Asianet Suvarna News Asianet Suvarna News

ಗರ್ಲ್‌ಫ್ರೆಂಡ್‌ ಜೊತೆ ಚಕ್ಕಂದವಾಡಿ ಎಸ್ಕೇಪ್‌ ಆದ ಪ್ರಖ್ಯಾತ ನಟ, ದೂರು ದಾಖಲಿಸಿದ ಪ್ರೇಯಸಿ!

Raj Tarun vs Lavanya 11 ವರ್ಷಗಳ ಕಾಲ ಗರ್ಲ್‌ಫ್ರೆಂಡ್‌ ಜೊತೆ ಚಕ್ಕಂದವಾಡಿದ್ದ ತೆಲುಗಿನ ಪ್ರಖ್ಯಾತ ನಟ, ಇತ್ತೀಚೆಗೆ ಆಕೆಯನ್ನು ತೊರೆದು ಇನ್ನೊಂದು ನಟಿಯ ಸಖ್ಯ ಬೆಳೆಸಿದ್ದಾನೆ. ಇದರ ಬೆನ್ನಲ್ಲಿಯೇ ನಟನ ಗೆಳತಿ ಲಾವಣ್ಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

Actor Raj Tarun Live In Girlfriend Accuses Him Of Cheating san
Author
First Published Jul 5, 2024, 10:12 PM IST

ಹೈದರಾಬಾದ್‌ (ಜು.5): ತೆಲುಗಿನಲ್ಲಿ ಸಾಕಷ್ಟು ಸೂಪರ್‌ಹಿಟ್‌ ಸಿನಿಮಾಗಳನ್ನು ನೀಡಿರುವ ಪ್ರಖ್ಯಾತ ನಟ ರಾಜ್‌ ತರುಣ್‌ ವಿರುದ್ಧ ಪೊಲೀಸ್‌ ದೂರು ದಾಖಲಾಗಿದೆ. ನಾಗಾರ್ಜುನ ಅಕ್ಕಿನೇನಿ ನಟಿಸಿದ್ದ ನಾ ಸಾಮ ರಂಗಾ ಸಿನಿಮಾದ ಮೂಲಕ ಜನಪ್ರಿಯತೆಯ ಉತ್ತುಂಗಕ್ಕೇರಿದ್ದ ರಾಜ್‌ ತರುಣ್‌ ವಿರುದ್ಧ ಲಿವ್‌ ಇನ್‌ ಪಾರ್ಟ್‌ನರ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ರಾಜ್‌ ತರುಣ್‌ ಅವರ ಗರ್ಲ್‌ಫ್ರೆಂಡ್‌ ಲಾವಣ್ಯ, ನಟನ ವಿರುದ್ಧ ದಾಂಪತ್ಯ ದ್ರೋಹದ ಆರೋಪ ಮಾಡಿದ್ದು, ಇನ್ನೊಂದು ನಟಿಯ ಜೊತೆ ಈತ ಅಫೇರ್‌ ಹೊಂದಿದ್ದು, ಇದಕ್ಕಾಗಿ ನನನಗೆ ಮೋಸ ಮಾಡುತ್ತಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮೂಲಗಳ ಪ್ರಕಾರ, ಲಾವಣ್ಯ  ನರಸಿಂಗಿ ಪೊಲೀಸ್ ಠಾಣೆಯಲ್ಲಿ ಔಪಚಾರಿಕವಾಗಿ ದೂರು ದಾಖಲಿಸಿದ್ದಾರೆ, ರಾಜ್ ತರುಣ್ ತನ್ನ ನಂಬಿಕೆಗೆ ದ್ರೋಹ ಮಾಡಿದ್ದಾನೆ. ಅದಲ್ಲದೆ, ಮದುವೆಯಾಗುವುದಾಗಿ ನಂಬಿಸಿ ನನಗೆ ವಂಚನೆ ಮಾಡಿದ್ದಾರೆ ಎಂದು ದೂರಿದ್ದಾರೆ. 123 ತೆಲುಗು ವರದಿಯ ಪ್ರಕಾರ, ರಾಜ್‌ ತರುಣ್‌ ಹಾಗೂ ಲಾವಣ್ಯ 2012ರಿಂದಲೂ ರಿಲೇಷನ್‌ಷಿಪ್‌ನಲ್ಲಿದ್ದರು. 2014ರಿಂದ ಅವರು ಲಿನ್‌ ಇನ್‌ ರಿಲೇಷನ್‌ಷಿಪ್‌ನಲ್ಲಿದ್ದರು ಎಂದು ವರದಿ ಮಾಡಿದೆ. ಇತ್ತೀಚೆಗೆ ರಾಜ್‌ ತರುಣ್‌ ಮುಂಬೈ ಮೂಲದ ಮಾಳವಿ ಮಲ್ಹೋತ್ರಾ ಜೊತೆ ಹೆಚ್ಚಾಗಿ ತಿರುಗಾಡುತ್ತಿದ್ದು, ಸಾಕಷ್ಟು ಸಮಯದಿಂದ ಇಬ್ಬರ ನಡುವೆ ಅಫೇರ್‌ ಇದೆ ಎಂದು ವರದಿಯಾಗಿದೆ.

ಇನ್ನು ತೆಲುಗು ಸಿನಿಮಾ ವರದಿಯ ಪ್ರಕಾರ, ರಾಜ್‌ ತರುಣ್‌ ಹಾಗೂ ಲಾವಣ್ಯ ದೇವಸ್ಥಾನದಲ್ಲಿ ಗುಟ್ಟಾಗಿ ಮದುವೆ ಕೂಡ ಆಗಿದ್ದರು ಎಂದು ಬಹಿರಂಗಪಡಿಸಿದೆ. ಮದುವೆಯನ್ನು ಕಾನೂನಾತ್ಮಕವಾಗಿ ನೋಂದಣಿ ಮಾಡಿಕೊಳ್ಳವ ಭರವಸೆ ನೀಡಿದ್ದ ರಾಜ್‌ ತರುಣ್‌ ಬಳಿಕ ಅದರಿಂದ ಹಿಂಜರಿದಿದ್ದ ಎಂದು ವರದಯಾಗಿದೆ. ಇತ್ತೀಚೆಗೆ ರಾಜ್‌ ತರುಣ್‌ ತನ್ನ ಸಿನಿಮಾದ ಸಹ ನಟಿಯ ಜೊತೆಗೆ ಪ್ರಣಯ ಸಂಬಂಧದಲ್ಲಿ ತೊಡಗಿಕೊಂಡಿದ್ದಾರೆ ಎನ್ನುವ ಶಂಕೆ ಲಾವಣ್ಯಗೆ ವ್ಯಕ್ತವಾಗಿದೆ.

ಲಾವಣ್ಯ ನೇರವಾಗಿ ತಮ್ಮ ದೂರಿನಲ್ಲಿ ‘ತಿರಗಬಡರಾ ಸಾಮಿ’ ಸಿನಿಮಾದ ನಟಿ ಮಾಳವಿ ಮಲ್ಹೋತ್ರಾ ವಿರುದ್ಧ ಆರೋಪ ಮಾಡಿದ್ದಾರೆ. ರಾಜ್‌ ತರುಣ್‌ ಹಾಗೂ ಮಾಳವಿ ಮಲ್ಹೋತ್ರಾ ‘ತಿರಗಬಡರಾ ಸಾಮಿ’  ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಮಾಳವಿ ಮಲ್ಹೋತ್ರಾ ಅವರ ಸಹೋದರ ಮಯಾಂಕ್‌ ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ. ರಾಜ್‌ ತರುಣ್‌ ಜೀವನದಿಂದ ದೂರ ಹೋಗದೇ ಇದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಸಿದ್ದಾನೆ ಎನ್ನಲಾಗಿದೆ. ಹಿಮಾಚಲ ಪ್ರದೇಶದ ಸಿಎಂ ಆಗಿರುವ ವ್ಯಕ್ತಿ ತಮ್ಮ ತಂದೆಗೆ ಆಪ್ತ ಸ್ನೇಹಿತ. ಮನಸ್ಸು ಮಾಡಿದ್ರೆ ಏನು ಬೇಕಾದ್ರೂ ಮಾಡ್ತೀವಿ ಎಂದು ಮಯಾಂಕ್ ಬರದರಿಕೆ ಹಾಕಿದ್ದಾನೆ.  ಮಾಳವಿ ಟ್ರ್ಯಾಪ್ ನಲ್ಲಿ ಬಿದ್ದು ರಾಜ್ ತರುಣ್ ತನ್ನಿಂದ ದೂರ ಆಗಿದ್ದಾನೆ ಎಂದು ಲಾವಣ್ಯ ಆರೋಪ ಮಾಡಿದ್ದಾರೆ.

ರಾಜ್ ತರುಣ್ ಸದ್ಯ ‘ತಿರಗಬಡರಾ ಸಾಮಿ’ ಸಿನಿಮಾದಲ್ಲಿ ನಟಿಸಿದ್ದು, ಎಎಸ್ ರವಿಕುಮಾರ್ ನಿರ್ದೇಶನ ಮಾಡಿದ್ದಾರೆ. ಮಾಳವಿ, ಮನ್ನಾರಾ ಚೋಪ್ರಾ ಇದರಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ. ‘ಇಯ್ಯಾಲ ಜಂಪಾಲ’ ಸಿನಿಮಾ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದ ರಾಜ್ ತರುಣ್ ನಂತರ ‘ಸಿನಿಮಾ ಚೂಪಿಸ್ತಾ ಮಾವ’, ‘ಕುಮಾರಿ 21ಎಫ್’ ಸಿನಿಮಾ ಮೂಲಕ ಹ್ಯಾಟ್ರಿಕ್ ಗೆಲುವು ಪಡೆದುಕೊಂಡಿದ್ದರು. ಆದರೆ, ಕಳೆದ 8 ವರ್ಷಗಳಿಂದ ಅವರ ಯಾವ ಸಿನಿಮಾಗಳು ಕೂಡ ಟಾಲಿವುಡ್‌ನಲ್ಲಿ ಸದ್ದು ಮಾಡಿಲ್ಲ.

ಎದೆಯುಬ್ಬಿಸಿ ನಿಂತ ಜ್ಯೋತಿ ರೈ, ಹಾಟ್‌ ಬ್ಯೂಟಿ ಬರ್ತ್‌ಡೇ ಲುಕ್‌ಗೆ ಫ್ಯಾನ್ಸ್‌ ಫಿದಾ!

 

ಇನ್ನೊಂದೆಡೆ ಲಾವಣ್ಯ ಅವರ ಆರೋಪಕ್ಕೆ ಸ್ಪಷ್ಟೀಕರಣ ನೀಡಿರುವ ರಾಜ್‌ ತರುಣ್‌, ನಾನು ಹಾಗೂ ಲಾವಣ್ಯ ರಿಲೇಷನ್‌ಷಿಪ್‌ನಲ್ಲಿ ಇದ್ದಿದ್ದು ನಿಜ. ಆದರೆ, 2016-17ರ ನಂತರ ಆಕೆಯೊಂದಿಗೆ ಯಾವುದೇ ದೈಹಿಕ ಸಂಬಂಧ ಹೊಂದಿಲ್ಲ. ಆಕೆಯ ವರ್ತನೆ ಚೆನ್ನಾಗಿಲ್ಲ. ಅದಕ್ಕಾಗಿಯೇ ದೂರವಾಗಿದ್ದೇನೆ. ಇಂಡಸ್ಟ್ರಿಯಲ್ಲಿ ನನ್ನ ಮಾನ ಹೋಗುತ್ತೆ ಅಂತ ಇಷ್ಟು ದಿನ ಸೈಲೆಂಟ್ ಆಗಿದ್ದೆ. ಸಿನಿಮಾಗಳಲ್ಲಿ ಕಷ್ಟಪಟ್ಟು ಈ ಸ್ಥಾನಕ್ಕೆ ಬಂದಿದ್ದೆ. ಆ ಕಾರಣದಿಂದಲೇ ಪ್ರತಿ ವಿಚಾರದಲ್ಲೂ ನನಗೆ ಬೆದರಿಕೆ ಹಾಕುತ್ತಿದ್ದಳು ಆದ್ದರಿಂದ ದೂರ ಉಳಿದೆ ಎಂದು ತಿಳಿಸಿದ್ದಾರೆ.

'ನಿಮ್ಮ ಮಾತಿನಿಂದ ಯಾರಿಗಾದ್ರೂ ನೋಯಿಸಿದ್ದೀರಾ..' ನಿವೇದಿತಾ ಗೌಡ ಈ ಪ್ರಶ್ನೆ ಕೇಳಿದ್ಯಾಕೆ?

ಆಕೆಗೆ ಪ್ರತಿನಿತ್ಯ ಡ್ರಗ್ಸ್‌ ಬೇಕು. ಆಕೆಯನ್ನ ನಿಯಂತ್ರಿಸೋದೆ ಸಾಧ್ಯವಾಗ್ತಿರಲಿಲ್ಲ. ಮಸ್ತಾನ್‌ ಸಾಯಿ ಎನ್ನುವ ವ್ಯಕ್ತಿ ಜೊತೆ ಆಕೆ ಡೇಟಿಂಗ್‌ನಲ್ಲಿದ್ದಾಳೆ. ನನಗೆ ಬ್ಲ್ಯಾಕ್‌ಮೇಲ್‌ ಮಾಡಿ ಸಾಕಷ್ಟು ಹಣವನ್ನು ಲಪಟಾಯಿಸಿದ್ದಾಳೆ. ನನಗೆ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಬೆನ್ನಲ್ಲಿಯೇ ಆಕೆಗೆ ನನ್ನ ಫ್ಲ್ಯಾಟ್‌ಅನ್ನು ಖಾಲಿ ಮಾಡಲು ಹೇಳಿದ್ದೆ.  ಡ್ರಗ್ಸ್‌ ಕೇಸ್‌ನಲ್ಲಿ ಹಿಂದೆ ಆಕೆ ಬಂಧನ ಕೂಡ ಆಗಿದ್ದಳು. ಮಾಧ್ಯಮಗಳು ನನಗೆ ಬೆಂಬಲ ನೀಡಬೇಕು ಎಂದು ರಾಜ್‌ ತರುಣ್‌ ಹೇಳಿದ್ದಾರೆ.

Latest Videos
Follow Us:
Download App:
  • android
  • ios