Asianet Suvarna News Asianet Suvarna News

ಸೀರೆಯಲ್ಲಿ ಬೇಬಿ ಬಂಪ್ ತೋರಿಸಿದ ದೀಪಿಕಾ ಪಡುಕೋಣೆ, ನೋಡಿ ಬ್ಯೂಟಿಫುಲ್ ಗಿಫ್ಟ್ ಎಂದ ರಣವೀರ್!

ಬೆಂಗಳೂರಿನ ಬೆಡಗಿ ದೀಪಿಕಾ ಯಾವ ಡ್ರೆಸ್ ಧರಿಸಿದ್ರೂ ಸುಂದರವಾಗಿ ಕಾಣ್ತಾರೆ. ಇದ್ರಲ್ಲಿ ಎರಡು ಮಾತಿಲ್ಲ. ಆದ್ರೆ ಈ ಬಾರಿ ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಬೇಬಿ ಬಂಪ್ ತೋರಿಸುವ ಮೂಲಕ ಅಭಿಮಾನಿಗಳ ಖುಷಿ ಡಬಲ್ ಮಾಡಿದ್ದಾರೆ.
 

Deepika Padukone At Anant Radhika Sangeet Flaunts Baby Bump In Purple Saree roo
Author
First Published Jul 6, 2024, 11:42 AM IST

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಶೀಘ್ರದಲ್ಲೇ ತಾಯಿಯಾಗಲಿದ್ದಾರೆ. ಅವರು ಮಾತ್ರವಲ್ಲ ಅವರ ಅಭಿಮಾನಿಗಳು ಕೂಡ ದೀಪಿ ಮಗುವಿಗಾಗಿ ಕಾತುರದಿಂದ ಕಾಯ್ತಿದ್ದಾರೆ. ಕಾಲಿ 2898 AD ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ದೀಪಿಕಾ ನಿನ್ನೆ ರಾತ್ರಿ ಪಾರ್ಟಿ ಮೂಡ್ ನಲ್ಲಿದ್ರು. ಪಾರ್ಟಿಗೆ ಮಾಡರ್ನ್ ಡ್ರೆಸ್ ಧರಿಸಿ ಬರುವ ಬದಲು ಟ್ರೆಡಿಷನಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಅಮ್ಮನಾಗ್ತಿರುವ ದೀಪಿಕಾ ಪಡುಕೋಣೆ ಸೀರೆಯುಟ್ಟು ತಮ್ಮ ಬೇಬಿ ಬಂಪ್ ಕಾಣಿಸಿದ್ದಾರೆ. ಇದು ಬರ್ತ್ ಡೇ ಗಿಫ್ಟ್ ಅಂತ ಪತಿ ರಣವೀರ್  ಸಿಂಗ್  ಕಮೆಂಟ್ ಮಾಡಿದ್ದಾರೆ. 

ನಿನ್ನೆ ರಾತ್ರಿ ದೀಪಿಕಾ ಪಡುಕೋಣೆ (Deepika Padukone) , ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಸಂಗೀತ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ಸಮಯದಲ್ಲಿ ಡಿಂಪಲ್ ಬೆಡಗಿ ನೇರಳೆ ಬಣ್ಣದ ಸೀರೆ (Saree) ಉಟ್ಟಿದ್ದರು. ಸೀರೆಯಲ್ಲಿ ಮಹಿಳೆ ಅಂದ ಹೆಚ್ಚಾಗುತ್ತೆ. ಅದ್ರಲ್ಲೂ ಗರ್ಭಿಣಿ ದೀಪಿಕಾ ಸೌಂದರ್ಯ (Beauty)  ಡಬಲ್ ಆಗಿತ್ತು. ಮುದ್ದಾಗಿ ಕಾಣ್ತಿದ್ದ ದೀಪಿಕಾ ನೋಡೋಕೆ ಎರಡು ಕಣ್ಣು ಸಾಲ್ತಿರಲಿಲ್ಲ. 

ಕರ್ನಾಟಕವೇ ಬೆಚ್ಚಿ ಬೀಳಿಸುವ ಸುದ್ದಿ ಓದಿದವಳಿಗೆ ಶೋಕಿಯೇ ಮುಳುವಾಯಿತಾ?

ನಟ ಹಾಗೂ ಪತಿ ರಣವೀರ್  ಸಿಂಗ್  ಅವರೊಂದಿಗೆ ದೀಪಿಕಾ ಸಂಗೀತ ಸಮಾರಂಭಕ್ಕೆ ಆಗಮಿಸಿದ್ದರು. ದೀಪಿಕಾ ರೇಷ್ಮೆ ಶಿಫಾನ್ ಸೀರೆಯಲ್ಲಿರುವ ಚಿನ್ನದ ಕಸೂತಿ ಲುಕ್ ಹೆಚ್ಚಿಸಿದೆ. ಲೈಟಾಗಿ ಮೇಕಪ್ ಮಾಡಿದ್ದ ದೀಪಿಕಾ ಕುತ್ತಿಗೆಗೆ ಪರ್ಲ್ ಚೋಕರ್ ಧರಿಸಿದ್ದರು. 

ಸಂಗೀತ ಕಾರ್ಯಕ್ರಮಕ್ಕೆ ಬಂದಿದ್ದ ದೀಪಿಕಾ ಮಾಧ್ಯಮಗಳ ಕಣ್ಣಿನಿಂದ ತಪ್ಪಿಸಿಕೊಂಡಿದ್ದಾರೆ. ಅವರು ಮಾಧ್ಯಮಗಳ ಮುಂದೆ ಫೋಸ್ ನೀಡಿಲ್ಲ. ಆದ್ರೆ ಪಾರ್ಟಿಯ ತಮ್ಮ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ದೀಪಿಕಾ ಪಡುಕೋಣೆ ಒಂದು ಫೋಟೋದಲ್ಲಿ ನಿಂತು ಬೇಬಿ ಬಂಪ್ ಕಾಣಿಸಿದ್ರೆ ಇನ್ನೊಂದರಲ್ಲಿ ಕುಳಿತುಕೊಂಡಿದ್ದಾರೆ. 

ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಹಂಚಿಕೊಂಡಿರುವ ಅವರು, ಇದು ಶುಕ್ರವಾರ ರಾತ್ರಿ ಮತ್ತು ಪಾರ್ಟಿ ಮಾಡಲು ಬಯಸಿದೆ ಎಂದು ಶೀರ್ಷಿಕೆ ಹಾಕಿದ್ದಾರೆ. ದೀಪಿಕಾ ಪಡುಕೋಣೆ ಈ ಫೋಟೋಕ್ಕೆ 17 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಒತ್ತಿದ್ದಾರೆ. ಸಾವಿರಾರು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಅದ್ರಲ್ಲಿ ಪತಿ ರಣವೀರ್  ಸಿಂಗ್  ಸೇರಿದ್ದಾರೆ. ಫೋಟೋಕ್ಕೆ ಹೇ, ಇದು ನನ್ನ ಹುಟ್ಟುಹಬ್ಬಕ್ಕೆ ಸುಂದರವಾದ ಗಿಫ್ಟ್. ಐ ಲವ್ ಯೂ ಎಂದು ಕಮೆಂಟ್ ಮಾಡಿದ್ದಾರೆ. ಸಾರಿಯಲ್ಲಿ ದೀಪಿಕಾ ರಾಯಲ್ ಆಗಿ ಕಾಣ್ತಾರೆಂದು ಅನೇಕ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.

ಗರ್ಲ್‌ಫ್ರೆಂಡ್‌ ಜೊತೆ ಚಕ್ಕಂದವಾಡಿ ಎಸ್ಕೇಪ್‌ ಆದ ಪ್ರಖ್ಯಾತ ನಟ, ದೂರು ದಾಖಲಿಸಿದ ಪ್ರೇಯಸಿ!

ದೀಪಿಕಾ ಬೇಬಿ ಬಂಪ್ ಬಗ್ಗೆಯೂ ಇಲ್ಲಿ ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ದೀಪಿಕಾ ಗರ್ಭಿಣಿ ಅಲ್ಲ ಎನ್ನುವ ಮಾತುಗಳು ಕೇಳಿ ಬರ್ತಿವೆ. ಆದ್ರೆ ದೀಪಿಕಾ ಲುಕ್ ನೋಡಿದ್ರೆ ಅವರು ಗರ್ಭಿಣಿ ಎನ್ನುವುದು ಸ್ಪಷ್ಟವಾಗ್ತಿದೆ. ಸೆಲೆಬ್ರಿಟಿಗಳು ಸಾಮಾನ್ಯವಾಗಿ ತಜ್ಞರು, ಪೌಷ್ಟಿಕತಜ್ಞರು ಮತ್ತು ಆಹಾರ ತಜ್ಞರ ಸಹಾಯದಿಂದ ಕ್ಯಾಲೊರಿ ಸೇವನೆಗೆ ಆದ್ಯತೆ ನೀಡ್ತಾರೆ. ಹಾಗೆಯೇ ಗರ್ಭಧಾರಣೆಗೆ ಸೂಕ್ತವಾದ ಯೋಗ ಮತ್ತು ದೈಹಿಕ ತಾಲೀಮು ತರಬೇತುದಾರರನ್ನು ನೇಮಿಸಿಕೊಂಡಿರುತ್ತಾರೆ. ದೀಪಿಕಾ ಕೊನೆಯ ಫೋಟೋವನ್ನು ಹತ್ತಿರದಿಂದ ನೋಡಿದಾಗ ಅವರ ಬೆನ್ನಿನ ಮೇಲೆ ತೂಕ ಹೆಚ್ಚಾಗುವುದನ್ನು ನೀವು ನೋಡಬಹುದು. ಯಾವುದೇ ಸೆಲೆಬ್ರಿಟಿ ತಮ್ಮ ಫೋಟೋವನ್ನು ಇದ್ದ ಹಾಗೆ ಪೋಸ್ಟ್ ಮಾಡೋದಿಲ್ಲ. ಫೋಟೋಗಳನ್ನು ಎಡಿಟ್ ಮಾಡಲು ತಂಡವೊಂದನ್ನು ಇಟ್ಟುಕೊಂಡಿರ್ತಾರೆ. ಅದ್ರಲ್ಲಿ ಅವರ ಚರ್ಮ, ತೂಕ ಎಲ್ಲವನ್ನೂ ಸರಿಪಡಿಸಿ, ಫೋಟೋ ಸುಂದರವಾಗಿ ಬರುವಂತೆ ಮಾಡಲಾಗುತ್ತದೆ. ಫೋಟೋ ನೋಡಿ ದೀಪಿಕಾ ಗರ್ಭಿಣಿ ಅಲ್ಲ ಎನ್ನುವುದು ತಪ್ಪು ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ. 

ದೀಪಿಕಾ ಪಡುಕೋಣೆ ಸೆಪ್ಟೆಂಬರ್ ನಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ. ಅವರು ಅಭಿನಯದ ಕಾಲಿ 2898 AD ಚಿತ್ರ ಥಿಯೇಟರ್‌ ನಲ್ಲಿ ಅಬ್ಬರಿಸುತ್ತಿದೆ. ಈ ಚಿತ್ರದ ಕೊನೆಯ ದೃಶ್ಯಗಳನ್ನು ಶೂಟ್ ಮಾಡುವಾಗ ಅವರು ಗರ್ಭಿಣಿಯಾಗಿದ್ದರು ಎನ್ನುವ ಸುದ್ದಿ ಇದೆ. 

Latest Videos
Follow Us:
Download App:
  • android
  • ios