎಂದು ಸಾರುತ್ತಲೇ ತಮ್ಮನ್ನು ತಾವು ಸಮಾಧಾನ ಮಾಡಿಕೊಳ್ಳುತ್ತಿದ್ದಾರೆ. ಇವರ ಪಾಕಿಸ್ತಾನದ ಮನಸ್ಥಿತಿಗೆ ಅಯ್ಯೋ ಎನ್ನುತ್ತಿದ್ದಾರೆ ನಿಜವಾದ ಭಾರತೀಯರು. ಇವೆಲ್ಲವುಗಳ ನಡುವೆಯೇ, ಕೆಲವು ಮುಸ್ಲಿಂ ರಾಷ್ಟ್ರಗಳು ಚಿತ್ರವನ್ನು ಬ್ಯಾನ್​ ಮಾಡಿದ್ದರೂ ವಿಶ್ವಾದ್ಯಂತ ಧುರಂಧರ್​ ಅಬ್ಬರಿಸುತ್ತಿದೆ. ಇದಾಗಲೇ ಭಾರತ ಒಂದರಲ್ಲಿಯೇ 700 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ 250 ಕೋಟಿ ರೂ. ವೆಚ್ಚದಲ್ಲಿ ತಯಾರಿಸಲಾಗಿರುವ ಈ ಚಿತ್ರ!

ಬೊಬ್ಬಿಡುತ್ತಿದೆ ಪಾಕ್​

ಇನ್ನು ಪಾಕಿಸ್ತಾನವು ಈ ಚಿತ್ರದ ಬಗ್ಗೆ ಬೊಬ್ಬಿಡುತ್ತಿದೆ. ಭಾರತಕ್ಕಿಂತಲೂ ಹೆಚ್ಚಾಗಿ ಪಾಕಿಸ್ತಾನದ ಮೀಡಿಯಾದಲ್ಲಿ ಈ ಚಿತ್ರದ್ದೇ ಚರ್ಚೆ. ಪಾಕ್​ನಲ್ಲಿ ಧುರಂಧರ್​ ಚಿತ್ರವನ್ನು ಬ್ಯಾನ್​ ಮಾಡಿದ್ದರೂ, ಅಲ್ಲಿ ಇದರ ಪೈರೇಟೆಡ್​ ಕಾಪಿ ದಾಖಲೆಯ ಪ್ರಮಾಣದಲ್ಲಿ ಮಾರಾಟವಾಗಿದೆ. ಪಾಕಿಸ್ತಾನಿಗಳ ಕ್ರೌರ್ಯವನ್ನು ಪೈರೆಟೆಡ್​ ಕಾಪಿಯಲ್ಲಾದರೂ ಸರಿ, ಪಾಕಿಗಳೇ ನೋಡಿದ್ದಾರೆ. ಅದೇನೇ ಇದ್ದರೂ ಪಾಕಿಸ್ತಾನ ಮತ್ತು ಪಾಕ್​ ಮನಸ್ಥಿತಿಯವರು ಈ ಚಿತ್ರವನ್ನು ಪಾಕಿಸ್ತಾನ ವಿರೋಧಿ ಪ್ರಚಾರ ಎಂದು ಕರೆಯುತ್ತಿದ್ದಾರೆ.

ಪಾಕಿಸ್ತಾನದಲ್ಲಿ ಡಿಬೇಟ್​

ಇವೆಲ್ಲವುಗಳ ನಡುವೆಯೇ, ಪಾಕಿಸ್ತಾನದ ಮೀಡಿಯಾದಲ್ಲಿ ಅಚ್ಚರಿಯ ಡಿಬೇಟ್​ ಒಂದು ನಡೆದಿದೆ. ಅದೇನೆಂದರೆ, "ಧುರಂಧರ್" ಚಿತ್ರದ ಚಿತ್ರಕಥೆಯನ್ನು ಪ್ರಧಾನಿ ನರೇಂದ್ರ ಮೋದಿ ಸ್ವತಃ ಬರೆದಿದ್ದಾರೆ ಎನ್ನುವುದು! ಮೊದಲಿಗೆ ಈ ಬ್ರೇಕಿಂಗ್ ನ್ಯೂಸ್​ ಕೊಟ್ಟಿದ್ದು ಪಾಕಿಸ್ತಾನದ ಚಾನೆಲ್​ ಆರ್‌ಎನ್‌ಎನ್ ಟಿವಿ ನೆಟ್‌ವರ್ಕ್. ಬಳಿಕ ಈ ವಿಷಯ ಅಲ್ಲಿಯ ಹಲವು ಚಾನೆಲ್​ಗಳಲ್ಲಿ ಚರ್ಚೆಯ ವಿಷಯವಾಗಿದೆ. ತಜ್ಞರನ್ನು (?) ಕುಳ್ಳರಿಸಿ ಪ್ಯಾನಲ್​ ಡಿಸ್​ಕಷನ್​ ಮಾಡಲಾಗಿದೆ. ಮೊದಲಿಗೆ ಆರ್‌ಎನ್‌ಎನ್ ಟಿವಿ ನೆಟ್‌ವರ್ಕ್​ನ "ರೆಡ್ ಝೋನ್" ಕಾರ್ಯಕ್ರಮವನ್ನು ಪ್ರಸ್ತುತ ಪಂಜಾಬ್ ಯೂನಿಯನ್ ಆಫ್ ಜರ್ನಲಿಸ್ಟ್​ನ ಅಧ್ಯಕ್ಷರಾಗಿರುವ ನಯೀಮ್ ಹನೀಫ್ ಅವರು ನಿರೂಪಣೆ ಮಾಡಿದ್ದಾರೆ. ಅದರಲ್ಲಿ ಅವರು ಧುರಂಧರ್​ ಚಿತ್ರ ಪಾಕಿಸ್ತಾನ ವಿರೋಧಿ ಎಂದು ಆರೋಪಿಸಿದ್ದಾರೆ. ಇದೇ ಚರ್ಚೆಯಲ್ಲಿ, ಇದರ ಪ್ರತಿಯೊಂದು ಡೈಲಾಗ್​ ಬರೆದದ್ದು ಭಾರತದ ಪ್ರಧಾನಿ ನರೇಂದ್ರ ಮೋದಿ ಎನ್ನುವ ಮಾತು ಕೇಳಿಬಂದಿದೆ.

ಮೋದಿಯೇ ಸ್ಕ್ರಿಪ್ಟ್​ ರೈಟರ್​

ಮತ್ತೆ ಕೆಲವು ಪಾಕ್​ ಚಾನೆಲ್​ನಲ್ಲಿ ಇದರ ಡೈಲಾಗ್​ನ ಪ್ರತಿಯೊಂದು ಪುಟವೂ ಮೋದಿ ಅವರ ಬಳಿ ಹೋಗಿತ್ತು. ಆ ಸ್ಕ್ರಿಪ್ಟ್​ ಅನ್ನು ಮೋದಿ ತಮಗೆ ಬೇಕಾದ ರೀತಿಯಲ್ಲಿ ಬದಲಾಯಿಸಿದ್ದಾರೆ. ಪ್ರತಿಯೊಂದು ಡೈಲಾಗ್​ ಕೂಡ ಅವರೇ ಫೈನಲ್​ ಮಾಡಿದ್ದಾರೆ ಎನ್ನುವ ಚರ್ಚೆ ನಡೆದಿದೆ! ಇನ್ನು ಚಿತ್ರದ ಕುರಿತು ಹೇಳುವುದಾದರೆ, ಇದೇ 5ರಂದು ಬಿಡುಗಡೆಯಾದ ಈ ಚಿತ್ರವು 2025 ರ ಎರಡನೇ ಅತಿ ಹೆಚ್ಚು ಗಳಿಕೆಯ ಹಿಂದಿ ಚಿತ್ರ ಎನ್ನಿಸಿದೆ. ಧುರಂಧರ್ ಪಾರ್ಟ್​ 2 ಮಾರ್ಚ್ 2026 ರಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.

View post on Instagram