Asianet Suvarna News Asianet Suvarna News

ದೀಪಿಕಾ ವಿಡಿಯೋ ನೋಡಿ ಫ್ಯಾನ್ಸ್​ ಶಾಕ್​! ಪ್ಲೀಸ್​ ಆಸ್ಪತ್ರೆಗೆ ಹೋಗಿ ಅಂತಿದ್ದಾರೆ ನೆಟ್ಟಿಗರು

ದೀಪಿಕಾ ಪಡುಕೋಣೆ ಹೊಸ ರೀಲ್ಸ್ ಹಾಕಿದ್ದು, ಅದನ್ನು ನೋಡಿ ಪ್ಲೀಸ್​ ಆಸ್ಪತ್ರೆಗೆ ಹೋಗಿ ಅಂತಿದ್ದಾರೆ ಫ್ಯಾನ್ಸ್​. ಅಷ್ಟಕ್ಕೂ ಆಗಿರೋದೇನು? 
 

Deepika Padukone has posted new reels fans shock suc
Author
First Published Oct 30, 2023, 5:56 PM IST

ಸದ್ಯ ಬಾಲಿವುಡ್​ ಜೋಡಿಯಾದ ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್​ ಬಹಳ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಈ ಜೋಡಿ ಕಾಫಿ ವಿತ್​ ಕರಣ್​ ಷೋನಲ್ಲಿ ಕಾಣಿಸಿಕೊಂಡಿದ್ದು. ಈ ಸಮಯದಲ್ಲಿ ದೀಪಿಕಾ  ತೀರಾ ವೈಯಕ್ತಿಕ ವಿಷಯ ಮಾತನಾಡಿದ್ದು, ಅದು ರಣವೀರ್​ ಅವರಿಗೆ ಸಿಟ್ಟು ತರಿಸಿದ ಬಳಿಕ ಈ ಜೋಡಿಯ ವಿಷಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗುತ್ತಿದೆ.  ಈ ಜೋಡಿ ಮದುವೆಯಾಗಿ ಬರುವ ನವೆಂಬರ್​ 14ಕ್ಕೆ ಐದು ವರ್ಷಗಳು ಕಳೆಯಲಿವೆ. ಮೊನ್ನೆ ಕಾಫಿ ವಿತ್​ ಕರಣ್​ ಷೋನಲ್ಲಿ ಇದೇ ಮೊದಲ ಬಾರಿಗೆ,  ಮದುವೆಯಾಗಿ ಐದು ವರ್ಷಗಳ ಬಳಿಕ ಮದುವೆಯ ವಿಡಿಯೋ ರಿಲೀಸ್​ ಮಾಡಿದ್ದರು.  

ಈ ಸಮಯದಲ್ಲಿ ಈ ಜೋಡಿ ಕೆಲವೊಂದು ಇಂಟರೆಸ್ಟಿಂಗ್​ ವಿಷಯಗಳನ್ನು ಶೇರ್​ ಮಾಡಿಕೊಂಡಿತ್ತು. ಪತಿ ರಣವೀರ್​ ಎದುರೇ ಪ್ರಿಯಾಂಕಾ ಪರಪುರುಷರ ಬಗ್ಗೆ ಡೇಟಿಂಗ್​ ಕುರಿತು ಪ್ರಿಯಾಂಕಾ ಮಾತನಾಡಿದ್ದು, ಇದು ಸಕತ್​ ಟ್ರೋಲ್​ಗೂ ಕಾರಣವಾಯಿತು ಮಾತ್ರವಲ್ಲದೇ ಹಲವರು ಹಲವು ವಿಧದಲ್ಲಿ ದೀಪಿಕಾ ಮಾತನ್ನು ಅರ್ಥೈಸತೊಡಗಿದ್ದಾರೆ. ಒಂದು ಹಂತದಲ್ಲಿ ದೀಪಿಕಾ ಮಾತನಾಡಿದ್ದು ಷೋನಲ್ಲಿ ಪತಿ ರಣವೀರ್​ ಕೋಪಕ್ಕೆ ಕಾರಣವಾಗಿತ್ತು.  ‘ಇಬ್ಬರೂ ರಿಲೇಶನ್​ಶಿಪ್​ನಲ್ಲಿ ಇದ್ದೀರಿ ಎಂದು ಯಾವಾಗ ಗೊತ್ತಾಯಿತು’ ಎಂದು ಜೋಡಿಗೆ ಕರಣ್ ಜೋಹರ್​ ಕೇಳಿದ್ರು. ಇದಕ್ಕೆ ದೀಪಿಕಾ ಉತ್ತರಿಸುತ್ತಾ, ‘ಕೆಲವು ಕಾಂಪ್ಲಿಕೇಟೆಡ್​ ರಿಲೇಶನ್​ಷಿಪ್​ನಿಂದ ಆಗತಾನೇ ಹೊರಬಂದಿದ್ದೆ. ಹಾಗಾಗಿ ಯಾರ ಉಸಾಬರಿಯೂ ಬೇಡ ಅನ್ನಿಸಿತ್ತು.  ಸಿಂಗಲ್ ಆಗಿರೋಕೆ ಇಷ್ಟವಾಗಿತ್ತು.  ಆ ಸಮಯದಲ್ಲಿ ರಣವೀರ್ ಸಿಕ್ಕರು.  ನಮ್ಮಿಬ್ಬರ ಮಧ್ಯೆ ನಿಜವಾದ ಕಮಿಟ್​ಮೆಂಟ್ ಇರ್ಲೇ ಇಲ್ಲ. ಅದಾಗಲೇ ಹಲವಾರು ಪುರುಷರ ಜೊತೆ ಹೋಗಿದ್ದೆ.  ಸಾಕಷ್ಟು ಜನರನ್ನು ಭೇಟಿ ಮಾಡುತ್ತಿದ್ದೆ. ಆದರೆ, ರಣವೀರ್ ಸಿಂಗ್​ ಅಷ್ಟು ಎಗ್ಸೈಟಿಂಗ್ ಎಂದು ಯಾರೂ ಅನಿಸಲಿಲ್ಲ. ರಣವೀರ್ ಪ್ರಪೋಸ್ ಮಾಡುವವರೆಗೂ ನಮ್ಮ ಮಧ್ಯೆ ಕಮಿಟ್​ಮೆಂಟ್ ಇರಲಿಲ್ಲ’ ಎಂದಿದ್ದರು.

ರಣವೀರ್​ ಮುಂದೆನೇ ದೀಪಿಕಾ ಪರಪುರುಷರ ಜತೆ ಡೇಟಿಂಗ್​ ಬಗ್ಗೆ ಹೀಗ್​ ಹೇಳೋದಾ? ಕಿಡಿಕಿಡಿಯಾದ ಪತಿರಾಯ!

ಇದಕ್ಕೆ ಹಲವಾರು ಅರ್ಥ ಕಲ್ಪಿಸಲಾಗುತ್ತಿದೆ. ಕೆಲವರಂತೂ ದೀಪಿಕಾ ದೈಹಿಕ ಸುಖಕ್ಕೆ ಪರಪುರಷರ ಬಳಿ ಹೋಗುತ್ತಾರೆ, ಮಾನಸಿಕವಾಗಿ ಮಾತ್ರ ಪತಿ ರಣವೀರ್​ ಬಳಿ ಇದ್ದಾರೆ ಎನ್ನುವಂಥ ಕೀಳು ಮಟ್ಟದ ಅರ್ಥವನ್ನೂ ಕಲ್ಪಿಸುತ್ತಿದ್ದಾರೆ. ಇಂಥ ಅಸಂಬಂಧ ಮಾತುಗಳನ್ನಾಡಬೇಡಿ ಎಂದು ಖುದ್ದು ಕರಣ್​ ಜೋಹರ್​ ಅವರು ಜನರ ವಿರುದ್ಧ ಕಿಡಿ ಕಾರಿದ್ದೂ ಆಗಿದೆ.

ಇದರ ನಡುವೆಯೇ ದೀಪಿಕಾ ಇದೀಗ ಕೆಲವೇ ಸೆಕೆಂಡ್​ಗಳ ರೀಲ್ಸ್​ ಶೇರ್​ ಮಾಡಿದ್ದಾರೆ. ಅದರಲ್ಲಿ ಸೋ ಎಲಿಗೆಂಟ್​, ಸೋ ಬ್ಯೂಟಿಫುಲ್​, ಜಸ್ಟ್​ ಲುಕಿಂಗ್​ ಲೈಕ್​ ವ್ಹಾವ್​ ಎಂದಷ್ಟೇ ಹೇಳಿದ್ದಾರೆ. ಇನ್ನೇನೂ ಈ ವಿಡಿಯೋದಲ್ಲಿ ಇಲ್ಲ. ಇದನ್ನು ನೋಡಿ ಫ್ಯಾನ್ಸ್​ ಶಾಕ್​ ಆಗಿದ್ದು, ಕಾಫಿ ವಿತ್​ ಕರಣ್​ನಲ್ಲಿ ನಡೆದ ಗಲಾಟೆ ಬಳಿಕ ದೀಪಿಕಾ ಮಾನಸಿಕ ಅಸ್ವಸ್ಥಳಾಗಿದ್ದಾಳೆ ಎನ್ನುತ್ತಿದ್ದಾರೆ. ಇನ್ನು ಕೆಲವರು ನಿಜಕ್ಕೂ ಈಕೆಗೆ ಹುಚ್ಚು ಹಿಡಿದಂತೆ ಕಾಣುತ್ತಿದೆ, ದಯವಿಟ್ಟು ಚಿಕಿತ್ಸೆ ಪಡೆದುಕೊಳ್ಳಿ ಎನ್ನುತ್ತಿದ್ದರೆ, ಇನ್ನು ಕೆಲವರು ಗಂಡ ರಣವೀರ್​ ಕಥೆ ಏನು ಎಂದು ಪ್ರಶ್ನಿಸುತ್ತಿದ್ದಾರೆ. ನಿಮಗೆ ನಿಜಕ್ಕೂ ಮಾನಸಿಕ ಆಘಾತವಾಗಿದೆ, ಆಸ್ಪತ್ರೆಗೆ ಹೋಗಿ ಎಂದು ಹಲವರು ಹೇಳುತ್ತಿದ್ದಾರೆ.  ಕೆಲವರು ಮಾತ್ರ ನಟಿಯ ಸೌಂದರ್ಯಕ್ಕೆ ವ್ಹಾವ್​ ಎನ್ನುತ್ತಿದ್ದರೆ ಹಲವರು ಈ ರೀತಿ ವಿಚಿತ್ರವಾಗಿ ಹಿಂದು ಮುಂದು ಇಲ್ಲದೇ ನಟಿ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸುತ್ತಿದ್ದಾರೆ. 

ನನ್ನ ನೋಡಿ ದೀಪಿಕಾ ಅಮ್ಮಾ ಛೇ ಯಾರಿವ್ನು ಅಂದಿದ್ರು: ಮದ್ವೆ ವಿಡಿಯೋ ರಿಲೀಸ್​ ಮಾಡಿ ರಣವೀರ್​ ಮಾತು!

Follow Us:
Download App:
  • android
  • ios