Asianet Suvarna News Asianet Suvarna News

anubandha award : ಲಕ್ಷ್ಮಿ ಬಾರಮ್ಮ ಕೀರ್ತಿಗೆ ಸ್ಪೆಷಲ್ ಅವಾರ್ಡ್ ಡಿಮ್ಯಾಂಡ್ ಇಟ್ಟ ಸೀರಿಯಲ್ ಪ್ರೇಮಿಗಳು!

ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್ ಮತ್ತೆ ಬರ್ತಿದೆ. ಇದೇ ಆಗಸ್ಟ್ 30 ಹಾಗೂ ಸೆಪ್ಟೆಂಬರ್ ಒಂದರಂದು ನಡೆಯಲಿರುವ ಅವಾರ್ಡ್ ಕಾರ್ಯಕ್ರಮಕ್ಕೆ ಅಭಿಮಾನಿಗಳು ಈಗ್ಲೇ ತಮ್ಮ ವೋಟ್ ಶುರು ಮಾಡಿದ್ದಾರೆ. ಕಮೆಂಟ್ ನಲ್ಲೇ ಯಾರ್ಯಾರಿಗೆ ಯಾವ ಅವಾರ್ಡ್ ಸಿಗ್ಬೇಕು ಎಂಬ ಚರ್ಚೆ ಬಿಸಿಯೇರಿದೆ. 
 

colors kannada anubandha award promo release roo
Author
First Published Aug 16, 2024, 3:30 PM IST | Last Updated Aug 16, 2024, 3:41 PM IST

ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್ 2024ರ (Colors Kannada Anubandha Award 2024) ಪ್ರೋಮೋ ರಿಲೀಸ್ ಆಗಿದೆ. ವರಮಹಾಲಕ್ಷ್ಮಿ (Varamahalakshmi)  ಹಬ್ಬದ ಸಂಭ್ರಮದಲ್ಲಿ ವೀಕ್ಷಕರಿಗೆ ಕಲರ್ಸ್ ಕನ್ನಡ ಭರ್ಜರಿ ಉಡುಗೊರೆ ನೀಡಿದೆ. ಅನುಬಂಧ 2024ರ ಪ್ರೋಮೋ (Promo) ವನ್ನು ಕಲರ್ಸ್ ಕನ್ನಡ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆ, ಫೇಸ್ಬುಕ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ. ಇದನ್ನು ನೋಡಿದ ಅಭಿಮಾನಿಗಳ ಫುಲ್ ಖುಷಿಯಾಗಿದ್ದಾರೆ. ತಮ್ಮಿಷ್ಟದ ಕಲಾವಿದರಿಗೆ ವೋಟ್ ಮಾಡಲು ಶುರು ಮಾಡಿದ್ದಾರೆ. ಹಾಗೆ ಇವರು ಗೆಲ್ಬೇಕು, ಅವರು ಗೆಲ್ಬೇಕು ಎನ್ನುವ ಕಮೆಂಟ್ ಶುರುವಾಗಿದೆ.

ಕಲರ್ಸ್ ಅನುಬಂಧ, ಇದು ಸಂಬಂಧಗಳ ಸಂಭ್ರಮ, ಅನುಬಂಧ ಅವಾರ್ಡ್ಸ್ 2024 ಎಂಬ ಶೀರ್ಷಿಕೆಯಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಎಲ್ಲ ಕಲಾವಿದರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ತಾರಾ, ಶೃತಿ ಸೇರಿದಂತೆ ದಿಗ್ಗಜ ನಟರು ವೇದಿಕೆ ಮೇಲೆ ಡಾನ್ಸ್ ಮಾಡಿದ್ದು, ಈ ವಿಡಿಯೋ ನೋಡಿದ ಅಭಿಮಾನಿಗಳು ಕಾರ್ಯಕ್ರಮ ವೀಕ್ಷಣೆಗೆ ತುದಿಗಾಲಿನಲ್ಲಿ ನಿಂತಿದ್ದಾರೆ. ಪ್ರೋಮೋ ರಿಲೀಸ್ ಆಗ್ತಿದ್ದಂತೆ ಲಕ್ಷ್ಮಿ ಬಾರಮ್ಮ ಸೀರಿಯಲ್ ನ ಕೀರ್ತಿ ಮೇಲೆ ಅಭಿಮಾನಿಗಳು ತಮ್ಮ ಪ್ರೀತಿಯನ್ನು ತೋರಿಸಿದ್ದಾರೆ. 

ಸತ್ಯ+ ಪಾರು= ಬ್ರಹ್ಮಗಂಟು! ಹಳಸಲು ಕಥೆಯನ್ನೇ ಎಷ್ಟಂತ ಕೊಡ್ತೀರಾ? ಸ್ಟೋರಿನೇ ಸಿಗಲ್ವಾ ಕೇಳ್ತಿದ್ದಾರೆ ನೆಟ್ಟಿಗರು!

ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಕೀರ್ತಿಗೆ ವಿಶೇಷ ಅವಾರ್ಡ್ ನೀಡಬೇಕು ಅನ್ನೋದು ಅಭಿಮಾನಿಗಳ ಆಶಯ. ಧಾರಾವಾಹಿಯಲ್ಲಿ ಕೀರ್ತಿ ಪಾತ್ರ ಕೊನೆಯಾದಂತೆ ಕಾಣ್ತಿದೆ. ಕಾವೇರಿ ಮೋಸಕ್ಕೆ ಕೀರ್ತಿ ಪ್ರಪಾತಕ್ಕೆ ಬಿದ್ದಿದ್ದಾಳೆ. ಆಕೆ ಬರ್ತಾಳೋ ಇಲ್ವೋ ಗೊತ್ತಿಲ್ಲ. ಆದ್ರೆ ಇಷ್ಟು ದಿನ ಕೀರ್ತಿ ಅಭಿನಯವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಅವರ ನಟನೆ ಹಾಗೂ ಕೀರ್ತಿ ಪಾತ್ರದ ಬಗ್ಗೆ ಆಗಾಗ ಕಮೆಂಟ್ ಮಾಡುವ ಅಭಿಮಾನಿಗಳು, ಈಗ ಕೀರ್ತಿಗೆ ವಿಶೇಷ ಅವಾರ್ಡ್ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. 

ಕಲರ್ಸ್ ಕನ್ನಡದ ಅನುಬಂಧ 2024ರ ಪ್ರೋಮೋಗೆ ನಟಿ ದಿವ್ಯಾ ಉರುಡುಗ ಕೂಡ ಕಮೆಂಟ್ ಮಾಡಿದ್ದಾರೆ. ಬಿಗ್ ಬಾಸ್ ಮೂಲಕ ಹೆಚ್ಚು ಪ್ರಸಿದ್ಧಿಗೆ ಬಂದಿದ್ದ ನಟಿ, ಕಲರ್ಸ್ ಕನ್ನಡದಲ್ಲಿ ಬರುವ ನಿನಗಾಗಿ  ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಪ್ರೋಮೋದಲ್ಲಿ ನಿನಗಾಗಿ ಟೀಂ ಫುಲ್ ಮಿಂಚುತ್ತಿದೆ. ರಚ್ಚು, ಜೀವ, ಕೃಷ್ಣ ಎಂದು ದಿವ್ಯಾ ಉರುಡುಗ ಕಮೆಂಟ್ ಮಾಡಿದ್ದಾರೆ.

ರಾಮಾಚಾರಿ ಧಾರಾವಾಹಿಯ ಚಾರು ಹಾಗೂ ರಾಮಾಚಾರಿ ಜೋಡಿಯನ್ನು ಮೆಚ್ಚಿದ ಅಭಿಮಾನಿಗಳು, ಇವರಿಗೆ ಜನಮೆಚ್ಚಿದ ಜೋಡಿ ಸಿಗ್ಬೇಕು ಎನ್ನುತ್ತಿದ್ದಾರೆ. ವೀಕ್ಷಕರ ಮಧ್ಯೆ ಅಲ್ಲೇ ಕಚ್ಚಾಟ ಕೂಡ ಶುರುವಾಗಿದೆ. ಇನ್ನೊಬ್ಬರು ಲಕ್ಷ್ಮಿ – ವೈಷ್ಣವ್ ಗೆ ಜನಮೆಚ್ಚಿದ ಜೋಡಿ ಸಿಗ್ಬೇಕು ಎಂದು ತಮ್ಮ ವೋಟ್ ಒತ್ತಿದ್ದಾರೆ. ಹಾಗೆ ಪ್ರೋಮೋದಲ್ಲಿ ಅನುಪಮಾ ಮಿಸ್ ಆಗಿದ್ದು, ಅದನ್ನು ಗುರುತಿಸಿರುವ ಅಭಿಮಾನಿಗಳು, ಇಲ್ಲಿ ಅನುಪಮಾ ಇರ್ಬೇಕಿತ್ತು ಎಂದಿದ್ದಾರೆ. ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ 2024 ಕಾರ್ಯಕ್ರಮ ಆಗಸ್ಟ್ 30 – ಸೆಪ್ಟೆಂಬರ್ ಒಂದರಂದು ನಡೆಯಲಿದೆ. ಈಗಾಗಲೇ ಅದಕ್ಕೆ ಸಕಲ ಸಿದ್ಧತೆ ನಡೆದಿದೆ. 

varamahalakshmi special : ಹಬ್ಬದಂದು ಸೀರೆಯುಟ್ಟು ರೀಲ್ಸ್‌ ಹಂಚಿಕೊಂಡ ಸುಧಾರಾಣಿ...ಮಹಾಲಕ್ಷ್ಮಿ‌ ನೀವೆ ಎಂದ‌

ಕನ್ನಡ ಮನರಂಜನಾ ಚಾನೆಲ್ ಗಳಲ್ಲಿ ಸದ್ಯ ನಂಬರ್ ಒನ್ ಸ್ಥಾನದಲ್ಲಿರುವ ಚಾನೆಲ್ ಕಲರ್ಸ್ ಕನ್ನಡ. ಪ್ರತಿ ವರ್ಷ ಕಲರ್ಸ್ ಕನ್ನಡದಲ್ಲಿ ಅನುಬಂಧ ಅವಾರ್ಡ್ ಕಾರ್ಯಕ್ರಮ ನಡೆಯುತ್ತದೆ. ಅತ್ಯುತ್ತಮ ಧಾರಾವಾಹಿ, ಅತ್ಯುತ್ತಮ ನಾಯಕ, ನಾಯಕಿ, ಖಳನಾಯಕ, ಖಳನಾಯಕಿ, ಸ್ಟೈಲಿಸ್ಟ್ ನಟಿ ಸೇರಿದಂತೆ ಅನೇಕ ಕ್ಚೇತ್ರದಲ್ಲಿ ಅವಾರ್ಡ್ ನೀಡಲಾಗುತ್ತದೆ. ಅವಾರ್ಡ್ ಜೊತೆ ಕಲಾವಿದರ ಡಾನ್ಸ್ ವೀಕ್ಷಕರನ್ನು ಮನರಂಜಿಸುತ್ತ ಬಂದಿದೆ. ಕಲರ್ಸ್ ಕನ್ನಡದಲ್ಲಿ ಧಾರಾವಾಹಿ ಜೊತೆ ರಿಯಾಲಿಟಿ ಶೋಗಳು ಕೂಡ ಅಭಿಮಾನಿಗಳನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿವೆ.  

ಶೀಘ್ರದಲ್ಲೇ ಬಿಗ್ ಬಾಸ್ ಶೋ ಶುರುವಾಗಲಿದೆ. ಅದಕ್ಕೆ ಯಾರ್ಯಾರು ಬರ್ತಾರೆ ಎನ್ನುವ ಚರ್ಚೆ ಈಗಾಗಲೇ ಶುರುವಾಗಿದ್ದು, ಬಿಗ್ ಬಾಸ್ ನಿಂದಾಗಿ ಮೂರು ಧಾರಾವಾಹಿ ಬಂದ್ ಆಗ್ತಿದೆ ಎನ್ನುವ ಬೇಸರ ಕೂಡ ವೀಕ್ಷಕರನ್ನು ಕಾಡ್ತಿದೆ. 
 

Latest Videos
Follow Us:
Download App:
  • android
  • ios