ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ ಜಗಳವಾಡಿದಾಗ ಏನು ಮಾಡ್ತಾರೆ? ನಟ ವಿಕ್ಕಿ ಕೌಶಲ್​ ಈ ಸೀಕ್ರೇಟ್​ ರಿವೀಲ್​  ಮಾಡಿದ್ದಾರೆ. 

ಬಾಲಿವುಡ್‌ನಲ್ಲಿ ಸಕತ್‌ ಹಿಟ್‌ ಚಿತ್ರಗಳನ್ನು ನೀಡುತ್ತಾ, ಇದೀಗ ಸಾಂಸಾರಿಕ ಜೀವನ ಸಾಗಿಸುತ್ತಿರುವ ನಟಿಯರಲ್ಲಿ ಒಬ್ಬರು ಕತ್ರಿನಾ ಕೈಫ್‌. ನಿನ್ನೆ ಅಂದರೆ ಜುಲೈ 16 ಕತ್ರಿನಾ ತಮ್ಮ 41 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. 'ಮೆರ್ರಿ ಕ್ರಿಸ್‌ಮಸ್' ನಂತರ ಕತ್ರಿನಾ ಕೈಫ್ ಯಾವುದೇ ಹೊಸ ಸಿನಿಮಾವನ್ನು ಘೋಷಿಸಿಲ್ಲ. ನಟಿ ಗರ್ಭಿಣಿಯಾಗಿದ್ದು, ಅದಕ್ಕಾಗಿಯೇ ಅವರು ಚಿತ್ರಗಳಿಗೆ ಗ್ಯಾಪ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ. ಆದರೆ ವಿಕ್ಕಿ ಕೌಶಲ್​ ಅವರು ಇದೇ 19ರಂದು ಬಿಡುಗಡೆಯಾಗಲಿರುವ ಬ್ಯಾಡ್​ ನ್ಯೂಸ್​ (Bad Newz)ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಇದರ ಪ್ರಮೋಷನ್​ ಸಕತ್​ ಜೋರಾಗಿ ನಡೆಯುತ್ತಿದೆ. ಈ ಚಿತ್ರದಲ್ಲಿ ಬೆತ್ತಲೆ ರಾಣಿ ಎಂದೇ ಫೇಮಸ್​ ಆಗಿರುವ ಅನಿಮಲ್​ ನಟಿ ತೃಪ್ತಿ ಡಿಮ್ರಿ ಜೊತೆ ತೆರೆ ಹಂಚಿಕೊಂಡಿರುವ ವಿಕ್ಕಿ, ಇಲ್ಲಿಯೂ ತೃಪ್ತಿ ಜೊತೆ ಸಾಕಷ್ಟು ಇಂಟಿಮೇಟ್​ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಪತ್ನಿ ಕತ್ರಿನಾರ ಹುಟ್ಟುಹಬ್ಬ ಹಾಗೂ ಬ್ಯಾಡ್​ ನ್ಯೂಸ್​ ಚಿತ್ರದ ಪ್ರಮೋಷನ್​ ಸಂದರ್ಭದಲ್ಲಿ ತಮ್ಮ ಖಾಸಗಿ ಜೀವನದ ಕುರಿತು ಕೆಲವೊಂದು ಇಂಟರೆಸ್ಟಿಂಗ್​ ವಿಷಯಗಳನ್ನು ವಿಕ್ಕಿ ಶೇರ್​ ಮಾಡಿಕೊಂಡಿದ್ದಾರೆ. ತಾನು ಕತ್ರಿನಾರನ್ನು ಭೇಟಿಯಾಗಿದ್ದು ಎಲ್ಲಿ, ಲವ್​ ಹೇಗೆ ಶುರುವಾಯಿತು, ತಮ್ಮಿಬ್ಬರ ನಡುವೆ ಜಗಳವಾದರೆ ಏನಾಗುತ್ತದೆ ಎಂಬಿತ್ಯಾದಿಯಾಗಿ ಮಾತನಾಡಿದ್ದಾರೆ ವಿಕ್ಕಿ. ಅಷ್ಟಕ್ಕೂ ಇವರಿಬ್ಬರ ಪ್ರೇಮ ಶುರುವಾದದ್ದೇ ಕುತೂಹಲ. ಬಹು ವಿವಾದಿತ ಕಾಫಿ ವಿತ್​ ಕರಣ್​ ಷೋಗೆ ಇಬ್ಬರನ್ನೂ ಆಹ್ವಾನಿಸಲಾಗಿತ್ತು. ಅಲ್ಲಿಯೇ ಇಬ್ಬರ ನಡುವೆ ಪ್ರೀತಿ ಮೊಳಗಿತ್ತು. ಇದಾದ ಬಳಿಕ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಇಬ್ಬರೂ ಭೇಟಿಯಾಗಿದ್ದರು. ಆಗ ಅತ್ಯಂತ ಆತ್ಮೀಯರಾಗಿದ್ದರು, ಇಬ್ಬರಲ್ಲಿಯೂ ಪ್ರೇಮಾಂಕುರವಾಗಿತ್ತು. ಒಟ್ಟಿಗೇ ಇರುವಷ್ಟು, ಡೇಟಿಂಗ್​ ಮಾಡುವಷ್ಟು ಇವರ ಆತ್ಮೀಯತೆ ಮುಂದುವರೆದು, ಕೊನೆಗೂ ಮದುವೆಯಾಗಿರುವುದಾಗಿ ವಿಕ್ಕಿ ಹೇಳಿಕೊಂಡಿದ್ದಾರೆ.

ಕತ್ರಿನಾಗೆ ಹುಟ್ಟುಹಬ್ಬ ಸಂಭ್ರಮ: ಅಪ್ಪ ಮುಸ್ಲಿಂ, ಅಮ್ಮ ಕ್ರೈಸ್ತ... ನಟಿ ಭಾರತದ ಪ್ರಜೆಯೇ ಅಲ್ಲ! ರೋಚಕ ಸ್ಟೋರಿಯಿದು..

ಅಂದಹಾಗೆ ಇದೇ ವೇಳೆ, ಮಂಚದ ವಿಷಯವನ್ನೂ ಅವರು ಮಾತನಾಡಿದ್ದಾರೆ. ಇಬ್ಬರ ನಡುವೆ ಜಗಳ ಆದರೆ ಏನು ಮಾಡುತ್ತೀರಿ ಎಂದು ಕೇಳಿದ ಪ್ರಶ್ನೆಗೆ, ವಿಕ್ಕಿ ಸಾಮಾನ್ಯ ದಂಪತಿಯಂತೆ ನಮ್ಮ ನಡುವೆಯೂ ಆಗಾಗ್ಗೆ ಜಗಳ ಆಗುವುದು ಉಂಟು. ಸಂಸಾರ ಅಂದ ಮೇಲೆ ಹಾಗೆಯೇ ಅಲ್ವಾ? ಆದರೆ ಈ ರೀತಿ ಜಗಳ ಆದಾಗಲೆಲ್ಲಾ ಮಂಚದ ಮೇಲೆ ಇಬ್ಬರೂ ಸುಮ್ಮನೇ ಬಿದ್ದುಕೊಂಡಿರುತ್ತೇವಷ್ಟೇ. ಆದರೆ ಇಬ್ಬರಿಗೂ ಮಲಗಲು ಸಾಧ್ಯವೇ ಆಗದೇ ಹೊರಳಾಡುತ್ತಿರುತ್ತೇವೆ. ಆ ಬಳಿಕ ಅವಳೇ ಮೊದಲು ಮಾತನಾಡಲು ಶುರು ಮಾಡುತ್ತಾಳೆ. ಬೇರೆ ಏನೇನೋ ವಿಷಯ ಹೇಳಿ ಜಗಳನ್ನು ಮರೆಸುತ್ತಾಳೆ. ಏಕೆಂದರೆ ಅವಳು ತುಂಬಾ ಭಾವುಕಳು, ನನ್ನ ಹಾಗೆ ಲಾಜಿಕ್​ ಆಗಿ ಮಾತನಾಡುವ ವ್ಯಕ್ತಿ ಅಲ್ಲ ಅವಳು. ಜಗಳವಾಡಿದಾಗ ಅವಳೇ ಸರಿ ಮಾಡಿಬಿಡುತ್ತಾಳೆ ಎಂದಿದ್ದಾರೆ.

ಅಂದಹಾಗೆ, ಕತ್ರಿನಾ ಮತ್ತು ರಣಬೀರ್​ ಕಪೂರ್​ ಆರೇಳು ವರ್ಷ ಒಟ್ಟಿಗೇ ಇದ್ದವರು. ಬಹಳ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ರಣಬೀರ್ ಮತ್ತು ಕತ್ರಿನಾ ಹಲವು ವರ್ಷ ತಮ್ಮ ರಿಲೇಷನ್‌ಶಿಪ್ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ವಿದೇಶದ ರೆಸಾರ್ಟ್‌ವೊಂದರಲ್ಲಿ ಹಾಲಿಡೇ ಕಳೆಯುತ್ತಿರುವಾಗ ದೊರೆತ ಫೋಟೊಗಳಿಂದ ಇವರಿಬ್ಬರ ನಡುವಿನ ಅಫೇರ್ ಬೆಳಕಿಗೆ ಬಂದಿತ್ತು. ಜತೆಗೆ ರಣಬೀರ್ ತಂದೆ ರಿಷಿ ಕಪೂರ್‌ಗೆ ಕತ್ರಿನಾ ಇಷ್ಟವಾಗಿರಲಿಲ್ಲ. ಮುಂಬೈನಲ್ಲಿರುವ ತಮ್ಮ ಬಂಗಲೆಗೆ ಕತ್ರಿನಾ ಅವರಿಗೆ ಎಂಟ್ರಿ ಕೊಟ್ಟಿರಲಿಲ್ಲ. ಇದೇ ಕಾರಣಕ್ಕೆ ಆಗ ರಣಬೀರ್ ಸ್ವಂತ ಬಂಗಲೆ ಖರೀದಿಸಿದ್ದರು. ಅಲ್ಲಿ ಪಾರ್ಟಿ ಆಯೋಜಿಸಿ ತಮ್ಮ ಸಂಬಂಧದ ಬಗ್ಗೆ ಪರೋಕ್ಷವಾಗಿ ತಿಳಿಸಿದ್ದರು. 2009 ರಿಂದ 2016ರವರೆಗೆ ಇವರು ಒಟ್ಟಿಗೇ ಇದ್ದರು. ಆಮೇಲೆ ಯಾವುದೋ ಕಾರಣಕ್ಕೆ ಬ್ರೇಕಪ್ ಆಗಿ ಇಬ್ಬರೂ ಬೇರೆ ಬೇರೆ ಮದುವೆಯಾಗಿ ಸಂಸಾರ ನಡೆಸುತ್ತಿದ್ದಾರೆ. 

ತಿರುಪತಿಗೇ ನಾಮ ಹಾಕಿರುವ ಆರೋಪ ಹೊತ್ತ ನಟಿ ರೋಜಾ ಇನ್ನೊಂದು ಎಡವಟ್ಟು: ಎಲ್ಲೆಡೆ ಆಕ್ರೋಶ