Asianet Suvarna News Asianet Suvarna News

ರಣವೀರ್​ ಮುಂದೆನೇ ದೀಪಿಕಾ ಪರಪುರುಷರ ಜತೆ ಡೇಟಿಂಗ್​ ಬಗ್ಗೆ ಹೀಗ್​ ಹೇಳೋದಾ? ಕಿಡಿಕಿಡಿಯಾದ ಪತಿರಾಯ!

ರಣವೀರ್​ ಮುಂದೆನೇ ದೀಪಿಕಾ ಪರಪುರುಷರ ಬಗ್ಗೆ ಹೀಗ್​ ಹೇಳೋದಾ? ಕಿಡಿಕಿಡಿಯಾದ ಪತಿರಾಯ. ಅಷ್ಟಕ್ಕೂ ಆಗಿದ್ದೇನು?
 

Deepika Padukone Gets Bashed For Her Open Relationship Comment suc
Author
First Published Oct 27, 2023, 8:43 PM IST

ಬಾಲಿವುಡ್​ನ ಕ್ಯೂಟ್​ ಕಪಲ್​ಗಳಲ್ಲಿ ಒಬ್ಬರು ರಣವೀರ್​ ಸಿಂಗ್​ ಮತ್ತು ದೀಪಿಕಾ ಪಡುಕೋಣೆ. ಈ ಜೋಡಿ ಮದುವೆಯಾಗಿ ಬರುವ ನವೆಂಬರ್​ 14ಕ್ಕೆ ಐದು ವರ್ಷಗಳು ಕಳೆಯಲಿವೆ. 2018ರ ನವೆಂಬರ್​ 14ರಂದು ಜೋಡಿ  ಇಟಲಿಯಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿತು. ಕುತೂಹಲದ ವಿಷಯವೇನೆಂದರೆ, ಮದುವೆಯಾಗಿ ಐದು ವರ್ಷವಾದರೂ ಇವರ ವಿಡಿಯೋ ರಿಲೀಸ್​ ಮಾಡಿರಲಿಲ್ಲ. ಇದೀಗ ಅವರ ಫ್ಯಾನ್ಸ್​ಗೆ ಗುಡ್​ ನ್ಯೂಸ್​ ಕೊಟ್ಟಿರೋ ಜೋಡಿ, ಮದುವೆಯ ವಿಡಿಯೋ ರಿಲೀಸ್​ ಮಾಡಿದೆ. ಅದು ಸೋಷಿಯಲ್​ ಮೀಡಿಯಾದಲ್ಲಿ ಅಲ್ಲ, ಬದಲಿಗೆ  ‘ಕಾಫಿ ವಿತ್ ಕರಣ್ ಸೀಸನ್ 8’ರಲ್ಲಿ! ಕರಣ್ ಜೋಹರ್ ತಮ್ಮ ಸೆಲೆಬ್ರಿಟಿ ಚಾಟ್ ಶೋ 8 ನೇ ಸೀಸನ್‌ನೊಂದಿಗೆ ಮತ್ತೆ ಮರಳಿದ್ದು, ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಮೊದಲ ಬಾರಿಗೆ ಕಾಫಿ ವಿಥ್ ಕರಣ್ ಶೋನಲ್ಲಿ ಭಾಗವಹಿಸಿದ್ದಾರೆ. ಹೊಸ ಸೀಸನ್​​​ನಲ್ಲಿ ಅವರ ಮೊದಲ ಅತಿಥಿಗಳು ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ.

ಈ ಜೋಡಿ ಕೆಲವೊಂದು ಇಂಟರೆಸ್ಟಿಂಗ್​ ವಿಷಯಗಳನ್ನು ಶೇರ್​ ಮಾಡಿಕೊಂಡಿದೆ. ಆದರೆ ಕುತೂಹಲದ ಘಟ್ಟದಲ್ಲಿ ಪತಿ ರಣವೀರ್​ ಎದುರೇ ಪ್ರಿಯಾಂಕಾ ಪರಪುರುಷರ ಬಗ್ಗೆ ಡೇಟಿಂಗ್​ ಕುರಿತು ಮಾತನಾಡಿದ್ದು, ಅದು ರಣವೀರ್​ ಕೋಪಕ್ಕೆ ಕಾರಣವಾಗಿದೆ. ಹೌದು! ಆಗಿದ್ದೇನೆಂದರೆ, ‘ಇಬ್ಬರೂ ರಿಲೇಶನ್​ಶಿಪ್​ನಲ್ಲಿ ಇದ್ದೀರಿ ಎಂದು ಯಾವಾಗ ಗೊತ್ತಾಯಿತು’ ಎಂದು ಜೋಡಿಗೆ ಕರಣ್ ಜೋಹರ್​ ಕೇಳಿದ್ರು. ಇದಕ್ಕೆ ದೀಪಿಕಾ ಉತ್ತರಿಸಿದ್ದಾರೆ. ‘ಕೆಲವು ಕಾಂಪ್ಲಿಕೇಟೆಡ್​ ರಿಲೇಶನ್​ಷಿಪ್​ನಿಂದ ಆಗತಾನೇ ಹೊರಬಂದಿದ್ದೆ. ಹಾಗಾಗಿ ಯಾರ ಉಸಾಬರಿಯೂ ಬೇಡ ಅನ್ನಿಸಿತ್ತು.  ಸಿಂಗಲ್ ಆಗಿರೋಕೆ ಇಷ್ಟವಾಗಿತ್ತು.  ಆ ಸಮಯದಲ್ಲಿ ರಣವೀರ್ ಸಿಕ್ಕರು.  ನಮ್ಮಿಬ್ಬರ ಮಧ್ಯೆ ನಿಜವಾದ ಕಮಿಟ್​ಮೆಂಟ್ ಇರ್ಲೇ ಇಲ್ಲ. ಅದಾಗಲೇ ಹಲವಾರು ಪುರುಷರ ಜೊತೆ ಹೋಗಿದ್ದೆ.  ಸಾಕಷ್ಟು ಜನರನ್ನು ಭೇಟಿ ಮಾಡುತ್ತಿದ್ದೆ. ಆದರೆ, ರಣವೀರ್ ಸಿಂಗ್​ ಅಷ್ಟು ಎಗ್ಸೈಟಿಂಗ್ ಎಂದು ಯಾರೂ ಅನಿಸಲಿಲ್ಲ. ರಣವೀರ್ ಪ್ರಪೋಸ್ ಮಾಡುವವರೆಗೂ ನಮ್ಮ ಮಧ್ಯೆ ಕಮಿಟ್​ಮೆಂಟ್ ಇರಲಿಲ್ಲ’ ಎಂದರು.

ನನ್ನ ನೋಡಿ ದೀಪಿಕಾ ಅಮ್ಮಾ ಛೇ ಯಾರಿವ್ನು ಅಂದಿದ್ರು: ಮದ್ವೆ ವಿಡಿಯೋ ರಿಲೀಸ್​ ಮಾಡಿ ರಣವೀರ್​ ಮಾತು!
 
ಇಷ್ಟೇ ಅಲ್ಲದೇ, ‘ನಾನು ಇತರರನ್ನು ಭೇಟಿ ಮಾಡುತ್ತಿದ್ದೆ ಮತ್ತೆ ಮರಳಿ ರಣವೀರ್ ಬಳಿ ಬರುತ್ತಿದ್ದೆ ಎಂದರು. ಇದನ್ನು ಕೇಳಿ ರಣವೀರ್​ ಕಿಡಿಕಿಡಿಯಾದರು. ಪತ್ನಿಗೆ ಬುದ್ಧಿ ಕಲಿಸಲು ಪ್ರಶ್ನೆಯೊಂದಕ್ಕೆ ನಾನು ಮೂರು ಜನರನ್ನು ಭೇಟಿಯಾಗಿ ಬರುತ್ತಿದ್ದೆ  ಎಂದರು. ಆಗ ದೀಪಿಕಾ ಯಾರು ಅವರು ಎಂದು ಅಚ್ಚರಿಯಿಂದ ಕೇಳಿದಾಗ, ರಣವೀರ್​,  ‘ನಾನು ಇತರರನ್ನು ಭೇಟಿ ಮಾಡುತ್ತಿದ್ದೆ ಮತ್ತೆ ಮರಳಿ ರಣವೀರ್ ಬಳಿ ಬರುತ್ತಿದೆ ಎಂದು ಈಗತಾನೇ ನೀನು ಹೇಳಿದೆ. ಈಗ ಅದು ನೆನಪಿಲ್ಲವೇ? ನನ್ನನ್ನೇ ಪ್ರಶ್ನೆ  ಮಾಡ್ತಿಯಾ ಎಂದರು. ತಾವು ಹೇಳಿದ್ದು ನೆನಪೇ ಇಲ್ಲ ಎಂದರು ಪ್ರಿಯಾಂಕಾ. ಆಗ ರಣವೀರ್​ ನನಗೆ ಚೆನ್ನಾಗಿ ನೆನಪಿದೆ ಎಂದು ಕಿಡಿಕಿಡಿಯಾಗುತ್ತಲೇ ಹೇಳಿದ್ರು.
 
 ಅಷ್ಟಕ್ಕೂ ರಣವೀರ್ ಸಿಂಗ್ ಅವರು ದೀಪಿಕಾನ ಭೇಟಿ ಮಾಡಿದ್ದು 2012ರಲ್ಲಿ. ಸಂಜಯ್ ಬನ್ಸಾಲಿ ನಿರ್ದೇಶನದ ‘ರಾಮ್​ಲೀಲಾ’ ಚಿತ್ರದಲ್ಲಿ ರಣವೀರ್ ಸಿಂಗ್​ಗೆ ಜೊತೆಯಾಗಿ ಕರೀನಾ ಕಪೂರ್ ಅವರು ನಟಿಸಬೇಕಿತ್ತು. ಆದರೆ, ಕಾರಣಾಂತರಗಳಿಂದ ಕರೀನಾ ಸಿನಿಮಾದಿಂದ ಹೊರ ನಡೆದರು. ಆಗ, ದೀಪಿಕಾ ಹೆಸರನ್ನು ಫೈನಲ್ ಮಾಡಲಾಯಿತು. 2012ರಿಂದಲೇ ಇಬ್ಬರೂ ಡೇಟಿಂಗ್ ಶುರು ಹಚ್ಚಿಕೊಂಡಿದ್ದರು. ರಣವೀರ್ ಸಿಂಗ್ ಅವರು ಗಂಭೀರವಾಗಿ ಪ್ರೀತಿಯಲ್ಲಿದ್ದರು. ಆದರೆ, ದೀಪಿಕಾ ಆ ರೀತಿ ಇರಲಿಲ್ಲ ಎನ್ನಲಾಗಿದೆ. ‘ರಾಮ್ ಲೀಲಾ’ ರಿಲೀಸ್ ಆದ ಬಳಿಕ ರಣವೀರ್ ಸಿಂಗ್ ಅವರು ದೀಪಿಕಾಗೆ ಪ್ರಪೋಸ್ ಮಾಡಿದ್ದರು. ದ್ವೀಪ ಒಂದಕ್ಕೆ ಕರೆದುಕೊಂಡು ಹೋಗಿ ರಿಂಗ್ ನೀಡಿ ರಣವೀರ್ ಮದುವೆ ಪ್ರಪೋಸಲ್ ಇಟ್ಟಿದ್ದರು. ನಂತರ ಮನೆಯವರನ್ನು ಒಪ್ಪಿಸಿ ಇವರು ಮದುವೆ ಆದರು. ದೂರದ ಇಟಲಿಯಲ್ಲಿ ಈ ಜೋಡಿ ಮದುವೆ ಆಯಿತು.

ಜವಾನ್ ಜೋಡಿ ಶಾರುಖ್​- ದೀಪಿಕಾಗೆ ಮಗು ಹುಟ್ಟಿಸಿದ ಫ್ಯಾನ್ಸ್​! ನಾಮಕರಣವನ್ನೂ ಮಾಡಿದ್ದಾರೆ ನೋಡಿ

Follow Us:
Download App:
  • android
  • ios