Asianet Suvarna News Asianet Suvarna News

ಕಸವನ್ನು ಹೀಗೆಲ್ಲಾ ಹೆಕ್ಕಿ ಹಾಕ್ತಾರಾ? ಪೋಸ್​ ಕೊಡಲು ಹೋಗಿ ಮಲೈಕಾ ಅರೋರಾ ಸಕತ್​ ಟ್ರೋಲ್​!

ರಸ್ತೆಯ ಮೇಲೆ ಬಿದ್ದಿದ್ದ ಕಸವನ್ನು ಎತ್ತಿಹಾಕುವ ಮೂಲಕ ನಟಿ ಮಲೈಕಾ ಅರೋರಾ ಟ್ರೋಲ್​ಗೆ ಒಳಗಾಗಿದ್ದಾರೆ. ಅಷ್ಟಕ್ಕೂ ಆಗಿದ್ದೇನು? 
 

Malaika Arora Picks Up Litter Thrown Outside Her Gym Video Leaves Netizens Divided suc
Author
First Published May 29, 2024, 8:46 PM IST

ಸದಾ ಒಂದಿಲ್ಲೊಂದು ಕಾರಣಗಳಿಂದ ಸದ್ದು ಮಾಡುತ್ತಲೇ ಇರುವ ನಟಿಯರಲ್ಲಿ ಒಬ್ಬರು ಬಾಲಿವುಡ್​ ಹಸಿಬಿಸಿ ಲೇಡಿ ಮಲೈಕಾ ಅರೋರಾ.  50 ವರ್ಷ ವಯಸ್ಸು ದಾಟಿದರೂ, ಧಾರಾಳವಾಗಿ ದೇಹ ಪ್ರದರ್ಶನ ಮಾಡುತ್ತಲೇ, ಆಗಾಗ್ಗೆ ಒಂದಿಷ್ಟು ಹೇಳಿಕೆಗಳನ್ನು ನೀಡುತ್ತಾ ಸುದ್ದಿಯಲ್ಲಿರುತ್ತಾರೆ.   ಫಿಟ್​ ಆ್ಯಂಡ್​ ಫೈನ್​ ಆಗಿರಲು ಸಾಕಷ್ಟು ಕಸರತ್ತು ಕೂಡ ಮಾಡುತ್ತಾರೆ.  ತಮ್ಮ ದೇಹಸಿರಿಯನ್ನು ಧಾರಾಳವಾಗಿ ಪ್ರದರ್ಶಿಸುವ ಮೂಲಕವೇ ಖ್ಯಾತಿ ಗಳಿಸಿದವರು ಇವರು. ಅಪರೂಪಕ್ಕೆ ಸಂಪೂರ್ಣ ದೇಹವನ್ನು ಮುಚ್ಚಿಕೊಂಡು ಟ್ರೋಲ್​ ಆಗುವುದೂ ಇದೆ, ಅಷ್ಟರಮಟ್ಟಿಗೆ ಇವರ ಡ್ರೆಸ್​ ಸೆನ್ಸ್​ಗೆ ಅಭಿಮಾನಿಗಳು ಒಗ್ಗಿ ಹೋಗಿದ್ದಾರೆ. ಆದರೆ ಇವರು ಸರಿಯಾದ ಕಮೆಂಟ್​ಗೆ ಒಳಗಾಗುವ ಬದಲು ಟ್ರೋಲ್​ ಆಗುವುದೇ ಹೆಚ್ಚು. 

ಇದೀಗ ಮತ್ತೊಮ್ಮೆ ಮಲೈಕಾ ಟ್ರೋಲ್​  ಆಗಿದ್ದಾರೆ. ಆದರೆ ಅದು ತಮ್ಮ ಅಂಗಾಂಗ ಪ್ರದರ್ಶನದಿಂದ ಅಲ್ಲ. ಬದಲಿಗೆ ಕಸ ಹೆಕ್ಕುವ ಮೂಲಕ. ಜಿಮ್​ಗೆ ಹೋಗಿ ಬರುತ್ತಿದ್ದ ಸಂದರ್ಭದಲ್ಲಿ ರಸ್ತೆ ಮೇಲೆ ಬಿದ್ದ ಕಸವನ್ನು ಮಲೈಕಾ ಎತ್ತಿ ಸಮೀಪದ ಡಸ್ಟ್​ಬಿನ್​ಗೆ ಹಾಕಿದ್ದಾರೆ. ಇದು ಒಳ್ಳೆಯ ಕೆಲಸವೇ. ಇದರಲ್ಲಿ ಟ್ರೋಲ್​ ಆಗುವುದು ಏನಿದೆ ಎನ್ನುವುದೇ ಹಲವರ ಪ್ರಶ್ನೆ. ಅಷ್ಟಕ್ಕೂ ನಟಿಗೆ ತನ್ನ ಹಿಂದೆ ಕ್ಯಾಮೆರಾ ಕಣ್ಣುಗಳು ಇರುವುದು ತಿಳಿದೇ ಇದೆ. ಅದಕ್ಕಾಗಿಯೇ ಈ ಪೋಸ್​ ಕೊಡುತ್ತಿರುವುದು ಎನ್ನುವ ಕಾರಣಕ್ಕೆ ಹಲವರು ಟ್ರೋಲ್​ ಮಾಡಿದ್ದಾರೆ. ಅದಕ್ಕೆ ಒಂದು ಕಾರಣವೂ ಇದೆ. ನಟಿ ಕಸ ನೋಡಿದ ಕೂಡಲೇ ಹೆಕ್ಕಲ್ಲೋ ಬೇಡವೋ ಎಂದು ಅರೆಕ್ಷಣ ಯೋಚಿಸಿದಂತಿದೆ. ನಂತರ ಆ ಕಸವನ್ನು ಬಿದ್ದಲ್ಲಿಯೇ ಹೆಕ್ಕುವ ಬದಲು ಕಾಲಿನಿಂದ ಒಟ್ಟುಗೂಡಿಸಿಕೊಂಡು ಪೋಸ್​ ಕೊಡುವವರ ರೀತಿಯಲ್ಲಿಯೇ ಕಸವನ್ನು ಹೆಕ್ಕಿರುವ ಕಾರಣ ಸಕತ್​ ಟ್ರೋಲ್​ಗೆ ಒಳಗಾಗಿದ್ದಾರೆ. ನಟಿ ಹೋದಲ್ಲಿ, ಬಂದಲ್ಲಿ ಪಾಪರಾಜಿಗಳು ಬಿಡಬೇಕಲ್ಲ. ಹಿಂಬದಿಯಿಂದಲೇ ನಟಿಯ ವಿಡಿಯೋ ಮಾಡಿದ್ದಾರೆ. ಹೀಗೆ ಕಸ ಹೆಕ್ಕುವ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ತಮ್ಮನ್ನು ಶ್ಲಾಘಿಸುವವರ ಸಂಖ್ಯೆ ಹೆಚ್ಚುತ್ತದೆ ಎಂದುಕೊಂಡರೆ ನಟಿಗೆ ಇದು ಉಲ್ಟಾ ಹೊಡೆದಿದೆ. ಸಕತ್​ ಟ್ರೋಲ್​ ಆಗುತ್ತಿದ್ದಾರೆ.

ನನ್ನ ಹಿಂಬದಿ ಊಟದ ಟೇಬಲ್​ನಂತೆ ಕಂಡುಬಂದ್ರೆ ಏಳು ಮಂದಿಗೆ ಆಹಾರ ನೀಡ್ತೇನೆ... ನಿಮಗೇನ್ರೀ ಸಮಸ್ಯೆ?

ಕೆಲ ದಿನಗಳ ಹಿಂದಷ್ಟೇ ನಟಿ, ತಮ್ಮ ವಯಸ್ಸನ್ನು ತೆಗೆದುಕೊಂಡು ಟ್ರೋಲ್​ ಮಾಡುವವರಿಗೆ ತಿರುಗೇಟು ಕೊಟ್ಟಿದ್ದರು. ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ್ದ ಅವರು, ನಾನು ಹಂಸದಂತೆ ನಡೆಯುತ್ತೇನೆ ಎಂದು ಕೆಲವರು ಹೇಳುತ್ತಾರೆ. ನನ್ನ ಹಿಂಬದಿ ಬಫೆಟ್​ ಟೇಬಲ್​ನಂತೆ ಇದೆ ಅಂತಾರೆ. ಹೌದುರಿ. ಅದರಿಂದ ಯಾರಿಗೆ ಏನು ಸಮಸ್ಯೆ? ಬಫೆಟ್​ ಟೇಬಲ್​ನಂತೆ ಇದ್ದರೆ  ಏಳು ಮಂದಿಗೆ ಊಟ ಬಡಿಸ್ತೇನೆ ಅಷ್ಟೇ ಎಂದು ಟ್ರೋಲಿಗರಿಗೆ ಟಾಂಗ್​ ಕೊಟ್ಟಿದ್ದಾರೆ. ನಾನು ಹಂಸದಂತೆಯೂ ನಡೆಯಬಲ್ಲೆ, ಕ್ಯಾಟ್​ ವಾಕ್​ ಮಾಡಬಲ್ಲೆ, ಚಿರತೆಯಂತೆಯೂ ನಡೆಯಬಲ್ಲೆ. ಸಮಸ್ಯೆ ಏನೀಗ ಎಂದು ಪ್ರಶ್ನಿಸಿದ್ದರು. 

ಅಂದಹಾಗೆ,  ಮಲೈಕಾ ಅರೋರಾ (Malaika Arora) ಮತ್ತು ಅರ್ಬಾಜ್ ಖಾನ್ ಅವರನ್ನು ಹಿಂದಿನ ದಿನದ ಹಾಟೆಸ್ಟ್ ಜೋಡಿಗಳಲ್ಲಿ ಒಂದು ಎಂದೇ ಕರೆಯಲಾಗುತ್ತಿತ್ತು. ಆದರೆ ಅವರು ಬೇರ್ಪಟ್ಟು ಹಲವು ವರ್ಷಗಳೇ ಕಳೆದಿವೆ. 2017ರಲ್ಲಿ ಈ ಜೋಡಿ ಬೇರ್ಪಟ್ಟಿದೆ. ಮಲೈಕಾ ಅರೋರಾಗೆ ಈಗ 49 ವರ್ಷ ವಯಸ್ಸು. ಅರ್ಬಾಜ್​ ಖಾನ್​ ಜೊತೆ ಬೇರ್ಪಟ್ಟ ಬಳಿಕ 12 ವರ್ಷ ಚಿಕ್ಕವಾಗಿರುವ ನಟ ಅರ್ಜುನ್ ಕಪೂರ್ (Arjun Kapoor) ಜೊತೆ ಕೆಲ ವರ್ಷಗಳಿಂದ ಡೇಟಿಂಗ್​ ಮಾಡುತ್ತಿದ್ದಾರೆ ಮಲೈಕಾ.  ಮಲೈಕಾ ಅರ್ಜುನ್​ ಕಪೂರ್​ ಜೊತೆ ಡೇಟಿಂಗ್​ನಲ್ಲಿದ್ದರೂ ಮಗನಿಗಾಗಿ ಆಗಾಗ್ಗೆ ಅರ್ಬಾಜ್​ ಖಾನ್​ರನ್ನು ಭೇಟಿಯಾಗುವುದು, ತಬ್ಬಿಕೊಳ್ಳುವುದು ನಡೆದಿದ್ದು, ಇವುಗಳ ವಿಡಿಯೋಗಳೂ ವೈರಲ್​ ಆಗುತ್ತಲೇ ಇರುತ್ತವೆ. ಮಲೈಕಾ ಏನೋ ಅರ್ಜುನ್​ ಕಪೂರ್​ ಜೊತೆ ಹಲವು ವರ್ಷಗಳಿಂದ ಸಂಬಂಧದಲ್ಲಿದ್ದಾರೆ. ಆದರೆ ಅದೇ ಇನ್ನೊಂದೆಡೆ ಅರ್ಬಾಜ್​ ಖಾನ್ ಕೆಲ ತಿಂಗಳ ಹಿಂದೆ ತಮ್ಮ ಅರ್ಧ ವಯಸ್ಸಿನ ಯುವತಿ ಶುರಾ ಜೊತೆ ಮದುವೆಯಾಗಿ ಸಂಸಾರ ನಡೆಸುತ್ತಿದ್ದಾರೆ.

ಪೆದ್ದು ಮಲ್ಲಿಯ ಅದ್ಭುತ ಕಂಠಸಿರಿಗೆ ಮನಸೋತ ಫ್ಯಾನ್ಸ್‌: ನಟನೆಯಷ್ಟೇ ಮುದ್ದಾಗಿದೆ ದನಿ ಅಂತಿದ್ದಾರೆ...
 

Latest Videos
Follow Us:
Download App:
  • android
  • ios