Asianet Suvarna News Asianet Suvarna News

varamahalakshmi special : ಹಬ್ಬದಂದು ಸೀರೆಯುಟ್ಟು ರೀಲ್ಸ್‌ ಹಂಚಿಕೊಂಡ ಸುಧಾರಾಣಿ...ಮಹಾಲಕ್ಷ್ಮಿ‌ ನೀವೆ ಎಂದ‌ ಅಭಿಮಾನಿಗಳು

ಸ್ಯಾಂಡಲ್ವುಡ್ ನಟಿ ಸುಧಾರಾಣಿ ಹಬ್ಬದ ಸಂಭ್ರಮದಲ್ಲಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ವಿಶೇಷ ಸಂದರ್ಭದಲ್ಲಿ ಅವರು ರೀಲ್ಸ್ ಒಂದನ್ನು ಹಂಚಿಕೊಂಡಿದ್ದಾರೆ. ಸುಂದರವಾಗಿ ಅಲಂಕಾರಗೊಂಡ ಸುಧಾರಾಣಿ ನೋಡಿದ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದಾರೆ.
 

actress sudharani made reels in a saree for the occasion of varamahalakshmi roo
Author
First Published Aug 16, 2024, 11:04 AM IST | Last Updated Aug 16, 2024, 11:30 AM IST

ವರಮಹಾಲಕ್ಷ್ಮಿ ಹಬ್ಬವನ್ನು (Varamahalakshmi festival)  ನಾಡಿನೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗ್ತಿದೆ.  ಸ್ಯಾಂಡಲ್ವುಡ್ ತಾರೆ (Sandalwood star) ಯರ ಮನೆಯಲ್ಲೂ ಹಬ್ಬದ ಸಡಗರ ಮನೆ ಮಾಡಿದೆ. ಕನ್ನಡದ ಮುದ್ದಿನ ನಟಿ ಸುಧಾರಾಣಿ (Sudharani) ಕೂಡ ವರಮಹಾಲಕ್ಷ್ಮಿ ಹಬ್ಬದ ಖುಷಿಯಲ್ಲಿದ್ದಾರೆ. ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಅವರು ಹಬ್ಬದ ರೀಲ್ಸ್ ಒಂದನ್ನು ಹಂಚಿಕೊಂಡಿದ್ದಾರೆ. 

ಜೀವನಚೈತ್ರ ಸಿನಿಮಾದ ಡಾ. ರಾಜ್ ಕುಮಾರ್ ಹಾಡಿರುವ, ಲಕ್ಷ್ಮಿ ಬಾರಮ್ಮ, ಭಾಗ್ಯಲಕ್ಷ್ಮಿ ಬಾರಮ್ಮ ಹಾಡಿಗೆ ಅವರು ರೀಲ್ಸ್ ಮಾಡಿದ್ದು, ಸೀರೆಯಲ್ಲಿ ಅವರನ್ನು ನೋಡಿದ ಅಭಿಮಾನಿಗಳು ನೀವೇ ವರಮಹಾಲಕ್ಷಿ ಅಂತಿದ್ದಾರೆ. ಗ್ರ್ಯಾಂಡ್ ಸೀರೆ ಧರಿಸಿರುವ ಸುಧಾರಾಣಿ ಅದಕ್ಕೆ ತಕ್ಕಂತೆ ಆಭರಣ ಹಾಕಿದ್ದಾರೆ. ಕೈ ತುಂಬಾ ಬಳೆ ಹಾಕಿರುವ ನಟಿ, ಮೆಹಂದಿ ಹಾಕಿಕೊಂಡು ಹಬ್ಬದ ಸಡಗರವನ್ನು ಡಬಲ್ ಮಾಡಿದ್ದಾರೆ. ಇದಲ್ಲದೆ ಅವರು ಮುಡಿದಿರುವ ಹೂ, ಅವರ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. 

ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಎಂದು ಶೀರ್ಷಿಕೆ ಹಾಕಿರುವ ಸುಧಾರಾಣಿ, ದಿವ್ಯಾ ಕೆ ಮೇಕ್ ಓವರ್ ಮಾಡಿದ್ದಾರೆಂದು ತಿಳಿಸಿದ್ದಾರೆ. ಕೇವಲ ಎರಡು ಗಂಟೆ ಹಿಂದೆ ಹಾಕಿರುವ ಸುಧಾರಾಣಿ ಪೋಸ್ಟ್ ಗೆ ಈವರೆಗೆ 4 ಸಾವಿರಕ್ಕಿಂತಲೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಅಭಿಮಾನಿಗಳಿಂದ ಕಮೆಂಟ್ ಹರಿದು ಬಂದಿದೆ.

ಆ ಮಹಾಲಕ್ಷ್ಮಿಯ ಸ್ವರೂಪದಂತಿರುವ ನಿಮಗೆ, ಐದು ಮುತ್ತುಗಳ ಹೊತ್ತ ಮುತ್ತೈದೆಗೆ, ಹೊತ್ತು ಹೊತ್ತಿಗೂ ಅನ್ನವೀವ ಅನ್ನಪೂರ್ಣೆ ಒಲಿಯಲಿ, ದಿಕ್ಕು ದಿಕ್ಕಿನಲೂ ಕಾವಲಿರುವ ದುರ್ಗಾದೇವಿ ರಕ್ಷಿಸಲಿ, ಮುತ್ತು ರತ್ನಗಳವೀವ ಧನ ಲಕ್ಷ್ಮಿ ನಿಮ್ಮ ಬಳಿಯಲ್ಲಿರಲಿ, ವಿದ್ಯೆ ಬುದ್ಧಿ ಕೊಡುವ ಶಾರದೆ ನಿಮ್ಮ ಜೊತೆಯಲ್ಲಿರಲಿ ಎಂದು ಅಭಿಮಾನಿಯೊಬ್ಬರು ಹರಸಿದ್ದಾರೆ. 

ಇದು ನಿಮ್ಮ ಧಾರೆ ಸೀರೆ ಅಲ್ವಾ ಎಂದು ಅಭಿಮಾನಿಗಳು, ಇನ್ನೂ ಆನಂದ್ ಚಿತ್ರದಲ್ಲಿ ಕಂಡಷ್ಟೆ ಯಂಗ್ ಕಾಣ್ತೀರಾ ಎಂದು ಕಮೆಂಟ್ ಮಾಡಿದ್ದಾರೆ. ನಿಮ್ಮನ್ನು ನೋಡಿ ವರಮಹಾಲಕ್ಷ್ಮಿಯನ್ನು ನೋಡಿದಂತೆ ಆಯ್ತು ಎಂದಿರುವ ಅಭಿಮಾನಿಗಳಿಗೆ ಸುಧಾರಾಣಿ ಧನ್ಯವಾದದ ರಿಪ್ಲೇ ನೀಡಿದ್ದಾರೆ. 

ಸಿನಿಮಾ ಜೊತೆ ಕನ್ನಡ ಧಾರವಾಹಿ ಶ್ರೀರಸ್ತು – ಶುಭಮಸ್ತುವಿನಲ್ಲಿ ಅಧ್ಬುತ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸುಧಾರಾಣಿ, ಪ್ರತಿ ದಿನ ಮನೆ ಮನೆಗೆ ಬರ್ತಿದ್ದಾರೆ. ಅವರ ನಟನೆ, ಪಾತ್ರವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಸುಧಾರಾಣಿ, ಶಿವರಾಜ್ ಕುಮಾರ್ ಮಗಳು ನಿವೇದಿತಾ ನಿರ್ಮಾಣದ ಮೊದಲ ಚಿತ್ರದಲ್ಲಿ ನಟಿಸಿದ್ದಾರೆ. ಫೈರ್ ಫ್ಲೈ ಸಿನಿಮಾದ ಚಿತ್ರೀಕರಣ, ಡಬ್ಬಿಂಗ್ ಮುಗಿದಿದೆ. ದೊಡ್ಮನೆ ತನ್ನ ತವರು ಎಂದಿರುವ ಸುಧಾರಾಣಿ, ಅವರು ಯಾವುದೇ ಸಿನಿಮಾ ಮಾಡಿದ್ರೂ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದ್ದರು.

ಸ್ಯಾಂಡಲ್ವುಡ್ ಗೆ ಬಾಲ ನಟಿಯಾಗಿ ಬಂದ ಸುಧಾರಾಣಿ 5ನೇ ವರ್ಷದಲ್ಲಿಯೇ ತಮ್ಮ ನಟನೆ ತೋರಿಸಿದ್ದರು. 13ನೇ ವಯಸ್ಸಿನಲ್ಲಿಯೇ ಸುಧಾರಾಣಿಗೆ ಹಿರೋಯಿನ್ ಪಟ್ಟ ಸಿಕ್ಕಿತ್ತು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ಆನಂದ್ ಚಿತ್ರದಲ್ಲಿ ಮೊದಲ ಬಾರಿ ಹಿರೋಯಿನ್ ಆಗಿ ನಟಿಸಿದ್ದ ಸುಧಾರಾಣಿ, ರಾಜ್ ಕುಮಾರ್, ಅಂಬರೀಷ್, ರವಿಚಂದ್ರನ್ ಸೇರಿದಂತೆ ಕನ್ನಡದ ದಿಗ್ಗಜ ಹಿರೋಗಳಿಗೆ ಜೋಡಿಯಾಗಿದ್ದರು. ಸಿನಿಮಾ ರಂಗದಲ್ಲಿ ಈಗ್ಲೂ ಬಹುಬೇಡಿಕೆ ನಟಿಯರಲ್ಲಿ ಸುಧಾರಾಣಿ ಒಬ್ಬರು. ಸಾಮಾಜಿಕ ಜಾಲತಾಣದಲ್ಲೂ ಸುಧಾರಾಣಿ ಸಕ್ರಿಯವಾಗಿದ್ದಾರೆ. ತಮ್ಮ ಶೂಟಿಂಗ್ ಜೊತೆ ತಮ್ಮ ಮನೆ, ನಿತ್ಯ ಕೆಲಸದ ಬಗ್ಗೆ ಕೆಲವೊಂದು ವಿಡಿಯೋ ಹಂಚಿಕೊಳ್ತಿರುತ್ತಾರೆ.

ಸುಧಾರಾಣಿ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ. ವೃತ್ತಿ ಜೀವನದಲ್ಲಿ ಉತ್ತುಂಗದಲ್ಲಿರುವಾಗ್ಲೇ ಮದುವೆಯಾಗಿ ಅಮೆರಿಕಾಕ್ಕೆ ಹೋಗಿದ್ದ ನಟಿ, ಪತಿಯ ಕಾಟತಾಳಲಾರದೆ ವಾಪಸ್ ಬಂದಿದ್ದರು. ವಿಚ್ಛೇದನ ಪಡೆದು ಈಗ ಎರಡನೇ ಮದುವೆಯಾಗಿದ್ದಾರೆ. ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ನಟಿ, ಆ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. 

Latest Videos
Follow Us:
Download App:
  • android
  • ios