ಸ್ಮಾರ್ಟ್​ಫೋನ್​ನಿಂದ ಕೆಲ ಕಾಲ ದೂರವಿದ್ದ ಆ ದಿನಗಳು... ರೋಮಾಂಚಕ ಅನುಭವ ಹಂಚಿಕೊಂಡ ಆಮೀರ್​ ಖಾನ್​

ಸ್ಮಾರ್ಟ್​ಫೋನ್​ನಿಂದ ಕೆಲ ಕಾಲ ದೂರವಿದ್ದ ನಟ ಆಮೀರ್​ ಖಾನ್​, ಆ ದಿನಗಳ ರೋಮಾಂಚಕ ಅನುಭವ ಹಂಚಿಕೊಂಡಿರುವುದು ಹೀಗೆ... 
 

Communication Detox For Aamir Khan As He Ditches Cell Phone To Focus On Upcoming Films suc

ಈಗ ಸ್ಮಾರ್ಟ್​ಫೋನ್​ ಇಲ್ಲದ ಜೀವನವನ್ನು ನೆನಪಿಸಿಕೊಳ್ಳುವುದೂ ಕಷ್ಟ. ಊಟನಾದ್ರೂ ಬಿಡ್ತಾರೆ, ನಿದ್ದೆಯನ್ನಾದ್ರೂ ತೊರೆಯಬಹುದು, ಆದ್ರೆ ಮಲಗಿದ್ದಾಗ ಬಿಟ್ಟು ಬೇರೆ ಸಮಯದಲ್ಲಿ ಫೋನ್​ ಇರಲೇಬೇಕು, ಮಲಗುವ ಸಂದರ್ಭದಲ್ಲಿಯೂ ಪಕ್ಕದಲ್ಲಿಯೇ ಅದು ಇರಬೇಕು. ಇದು ಇಂದಿನ ಸ್ಥಿತಿ. ಹತ್ತಿಪ್ಪತ್ತು ವರ್ಷಗಳ ಹಿಂದೆ ಬದುಕಿದ್ದವರು ನಾವೇನಾ ಎಂದು ಪ್ರಶ್ನಿಸಿಕೊಳ್ಳುವ ರೀತಿಯಲ್ಲಿ ಇಂದು ಕಾಲ ಬದಲಾಗಿದೆ. ಆಗಿನ ದಿನಗಳನ್ನು ನೆನಪಿಸಿಕೊಂಡರೆ ಫೋನ್​ಗಳು ಇಲ್ಲದೇ ಹೇಗೆ ಜೀವನ ಮಾಡಿದ್ದೆವು ಎಂದು ಊಹಿಸಿಕೊಳ್ಳುವುದೂ ಕಷ್ಟ ಎನಿಸಿದೆ. ಆದರೆ ಇದೇ ಫೋನ್​ ಇಂದು ಇನ್ನಿಲ್ಲದ ಸಮಸ್ಯೆಗಳನ್ನು ತಂದೊಡ್ಡಿದೆ ಎನ್ನುವುದೂ ಸುಳ್ಳಲ್ಲ. ಆರೋಗ್ಯ ಸಮಸ್ಯೆಗಳು ಮಾತ್ರವಲ್ಲದೇ ಮನೆಯಲ್ಲಿನ ಸಂಬಂಧಗಳೂ ದೂರವಾಗುವಲ್ಲಿ ಮೊಬೈಲ್​ ಫೋನ್​ಗಳು ಬಹುದೊಡ್ಡ ಕೊಡುಗೆ ನೀಡುತ್ತಿವೆ.

ಆದರೆ ಒಂದಷ್ಟು ದಿನ ಫೋನ್​ ಇಲ್ಲದೇ ಬದುಕಬಲ್ಲಿರಾ ಎಂದು ಪ್ರಶ್ನಿಸಿದರೆ, ಸಾಧ್ಯನೇ ಇಲ್ಲ ಎನ್ನುವ ಮಾತು ಕೇಳಿಬರುವುದು ಸಹಜ. ಆದರೆ ಬಾಲಿವುಡ್ ಸೂಪರ್‌ಸ್ಟಾರ್ ಆಮೀರ್ ಖಾನ್ ತಮ್ಮ ಶೂಟಿಂಗ್​ ಸಮಯದಲ್ಲಿ ಬಹಳ ಸಮಯದವರೆಗೆ ಸ್ಮಾರ್ಟ್​ಫೋನ್​ ಬಿಟ್ಟಿದ್ದರ ಬಗ್ಗೆ ಮಾತನಾಡಿದ್ದಾರೆ. ಫೋನ್​ನಿಂದ ದೂರವಿದ್ದ ಹಿನ್ನೆಲೆಯಲ್ಲಿ, ತಮ್ಮ ಜೀವನದಲ್ಲಿ ಅದು ಎಷ್ಟು ದೊಡ್ಡ ಕೊಡುಗೆ ನೀಡಿತು ಎನ್ನುವುದನ್ನು ಹೇಳಿದ್ದು, ಅದರ ವಿಡಿಯೋ ಈಗ ಪುನಃ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಕೆಲಸ ಮತ್ತು ವೈಯಕ್ತಿಕ ಜೀವನದಲ್ಲಿ ಗೊಂದಲವನ್ನು ತಪ್ಪಿಸಲು ತಮ್ಮ ಫೋನ್  ಆಫ್ ಮಾಡಿ, ಅದನ್ನು ಮುಟ್ಟೇ ಇರಲಿಲ್ಲ. ಇದರಿಂದ ನನ್ನ ವೈಯಕ್ತಿಕ ಜೀವನದ ಮೇಲೆ ಅಪಾರ ಪರಿಣಾಮ ಬೀರಿತು ಎಂದಿದ್ದಾರೆ ಆಮೀರ್​.

ನಾನು ಯಾರ ಕೈಗೆ ಉಗುಳ್ತೇನೋ ಅವರೆಲ್ಲಾ ನಂಬರ್​ 1 ನಟಿ ಆಗ್ತಾರೆ! ಆಮೀರ್​ ಖಾನ್​ ಹೇಳಿದ್ದೇನು ಕೇಳಿ

ಅಂದಹಾಗೆ ಆಮೀರ್​ ಖಾನ್​ ಇಂಥದ್ದೊಂದು ಸಾಹಸಕ್ಕೆ ಕೈ ಹಾಕಿದ್ದು 2021ರಲ್ಲಿ. ಫೆಬ್ರವರಿ 2021 ರಲ್ಲಿ, ಅವರ ಚಲನಚಿತ್ರ ಲಾಲ್ ಸಿಂಗ್ ಚಡ್ಡಾ ಚಿತ್ರೀಕರಣದ ಸಮಯದಲ್ಲಿ ಫೋನ್​ನಿಂದ ದೂರವಿರಲು ನಿರ್ಧರಿಸಿದ್ದರು. ಶೂಟಿಂಗ್​ ಸಮಯದಲ್ಲಿ ಫೋನ್​ನಿಂದ ತೊಂದರೆ ಆಗುತ್ತದೆ ಎನ್ನುವ ಕಾರಣಕ್ಕೆ ಅದನ್ನುಸ್ವಿಚ್​ ಆಫ್​ ಮಾಡಿ ದೂರವೇ ಇಟ್ಟಿದ್ದರಂತೆ. ಆದರೆ ಅದು ಇಲ್ಲವಾದ ಬಳಿಕ ತಮ್ಮ ಬದುಕಿನಲ್ಲಿ ಹಲವಾರು ಬದಲಾವಣೆ ಆದವು. ಸ್ನೇಹಿತರು, ಮನೆಯವರ ಜೊತೆ ಟೈಮ್​ ಕೊಡಲು ಸಾಧ್ಯವಾಯಿತು. ಅದೆಷ್ಟು ಸುಖ ಕೊಟ್ಟಿತ್ತು ಎಂದರೆ ಮೊಬೈಲ್​ ಫೋನ್​ನನಿಂದ ನಾನು ನನ್ನ ಎಷ್ಟು ಸುಖ, ಸಂತೋಷಗಳನ್ನು ಕಳೆದುಕೊಂಡಿದ್ದೇನೆ ಎನ್ನುವುದು ತಿಳಿಯಿತು ಎಂದಿದ್ದಾರೆ ನಟ.
  
ನಾನು ಫೋನ್‌ಗೆ ಎಷ್ಟು ಅಡಿಕ್ಟ್ ಆಗಿದ್ದೇನೆ ಎನ್ನುವುದು ಆಗ ತಿಳಿಯಿತು ಎಂದಿರುವ ಆಮೀರ್​ ಖಾನ್​, ಸದಾ ಕಾಲ ಅಲ್ಲದಿದ್ದರೂ ಒಂದಷ್ಟು ಸಮಯ ಫೋನ್​ನಿಂದ ದೂರವಿರುವಂತೆ ಸಲಹೆ ಕೊಟ್ಟಿದ್ದಾರೆ. ಸೋಷಿಯಲ್​ ಮೀಡಿಯಾದಿಂದಲೂ ದೂರವಾಗಿದ್ದರಿಂದ  ಮತ್ತಷ್ಟು ಖುಷಿ ಕೊಟ್ಟಿತು. ಇದು ತಲೆ ಕೆಡಿಸುತ್ತದೆ ಎಂದಿರುವ ಅವರು, ಫೋನ್​ನಿಂದ ದೂರ ಇರುವುದು ಒಳ್ಳೆಯ ಅನುಭೂತಿಯನ್ನು ನೀಡುತ್ತದೆ. ನಿಮ್ಮ ಸ್ನೇಹಿತರು, ಬಂಧು ಬಳಗವನ್ನು ಒಂದು ಮಾಡುತ್ತದೆ. ನಿಮ್ಮ ಸುಖ-ಸಂತೋಷ ವಾಪಸ್​ ಸಿಗುತ್ತದೆ. ಜೀವನದ ನಿಜವಾದ ಅರ್ಥ ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ ಎಂದಿರುವ ನಟ, ಎಲ್ಲರಿಗೂ ಸ್ವಲ್ಪ ಕಾಲ ಫೋನ್​ನಿಂದ ದೂರವಿದ್ದು ನೋಡಿ ಎಂದು ಸಲಹೆ ನೀಡಿದ್ದಾರೆ. 

28 ಸಿನಿಮಾ ಹಿಂದಿಕ್ಕಿ ಆಸ್ಕರ್​ ಅಂಗಳಕ್ಕೆ 'ಲಾಪತಾ ಲೇಡೀಸ್': ಚೊಚ್ಚಲ ಚಿತ್ರದಲ್ಲಿ ಮೂವರು ತಾರೆಯರಿಗೆ ಧಮಾಕಾ! ​

 
 
 
 
 
 
 
 
 
 
 
 
 
 
 

A post shared by LeadersTalk (@leaderstalk_)

Latest Videos
Follow Us:
Download App:
  • android
  • ios