Asianet Suvarna News Asianet Suvarna News

ಹೈ ಹೀಲ್ಸ್​, ಟೈಟ್​ ಡ್ರೆಸ್​ ಧರಿಸಿ ಬಂದ ಗರ್ಭಿಣಿ ದೀಪಿಕಾ! ಮತ್ತೊಂದು ಜೋಕರ್​ ಹುಟ್ಟಿಸ್ಬೇಡಮ್ಮಾ ಅಂದ ಫ್ಯಾನ್ಸ್​...

ಹೈ ಹೀಲ್ಸ್​, ಟೈಟ್​ ಡ್ರೆಸ್​ ಧರಿಸಿ ಬಂದ ಗರ್ಭಿಣಿ ದೀಪಿಕಾ! ಚಿತ್ರದ ಪ್ರಮೋಷನ್​ಗೆ ಎಲ್ಲಾ ಓಕೆ, ಇದೆಲ್ಲಾ ಯಾಕೆ ಅಂದ ನಡುವೆಯೇ ನೆಟ್ಟಿಗರು ನಟಿಯ ಕಾಲು ಕೂಡ ಎಳೆದಿದ್ದಾರೆ! 
 

Deepika Padukone  busy with the promotions of her Kalki 2898 AD being trolled suc
Author
First Published Jun 20, 2024, 9:02 AM IST

ಸದ್ಯ ಪಠಾಣ್​ ಬೆಡಗಿ, ಕನ್ನಡತಿ ದೀಪಿಕಾ ಪಡುಕೋಣೆ ಅಮ್ಮ ಆಗುತ್ತಿದ್ದಾರೆ. ಬರುವ ಸೆಪ್ಟೆಂಬರ್​ನಲ್ಲಿ  ಮಗು ಜನಿಸಲಿದೆ ಎಂದು ನಟಿ ಖುದ್ದು ಈ ಹಿಂದೆ ಹೇಳಿದ್ದರು. ಅಂದರೆ ನಟಿಗೆ ಆರು ತಿಂಗಳು. ಕೆಲ ತಿಂಗಳ ಹಿಂದೆ  ಈಕೆಗೆ ಇನ್ನೂ ಬೇಬಿ ಬಂಪ್​  ಕಾಣಿಸುತ್ತಿಲ್ಲ. ಆದ್ದರಿಂದ  ದೀಪಿಕಾ ಪಡುಕೋಣೆ ಗರ್ಭಿಣಿ ಅಲ್ಲವೇ ಅಲ್ಲ ಎನ್ನುವ ಸುದ್ದಿ ಭಾರಿ ಸದ್ದು ಮಾಡಿತ್ತು. ಬಾಡಿಗೆ ತಾಯ್ತನದ ಮೂಲಕ ಮಗು ಪಡೆದುಕೊಳ್ಳಲಿದ್ದಾರೆ ಎನ್ನಲಾಗಿತ್ತು. ಸಾಲದು ಎನ್ನುವುದಕ್ಕೆ ಅವರು ಶೂಟಿಂಗ್‌ನಲ್ಲಿ ಫುಲ್‌ ಬಿಜಿ ಇದ್ದರು.  ಗರ್ಭಿಣಿ ಈ ರೀತಿ ಶೂಟಿಂಗ್‌ನಲ್ಲಿ ಬಿಜಿಯಾಗುವುದು ಕಷ್ಟ ಎನ್ನುವುದು ನೆಟ್ಟಿಗರ ವಾರವಾಗಿತ್ತು. ಅದೇನೇ ಇದ್ದರೂ ನಟಿ ಈಗ ಗರ್ಭಿಣಿ ನಿಜ ಎನ್ನುವುದು ಸಾಬೀತಾಗಿದೆ. ದೀಪಿಕಾ ಅವರು, ಪ್ರಭಾಸ್​ ಜೊತೆ ನಟಿಸಿರುವ  ಕಲ್ಕಿ 2898  ಚಿತ್ರದ ಪ್ರೀ-ರಿಲೀಸ್ ಈವೆಂಟ್ ನಿನ್ನೆ  ಮುಂಬೈನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ದೀಪಿಕಾ ಬೇಬಿ ಬಂಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ  ಅಮಿತಾಭ್​ ಬಚ್ಚನ್, ಕಮಲ್‌ ಹಾಸನ್‌ ಕೂಡ ಬಂದಿದ್ದರು.
 
ದೀಪಿಕಾ ಪಡುಕೋಣೆ ಧರಿಸಿರುವ ಹೈಹೀಲ್ಸ್​ ಮತ್ತು ಟೈಟ್​ ಡ್ರೆಸ್​ ಮೇಲೆ ನೆಟ್ಟಿಗರ ಕಣ್ಣು ಹೋಗಿದೆ. ಗರ್ಭಿಣಿಯಾದವರು ಈ ರೀತಿ ಮಾಡುವುದು ಸರಿಯಲ್ಲ ಎನ್ನುವುದು ಹಲವರು ಹೇಳುತ್ತಿದ್ದಾರೆ. ಅಷ್ಟಕ್ಕೂ ಗರ್ಭಿಣಿಯರು ಹೈ ಹೀಲ್ಸ್​ ಧರಿಸಲೇಬಾರದು ಎಂದು ವೈದ್ಯರು ಎಚ್ಚರಿಕೆ ಕೊಡುತ್ತಲೇ ಇರುತ್ತಾರೆ. ಆದರೂ ನಟಿ ಸಿಕ್ಕಾಪಟ್ಟೆ ಹೈ ಹೀಲ್ಸ್​ ಧರಿಸಿ ಬಂದಿದ್ದಾರೆ. ಇದರಿಂದ ನಟಿಗೆ ಬುದ್ಧಿಮಾತು ಹೇಳುತ್ತಿದ್ದಾರೆ ಅಭಿಮಾನಿಗಳು. ಆರು ತಿಂಗಳು ಗರ್ಭಿಣಿಯಾದರೂ ಚಿತ್ರದ ಪ್ರೊಮೋಷನ್​ಗೆ ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ ಮತ್ತೆ ಕೆಲವರು. ಅದರೆ ಇದೇ ವೇಳೆ ನಿನ್ನ ಪತಿ ರಣವೀರ್​ ಸಿಂಗ್​ನಂಥ ಜೋಕರ್​ ಅನ್ನು ಮಾತ್ರ ಹುಟ್ಟಿಸ್ಬೇಡಮ್ಮಾ ಎಂದು ಕೆಲವರು ನಟಿಯ ಕಾಲೆಳೆಯುತ್ತಿದ್ದಾರೆ. ಏಕೆಂದರೆ ರಣವೀರ್​ ಸಿಂಗ್​ ಅವರನ್ನು ಹಲವರು ಜೋಕರ್​ ಎಂದೇ ಕರೆಯುತ್ತಾರೆ. ಅದಕ್ಕಾಗಿ ನಟಿಗೆ ಒಳ್ಳೆಯ ಮಗುವನ್ನು ಹುಟ್ಟಿಸು ಎನ್ನುತ್ತಿದ್ದಾರೆ. 

10 ವರ್ಷಗಳಲ್ಲಿ ಅತಿ ಹೆಚ್ಚು ವೀಕ್ಷಣೆಗೊಳಗಾದ ಸೆಲೆಬ್ರಿಟಿ ದೀಪಿಕಾ: ಏಕೈಕ ಸ್ಯಾಂಡಲ್​ವುಡ್​ ಸ್ಟಾರ್​ ಯಶ್​ಗೆ ಎಷ್ಟನೇ ಸ್ಥಾನ?

 ನಾಗ್ ಅಶ್ವಿನ್ ನಿರ್ದೇಶಿಸಿದ ಮತ್ತು ಸಿ.ಅಶ್ವಿನಿ ದತ್ ನಿರ್ಮಿಸಿದ ಕಲ್ಕಿ 2898 AD ಎಂಬ ವೈಜ್ಞಾನಿಕ ಕಾದಂಬರಿ ಆಧರಿತ ಕೂಡ ಇದೆ.  ಈ ಚಿತ್ರದಲ್ಲಿ ಪ್ರಭಾಸ್ ಮತ್ತು ದಿಶಾ ಪಟಾನಿ ಜೊತೆಗೆ ಹಿರಿಯ ನಟರಾದ ಅಮಿತಾಭ್ ಬಚ್ಚನ್ ಮತ್ತು ಕಮಲ್ ಹಾಸನ್ ಸೇರಿದಂತೆ ದೊಡ್ಡ ತಾರಾಗಣವಿದೆ.  ಚಿತ್ರ ತಂಡವು ನಟಿಯ ಗರ್ಭಧಾರಣೆಯನ್ನು ಪರಿಗಣಿಸಿ, ಮುಂದಿನ ಶೂಟಿಂಗ್‌ ಅನ್ನು ವೆಲ್‌ ಪ್ಲಾನ್ಡ್‌ ಆಗಿ ಯೋಜಿಸಿದ್ದಾರೆ. ಅವರು ನಿರ್ಮಾಪಕರ ಜೊತೆ ಚರ್ಚೆ ಮಾಡಿ, ಮೇ ಅಂತ್ಯದೊಳಗೆ ಪ್ರಚಾರದ ವಿಡಿಯೋ ಸಂದರ್ಶನಗಳನ್ನು ಪೂರ್ಣಗೊಳಿಸುವಂತೆ ನಟಿ ವಿನಂತಿಸಿಕೊಂಡಿದ್ದರು. ಇದೀಗ ಚಿತ್ರದ ಪ್ರೊಮೋಷನ್​ ವೇಳೆ ಭಾಗಿಯಾಗಿದ್ದು, ಸಕತ್​ ಎಂಜಾಯ್​ ಮಾಡಿದ್ದಾರೆ ನಟಿ. 

ಇದೇ ವೇಳೆ,  ಕಲ್ಕಿ ಚಿತ್ರಕ್ಕಾಗಿ ದೀಪಿಕಾ  20 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.  ಸಾಮಾನ್ಯವಾಗಿ ಒಂದು ಚಿತ್ರಕ್ಕೆ ದೀಪಿಕಾ 15 ರಿಂದ 30 ಕೋಟಿ ರೂಪಾಯಿಗೆ ಸಂಭಾವನೆ ಪಡೆಯುತ್ತಾರೆ.   ‘ಪಠಾಣ್’ ಮತ್ತು ಜವಾನ್​ ಸಿನಿಮಾಗಳು ಬ್ಲಾಕ್ ಬಸ್ಟರ್ ಆದ ಮೇಲೆ ಅವರು ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರಂತೆ! ಇದಲ್ಲದೇ ಹಲವಾರು ಕಂಪೆನಿಗಳಲ್ಲಿ ನಟಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದ್ದಾರೆ. 
 
ಸೊಂಟದಿಂದ ನಿರ್ದೇಶಕರನ್ನು ಸುಸ್ತು ಮಾಡಿದ್ರಂತೆ ಮಂದಿರಾ ಬೇಡಿ! DDLJ ಕಥೆ ಹೇಳಿದ ನಟಿ

 

Latest Videos
Follow Us:
Download App:
  • android
  • ios