'ಭೀಮಾ ಕೊರೆಗಾಂವ್' ಮೂಲಕ ಸ್ಯಾಂಡಲ್ವುಡ್ನಲ್ಲಿ ಮತ್ತೆ ದೀಪಿಕಾ? ನಿರ್ದೇಶಕ ಹೇಳಿದ್ದೇನು?
ಭೀಮಾ ಕೊರೆಗಾಂವ್ ಚಿತ್ರದ ಮೂಲಕ ದೀಪಿಕಾ ಪಡುಕೋಣೆ ಇನ್ನೊಮ್ಮೆ ಸ್ಯಾಂಡಲ್ವುಡ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆಯೆ? ನಿರ್ದೇಶಕರು ಹೇಳಿದ್ದೇನು?
ಇತ್ತೀಚೆಗಷ್ಟೆ ‘ಸಂಜು ವೆಡ್ಸ್ ಗೀತಾ-2’ ಚಿತ್ರಕ್ಕೆ ಚಾಲನೆ ನೀಡಿರೋ ನಿರ್ದೇಶಕ ನಾಗಶೇಖರ್ ಅವರು ಇದೀಗ ಇನ್ನೊಂದು ದೊಡ್ಡ ಪ್ರಾಜೆಕ್ಟ್ ಚಿತ್ರಕ್ಕೆ ಕೈ ಹಾಕಿದ್ದಾರೆ. ವಿಶೇಷವೆಂದರೆ, ಈ ಸಿನಿಮಾಕ್ಕಾಗಿ ದೊಡ್ಡ ದೊಡ್ಡ ಸ್ಟಾರ್‌ಗಳನ್ನು ಕರೆತರುವ ಲೆಕ್ಕಾಚಾರ ಹಾಕಿಕೊಂಡಿದ್ದಾರೆ. 1818ರ ಜನವರಿ 1ರಂದು ನಡೆದ ಒಂದು ಕ್ರಾಂತಿಕಾರಿ ಸಬ್ಜೆಕ್ಟ್ ಹೊಂದಿರುವ, ನೈಜ ಘಟನೆಯನ್ನು ತೆರೆಯ ಮೇಲೆ ತರಲು ನಾಗಶೇಖರ್ ಮುಂದಾಗಿದ್ದಾರೆ. ಅದೇ ಭೀಮಾ ಕೊರೆಗಾಂವ್ (Bhima Koregaon). ಚಕ್ರವರ್ತಿ ಚಂದ್ರಚೂಡ್ ಅವರು ನನಗೆ ಈ ಸಿನಿಮಾವನ್ನು ಮಾಡುವಂತೆ ಪ್ರೇರೇಪಿಸಿದರು. ಆದರೆ ನಿರ್ಮಾಪಕರು ಎಷ್ಟೇ ಖರ್ಚಾದರೂ ಪರವಾಗಿಲ್ಲ, ಸಿನಿಮಾ ಮಾಡಲು ರೆಡಿ ಇದ್ದಾರೆ ಎಂದಿರುವ ನಾಗಶೇಖರ್ ಅವರು, ಇದರ ಬಜೆಟ್ 120 ಕೋಟಿ ರೂಪಾಯಿ ತಲುಪಬಹುದು ಎಂದಿದ್ದಾರೆ. ನಾಗಶೇಖರ್ ಮೂವೀಸ್ ಹಾಗೂ ಪವಿತ್ರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಅಡಿ ಛಲವಾದಿ ಕುಮಾರ್ ಈ ಚಿತ್ರವನ್ನು ನಿರ್ಮಿಸುತ್ತಿರುವುದಾಗಿ ಮಾಹಿತಿ ನೀಡಿದರು.
ಈ ಚಿತ್ರದ ಶೀರ್ಷಿಕೆ ನಿನ್ನೆ ಬಿಡುಗಡೆಯಾಗಿದೆ. ಈ ಸಂದರ್ಭದಲ್ಲಿ ಕೆಲವೊಂದು ಇಂಟರೆಸ್ಟಿಂಗ್ ಮಾಹಿತಿಯನ್ನು ಅವರು ತಿಳಿಸಿದರು. ಶೋಷಿತರ ಬದುಕಿಗೆ ಬೆಳಕು ಹಚ್ಚುವ ಕೆಲಸಕ್ಕೆ ದೀಪ ಹಚ್ಚುವ ಮೂಲಕ ಟೈಟಲ್ ಲಾಂಚ್ ಮಾಡುತ್ತಿದ್ದೇವೆ. ‘ಸಂಜು ವೆಡ್ಸ್ ಗೀತಾ’ ಚಿತ್ರದ ಬಗ್ಗೆ ಚರ್ಚೆ ನಡೆಸುವಾಗ ಈ ವಿಷಯ ಪ್ರಸ್ತಾಪಕ್ಕೆ ಬಂತು. ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಈ ಘಟನೆಯನ್ನು ನಮ್ಮ ಜನರಿಗೆ ತಿಳಿಸಬೇಕು ಎಂದು ನಿರ್ಧರಿಸಿ ನಿರ್ಮಾಣಕ್ಕೆ ಮುಂದಾಗಿದ್ದೇವೆ. ದೊಡ್ಡ ದೊಡ್ಡ ಸ್ಟಾರ್‌ಗಳನ್ನು ಹಾಕಿ ಚಿತ್ರ ನಿರ್ಮಿಸುವ ಚಿಂತನೆ ನಡೆಸಿದ್ದೇವೆ. ನೈಜ ಘಟನೆ ಆಧರಿಸಿದ ಬಹಳ ದೊಡ್ಡ ವಿಚಾರವನ್ನು ಒಳಗೊಂಡ ಸಿನಿಮಾವಾಗಿದೆ. ಚಕ್ರವರ್ತಿ ಚಂದ್ರಚೂಡ್ ಅವರು ನನಗೆ ಈ ಸಿನಿಮಾವನ್ನು ಮಾಡುವಂತೆ ಪ್ರೇರೇಪಿಸಿದರು. ಕನ್ನಡದ 'ಸೂಪರ್ ಸ್ಟಾರ್' ನಟರೊಬ್ಬರು ನಮ್ಮ ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ ನಾಗಶೇಖರ್ ಅವರು, ಕನ್ನಡತಿಯೇ ಆಗಿದ್ದರೂ ಬಾಲಿವುಡ್ ಹಾಗೂ ಹಾಲಿವುಡ್ನಲ್ಲಿ ಮಿಂಚುತ್ತಿರುವ ದೀಪಿಕಾ ಪಡುಕೋಣೆಯನ್ನು ಈ ಚಿತ್ರಕ್ಕೆ ತರಲು ಪ್ಲ್ಯಾನ್ ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನು ನೀಡಿದರು. ದೀಪಿಕಾ ಇದಾಗಲೇ ಉಪೇಂದ್ರ ಜೊತೆ ಐಶ್ವರ್ಯ ಚಿತ್ರದಲ್ಲಿ ನಟಿಸಿದ್ದಾರೆ.
ನಟಿ ವಿಜಯಲಕ್ಷ್ಮಿಗೆ ಏಳು ಬಾರಿ ಗರ್ಭಪಾತ! ನಟ,ರಾಜಕಾರಣಿ ಸೀಮನ್ಗೆ ಪೊಲೀಸ್ ಬುಲಾವ್
ಪೂನಾ ನದಿಯ ದಡದಲ್ಲಿ ಡಿ.31ರಿಂದ ಜ.1ರವರೆಗೆ ಸ್ವಾಭಿಮಾನಿ ಬದುಕಿಗೋಸ್ಕರ ನಡೆದ ಘನಘೋರ ಯುದ್ಧ ಭೀಮಾ ಕೊರೆಗಾಂವ್. 2ನೇ ಬಾಜೀರಾಯನ ಘೋರ ಕೃತ್ಯಗಳನ್ನು ವಿರೋಧಿಸಿ ಮೆಹರ್ ಸೈನಿಕರು ನಡೆಸಿದ ಯುದ್ಧ ಇದಾಗಿದ್ದು, ಭಾರತದ ನೆಲದಲ್ಲಿ ಬಾಜೀರಾಯ ಅಸ್ಪೃಶ್ಯರನ್ನು ಹೇಗೆ ನಡೆಸಿಕೊಂಡಿದ್ದ, ಯಾವ ರೀತಿ ನೋಡಿಕೊಂಡಿದ್ದ, ಯಾವ ಉದ್ದೇಶಕ್ಕೆ ಈ ಯುದ್ಧ ನಡೆಯಿತು ಅನ್ನುವುದನ್ನು ಈ ಸಿನಿಮಾದಲ್ಲಿ ದಾಖಲು ಮಾಡುವ ಯೋಚನೆಯನ್ನು ಚಿತ್ರತಂಡ ಹೊಂದಿದೆ. 500 ಜನ ಸೈನಿಕರು, 30 ಸಾವಿರ ಪೇಶ್ವೆ ಬಾಜೀರಾಯನ ಸೈನಿಕರನ್ನು 12 ಗಂಟೆಗಳಲ್ಲಿ ಧ್ವಂಸ ಮಾಡಿದ ಘಟನೆಯನ್ನು ಚಿತ್ರದಲ್ಲಿ ತೋರಿಸಲಾಗುತ್ತಿದೆ.
ಈ ಬಿಗ್ ಬಜೆಟ್ ಸಿನಿಮಾವು 54 ಕೋಟಿ ಶೋಷಿತರಿಗೆ ಬೆಳಕಾಗಲಿದೆ. ಚಕ್ರವರ್ತಿ ಚಂದ್ರಚೂಡ್ ಅವರ ನೇತೃತ್ವದಲ್ಲಿ ಬರಹಗಾರರ ತಂಡವೊಂದನ್ನು ಕಟ್ಟಿಕೊಂಡು ಇದನ್ನು ಎರಡು ಭಾಗಗಳಲ್ಲಿ ಸಿನಿಮಾ ಮಾಡಬೇಕು ಎಂಬ ಆಲೋಚನೆ ಇದೆ ಎಂದಿದ್ದಾರೆ ನಾಗಶೇಖರ್.
ಸ್ಯಾಂಡಲ್ವುಡ್ ಸ್ಟಾರ್ ನಟನ ಗುರುತಿಸಬಲ್ಲಿರಾ? ಹುಟ್ಟುಹಬ್ಬದ ದಿನವೇ ಹೊಸ ಚಿತ್ರದ ಘೋಷಣೆ