ಆಸ್ಪತ್ರೆ ದಾಖಲಾಗಿದ್ದ ಪಾಲ್ಕೆ ಪ್ರಶಸ್ತಿ ಪುರಸ್ಕೃತ ಖ್ಯಾತ ಗಾಯಕಿ ಆಶಾ ಭೋಸ್ಲೆ ನಿಧನ, ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ವಿಜೇತ ಆಶಾ ಭೋಸ್ಲೆ ಇಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 

ಮುಂಬೈ (ಏ.12) ಖ್ಯಾತ ಗಾಯಕಿ, ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ವಿಜೇತ ಪ್ಲೇ ಬ್ಯಾಕ್ ಸಿಂಗರ್ ಆಶಾ ಭೋಸ್ಲೆ ನಿಧನರಾಗಿದ್ದಾರೆ. 92 ವರ್ಷದ ಆಶಾ ಭೋಸ್ಲೆ ಆರೋಗ್ಯ ಏರುಪೇರಾದ ಹಿನ್ನಲೆಯಲ್ಲಿ ಎಪ್ರಿಲ್ 11 ರಂದು ಮುಂಬೈನ ಬ್ರಿಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸಂಪೂರ್ಣ ಕ್ಷೀಣಿಸಿದ್ದ ಕಾರಣ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಕಳೆದೊಂದು ದಿನದಲ್ಲಿ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಕಿ ಇಂದು ನಿಧನರಾಗಿದ್ದಾರೆ ಎಂದು ವರದಿಯಾಗಿದೆ.

ನಾಳೆ ಅಶಾ ಭೋಸ್ಲೆ ಅಂತಿಮ ವಿಧಿ ವಿಧಾನ

ಗಾಯಕಿ ಅಶಾ ಭೋಸ್ಲೆ ನಿಧನವನ್ನು ಪುತ್ರ ಆನಂದ್ ಭೋಸ್ಲೆ ಖಚಿತಪಡಿಸಿದ್ದಾರೆ. ಅಶಾ ಭೋಸ್ಲೆ ಅಂತಿ ವಿಧಿ ವಿಧಾನ ನಾಳೆ (ಏ.13) ನಡೆಯಲಿದೆ. ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಆನಂದ್ ಭೋಸ್ಲೆ ಹೇಳಿದ್ದಾರೆ.

ಶ್ವಾಸಕೋಶದ ಇನ್‌ಫೆಕ್ಷನ್‌ನಿಂದ ಆಸ್ಪತ್ರೆ ದಾಖಲು

ಗಾಯಕಿ ಆಶಾ ಭೋಸ್ಲೆ ಕಳೆದ ಕೆಲ ದಿನಗಳಿಂದ ಶ್ವಾಸಕೋಶದ ಇನ್‌ಫೆಕ್ಷನ್‌ನಿಂದ ಬಳಲಿದ್ದರು. ಎಪ್ರಿಲ್ 11 ರಂದು ಉಸಿರಾಟದ ಸಮಸ್ಯೆ ತೀವ್ರಗೊಂಡ ಕಾರಣ ಆಸ್ಪತ್ರೆ ದಾಖಳಿಸಲಾಗಿತ್ತು. ಅಶಾ ಭೋಸ್ಲೆ ಆಸ್ಪತ್ರೆ ದಾಖಲು ಹಾಗೂ ಆರೋಗ್ಯ ಕುರಿತು ಆಶಾ ಭೋಸ್ಲೆ ಮೊಮ್ಮಗಳು ಝನೈ ಭೋಸ್ಲಾ ಮಾಹಿತಿ ನೀಡಿದ್ದರು. ಚಿಕಿತ್ಸೆ ಮುಂದುವರಿದಿದೆ, ದೇವರ ದಯದಿಂದ ಶೀಘ್ರದಲ್ಲೇ ಚೇತರಿಸಿಕೊಳ್ಳುವಂತಾಗಲಿ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.

ಬರೋಬ್ಬರಿ 8 ದಶಕ ಬಾಲಿವುಡ್ ಆಳಿದ ಗಾಯಕಿ

ಅಶಾ ಭೋಸ್ಲೆ ಬರೋಬ್ಬರಿ 8 ದಶಕಗಳ ಕಾಲ ಬಾಲಿವುಡ್ ಆಳಿದ ಗಾಯಕಿ. 10ನೇ ವಯಸ್ಸಿಗೆ ಸಿನಿಮಾದ ಪ್ಲೇ ಬ್ಯಾಕ್ ಸಿಂಗರ್ ಆಗಿ ಪಾದಾರ್ಪಣೆ ಮಾಡಿದ ಆಶಾ ಭೋಸ್ಲೆ ಬಳಿಕ ಬಾಲಿವುಡ್‌ನ ಭಾಗವಾಗಿದ್ದರು. ಪಿಯಾ ತು ಅಬ್ ತೊ ಆಜಾ, ಕಜ್ರಾ ಮೊಹಮ್ಮದ್ ವಾಲ, ರಂಗೀಲಾ ರೆ, ದಿಲ್ ಚೀಸ್ ಕ್ಯಾಹೇ ಸೇರಿದಂತೆ ತಮ್ಮ ಮಧುರ ಕಂಠದಿಂದ ಸೂಪರ್ ಹಿಟ್ ಹಾಡು ನೀಡಿದ ಅಶಾ ಭೋಸ್ಲೆ ಸಾವಿಗೆ ಹಲವರು ಕಂಬನಿ ಮಿಡಿದಿದ್ದಾರೆ.10ನೇ ವಯಸ್ಸಿಗೆ ಮರಾಠಿ ಸಿನಿಮಾ ಮಝ ಬಾಲ್‌ಗೆ ಹಾಡುವ ಮೂಲಕ ಸಿನಿಮಾ ಸಿಂಗರ್ ಆಗಿ ಡೆಬ್ಯೂ ಮಾಡಿದ್ದರು. 1943ರಿಂದ ನಿರಂತರವಾಗಿ ಮರಾಠಿ, ಬಾಲಿವುಡ್‌ನಲ್ಲಿ ಆಶಾ ಭೋಸ್ಲೆ ಅಭಿಮಾನಿಗಳನ್ನು ರಂಜಿಸುತ್ತಲೇ ಬಂದಿದ್ದಾರೆ.