ಶಿಕ್ಷಣದ ಕುರಿತು ದೀಪಿಕಾ ಮಾತಾಡಿದ್ರೆ ಟುಕ್ಡೆ ಟುಕ್ಡೆ ಗ್ಯಾಂಗ್ ಸಪೋರ್ಟ್ ಮಾಡಿದ್ದು ಇದ್ಕೇನಾ ಅನ್ನೋದಾ?
ತಾವು ಡಿಗ್ರಿ ಓದಿಲ್ಲ ಎಂದು ದೀಪಿಕಾ ಪಡುಕೋಣೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರೆ, ಟುಕಡೆ ಟುಕಡೆ ಗ್ಯಾಂಗ್ ಸಪೋರ್ಟ್ ಮಾಡಿದ್ದು ಇದ್ಕೇನಾ ಎಂದು ಟ್ರೋಲಿಗರು ಟ್ರೋಲ್ ಮಾಡುತ್ತಿದ್ದಾರೆ.
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಬಹಳ ಯಶಸ್ವಿಯಾಗಿರೋ ನಟಿ. 1986 ರಂದು ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ಜನಿಸಿದ ದೀಪಿಕಾ, ರೂಪದರ್ಶಿ ಕೂಡ. ಇವರು ಮಾಜಿ ಬ್ಯಾಡ್ಮಿಂಟನ್ ಚಾಂಪಿಯನ್ ಪ್ರಕಾಶ್ ಪಡುಕೋಣೆ ಅವರ ಪುತ್ರಿ ಎನ್ನುವುದು ವಿಶೇಷ. ಇತ್ತೀಚಿಗೆ ಬ್ಲಾಕ್ಬಸ್ಟರ್ ಎಂದು ಸಾಬೀತಾಗಿದ್ದ ಪಠಾಣ್ ಸೇರಿದಂತೆ ಹಲವು ಯಶಸ್ವಿ ಚಿತ್ರಗಳನ್ನು ನೀಡಿದ ತಾರೆ ಈಕೆ. ಸದ್ಯಸ್ಯಾಂಡಲ್ವುಡ್ಗೂ ದೀಪಿಕಾ ಮರು ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಇದೆ. ಇತ್ತೀಚೆಗಷ್ಟೆ ‘ಸಂಜು ವೆಡ್ಸ್ ಗೀತಾ-2’ ಚಿತ್ರಕ್ಕೆ ಚಾಲನೆ ನೀಡಿರೋ ನಿರ್ದೇಶಕ ನಾಗಶೇಖರ್ ಅವರು ಇದೀಗ ಇನ್ನೊಂದು ದೊಡ್ಡ ಪ್ರಾಜೆಕ್ಟ್ ಚಿತ್ರಕ್ಕೆ ಕೈ ಹಾಕಿದ್ದಾರೆ. ವಿಶೇಷವೆಂದರೆ, ಈ ಸಿನಿಮಾಕ್ಕಾಗಿ ದೊಡ್ಡ ದೊಡ್ಡ ಸ್ಟಾರ್‌ಗಳನ್ನು ಕರೆತರುವ ಲೆಕ್ಕಾಚಾರ ಹಾಕಿಕೊಂಡಿದ್ದಾರೆ. 1818ರ ಜನವರಿ 1ರಂದು ನಡೆದ ಒಂದು ಕ್ರಾಂತಿಕಾರಿ ಸಬ್ಜೆಕ್ಟ್ ಹೊಂದಿರುವ, ನೈಜ ಘಟನೆಯನ್ನು ತೆರೆಯ ಮೇಲೆ ತರಲು ನಾಗಶೇಖರ್ ಮುಂದಾಗಿದ್ದಾರೆ. ಅದೇ ಭೀಮಾ ಕೊರೆಗಾಂವ್ (Bhima Koregaon). ಕನ್ನಡದ 'ಸೂಪರ್ ಸ್ಟಾರ್' ನಟರೊಬ್ಬರು ನಮ್ಮ ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ ನಾಗಶೇಖರ್ ಅವರು, ಕನ್ನಡತಿಯೇ ಆಗಿದ್ದರೂ ಬಾಲಿವುಡ್ ಹಾಗೂ ಹಾಲಿವುಡ್ನಲ್ಲಿ ಮಿಂಚುತ್ತಿರುವ ದೀಪಿಕಾ ಪಡುಕೋಣೆಯನ್ನು ಈ ಚಿತ್ರಕ್ಕೆ ತರಲು ಪ್ಲ್ಯಾನ್ ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನು ನೀಡಿದರು. ದೀಪಿಕಾ ಇದಾಗಲೇ ಉಪೇಂದ್ರ ಜೊತೆ ಐಶ್ವರ್ಯ ಚಿತ್ರದಲ್ಲಿ ನಟಿಸಿದ್ದಾರೆ.
ಈ ಮಧ್ಯೆಯೇ ನಟಿ ದೀಪಿಕಾ ಅವರು ತಮ್ಮ ಶಿಕ್ಷಣದ ಕುರಿತು ಮಾತನಾಡಿದ್ದಾರೆ. ತಾವು 12ನೇ ಕ್ಲಾಸ್ವರೆಗೆ ಮಾತ್ರ ಕಲಿತದ್ದು ಎನ್ನುವುದನ್ನು ಅವರು ಬಹಿರಂಗಪಡಿಸಿದ್ದಾರೆ. ಅಷ್ಟು ಕಲಿಯುವಾಗಲೇ ಮಾಡೆಲಿಂಗ್ನಲ್ಲಿ ನನಗೆ ಅವಕಾಶಗಳು ಬಂದವು. ಬೆಂಗಳೂರಿನಲ್ಲಿ ನೆಲೆಸಿದ್ದರೂ ದೆಹಲಿಗೆ ಹೋಗಿ ಬರಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ. ಈ ಸಮಯದಲ್ಲಿ 12ನೇ ತರಗತಿ ಮುಗಿದಿತ್ತು. ಡಿಗ್ರಿಯ ಮೊದಲ ವರ್ಷವನ್ನಾದರೂ ಪೂರೈಸುವ ಆಸೆ ಇತ್ತು. ಆದರೆ ಅದು ಕೂಡ ಸಾಧ್ಯವಾಗಲಿಲ್ಲ ಎಂದಿದ್ದಾರೆ. ದೂರ ಶಿಕ್ಷಣದ ಮೂಲಕ ಡಿಗ್ರಿ ಪಡೆಯುವ ಆಸೆಯೂ ಇತ್ತು. ಅದರೆ ಅದು ಕೂಡ ಸಾಧ್ಯವಾಗಲಿಲ್ಲ. ಅದ್ದರಿಂದ ನಾನು ಕಲಿತಿರುವುದು ಕೇವಲ 12ನೇ ತರಗತಿ ಎಂದಿದ್ದಾರೆ.
ಇದು ನನ್ನ ಅಪ್ಪ-ಅಮ್ಮನಿಗೆ ತುಂಬಾ ಬೇಸರ ಉಂಟು ಮಾಡಿತ್ತು. ನಾನು ಡಿಗ್ರಿ ಮುಗಿಸಿದ ಬಳಿಕ ದುಡಿಯುವುದು ಅವರಿಗೆ ಇಷ್ಟವಿತ್ತು. ಆದರೆ ಅದಾಗಲೇ ನಾನು ಯಶಸ್ಸು ಕಂಡಿದ್ದೆ. ನಂತರ ನನ್ನ ಅಪ್ಪ-ಅಮ್ಮನೂ ಇದಕ್ಕೆ ಒಪ್ಪಿಕೊಳ್ಳುವ ಅನಿವಾರ್ಯತೆ ಉಂಟಾಯಿತು ಎಂದು ದೀಪಿಕಾ (Deepika Padukone) ಹೇಳಿಕೊಂಡಿದ್ದಾರೆ. ಇದು ವೈರಲ್ ಆಗುತ್ತಲೇ ಥಹರೇವಾರಿ ಕಮೆಂಟ್ಗಳ ಸುರಿಮಳೆಯಾಗುತ್ತಿದೆ. ಕೆಲವರು ಎಷ್ಟು ಕಲಿತರು ಎನ್ನುವುದು ಮುಖ್ಯವಲ್ಲ, ಎಷ್ಟು ಯಶಸ್ಸು ಪಡೆದಿದ್ದೀರಿ ಎನ್ನುವುದು ಮುಖ್ಯವಾಗುತ್ತದೆ ಎಂದಿದ್ದರೆ, ನಿಮ್ಮ ಇಂಗ್ಲಿಷ್ ತುಂಬಾ ಚೆನ್ನಾಗಿದೆ ಎಂದು ಕೆಲವರು ಹೇಳಿದ್ದಾರೆ. ಇನ್ನು ಕೆಲವರು ಈಗಲಾದರೂ ಡಿಗ್ರಿ ಪಡೆಯಿರಿ ಎಂದಿದ್ದಾರೆ.
'ಭೀಮಾ ಕೊರೆಗಾಂವ್' ಮೂಲಕ ಸ್ಯಾಂಡಲ್ವುಡ್ನಲ್ಲಿ ಮತ್ತೆ ದೀಪಿಕಾ? ನಿರ್ದೇಶಕ ಹೇಳಿದ್ದೇನು?
ಆದರೆ ಕಮೆಂಟ್ಗಳಲ್ಲಿ ಹೆಚ್ಚಿನವರು ದೀಪಿಕಾ ಶಿಕ್ಷಣದ ಕುರಿತು ಟೀಕೆ ಮಾಡಿದ್ದಾರೆ. ನೀವು ಟುಕಡೆ ಟುಕಡೆ ಗ್ಯಾಂಗ್ಗೆ ಸಪೋರ್ಟ್ ಮಾಡಿದ್ದು ಏಕೆ ಎಂದು ಈಗ ಗೊತ್ತಾಯ್ತು ಎಂದು ನಟಿಯ ಕಾಲೆಳೆದಿದ್ದಾರೆ. ಅಷ್ಟಕ್ಕೂ ಆಗಿದ್ದೇನೆಂದರೆ, 2020ರಲ್ಲಿ ದೆಹಲಿಯ ಪ್ರತಿಷ್ಠಿತ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯ(ಜೆಎನ್ಯು-JNU)ದಲ್ಲಿ ನಡೆದಿದ್ದ ಗೂಂಡಾ ದಾಳಿ ಖಂಡಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ದೀಪಿಕಾ ಪಡುಕೋಣೆ ಭಾಗವಹಿಸಿ ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಜೆಎನ್ಯು ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ಅವರು ಒಮ್ಮೆ ಭಾರತ ದೇಶವನ್ನು ಟುಕಡೆ ಟುಕಡೆ ಮಾಡುವುದಾಗಿ ಹೇಳುವ ಮೂಲಕ ಭಾರಿ ಟೀಕೆಗೆ ಒಳಗಾಗಿದ್ದರು. ಈಗ ಅವರ ಪರವಾಗಿಯೇ ದೀಪಿಕಾ ಸಪೋರ್ಟ್ ಮಾಡಿದ್ದರಿಂದ ಆಗ ದೀಪಿಕಾ ವಿರುದ್ಧವೂ ಸಾಕಷ್ಟು ಟೀಕೆಗಳು ಬಂದಿದ್ದವು. ಟುಕಡೆ ಟುಕಡೆ ಗ್ಯಾಂಗ್ ಸಪೋರ್ಟರ್ ಎಂದು ದೀಪಿಕಾರಕ್ಕೆ ಹೀಯಾಳಿಸಿದ್ದರು. ಈಗ ತಾವು ಕಾಲೇಜು ಶಿಕ್ಷಣ ಪಡೆದಿಲ್ಲ ಎಂದು ದೀಪಿಕಾ ಹೇಳಿದ್ದರಿಂದ ಈ ಘಟನೆಯನ್ನು ಮತ್ತೆ ಹಲವರು ಟ್ರೋಲಿಗರು ಮುನ್ನೆಲೆಗೆ ತಂದಿದ್ದಾರೆ.