ಬಾಲಿವುಡ್‌ನ ತುಂಬಾ ಶ್ರೀಮಂತ ನಾಯಕಿಮಣಿಯರಿದ್ದರೂ ಅವರಲ್ಲಿ ಕೆಲವರು ಅತ್ಯಂತ ಶ್ರೀಮಂತರು. ಕುಬೇರರು ಎನ್ನಬಹುದು. ಅವರಲ್ಲಿ ಕೆಲವರ ಆಸ್ತಿ ಮೌಲ್ಯ ಎಷ್ಟು, ಅವರ ಬಳಿ ಏನೇನಿದೆ ಅಂತೆಲ್ಲ ತಿಳಿಯೋದು ಒಂಥರಾ ಮಜಾ.

ಪ್ರಿಯಾಂಕ ಚೋಪ್ರಾ


ಹಿಂದಿ ಚಿತ್ರರಂಗದ ಅತ್ಯಂತ ಶ್ರೀಮಂತರಲ್ಲೊಬ್ಬಳು ಪ್ರಿಯಾಂಕ ಚೋಪ್ರಾ. ಒಂದು ಲೆಕ್ಕಾಚಾರದ ಪ್ರಕಾರ ಈಕೆಯ ಆಸ್ತಿ ಮೌಲ್ಯ 50 ಮಿಲಿಯ ಡಾಲರ್. ಒಂದು ಫಿಲಂನಲ್ಲಿ ನಟಿಸಲು ಕನಿಷ್ಠ 21 ಕೋಟಿ ರೂ. ಸಂಭಾವನೆ ತೆಗೆದುಕೊಳ್ಳುತ್ತಾಳೆ. ವಯಸ್ಸು ಇನ್ನೂ 37 ವರ್ಷ ಅಷ್ಟೇ. ಹಾಲಿವುಡ್‌ನ ನಿರ್ಮಾಣದ ಕ್ವಾಂಟಿಕೋ ಎಂಬ ಇಂಗ್ಲಿಷ್‌ ಥ್ರಿಲ್ಲರ್‌ ಸೀರಿಯಲ್‌ನಲ್ಲೂ ನಟಿಸಿದ್ದಾಳೆ. ನಿಕ್‌ ಜೊನಾಸ್ ಎಂಬ ತನಗಿಂತ ಸಣ್ಣ ಪ್ರಾಯದ, ಅಮೆರಿಕದ ಮಾಡೆಲ್ ಕಂ ನಟನನ್ನು ಮದುವೆಯಾಗಿ, ಆತನ ಆಸ್ತಿಗೂ ಹಕ್ಕುದಾರಳಾಗಿದ್ದಾಳೆ. ಈಗ ಮುಂಬಯಿಯ ಬಾಲಿವುಡ್‌ ಈಕೆಗೇನಿದ್ದರೂ ಟೆಂಪರರಿ ವಿಳಾಸ. ಪರ್ಮನೆಂಟ್ ವಿಳಾಸ ಇರೋದು ನ್ಯೂಯಾರ್ಕಿನ ಬೆವರ್ಲಿ ಹಿಲ್ಸ್‌ನಲ್ಲಿ. ಮಿಲಿಯಗಟ್ಟಲೆ ಮೌಲ್ಯದ ಬಂಗಲೆಗಳು, ಯಾಚ್, ಹೆಲಿಕಾಪ್ಟರ್‌ಗಳೆಲ್ಲ ಇವರಿಬ್ಬರ ಹೆಸರಿನಲ್ಲಿ ಇವೆ. ಯೂನಿಸೆಫ್‌ ರಾಯಭಾರಿ. ನೀರವ್‌ ಮೋದಿಯ ಮುತ್ತುಗಳ ಬ್ರಾಂಡ್‌ಗೂ ಈಕೆ ರಾಯಭಾರಿ. ತಂದೆ ಕೊಟ್ಟ ಮಂಗಳಸೂತ್ರ, ಡೈಮಂಡ್‌ ರಿಂಗ್‌ಗಳು ಈಗಲೂ ಆಕೆಯ ಅಮೂಲ್ಯ ಸೊತ್ತು ಎಂದು ಹೇಳಿಕೊಳ್ಳುತ್ತಾಳೆ. ಅವರು ಕೊಟ್ಟಿರುವ ಚಿನ್ನದ ನಾಣ್ಯಗಳು ತನ್ನ ಅದೃಷ್ಟವನ್ನು ಕಾಪಾಡಿವೆ ಎಂದು ನಂಬುತ್ತಾಳೆ.

ಅಮೆರಿಕದಲ್ಲಿಯೇ ಪ್ರತೀ ಹಿಂದೂ ಹಬ್ಬ ಆಚರಿಸುತ್ತಾರೆ ಪ್ರಿಯಾಂಕಾ ಚೋಪ್ರಾ ...

ಕರೀನಾ ಕಪೂರ್


ಬಾಲಿವುಡ್‌ನ ಇನ್ನೊಬ್ಬ ಕುಬೇರ ನಟಿ ಕಪೂರ್ ಖಾನ್‌ದಾನಿಯ ಕರೀನಾ. ಈಕೆಯ ಆಸ್ತಿ ಮೌಲ್ಯ ಸುಮಾರು 50 ದಶಲಕ್ಷ ಡಾಲರ್. ಈಕೆ ಕೂಡ ಒಂದು ಸಿನಿಮಾಕ್ಕೆ 20 ಕೋಟಿ ರೂ.ಗಳಷ್ಟು ಪಡೆಯುತ್ತಾಳೆ. ಸೋನಿ, ಲ್ಯಾಕ್ಮೆ, ಕೋಲ್ಗೇಟ್, ಇಮಾಮಿ, ರಸ್ನಾ ಮುಂತಾದ ಬ್ರಾಂಡ್‌ಗಳಿಗೆಲ್ಲ ಈಕೆ ನಂಬಿಕೆಯ ಅಂಬಾಸಿಡರ್. 36 ವರ್ಷ ಆಗಿದ್ದರೂ ಇನ್ನೂ ಮೈಯಲ್ಲಿ ಕಿಂಚಿತ್ತೂ ಸುಕ್ಕುಗಟ್ಟದ, ಈಗಲೂ ಯಂಗ್ ಹೀರೋಗೆ ನಾಯಕಿಯಾಗಿ ಕಾಣಿಸಿಕೊಳ್ಳಬಹುದಾದ ಸೌಂದರ್ಯವನ್ನು ಹೊಂದಿರುವ ಚೆಲುವೆ. ಈಕೆಗೆ ಹೋಲಿಸಿದರೆ ಇವಳ ಗಂಡ ಸೈಫ್ ಅಲಿ ಖಾನನೇ ಸ್ವಲ್ಪ ವಯಸ್ಸಾದಂತೆ ಕಾಣಿಸುತ್ತಾನೆ. ಸದ್ಯ ಈಕೆ ಪ್ರಗ್ನೆಂಟ್. ಮುಂಬಯಿಯಲ್ಲಿರುವ ಅದ್ಭುತವಾದ ಪಟೌಡಿ ಪ್ಯಾಲೇಸ್ ಭವನ ಇವರಿಗೇ ಸೇರಿದೆ. ಆದರೆ ಸದ್ಯ ಅಲ್ಲಿ ಒಂದು ಹೋಟೆಲ್ ಇದೆ.

ಶಾಹಿದ್‌ ಕಪೂರ್‌ಗಾಗಿ ಬಾಬಿ ಡಿಯೊಲ್‌ ಕೆರಿಯರ್‌ ಹಾಳು ಮಾಡಿದ್ರಾ ಕರೀನಾ? ...

ದೀಪಿಕಾ ಪಡುಕೋಣೆ
 


ನಮ್ಮ ಕನ್ನಡದ ಪೊಣ್ ದೀಪಿಕಾ ಪಡುಕೋಣೆ ಕೂಡ ಶ್ರೀಮಂತ ನಟಿಯೇ. ಅಪ್ಪ ಪ್ರಕಾಶ್‌ ಪಡುಕೋಣೆಗೆ ಹೋಲಿಸಿದರೆ ಮಗಳು ರಿಚೆಸ್ಟ್. ಈಕೆಯ ಆಸ್ತಿ ಮೌಲ್ಯ ಸುಮಾರು 47 ಮಿಲಿಯ ಡಾಲರ್. ಈಕೆ ತಾನು ನಟಿಸುವ ಚಿತ್ರವೊಂದಕ್ಕೆ ಸುಮಾರು 20 ಕೋಟಿ ರೂಪಾಯಿಗಳಷ್ಟು ಸಂಭಾವನೆ ಪಡೆಯುತ್ತಾಳೆ. ತಾನಿಷ್ಕ್, ವಿಸ್ತಾರ ಏರ್‌ಲೈನ್ಸ್, ಬ್ರಿಟಾನಿಯಾದ ಗುಡ್‌ ಡೇ, ಲೋರಿಯಲ್, ಆಕ್ಷಿಸ್ ಬ್ಯಾಂಕ್‌ ಮುಂತಾದವುಗಳಿಗೆಲ್ಲಾ ಈಕೆ ಬ್ರಾಂಡ್‌ ಅಂಬಾಸಿಡರ್. ಜಾಹೀರಾತುಗಳಿಂದಲೇ ಈಕೆ ವರ್ಷಕ್ಕೆ ಸುಮಾರು ಕೋಟಿಗಳಷ್ಟನ್ನುದುಡಿಯುತ್ತಾಳೆ. 2006ರಲ್ಲಿ ಐಶ್ವರ್ಯ ಎಂಬ ಕನ್ನಡದ ಸಿನಿಮಾದಲ್ಲಿ ಉಪೇಂದ್ರ ಜೊತೆ ನಟಿಸುವ ಮೂಲಕ ಕೆರಿಯರ್ ಆರಂಭಿಸಿದ ದೀಪಿಕಾ ಈಗ ಬಾಲಿವುಡ್‌ನ ಬಹು ಬೇಡಿಕೆಯ ನಟಿ. ನಟ ರಣವೀರ್ ಸಿಂಗ್‌ ಜೊತೆ ವಾಸಿಸುತ್ತಿರುವ ಈಕೆಗೆ ಈಗ 34 ವರ್ಷ ಅಂದರೆ ಯಾರೂ ನಂಬಲಾರರು.

ರಣವೀರ್ ದೀಪಿಕಾ ವಿವಾಹ ವಾರ್ಷಿಕೋತ್ಸವ; ಪತ್ನಿಯನ್ನು 'ಗುಡಿಯಾ' ಎಂದ ರಾಮ್! ...

ಅನುಷ್ಕಾ ಶರ್ಮಾ
 


ಈ ಲಿಸ್ಟಿನಲ್ಲಿ ಸರ್‌ಪ್ರೈಸಿಂಗ್ ಆಗಿ ಕಾಣಿಸಬಲ್ಲ ಹೆಸರು ಅಂದರೆ ಅನುಷ್ಕಾ ಶರ್ಮಾದು. ಈಕೆಯ ಆಸ್ತಿ ಮೌಲ್ಯ ಸುಮಾರು 40 ದಶಲಕ್ಷ ಡಾಲರ್. ಈಕೆ ಚಿತ್ರವೊಂದಕ್ಕೆ ಸುಮಾರು 12 ಕೋಟಿ ರೂಪಾಯಿ ಪಡೆಯುತ್ತಾಳೆ. ಹತ್ತಿರತ್ತಿರ ಐಶ್ವರ್ಯ ರೈ ಕೂಡ ಇಷ್ಟೇ ಪ್ರಮಾಣದ ಸಂಭಾವನೆ ಪಡೆಯುತ್ತಾಳೆ. ಒಂದು ಕಾಲದಲ್ಲಿ ಐಶ್ವರ್ಯ ರೈ ಬಾಲಿವುಡ್‌ನ ಶ್ರೀಮಂತ ನಟಿಯಾಗಿದ್ದಳು. ಈಗ ಆಕೆಯ ಸ್ಥಾನವನ್ನು ಅಲಿಯಾ ಭಟ್, ಅನುಷ್ಕಾ ಶರ್ಮಾ ಮುಂತಾದ ಸಣ್ಣ ಪ್ರಾಯದ ನಟಿಯರು ತುಂಬುತ್ತಿದ್ದಾರೆ. ಅನುಷ್ಳಾ ಶರ್ಮಾ, ಟಿವಿಎಸ್‌ ಸ್ಕೂಟಿ ಮುಂತಾದ ಬ್ರಾಂಡ್‌ಗಳಿಗೆ ರಾಯಭಾರಿ. ಪತಿ ವಿರಾಟ್‌ ಕೊಹ್ಲಿ ಭಾರತೀಯ ಕ್ರಿಕೆಟ್‌ ಕ್ಯಾಪ್ಟನ್. 

ಕತ್ರಿನಾ ಕೈಫ್
 


ವಿದೇಶದಿಂದ ಬಂದು ಬಾಲಿವುಡ್‌ನಲ್ಲಿ ಬದುಕು ಕಟ್ಟಿಕೊಂಡ ನಟಿಯರಲ್ಲಿ ಕತ್ರಿನಾ ಕೈಫ್‌ಗೆ ಅಗ್ರಸ್ಥಾನ. ಈಕೆ ಕೂಡ ಒಂದು ಸಿನಿಮಾಗೆ 12 ಕೋಟಿ ರೂಪಾಯಿಗಳಷ್ಟು ಸಂಭಾವನೆ ಪಡೆಯುತ್ತಾಳೆ.