ಸೂಪರ್‌ಸ್ಟಾರ್ ಅಜಿತ್ ಕುಮಾರ್ ಅವರ ಬಹು ನಿರೀಕ್ಷಿತ ವಿದಾಮುಯಾರ್ಚಿ' ಚಿತ್ರದ ಶೂಟಿಂಗ್​ ವೇಳೆ ಭೀಕರ ಅಪಘಾತ ನಡೆದಿದ್ದು,  ವಿಡಿಯೋ ವೈರಲ್​ ಆಗಿದೆ.  

ತಮಿಳು ಸೂಪರ್‌ಸ್ಟಾರ್ ಅಜಿತ್ ಕುಮಾರ್ ಅವರು ಡ್ಯೂಪ್​ ಬಳಸದೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು 2023ರಲ್ಲಿ ತಮಿಳಿನ ಆಕ್ಷನ್ ಚಿತ್ರ 'ತುನಿವು' ಮೂಲಕ ಕಮ್ ಬ್ಯಾಕ್ ಮಾಡಿದ್ದರು. ಇದೀಗ ತಮ್ಮ ಮುಂದಿನ ಆಕ್ಷನ್-ಥ್ರಿಲ್ಲರ್ ಚಿತ್ರ 'ವಿದಾಮುಯಾರ್ಚಿ' ಚಿತ್ರದಿಂದಾಗಿ ಸುದ್ದಿಯಲ್ಲಿದ್ದಾರೆ. ಈ ವರ್ಷವೇ 'ವಿದಾಮುಯಾರ್ಚಿ' ಬಿಡುಗಡೆಯಾಗಲಿದೆ. ಆದರೆ, ಚಿತ್ರದ ಬಿಡುಗಡೆ ದಿನಾಂಕ ಇನ್ನೂ ಬಹಿರಂಗವಾಗಿಲ್ಲ. ಆದರೆ ಶೂಟಿಂಗ್​ ಸಮಯದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಅದರ ವಿಡಿಯೋ ಈಗ ವೈರಲ್​ ಆಗಿದೆ. ಅಷ್ಟಕ್ಕೂ ಅಜಿತ್​ ಕುಮಾರ್​ ಅವರು, ಚೇಸಿಂಗ್​ ಮತ್ತು ಸಾಹಸ ದೃಶ್ಯಗಳಲ್ಲಿ ಛಾಪು ಮೂಡಿಸಿದವರು. ತಮ್ಮದೇ ಆದ ಸಾಹಸಗಳನ್ನು ಯಾವುದೇ ಡ್ಯೂಪ್​ ಇಲ್ಲದೇ ಪ್ರದರ್ಶಿಸುತ್ತಾರೆ. ಈ ಹಿಂದೆ ಕೂಡ ಸಾಹಸ ದೃಶ್ಯಗಳಲ್ಲಿ ನಟಿಸುವಾಗ ಅನೇಕ ಬಾರಿ ಗಾಯಗಳನ್ನು ಮಾಡಿಕೊಂಡಿದ್ದರು. ಆದರೆ ಅದ್ಯಾವುದನ್ನೂ ಅವರು ಕೇರೇ ಮಾಡಿಲ್ಲ.

ಇದೀಗ ವಿದಾಮುಯಾರ್ಚಿ ಶೂಟಿಂಗ್​ ಸಂದರ್ಭದಲ್ಲಿ ಭೀಕರ ಅಪಘಾತವಾಗಿದೆ. ಕೆಲ ತಿಂಗಳ ಹಿಂದೆ ನಡೆದ ಈ ಅಪಘಾತದ ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ. ಲೈಕಾ ಪ್ರೊಡಕ್ಷನ್ಸ್ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮೂರು ಮಾರಣಾಂತಿಕ ಆಕ್ಷನ್ ಸೀಕ್ವೆನ್ಸ್‌ಗಳ ವೀಡಿಯೊಗಳನ್ನು ಹಂಚಿಕೊಂಡಿದೆ. 'ಶೌರ್ಯಕ್ಕೆ ಮಿತಿಯಿಲ್ಲ, ಯಾವುದೇ ಬಾಡಿ ಡಬಲ್ ಇಲ್ಲದೆ ವಿದಾಮುಯಾರ್ಚಿಯಲ್ಲಿ ಅಜಿತ್ ಅವರ ಡೇರಿಂಗ್ ಸ್ಟಂಟ್ ಸೀಕ್ವೆನ್ಸ್' ಎಂಬ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ನಟರಾದ ಅಜಿತ್ ಕುಮಾರ್ ಮತ್ತು ಆರವ್ ಅವರು ಕಾರ್ ಚೇಸ್ ಸೀಕ್ವೆನ್ಸ್‌ಗಾಗಿ ಚಿತ್ರೀಕರಣ ಮಾಡುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ನಡೆದಿದೆ. 

ಯಶ್​, ರಣಬೀರ್​-ಸಾಯಿ ಪಲ್ಲವಿ ನಟನೆಯ ರಾಮಾಯಣ ಶೂಟಿಂಗ್​ ಸೆಟ್​ ಹೀಗಿದೆ ನೋಡಿ: ವಿಡಿಯೋ ವೈರಲ್​

ಅಷ್ಟಕ್ಕೂ ಆಗಿದ್ದೇನೆಂದರೆ, ಅಜಿತ್​ ಕುಮಾರ್​ ಅವರು ಓಡಿಸುತ್ತಿದ್ದ ಕಾರು ಸ್ಕಿಡ್​ ಆಗಿದೆ. ಭಾರಿ ದುರಂತ ಆಗುವುದನ್ನು ಅಜಿತ್​ ಅವರು ಸಾಧ್ಯವಾದಷ್ಟು ತಪ್ಪಿಸಿದರು. ಈ ಅಪಘಾತದಿಂದ ಇಬ್ಬರು ನಟರು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಮೊದಲ ವೀಡಿಯೊದಲ್ಲಿ, ಚಿತ್ರದ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಜಿತ್ ಗಾಯಗೊಂಡ ನಟನನ್ನು ಕಾರಿನಲ್ಲಿ ವೇಗವಾಗಿ ಹೊತ್ತೊಯ್ಯುತ್ತಿರುವುದನ್ನು ನೀವು ನೋಡುತ್ತೀರಿ. ವೇಗವಾಗಿ ಹೋಗುವ ಕಾರು ಪಲ್ಟಿಯಾಗುತ್ತದೆ. ನಂತರ ಕಾರಿನ ಬಲೂನ್‌ಗಳು ತೆರೆದುಕೊಳ್ಳುತ್ತವೆ. ಆದರೆ, ಎರಡನೇ ಮತ್ತು ಮೂರನೇ ವೀಡಿಯೊಗಳಲ್ಲಿ, ಅದೇ ದೃಶ್ಯವನ್ನು ಕಾರಿನ ಹೊರಗಿನಿಂದ ಮತ್ತು ಮೇಲಿನಿಂದ ತೆಗೆದುಕೊಳ್ಳಲಾಗಿದೆ.

ಇನ್ನು ‘ವಿದಾಮುಯಾರ್ಚಿ’ ಚಿತ್ರದ ಕುರಿತು ಹೇಳುವುದಾದರೆ, ಅಜಿತ್​ ಕುಮಾರ್​ ಜೊತೆ ತ್ರಿಷಾ, ಅರ್ಜುನ್ ಸರ್ಜಾ, ಆರವ್, ರೆಜಿನಾ ಕಸ್ಸಂದ್ರ ಮತ್ತು ಅನೇಕರು ನಟಿಸುತ್ತಿದ್ದಾರೆ. 220 ಕೋಟಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ಸೌತ್ ಬ್ಯೂಟಿ ತ್ರಿಶಾ ಕೂಡ ಇದ್ದಾರೆ. ತಮಿಳು ಭಾಷೆಯಲ್ಲಿ ತಯಾರಾಗುತ್ತಿರುವ ಈ ಚಿತ್ರವು ಲೈಕಾ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿದೆ. ಚಿತ್ರಕ್ಕೆ ಅನಿರುದ್ಧ್ ರವಿಚಂದ್ರ ಸಂಗೀತ ಇರಲಿದೆ. ನೀರವ್ ಶಾ ಮತ್ತು ಓಂ ಪ್ರಕಾಶ್ ಸಿನಿಮಾಟೋಗ್ರಫಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದು ಆ್ಯಕ್ಷನ್-ಥ್ರಿಲ್ಲರ್ ಸಿನಿಮಾ ಆಗಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ. ಈ ಚಿತ್ರದ ಚಿತ್ರೀಕರಣವನ್ನು 2023ರ ಅಕ್ಟೋಬರ್​ನಿಂದ ಅಜೆರ್ಬೈಜಾನ್‌ನಲ್ಲಿ ನಡೆಸುತ್ತಿದ್ದಾರೆ.

ಮಹಾನಟಿ ಆಡಿಷನ್​ ಹೇಗಿತ್ತು? ನಟ ರಮೇಶ್​ರ​ ನಟನೆಯ ಪಾಠ, ಭುವನ್ ಗೌಡ ಕ್ಯಾಮೆರಾ ನೋಟ ಹೀಗಿತ್ತು...

Scroll to load tweet…