Asianet Suvarna News Asianet Suvarna News

ಪ್ರಿಯಾಂಕಾ ಚೋಪ್ರಾ ಬದುಕಲ್ಲಿ ಇಷ್ಟು ಪುರುಷರಾ? ವಿವಾಹಿತ ನಟರ ಬಾಳಲ್ಲೂ ಲಗ್ಗೆ ಇಟ್ಟಿದ್ರಾ ದೇಸಿ ಗರ್ಲ್​?

ಪ್ರಿಯಾಂಕಾ ಚೋಪ್ರಾ ಬದುಕಲ್ಲಿ ಇಬ್ಬರು ವಿವಾಹಿತ ನಟರೂ ಸೇರಿದಂತೆ ಹಲವು ಪುರುಷರ ಎಂಟ್ರಿ ಆಗಿದೆ. ಈ ಬಗ್ಗೆ ಹರಡುತ್ತಿರುವ ಸುದ್ದಿಯೇನು? 
 

Men In Priyanka Chopras Life Wives Of Two Married Actors Stopped Them From Working suc
Author
First Published Dec 8, 2023, 12:58 PM IST

ಬಣ್ಣದ ಲೋಕದಲ್ಲಿ ಅಕ್ರಮ ಸಂಬಂಧ, ಲಿವ್​ ಇನ್​, ವಿವೇಹೇತರ ಸಂಬಂಧ, ಡೇಟಿಂಗ್ ಇಂಥವುಗಳೆಲ್ಲವೂ ಮಾಮೂಲು. ಕೆಲವೊಂದು ನಟ-ನಟಿಯರು ಆದರ್ಶ ಎನಿಸಿದರೂ, ಅವರ ಬಗ್ಗೆ ಬಹಳ ತಿಳಿದುಕೊಂಡರೆ ಅಲ್ಲಿ ಎಲ್ಲವೂ ಸರಿಯಾಗಿರುವುದಿಲ್ಲ ಎಂದು ಗೊತ್ತಾಗುತ್ತದೆ. ಅಂಥದ್ದೇ ಒಂದು ವಿಷಯ ಶಾರುಖ್​ ಖಾನ್​ ಅವರದ್ದು. ಶಾರುಖ್​ ಮತ್ತು ಗೌರಿ ಅವರು ಮದುವೆಯಾಗಿ 32 ವರ್ಷಗಳು ಕಳೆದಿವೆ. ಅದೇ ವೇಳೆ, ಇನ್ನೊಂದೆಡೆ, ಪ್ರಿಯಾಂಕಾ ಚೋಪ್ರಾ ಅವರು ಮದುವೆಯಾಗಿ ಐದು ವರ್ಷಗಳು ಕಳೆದಿವೆ. ಈ ಎರಡೂ ಜೋಡಿ ತಂತಮ್ಮ ಸಂಸಾರವನ್ನು ಸುಖದಿಂದ ಕಳೆಯುತ್ತಿವೆ. ಆದರೆ ಅಸಲಿಗೆ ಶಾರುಖ್​ ಖಾನ್​ ಮತ್ತು ಪ್ರಿಯಾಂಕಾ ಚೋಪ್ರಾ ಅವರ ನಡುವಿನ ಕುತೂಹಲದ ವಿಷಯವೊಂದು ಇದೀಗ ಬೆಳಕಿಗೆ ಬಂದಿತ್ತು. ಇವರಿಬ್ಬರೂ ಮುಂಚೆಯೇ ಮದುವೆಯಾಗಿದ್ದರು ಎನ್ನುವ ಸುದ್ದಿಯಿದು.  

ಈ ವಿಷಯ ಬಹಳ ಸದ್ದು ಮಾಡುವ ನಡುವೆಯೇ, ಪ್ರಿಯಾಂಕಾ ಅವರ ಬದುಕಿನಲ್ಲಿ ಬಂದು ಹೋಗಿರುವ ಹಲವು ನಟರ ಬಗ್ಗೆ ದೊಡ್ಡಮಟ್ಟದ ಚರ್ಚೆ ಶುರುವಾಗಿದೆ. ದೇಸಿ ಹುಡುಗಿ ಎಂದೇ ಪ್ರಚಲಿತದಲ್ಲಿದ್ದ ಪ್ರಿಯಾಂಕಾ ಈಗ ದೇಸಿ ಹುಡುಗಿಯಾಗಿ ಉಳಿದಿಲ್ಲ. ಅವರು ತಮ್ಮನ್ನು ತಾವು ಅಂತರರಾಷ್ಟ್ರೀಯ ದೇಸಿ ಹುಡುಗಿ ಎನ್ನುತ್ತಿದ್ದು, ಹಾಲಿವುಡ್​ನಲ್ಲಿ ಭವಿಷ್ಯ ಕಂಡುಕೊಳ್ಳಲು ತೊಡಗಿದ್ದಾರೆ. ಇದರ ನಡುವೆಯೇ ಈಗ ಅವರ ಜೀವನದಲ್ಲಿ ಬಂದ ಪುರುಷರ ಬಗ್ಗೆ ಚರ್ಚೆ ಶುರುವಾಗಿದೆ. 

 ಶಾರುಖ್ ಖಾನ್-ಪ್ರಿಯಾಂಕಾ ಚೋಪ್ರಾ ಮದ್ವೆ ಆಗಿದ್ರಾ? ಏನಿದು ಹೊಸ ಸುದ್ದಿ?
ಮಾಡೆಲಿಂಗ್ ದಿನಗಳಿಂದಲೂ ಪ್ರಿಯಾಂಕಾ ಮತ್ತು ಆಸೀಮ್ ಮರ್ಚೆಂಟ್ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಇವರಿಬ್ಬರ ನಡುವೆ ಪದೇ ಪದೇ ಜಗಳವಾಗುತ್ತಿತ್ತು.  ಒಮ್ಮೆ ಆಸೀಮ್​ ಜಗಳ ಮಾಡಿದ್ದ ಸಂದರ್ಭದಲ್ಲಿ, ಆತ್ಮಹತ್ಯೆಗೂ ಟ್ರೈ ಮಾಡಿದ್ದರು ಪ್ರಿಯಾಂಕಾ. 2002ರಲ್ಲಿ ಆಸೀಮ್ ಮರ್ಚೆಂಟ್ ಅವರ ತಾಯಿ ತೀರಿಕೊಂಡಾಗಲೂ ಎತ್ತರದ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆಗೆ ಪ್ರಯತ್ಮಪಟ್ಟಿದ್ದರು.  ಆದರೆ ಇವರಿಬ್ಬರ ಸಂಬಂಧ ಮುರಿದುಬಿತ್ತು. ಇದಾದ ಬಳಿಕ ಪ್ರಿಯಾಂಕಾ ಅವರ ಹೆಸರು ಕೇಳಿಬಂದಿದ್ದು ನಟ ಅಕ್ಷಯ್​ ಕುಮಾರ್ ಜೊತೆಗೆ.  ಎತರಾಜ್​ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಇವರ ನಡುವೆ ಪ್ರೀತಿ ಪ್ರಾರಂಭವಾಗಿತ್ತು. ಆದರೆ ಅದಾಗಲೇ ಅಕ್ಷಯ್​ ಅವರಿಗೆ ಟ್ವಿಂಕಲ್ ಖನ್ನಾ ಜೊತೆ ಮದ್ವೆಯಾಗಿತ್ತು. ಪಿಗ್ಗಿ ಜೊತೆಗಿನ ಲವ್​ ಸ್ಟೋರಿ ಅಕ್ಷಯ್​ ದಾಂಪತ್ಯ ಜೀವನದ ಮೇಲೂ ಪರಿಣಾಮ ಬೀರಿತ್ತು. ಇದೇ ವಿಷಯವಾಗಿ ಗೋವಾದ ರೆಸ್ಟೊರೆಂಟ್‌ನಲ್ಲಿ ಒಂದರಲ್ಲಿ ಅಕ್ಷಯ್​ ಮತ್ತು ಟ್ವಿಂಕಲ್​ ಖನ್ನಾ ಭಾರಿ ಜಗಳ ಕೂಡ ಮಾಡಿದ್ದರು. ಆದರೆ ಈ ಸಂಬಂಧವೂ ಹೆಚ್ಚು ದಿನ ಉಳಿಯಲಿಲ್ಲ.
  
ಇದಾದ ಬಳಿಕ  ನಟ ಹರ್ಮನ್ ಬವೇಜಾ ಜೊತೆ ಪ್ರಿಯಾಂಕಾ ಲವ್​ಸ್ಟೋರಿ ಶುರುವಾಯಿತು. ಹರ್ಮನ್ ಅವರು ತಮ್ಮ ಮೊದಲ ಚಿತ್ರ ಲವ್ ಸ್ಟೋರಿ 2015 ರೊಂದಿಗೆ ಬಾಲಿವುಡ್‌ಗೆ ಎಂಟ್ರಿ ಕೊಟ್ಟಾಗ ಪ್ರಿಯಾಂಕಾ ಮತ್ತು ನಿರ್ಮಾಪಕ ಹ್ಯಾರಿ ಬವೇಜಾ ಅವರ ಮಗ ಹರ್ಮನ್ ಬವೇಜಾ  ಸಂಬಂಧದಲ್ಲಿದ್ದರು. ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಸೋತಿತು.  ಅಲ್ಲಿಗೇ ಪ್ರಿಯಾಂಕಾ ಮತ್ತು ಹರ್ಮನ್ ಸಂಬಂಧವೂ ಹದಗೆಟ್ಟಿತು.  ಇದಾದ ಬಳಿಕ ಶಾರುಖ್​ ಖಾನ್​ ಅವರೊಟ್ಟಿಗೆ ಪ್ರಿಯಾಂಕಾ ಅವರ ಮದುವೆಯಾಗಿದೆ ಎನ್ನುವ ಸುದ್ದಿ ಬಿ-ಟೌನ್​ನಲ್ಲಿ ಸದ್ದು ಮಾಡಿತ್ತು. ಡಾನ್ 2 ಚಿತ್ರೀಕರಣದ ಸಮಯದಲ್ಲಿ ಈ ಜೋಡಿಯ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಅದಾಗಲೇ ಶಾರುಖ್​ ಅವರಿಗೆ ಗೌರಿ ಖಾನ್​ ಜೊತೆ ಮದುವೆಯಾಗಿತ್ತು. ಪ್ರಿಯಾಂಕಾ ಮತ್ತು ಶಾರುಖ್​ ಸಂಬಂಧದಿಂದ ಶಾರುಖ್​ ಮತ್ತು ಗೌರಿ ನಡುವೆ ಬಿರುಕು ಕೂಡ ಮೂಡಿತ್ತು ಎನ್ನಲಾಗಿದೆ.   

ಡಂಕಿಯಲ್ಲಿ ಸೆಕ್ಸ್​-ಗಿಕ್ಸ್​ ಇಲ್ಲಾ ತಾನೆ- ಅಪ್ಪನೊಟ್ಟಿಗೆ ನೋಡ್ಬೋದಾ? ನೆಟ್ಟಿಗನ ಪ್ರಶ್ನೆಗೆ ಶಾರುಖ್​ ಹೇಳಿದ್ದೇನು?

ಇದಾದ ಬಳಿಕ ನಟ ಶಾಹೀದ್​ ಕಪೂರ್​ ಮತ್ತು ಪ್ರಿಯಾಂಕಾ ನಡುವೆ ಗುಸುಗುಸು ಶುರುವಾಯಿತು. ಈ ಕುರಿತು ಶಾಹಿದ್​ ಪ್ರಿಯಾಂಕಾ ಅವರ ಹೆಸರು ಹೇಳದೇ ತಮ್ಮ ಜೊತೆ ನಟಿಸಿದ್ದ ನಟಿಯೊಬ್ಬರು ತಮಗೆ ಮೋಸ ಮಾಡಿದ್ದರು ಎಂದು ಹೇಳಿದ್ದರು. ಇವರಿಬ್ಬರೂ  ಹಿಟ್ ಚಿತ್ರ ತೇರಿ ಮೇರಿ ಕಹಾನಿಯಲ್ಲಿ ಕಾಣಿಸಿಕೊಂಡಿದ್ದರು.   ಇದಾದ ಬಳಿಕ ಪ್ರಿಯಾಂಕಾ ಹೆಸರು ಕೇಳಿಬಂದದ್ದು, ಇಂಗ್ಲಿಷ್ ನಟ, ಟಾಮ್ ಹಿಡಲ್‌ಸ್ಟನ್ ತೆ. ಪಾರ್ಟಿಯೊಂದರಲ್ಲಿ ಇವರಿಬ್ಬರ ಸಂಬಂಧದ ಬಗ್ಗೆ ಸಕತ್​ ಚರ್ಚೆಯಾಗಿತ್ತು. ಅದಾದ ಬಳಿಕ ಗಾಯಕ ನಿಕ್​ ಜೋನ್ಸ್​ ಜೊತೆ ಪ್ರಿಯಾಂಕಾ ಸಂಬಂಧದಲ್ಲಿದ್ದು, ಇದೀಗ ಮದುವೆಯೂ ಆಗಿದೆ. ಇವರಿಬ್ಬರೂ ಮಾಲ್ತಿಮೇರಿ ಎನ್ನುವ ಮಗುವಿನ ಪಾಲಕರೂ ಆಗಿದ್ದಾರೆ.  

Follow Us:
Download App:
  • android
  • ios