Asianet Suvarna News Asianet Suvarna News

ತಲೆ ಬೋಳಿಸಿಕೊಂಡ ಅದಾ ಶರ್ಮಾ: ಅಭಿಮಾನಿಗಳ ಮುಂದೆ ಇಟ್ಟಿದ್ದಾರೆ ಇಂಥದ್ದೊಂದು ಪ್ರಶ್ನೆ...

ತಲೆ ಬೋಳಿಸಿಕೊಂಡ ನಟಿ ಅದಾ ಶರ್ಮಾ ಅದರ ಫೋಟೋ ಶೇರ್‌ ಮಾಡಿ ಅಭಿಮಾನಿಗಳ ಮುಂದೆ ಇಟ್ಟಿದ್ದಾರೆ ಇಂಥದ್ದೊಂದು ಪ್ರಶ್ನೆ... ಏನದು?
 

Adha Sharma sharing bold head with caption Which baal is your fav Tied hair loose hair no hair suc
Author
First Published May 29, 2024, 2:08 PM IST

ಪುನೀತ್​ ರಾಜ್​ಕುಮಾರ್​ ಜೊತೆ ರಣವಿಕ್ರಮದಲ್ಲಿ ಜೊತೆಯಾಗಿ ಎಲ್ಲರ ಮೆಚ್ಚುಗೆ ಗಳಿಸಿರುವ ಬೆಡಗಿ ಅದಾ ಶರ್ಮಾ. ಆದರೆ ದಿ ಕೇರಳ ಸ್ಟೋರಿ ಮೂಲಕ ರಾತ್ರೋರಾತ್ರಿ ಫೇಮಸ್​ ಆದರು.  ಬಹುಭಾಷಾ ನಟಿಯಾಗಿರುವ ಅದಾ ಶರ್ಮಾ ಅವರಿಗೆ ಈ ಚಿತ್ರದಿಂದ   ದೊಡ್ಡ ಗೆಲುವು ಸಿಕ್ಕಿದೆ. ಇದಾಗಲೇ ಹಲವಾರು ಚಿತ್ರಗಳಲ್ಲಿ ನಟಿಸಿರುವ ಅದಾ ಅವರಿಗೆ ಸಕತ್​ ಹೆಸರು ತಂದುಕೊಟ್ಟಿರುವ ಚಿತ್ರವಿದು. ಸತ್ಯ ಘಟನೆ ಆಧರಿತ ದಿ ಕೇರಳ ಸ್ಟೋರಿಯಲ್ಲಿನ ಅದಾ ಅವರ ಅಭಿನಯಕ್ಕೆ ಫಿದಾ ಆದವರೇ ಇಲ್ಲ. ಅದು ಎಷ್ಟರಮಟ್ಟಿಗೆ ನೈಜತೆಯಿಂದ ಕೂಡಿತ್ತು ಎಂದರೆ, ಈಕೆಗೆ ಈ ಪಾತ್ರ ಮಾಡಿದ್ದಕ್ಕೆ ಕೊಲೆ ಬೆದರಿಕೆ ಕೂಡ ಬಂದಿತ್ತು ಎಂದರೆ ಚಿತ್ರದ ಸತ್ಯದ ಅರಿವಾಗುತ್ತದೆ.  2008ರಿಂದಲೂ ಅದಾ ಶರ್ಮಾ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ, ಹಿಂದಿ, ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ.  

ಇದೀಗ ನಟಿ ತಲೆಯನ್ನು ಬೋಳಿಸಿಕೊಂಡಿರುವ ಫೋಟೋ ಶೇರ್‌ ಮಾಡಿಕೊಂಡಿದ್ದಾರೆ. ಇದನ್ನು ನೋಡಿ ಫ್ಯಾನ್ಸ್‌ ಶಾಕ್‌ ಆಗಿದ್ದಾರೆ. ನಟಿಗೆ ಏನಾಯ್ತು ಎಂದು ಪ್ರಶ್ನಿಸುತ್ತಿದ್ದಾರೆ. ಇದರ ಜೊತೆಗೇನೇ ಕೂದಲು ಬಿಟ್ಟಿರುವ ಫೋಟೋಗಳನ್ನೂ ಶೇರ್‌ ಮಾಡಿಕೊಂಡಿರುವ ನಟಿ, ನಿಮಗೆ ಇದರಲ್ಲಿ ಯಾವುದು ಇಷ್ಟ ಎಂದು ಪ್ರಶ್ನಿಸಿದ್ದಾರೆ. ನಟಿಯ ಅಭಿಮಾನಿಗಳು ಥಹರೇವಾರಿ ಕಮೆಂಟ್‌ ಮಾಡುವ ಮೂಲಕ, ಕೂದಲು ಇಲ್ಲದಿದ್ದರೂ ನೀವು ಸುಂದರ ಎನ್ನುತ್ತಿದ್ದಾರೆ. 

ಹನಿಮೂನ್​ನಿಂದ ಬರುತ್ತಿದ್ದಂತೆಯೇ ಮದ್ವೆ ಫೋಟೋ ಡಿಲೀಟ್​ ಮಾಡಿದ ನಟಿ: ಕಾರಣ ಕೇಳಿ ಫ್ಯಾನ್ಸ್​ ಶಾಕ್​!

ಕೆಲ ದಿನಗಳ ಹಿಂದೆ ಸೀರೆಯ ಮೂಲಕ ನಟಿ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಸದ್ದು ಮಾಡಿದ್ದರು. ಅದಕ್ಕೆ ಕಾರಣವೇನೆಂದರೆ, ಈಕೆ ಧರಿಸಿದ್ದ ಕೇವಲ 15 ರೂಪಾಯಿ ಬೆಲೆ ಬಾಳುವ ಸೀರೆ. ಈ ಬಗ್ಗೆ ಜನರಿಗೆ ಅವರು ಹದಿನೈದು ರೂಪಾಯಿ ಎಂದು ಹೇಳುತ್ತಿರುವುದನ್ನು ಕೇಳಬಹುದು. ಆದರೆ ಇದು ಸಾಧ್ಯವೇ ಇಲ್ಲ, ನಟಿ ಸುಳ್ಳು ಹೇಳುತ್ತಿದ್ದಾರೆ ಎಂದು ಕಮೆಂಟ್​ ಮಾಡಿದ್ದರು. ಆದರೆ ನಟಿ ಸುಳ್ಳು ಹೇಳಿರಲಿಲ್ಲ.  ಅದಾ ಶರ್ಮಾ ಧರಿಸಿದ್ದು ಅವರ  ಅಜ್ಜಿಯ ಸೀರೆ. ಇನ್‌ಸ್ಟಾಗ್ರಾಮ್ ಪುಟವೊಂದು ಹಂಚಿಕೊಂಡ ವೀಡಿಯೊದಲ್ಲಿ, ಅದಾ ಅವರು ತಮ್ಮ ಅಜ್ಜಿಯ ಸೀರೆ ಇದು ಎಂದು ಹೇಳುವುದನ್ನೂ ಕೇಳಬಹುದು.  ಕಪ್ಪು ಕುಪ್ಪಸದೊಂದಿಗೆ ಕಿತ್ತಳೆ ಬಣ್ಣದ ಚಿಫೋನ್ ಸೀರೆಯಲ್ಲಿ ನೀಲಿಬಣ್ಣದ ಟೋನ್ ಹೊಂದಿರುವ ಪಫ್ಡ್ ಸ್ಲೀವ್‌ಗಳನ್ನು ಹೊಂದಿರುವ ನಟಿ ಸುಂದರವಾಗಿ ಕಾಣುತ್ತಿದ್ದರು.  ಸೀರೆಯ ಬೆಲೆಯನ್ನು ಬಹಿರಂಗ ಪಡಿಸುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದರು.

ಇನ್ನು ನಟಿಯ ಸಿನಿ ಜರ್ನಿ ಕುರಿತು ಹೇಳುವುದಾದರೆ, 10ನೇ ತರಗತಿಯಲ್ಲಿ ಇರುವಾಗಲೇ ಅದಾ ಶರ್ಮಾ ಅವರಿಗೆ ನಟಿಯಾಗುವ ಬಯಕೆ ಮೂಡಿತ್ತು. ಆದರೆ ಹೈಸ್ಕೂಲ್​ ಶಿಕ್ಷಣ ಮುಗಿಯುವ ತನಕ ಸಿನಿಮಾದಲ್ಲಿ ನಟಿಸಲು ಅವರ ಪೋಷಕರು ಅವಕಾಶ ನೀಡಲಿಲ್ಲ. ನಂತರ ಅವರು ಅನೇಕ ಸಿನಿಮಾಗಳಿಗೆ ಆಡಿಷನ್​ ನೀಡಲು ಶುರುಮಾಡಿದರು. ಅದಾ ಶರ್ಮಾ ಮೊದಲು ನಟಿಸಿದ್ದು ಹಿಂದಿಯ ‘1920’ ಸಿನಿಮಾದಲ್ಲಿ. 2014ರ ಬಳಿಕ ಅವರಿಗೆ ಬೇರೆ ಭಾಷೆಗಳಿಂದ ಅವಕಾಶಗಳು ಸಿಗಲು ಆರಂಭಿಸಿದವು. ನಟನೆ ಮಾತ್ರವಲ್ಲದೇ ಡ್ಯಾನ್ಸ್​ನಲ್ಲೂ ಅದಾ ಶರ್ಮಾ ಅವರಿಗೆ ಸಖತ್​ ಆಸಕ್ತಿ ಇದೆ. ಹಲವು ಡ್ಯಾನ್ಸ್ ಪ್ರಕಾರಗಳಲ್ಲಿ ಅವರು ತರಬೇತಿ ಪಡೆದಿದ್ದಾರೆ. ಕಥಕ್​, ಸಾಲ್ಸಾ, ಬೆಲ್ಲಿ ಡ್ಯಾನ್ಸ್​ ಮತ್ತು ಜಿಮ್ನಾಸ್ಟಿಕ್​ನಲ್ಲಿ ಅದಾ ಶರ್ಮಾ ಅವರು ಪಳಗಿದ್ದಾರೆ. ಅವರ ಡ್ಯಾನ್ಸ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಸಿನಿಮಾದಲ್ಲಿ ಹೀರೋ ಆಗಲು ಇಷ್ಟವಿಲ್ಲ... ಆದ್ರೆ... ಬಿಗ್​ಬಾಸ್​ ವಿನಯ್​ ಗೌಡ್​ ಓಪನ್​ ಮಾತು...

 ಅದಾ ಶರ್ಮಾ ಅವರ ಪ್ರಾಣಿ ಪ್ರೀತಿ ಎಷ್ಟಿದೆ ಎಂದರೆ ಅವರು ಮಾಂಸಹಾರ ತಿನ್ನುವುದಿಲ್ಲ. ಅವರು ಯಾವಾಗಲೂ ಸಸ್ಯಾಹಾರ ಸೇವನೆ ಮಾಡುತ್ತಾರೆ. ಅಭಿಮಾನಿಗಳ ಬಳಿಯೂ ಅವರು ಇದೇ ರೀತಿಯ ಮನವಿ ಮಾಡಿಕೊಳ್ಳುತ್ತಿರುತ್ತಾರೆ.   ಅದಾ ಶರ್ಮಾ ಅವರು ನಟನೆಗಾಗಿ ಶಿಕ್ಷಣವನ್ನೇ ತೊರೆದರು. ಅವರಿಗೆ ಸರ್ಕಸ್ ಆರ್ಟಿಸ್ಟ್ ಆಗಬೇಕು ಎಂದಿತ್ತು. ಆ ಬಳಿಕ ಅವರಿಗೆ ನಟನೆಯಲ್ಲಿ ಆಸಕ್ತಿ ಬೆಳೆಯಿತು. ಅವರು ದ್ವಿತೀಯ ಪಿಯುಸಿ ಪೂರ್ಣಗೊಳಿಸಿ ನಂತರ ನಟನೆಗೆ ಬಂದರು. ಮೂರನೇ ವಯಸ್ಸಿಗೆ ಅವರು ಡ್ಯಾನ್ಸ್ ಕಲಿತರು. ನಂತರ ಗೋಪಿ ಕೃಷ್ಣ ಡ್ಯಾನ್ಸ್ ಅಕಾಡೆಮಿ ಸೇರಿದರು. ಅಮೆರಿಕದಲ್ಲಿ ಸಾಲಾ ಟ್ರೇನಿಂಗ್ ಪಡೆದಿದ್ದಾರೆ. ಅವರು ಜಿಮನಾಸ್ಟಿಕ್​ನಲ್ಲೂ ತರಬೇತಿ ಹೊಂದಿದ್ದಾರೆ.
 

Latest Videos
Follow Us:
Download App:
  • android
  • ios