10 ವರ್ಷಗಳಲ್ಲಿ ಅತಿ ಹೆಚ್ಚು ವೀಕ್ಷಣೆಗೊಳಗಾದ ಸೆಲೆಬ್ರಿಟಿ ದೀಪಿಕಾ: ಏಕೈಕ ಸ್ಯಾಂಡಲ್​ವುಡ್​ ಸ್ಟಾರ್​ ಯಶ್​ಗೆ ಎಷ್ಟನೇ ಸ್ಥಾನ?

10 ವರ್ಷಗಳಲ್ಲಿ ಅತಿ ಹೆಚ್ಚು ವೀಕ್ಷಣೆಗೊಳಗಾದ ಸೆಲೆಬ್ರಿಟಿ ಪೈಕಿ ದೀಪಿಕಾ ಪಡುಕೋಣೆ ನಂಬರ್​ 1 ಸ್ಥಾನದಲ್ಲಿದ್ದಾರೆ. ಏಕೈಕ ಕನ್ನಡಿಗ ಯಶ್​ಗೆ ಎಷ್ಟನೇ ಸ್ಥಾನ? 
 

Deepika Padukone tops IMDbs most viewed Indian stars of last decade list Yash in 89th

ಐಎಂಡಿಬಿ  ಅಂದರೆ ಇಂಟರ್​ನೆಟ್​ ಮೂವಿ ಡಾಟಾಬೇಸ್​ (Internet Movie Database) ವೆಬ್​ಸೈಟ್​ ಇದೀಗ ಕುತೂಹಲದ ಮಾಹಿತಿಯೊಂದನ್ನು ಹೊರಹಾಕಿದೆ. ಕಳೆದ ಹತ್ತು ವರ್ಷಗಳಲ್ಲಿ ಜನರಿಂದ ಅತಿ ಹೆಚ್ಚು ವೀಕ್ಷಣೆಗೆ ಒಳಗಾಗಿರುವ ಚಿತ್ರ ತಾರೆಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ದೀಪಿಕಾ ಪಡುಕೋಣೆ ನಂಬರ್​ 1 ಸ್ಥಾನ ಪಡೆದುಕೊಂಡಿದ್ದಾರೆ. ಟಾಪ್​ 100 ಚಿತ್ರ ನಟ-ನಟಿಯರ ಈ ಪಟ್ಟಿಯಲ್ಲಿ ದೀಪಿಕಾ ನಂಬರ್​ ಒನ್​ ಪಟ್ಟಕ್ಕೇರಿದ್ದಾರೆ. 2014ರ ಏಪ್ರಿಲ್​ನಿಂದ 2024ರ ಏಪ್ರಿಲ್​ ತನಕ ಐಎಂಡಿಬಿ ವೆಬ್​ಸೈಟ್​ನಲ್ಲಿ ಜನರು ಅತಿ ಹೆಚ್ಚು ವೀಕ್ಷಿಸಿದ ಸೆಲೆಬ್ರಿಟಿ ಪ್ರೊಫೈಲ್​ ಆಧಾರದ ಮೇಲೆ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಸಿನಿಮಾಗಳು, ವೆಬ್​ ಸಿರೀಸ್​ಗಳು, ಕಲಾವಿದರು ಹಾಗೂ ತಂತ್ರಜ್ಞರ ಮಾಹಿತಿಯನ್ನು ಐಎಂಡಿಬಿ ವೆಬ್​ಸೈಟ್​ ಒಳಗೊಂಡಿದೆ. ದೀಪಿಕಾ ಪಡುಕೋಣೆ ಅವರ ಪುಟವನ್ನು ಅತಿ ಹೆಚ್ಚಿನ ಜನರು ವೀಕ್ಷಿಸಿದ್ದಾರೆ.


ಪಠಾಣ್​, ಜವಾನ್​ ಭರ್ಜರಿ ಯಶಸ್ಸಿನ ಬಳಿಕ ಇವರನ್ನು ಹುಡುಕಾಟ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇರುವ ಕಾರಣ, ದೀಪಿಕಾಗೆ ಈ ಪಟ್ಟ ಸಿಕ್ಕಿದೆ. ಇದೀಗ ಅಮ್ಮನಾಗುವ ಖುಷಿಯಲ್ಲಿರುವ ದೀಪಿಕಾಗೆ ಇನ್ನೊಂದು ಗುಡ್​ ನ್ಯೂಸ್​ ಸಿಕ್ಕಿದೆ. ಚಿತ್ರರಂಗ ಎಂದರೆ ನಟರಿಗೇ ಅಗ್ರಸ್ಥಾನ ಎನ್ನುವ ಕೂಗು ಹಲವು ವರ್ಷಗಳಿಂದಲೇ ಇರುವ ಸಮಯದಲ್ಲಿ, ಶಾರುಖ್​ ಖಾನ್​ (Shah Rukh Khan), ಹೃತಿಕ್​ ರೋಷನ್​, ಆಮೀರ್​ ಖಾನ್​, ಸಲ್ಮಾನ್​ ಖಾನ್​ ಮುಂತಾದ ಘಟಾನುಘಟಿ ಸ್ಟಾರ್​ಗಳನ್ನು ದೀಪಿಕಾ ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಏರಿದ್ದಾರೆ.

ತಲೆ ಬೋಳಿಸಿಕೊಂಡ ಅದಾ ಶರ್ಮಾ: ಅಭಿಮಾನಿಗಳ ಮುಂದೆ ಇಟ್ಟಿದ್ದಾರೆ ಇಂಥದ್ದೊಂದು ಪ್ರಶ್ನೆ...
 
ಇನ್ನು ಶಾರುಖ್​ ಖಾನ್​ ಎರಡನೆಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದರೆ, ಕಳೆದ ಕೆಲವು ದಿನಗಳಿಂದ ವಿರೂಪಗೊಂಡಿರುವ ಮುಖದಿಂದಾಗಿ ಸಕತ್​ ಟ್ರೋಲ್​ಗೆ ಒಳಗಾಗುತ್ತಿರುವ  ಐಶ್ವರ್ಯಾ ರೈ ಮೂರನೆಯ ಸ್ಥಾನ ಪಡೆದುಕೊಂಡಿದ್ದಾರೆ. ಇದಾಗಲೇ ಹಲವಾರು ಪ್ರಶಸ್ತಿಗಳನ್ನು ದಕ್ಕಿಸಿಕೊಳ್ಳುವ ಮೂಲಕ ಬಹು ಬೇಡಿಕೆ ನಟಿಯಾಗಿರುವ ಆಲಿಯಾ ಭಟ್​  4ನೇ ಸ್ಥಾನದಲ್ಲಿದ್ದರೆ,  5ನೇ ಸ್ಥಾನವನ್ನು ಇರ್ಫಾನ್​ ಖಾನ್​ ಪಡೆದುಕೊಂಡಿದ್ದಾರೆ. ಆಮೀರ್​ ಖಾನ್​ ಅವರಿಗೆ 6ನೇ ಸ್ಥಾನ ಸಿಕ್ಕಿದ್ದರೆ,  7ನೇ ಸ್ಥಾನ ದಿವಂಗತ ಸುಶಾಂತ್​ ಸಿಂಗ್​ ರಜಪೂತ್​ ಅವರಿಗೆ ಹೋಗಿದೆ.  8ನೇ ಸ್ಥಾನದಲ್ಲಿ ಸಲ್ಮಾನ್​ ಖಾನ್​, 9ನೇ ಸ್ಥಾನದಲ್ಲಿ ಹೃತಿಕ್ ರೋಷನ್​ ಹಾಗೂ 10ನೇ ಸ್ಥಾನದಲ್ಲಿ ಅಕ್ಷಯ್​ ಕುಮಾರ್​ ಇದ್ದಾರೆ.  ಕತ್ರಿನಾ ಕೈಫ್ (11), ಅಮಿತಾಭ್​ ಬಚ್ಚನ್ (12), ಸಮಂತಾ ರುತ್ ಪ್ರಭು (13), ಕರೀನಾ ಕಪೂರ್ (14), ತೃಪ್ತಿ  ಡಿಮ್ರಿ (15), ತಮನ್ನಾ ಭಾಟಿಯಾ (16,) ರಣಬೀರ್ ಕಪೂರ್ (17), ನಯನತಾರಾ (18), ರಣವೀರ್ ಸಿಂಗ್ (19) ಹಾಗೂ ಅಜಯ್ ದೇವಗನ್ 20ನೇ ಸ್ಥಾನ ಪಡೆದಿದ್ದಾರೆ. 

ಕಳೆದ ಹತ್ತು ವರ್ಷಗಳಲ್ಲಿ ಜನರಿಂದ ಅತಿ ಹೆಚ್ಚು ವೀಕ್ಷಣೆಗೆ ಒಳಗಾಗಿರುವ ಚಿತ್ರ ತಾರೆಯರ ಪಟ್ಟಿಯಲ್ಲಿ ಟಾಪ್ 20 ರಲ್ಲಿರುವ ಹೆಚ್ಚಿನ ತಾರೆಗಳು ಬಾಲಿವುಡ್​ನವರು.  ಟಾಪ್​ 15ರ ಒಳಗೆ ಸ್ಥಾನ ಪಡೆದವರ ಪೈಕಿ ದಕ್ಷಿಣದ ಸಮಂತಾ ರುತ್​ ಪ್ರಭು ಏಕೈಕರು. . ಇವರಿಗೆ 13ನೇ ಸ್ಥಾನ ಸಿಕ್ಕಿದೆ.  ತಮನ್ನಾ ಭಾಟಿಯಾ ಅವರಿಗೆ 16ನೇ ಸ್ಥಾನ ಮತ್ತು ನಯನತಾರಾ 18ನೇ ಸ್ಥಾನ ಸಿಕ್ಕಿದೆ. ದಕ್ಷಿಣದ ಉದ್ಯಮಗಳಿಂದ ಅತಿ ಹೆಚ್ಚು ಸ್ಥಾನ ಪಡೆದ   ನಟರೆಂದರೆ ಪ್ರಭಾಸ್, ಧನುಷ್ ಮತ್ತು ರಾಮ್ ಚರಣ್, ಅವರು ಕ್ರಮವಾಗಿ 29, 30, 31 ಸ್ಥಾನಗಳನ್ನು ಆಕ್ರಮಿಸಿಕೊಂಡಿದ್ದಾರೆ. ಕೆಜಿಎಫ್​ ಭರ್ಜರಿ ಯಶಸ್ಸಿನ ಬಳಿಕ ಯಶ್ ಅವರ ಹುಡುಕಾಟವೂ ಸಾಕಷ್ಟು ಜೋರಾಗಿಯೇ ನಡೆದಿದೆ. ಆದರೆ ಟಾಪ್​ 100ರ ಸ್ಥಾನದಲ್ಲಿ ಯಶ್​ ಅವರು  89ನೇ ಸ್ಥಾನ ಪಡೆದಿದ್ದಾರೆ.  ಈ ಮೂಲಕ ಏಕೈಕ ಕನ್ನಡಿಗ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 

ಕಸವನ್ನು ಹೀಗೆಲ್ಲಾ ಹೆಕ್ಕಿ ಹಾಕ್ತಾರಾ? ಪೋಸ್​ ಕೊಡಲು ಹೋಗಿ ಮಲೈಕಾ ಅರೋರಾ ಸಕತ್​ ಟ್ರೋಲ್​!

 

 

Latest Videos
Follow Us:
Download App:
  • android
  • ios