ಅಮ್ಮನಾಗ್ತಿರೋ ನಟಿ  ದೀಪಿಕಾ ಪಡುಕೋಣೆ ಇನ್ನೊಂದು ಗುಡ್​ ನ್ಯೂಸ್ ಕೊಟ್ಟಿದ್ದಾರೆ. ಇವರಿಗೆ ಆಸ್ಕರ್​ರಿಂದ ವಿಶೇಷ ಮನ್ನಣೆ ಸಿಕ್ಕಿದೆ.  ಏನದು ಗೌರವ? 

ಬಾಲಿವುಡ್​ ಬೆಡಗಿ, ಕನ್ನಡತಿ ದೀಪಿಕಾ ಪಡುಕೋಣೆ ಸದ್ಯ ಅಮ್ಮನಾಗುವ ಖುಷಿಯಲ್ಲಿದ್ದಾರೆ. ಇದೇ ಸಮಯದಲ್ಲಿ ಇನ್ನೊಂದು ಗುಡ್​ ನ್ಯೂಸ್​ ಕೂಡ ಅವರು ನೀಡಿದ್ದಾರೆ. ಅದೇನೆಂದರೆ, ಇವರಿಗೆ ಈಗ ಆಸ್ಕರ್​ ಗೌರವ ಸಿಕ್ಕಿದೆ. ಅಷ್ಟಕ್ಕೂ ನಟಿ ಇದಾಗಲೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದ ನಿರೂಪಣೆಯ ಹೊಣೆ ಹೊತ್ತಿದ್ದರು. ಅಂಥದ್ದೊಂದು ಗೌರವಕ್ಕೆ ಅವರು ಪಾತ್ರರಾಗಿದ್ದರು. ಕಳೆದ ವರ್ಷ ಮಾರ್ಚ್‌ನಲ್ಲಿ, ಲಾಸ್ ಏಂಜಲೀಸ್‌ನಲ್ಲಿ ನಡೆದ 95ನೇ ಅಕಾಡೆಮಿ ಪ್ರಶಸ್ತಿ ಸಮಾರಂಭ ಇದಾಗಿತ್ತು. ಅಲ್ಲಿ ದೀಪಿಕಾ ಆಸ್ಕರ್‌ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿರೂಪಣೆ ಮಾಡಿದ್ದು ಗಮನ ಸೆಳೆದಿತ್ತು. ನಾಟು ನಾಟು ಹಾಡಿಗೆ ಆಸ್ಕರ್‌ ಪ್ರಶಸ್ತಿ ಘೋಷಣೆ ವೇಳೆ ದೀಪಿಕಾ ಪಡುಕೋಣೆ ಅವರು ಆರ್‌ಆರ್‌ಆರ್‌ ಸಿನಿಮಾ ಹಾಗೂ ನಾಟು ನಾಟು ಹಾಡಿನ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅವರ ಭಾಷಣದ ವಿಡಿಯೊ ಕೂಡ ಮೆಚ್ಚುಗೆಗೆ ಪಾತ್ರವಾಗಿತ್ತು.

ಈಗ ಅಕಾಡೆಮಿಯು ದೀಪಿಕಾಗೆ ಮತ್ತೊಂದು ಗೌರವ ನೀಡಿದೆ. ಆಸ್ಕರ್ ಪ್ರಶಸ್ತಿ ಅಧಿಕೃತ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ದೀಪಿಕಾ ಪಡುಕೋಣೆಗೆ ವಿಶೇಷ ಗೌರವ ನೀಡಿದೆ. ದೀಪಿಕಾ ಪಡುಕೋಣೆ, ರಣ್‌ವೀರ್ ಸಿಂಗ್, ಪ್ರಿಯಾಂಕಾ ಚೋಪ್ರಾ ನಟನೆಯ 'ಬಾಜಿರಾವ್ ಮಸ್ತಾನಿ' ಸಿನಿಮಾದ "ದಿವಾನಿ ಮಸ್ತಾನಿ.." ಹಾಡನ್ನು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು ಗೌರವ ಸೂಚಿಸಿದೆ. ದೀಪಿಕಾ ಅವರ ಹಾಡಿನ ಕ್ಲಿಪ್ ಶೇರ್‌ ಮಾಡಿದ ಆಸ್ಕರ್ ಪ್ರಶಸ್ತಿ ಅಧಿಕೃತ ಇನ್‌ಸ್ಟಾಗ್ರಾಂ ಪೇಜ್‌ ಹೀಗೆ ಬರೆದುಕೊಂಡಿದೆ “ ಬಾಜಿರಾವ್ ಮಸ್ತಾನಿ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ʻದೀವಾನಿ ಮಸ್ತಾನಿʼಗೆ ಹೆಜ್ಜೆ ಹಾಕಿದ್ದು ಇದು. (ಶ್ರೇಯಾ ಘೋಷಾಲ್ ಹಾಡಿದ್ದಾರೆ) ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿದ್ದಾರೆ. ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಚೋಪ್ರಾ ನಟಿಸಿದ್ದಾರೆʼಎಂದು ಬರೆದುಕೊಂಡಿದೆ.

ಸೂಪರ್‌ಸ್ಟಾರ್ ಅಜಿತ್ ಕುಮಾರ್ ಶೂಟಿಂಗ್​ ವೇಳೆ ಭೀಕರ ಅಪಘಾತ: ವಿಡಿಯೋ ನೋಡಿ ಬೆಚ್ಚಿಬಿದ್ದ ಫ್ಯಾನ್ಸ್​

ಆಸ್ಕರ್ ಸಂಘಟಕರು ನೀಡಿದ ಈ ವಿಶೇಷ ಗೌರವ ಕಂಡು ದೀಪಿಕಾ ಪಡುಕೋಣೆ ಅಭಿಮಾನಿಗಳಿ ಥ್ರಿಲ್ ಆಗಿದ್ದಾರೆ. 2015ರಲ್ಲಿ ತೆರೆಕಂಡಿದ್ದ 'ಬಾಜಿರಾವ್ ಮಸ್ತಾನಿ' ಸಿನಿಮಾ ಬಾಲಿವುಡ್‌ನಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾಗಳಲ್ಲಿ ಒಂದಾಗಿತ್ತು. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿದ ಈ ಸಿನಿಮಾದ "ದೀವಾನಿ ಮಸ್ತಾನಿ.." ಹಾಡಿನ ತುಣುಕನ್ನು ದಿ ಅಕಾಡೆಮಿ ಪ್ರಶಸ್ತಿ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು ಗೌರವ ಸೂಚಿಸಲಾಗಿದೆ.

 ಬಾಲಿವುಡ್​ ನಟಿ ದೀಪಿಕಾ ಗರ್ಭಿಣಿಯಾಗಿದ್ದು, ದೀಪಿಕಾ ಮತ್ತು ರಣವೀರ್​ ಸಿಂಗ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸದ್ಯ ದೀಪಿಕಾ ಅವರಿಗೆ ಎರಡು ತಿಂಗಳು ಎನ್ನಲಾಗುತ್ತಿದೆ. ಈ ಜೋಡಿ, 25 ಜುಲೈ 2019 ರಂದು ಇಟಲಿಯ ಲೇಕ್ ಕೊಮೊದಲ್ಲಿ ವಿವಾಹವಾಗಿತ್ತು. ಮದುವೆಯಾಗಿ ಸುಮಾರು 5 ವರ್ಷಗಳಾದರೂ ಈ ಜೋಡಿ ಮಗುವಿನ ಬಗ್ಗೆ ಮಾತನಾಡಿರಲಿಲ್ಲ. ದೀಪಿಕಾ ಅವರ ಕೈಯಲ್ಲಿ ಭರ್ಜರಿ ಆಫರ್​ ಇರುವ ಕಾರಣ, ಮಗುವಿನ ಬಗ್ಗೆ ಯೋಚನೆ ಮಾಡಿರಲಿಲ್ಲ. ಅವರು ತಮ್ಮ ಕೆರಿಯರ್ ಮೇಲೆ ಫೋಕಸ್ ಮಾಡಿದ್ದರು.ನಟಿ ದೀಪಿಕಾ ಅವರು ಪ್ರೆಗ್ನೆನ್ಸಿ ಮುಂದೂಡಿದರೂ ಕೂಡಾ ಕೆಲವೊಂದು ಪ್ರಮುಖ ಪ್ರಾಜೆಕ್ಟ್ ಮಾಡಿ ಸೈ ಎನಿಸಿಕೊಂಡರು. ಪಠಾಣ್, ಜವಾನ್, ಫೈಟರ್ ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಪಠಾಣ್​, ಜವಾನ್​ ಸಕ್ಸಸ್​ ಆದರೆ ಫೈಟರ್​ನಲ್ಲಿ ಅಶ್ಲೀಲ ಎಂಬಂತೆ ಕಾಣಿಸಿಕೊಂಡು ದೂರು ದಾಖಲಿಸಿಕೊಂಡಿದ್ದಾರೆ. ಇದೀಗ ಮಗುವಿನ ಸುದ್ದಿ ನೀಡಿದ್ದಾರೆ.

13ನೇ ವಯಸ್ಸಲ್ಲಿ ಕ್ರಿಕೆಟ್​ ಕಲಿಯಲು ಹೋದಾಗ ಆ ವ್ಯಕ್ತಿ... ಲೈಂಗಿಕ ದೌರ್ಜನ್ಯದ ಕರಾಳ ಘಟನೆ ಹೇಳಿದ ನಟ

View post on Instagram