ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಟೀಸರ್ ಜಗತ್ತಿನಾದ್ಯಂತ ಹಲ್ಚಲ್ ಎಬ್ಬಿಸಿದೆ. ಆದರೆ, ಸಾವಿರ ಕೋಟಿ ಗಳಿಸಿದ್ದ 'ಧುರಂದರ್' ಚಿತ್ರದ ಸೀಕ್ವೆಲ್ 'ಧುರಂದರ್-2' ಕೂಡ ಇದೇ ಹಾದಿಯಲ್ಲಿದ್ದು, ತನ್ನ ಟೀಸರ್ ಮೂಲಕ 'ಟಾಕ್ಸಿಕ್' ದಾಖಲೆ ಮುರಿಯಲು ಸಜ್ಜಾಗಿದೆ.
ಟಾಕ್ಸಿಕ್ ಟೀಸರ್ ಚಿತ್ರ ಜಗತ್ತಿನಲ್ಲಿ ಹಲ್ಚಲ್ ಎಬ್ಬಿಸಿದಷ್ಟು ಮತ್ತಿನ್ಯಾರಿಂದಲೂ ಸಾಧ್ಯವಾಗಿಲ್ಲ. ಟೀಸರ್ ಬಂದ ದಿನದಿಂದಲೇ ಟಾಕ್ಸಿಕ್ ಬಾಕ್ಸಾಫೀಸ್ನಲ್ಲಿ ನಾಗಾಲೋಟದಲ್ಲಿ ನುಗ್ಗುತ್ತೆ ಅಂತ ಹಲವರು ಷರಾ ಬರೆದಿದ್ದಾರೆ. ಆದ್ರೆ ಇಲ್ಲ ಇಲ್ಲ ತಡೀರಿ ನಾವು ಆ ರೇಸ್ನಲ್ಲಿ ಇದ್ದೇವೆ. ನಮ್ಮದೊಂದು ಟೀಸರ್ ನೋಡಿ ಸಾಕು ಎಲ್ಲವೂ ಗೊತ್ತಾಗುತ್ತೆ ಎನ್ನುತ್ತಿದೆ ಧುರಂದರ್ ಟೀಮ್. ಹಾಗಾದ್ರೆ ಧುರಂದರ್ ಟೀಸರ್ ಟಾಕ್ಸಿಕ್ ಟೀಸರ್ಅನ್ನೇ ಮೀರಿಸುತ್ತಾ? ನೋಡೋಣ ಬನ್ನಿ.
ರಾಕಿಂಗ್ ಸ್ಟಾರ್ ಯಶ್ ಈಗ ಸಿನಿ ಜಗತ್ತಿನ ವಾಂಟೆಡ್. ಅದಕ್ಕೆ ಕಾರಣ ರಾಕಿಯ ಟಾಕ್ಸಿಕ್ ಟೀಸರ್. ಈ ಟೀಸರ್ ಕೊಟ್ಟ ಕಿಕ್ ಯಾವ್ ಮಟ್ಟಕ್ಕಿದೆ ಅಂದ್ರೆ ಇಂದಿಗೂ ಅದೇ ಗುಂಗಿನಲ್ಲಿರೋ ಹಾಗೆ ಮಾಡಿದೆ.
ಟಾಕ್ಸಿಕ್ ಟೀಸರ್ ವಿರುದ್ದ ತೊಡೆ ತಟ್ಟಿದ ಧುರಂದರ್!
ಮಾರ್ಚ್ 19ಕ್ಕೆ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ತೆರೆಗೆ ಬರ್ತಾ ಇರೋದು ಗೊತ್ತೇ ಇದೆ. ಅದೇ ದಿನ ದುರಂಧರ್-2 ಕೂಡ ರಿಲೀಸ್ ಆಗ್ತಾ ಇದೆ. ಧುರಂಧರ-1 ಸಿನಿಮಾ ಸಾವಿರ ಕೋಟಿ ಗಳಿಸಿದ್ದು, ಇದರ ಸೀಕ್ವೆಲ್ ಟಾಕ್ಸಿಕ್ ಗೆ ಟಫ್ ಫೈಟ್ ಕೊಡೋದು ಫಿಕ್ಸ್. ಹೀಗಾಗಿ ಯಶ್ ಧುರಂದರ್ ಕಿಚ್ಚಿಗೆ ನೀರೆರೆಯೋಕೆ ಟಾಕ್ಸಿಕ್ನ ಟೀಸರ್ ಬಿಟ್ಟು ಟಾಕ್ಸಿಕ್ ಕ್ರೇಜ್ಅನ್ನ ವಿಶ್ವಕ್ಕೆ ಮುಟ್ಟಿಸಿದ್ದಾರೆ. ಆದ್ರೆ ಈಗ ಅದೇ ಟೀಸರ್‌ಗೆ ಕೌಂಟರ್ ಕೊಡೋಕೆ ಧುರಂದರ್-2 ಟೀಸರ್ ಕೂಡ ರೆಡಿಯಾಗಿದೆ.
ಧುರಂದರ್ ಟೀಸರ್‌ಗೆ ಸೆನ್ಸರ್. ಟಾಕ್ಸಿಕ್‌ಗೆ ಕೌಂಟರ್!
ಧುರಂದರ್ ಸಿನಿಮಾದ ಟೀಸರ್ ರೆಡಿ ಆಗಿದೆ. ಈ ಟೀಸರ್ಸ್‌ಗೆ ಸೆನ್ಸರ್ ಆಗಿದ್ದು, ಎ ಪ್ರಮಾಣ ಪತ್ರ ಸಿಕ್ಕಿದೆ. ಅದಕ್ಕೆ ಕಾರಣ ಈ ಸಿನಿಮಾದಲ್ಲಿ ಭಾರಿ ಆಕ್ಷನ್ ದೃಶ್ಯಗಳು ರಾ ಕಂಟೆಂಟ್ ಇದೆ ಅನ್ನೋದು. ಇದೇ ತರದ ಟೀಸರ್ ಟಾಕ್ಸಿಕ್ ಸಿನಿಮಾದೂ ಆಗಿತ್ತು. ಈ ಟೀಸರ್ ನೋಡಿದವರು ಅಬ್ಬಬ್ಬಾ ಅಂದಿದ್ರು. ಆದ್ರೆ ಧುರಂದರ್ನ ಟೀಸರ್ ಟಾಕ್ಸಿಕ್ಗಿಂತಾ ಒಂದು ಪಟ್ಟು ಮೇಲೆ ಇರುತ್ತೆ ಅಂತ ಬಿಟೌನ್ನ ಕೆಲವು ಮಂದಿ ಬಾಯ್ ಬಡಿದುಕೊಳ್ಳುತ್ತಿದ್ದಾರೆ.
9 ಕೋಟಿ ವೀಕ್ಷಣೆ ಕಂಡಿದೆ ಟಾಕ್ಸಿಕ್ ಟೀಸರ್!
ಟಾಕ್ಸಿಕ್ ಟೀಸರ್ ಬಂದು 13 ದಿನ ಆಗಿದೆ. ಇಷ್ಟು ಕಡಿಮೆ ದಿನದಲ್ಲಿ ಈ ಟೀಸರ್ 93 ಮಿಲಿಯನ್ ವೀಕ್ಷಣೆ ಕಂಡಿದೆ. ಅಂದ್ರೆ 9 ಕೋಟಿಗೂ ಹೆಚ್ಚು ಜನ ಈ ಟೀಸರ್ ಅನ್ನು ನೋಡಿದ್ದಾರೆ. ಈಗ ಆ ರೆಕಾರ್ಡ್ ಮೇಲೆ ಕಣ್ಣಿಟ್ಟಿರೋ ಧುರಂದರ್ ಟೀಸರ್ ರೆಕಾರ್ಡ್ ಬ್ರೇಕ್ ಮಾಡೋ ಯೋಜನೆ ಹಾಕಿದಂತಿದೆ. ಆದ್ರೆ ಧುರಂದರ್ ಟೀಸರ್ ರಿಲೀಸ್ ಆಗೋ ದಿನಾಂಕ ಮಾತ್ರ ಇನ್ನೂ ನಿಗದಿ ಆಗಿಲ್ಲ. ಯಶ್ ನಟನೆಯ ಹಿಂದಿನ ಸಿನಿಮಾ ಕೆಜಿಎಫ್-2 1,250 ಕೋಟಿ ಗಳಿಕೆ ಮಾಡಿತ್ತು. ಇತ್ತ ಧುರಂಧರ್ ಕೂಡ 1300 ಕೋಟಿ ಗಳಿಸಿದೆ. ಸೋ ಮಾರ್ಚ್ 19ಕ್ಕೆ ಸಾವಿರ ಕೋಟಿ ಸರದಾರರ ನಡುವೆ ದೊಡ್ಡ ವಾರ್ ನಡೆಯೋದು ಫಿಕ್ಸ್ ಆಗಿದೆ.
ಫಿಲ್ಮ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್.


