ಎಂದೂ, ಯಾರೂ ನೋಡಿರದ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿಕೊಂಡು ಶುಭಾಶಯ ತಿಳಿಸಿದ ರಣವೀರ್ ಸಿಂಗ್. ದೀಪಿಕಾನೂ ಅದೇ ಶೇರ್ ಮಾಡಲು ಕಾರಣವೇನು? 

ಎರಡನೇ ವಿವಾಹ ವರ್ಷಿಕೋತ್ಸವದ ಖುಷಿಯಲ್ಲಿರುವ ಬಾಲಿವುಡ್ ಸ್ಟಾರ್ ಕಪಲ್ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಸೋಷಿಯಲ್ ಮೀಡಿಯಾದಲ್ಲಿ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿಕೊಂಡು, ಶುಭಾಶಯಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಈ ಫೋಟೋಗಳನ್ನು ಎರಡು ವರ್ಷಗಳ ಹಿಂದೆ ಮದುವೆ ದಿನವೇ ಇಟಲಿಯಲ್ಲಿ ಸೆರೆ ಹಿಡಿಯಲಾಗಿದೆ.

ಇನ್ಸ್ಟಾಗ್ರಾಮ್, ಟ್ವಿಟರ್ ಹೆಸರನ್ನು ಬದಲಾಯಿಸಿದ ದೀಪಿಕಾ ಪಡುಕೋಣೆ!

'Souls eternally intertwined. ಎರಡನೇ ವಿವಾಹ ವಾರ್ಷಿಕೊತ್ಸವದ ಶುಭಾಶಯಗಳು ಗುಡಿಯಾ,' ಎಂದು ರಣವೀರ್ ಬರೆದಿದ್ದಾರೆ. 'Two peas in a pod, ಎರಡನೇ ಆನಿವರ್ಸರಿ. ಯು ಕಂಪ್ಲೀಟ್ ಮಿ,' ಎಂದು ದೀಪಿಕಾ ಬರೆದಿದ್ದಾರೆ.

View post on Instagram

ಹರಿಯುತ್ತಿರುವ ನೀರಿನ ಪಕ್ಕದಲ್ಲಿ ಇಬ್ಬರೂ ನಿಂತು ಪೋಸ್ ನೀಡಿದ್ದಾರೆ. ರಣವೀರ್ ಫ್ಲೋರಲ್ ಜುಬ್ಬಾ, ಪೀಚ್ ಕೋಟ್‌ನಲ್ಲಿ ಕಾಣಿಸಿಕೊಂಡರೆ ದೀಪಿಕಾ ಫ್ಲೋರಲ್ ಚೂಡಿದಾರದಲ್ಲಿ ಮಿಂಚುತ್ತಿದ್ದಾರೆ. ಇಬ್ಬರ ಆಪ್ತರು ಹಾಗೂ ಅಭಿಮಾನಿಗಳು ಕಾಮೆಂಟ್‌ನಲ್ಲಿ ಈ ಬಾಲಿವುಡ್ ಫೇಮಸ್ ಜೋಡಿಗೆ ಶುಭ ಹಾರೈಸಿದ್ದಾರೆ. ಹಾಗೂ ಇಬ್ಬರೂ ಯಾಕೆ ಒಂದೇ ರೀತಿಯ ಫೋಟೋ ಶೇರ್ ಮಾಡಿದ್ದೀರಾ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ದೀಪಿಕಾ - ರಣಬೀರ್ : ಆಡಿಷನ್‌ನಲ್ಲಿ ರಿಜೆಕ್ಟ್ ಆಗಿದ್ದ ಬಾಲಿವುಡ್‌ ಸ್ಟಾರ್ಸ್‌! 

ಇನ್ನು ಇಬ್ಬರೂ ದೀಪಾವಳಿ ಹಬ್ಬದವನ್ನು ಕುಟುಂಬಸ್ಥರ ಜೊತೆ ಆಚರಿಸುತ್ತಿದ್ದು ಒಂದೇ ಬಣ್ಣದ ಟ್ರೆಡಿಷನಲ್ ವೇರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 6 ವರ್ಷಗಳ ಕಾಲ ಪ್ರೀತಿ, 2 ವರ್ಷ ದಾಂಪತ್ಯ ಜೀವನ ಇದು ಬೆಸ್ಟ್ ಲೈಫ್‌ ಎಂದು ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.

ರಾಮ್ ಲೀಲಾ, ಬಾಜಿರಾವ್ ಮಸ್ತಾನಿ ನಂತರ ಇಬ್ಬರೂ ಒಟ್ಟು 83 ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ಹಾಗೂ ರೋಮಿ ದೇವ್ ಪಾತ್ರದಲ್ಲಿ ಡಿಪ್ಪಿ ನಟಿಸಿದ ಕಪಿಲ್ ಜೀವನಾಧಾರಿತ ಚಿತ್ರ 2021ರಲ್ಲಿ ಸಿನಿಮಾ ತೆರೆ ಕಾಣುವ ಸಾಧ್ಯತೆಗಳಿವೆ.