ಸ್ಯಾಂಡಲ್ ವುಡ್‌ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ(Rakshith Shetty) ಸದ್ಯ 777 ಚಾರ್ಲಿ(777 Charlie) ಸಿನಿಮಾದ ಬಿಡುಗಡೆ ತಯಾರಿಯಲ್ಲಿದ್ದಾರೆ. ರಕ್ಷಿತ್ ಸಿನಿಮಾದ ಶ್ವಾನ ಚಾರ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಆದರೆ ಇಂದು (ಜೂನ್ 6) ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಾರ್ಲಿ ಮಿಸ್ ಆಗಿತ್ತು. ಇಂದಿನ ಪ್ರೆಸ್ ಮೀಟ್‌ನಲ್ಲಿ ಚಾರ್ಲಿ ಗೈರು ಎದ್ದು ಕಾಣುತ್ತಿತ್ತು.
ಸ್ಯಾಂಡಲ್ ವುಡ್‌ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ(Rakshith Shetty) ಸದ್ಯ 777 ಚಾರ್ಲಿ(777 Charlie) ಸಿನಿಮಾದ ಬಿಡುಗಡೆ ತಯಾರಿಯಲ್ಲಿದ್ದಾರೆ. ಸದ್ಯ ಸಿನಿಮಾತಂಡ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದು ದೇಶದಾದ್ಯಂತ ಸಂಚರಿಸುತ್ತಿದೆ. ಚಾರ್ಲಿ ಈಗಾಗಲೇ ಟ್ರೈಲರ್ ಮೂಲಕ ಭಾರಿ ಹೈಪ್ ಕ್ರಿಯೇಟ್ ಮಾಡಿದ್ದು ಬಿಡುಗಡೆಗೆ ದಿನಗಣಗೆ ಪ್ರಾರಂಭವಾಗಿದೆ. ಮನುಷ್ಯ ಮತ್ತು ನಾಯಿಯ ಭಾವನಾತ್ಮಕ ಸಂಬಂಧದ ಬಗ್ಗೆ ಇರುವ ಚಾರ್ಲಿಯನ್ನು ಚಿತ್ರಮಂದಿರಗಳಲ್ಲಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ರಕ್ಷಿತ್ ಸಿನಿಮಾದ ಶ್ವಾನ ಚಾರ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಚಾರ್ಲಿ ಕೂಡ ರಕ್ಷಿತ್ ಅಂಡ್ ಟೀಂ ಜೊತೆ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಚಾರ್ಲಿ ಕೂಡ ಬೆಂಗಳೂರು, ಹೈದರಾಬಾದ್ ಅಂತ ಎಲ್ಲಾ ಕಡೆ ಓಡಾಡುತ್ತಿದೆ. ಚಾರ್ಲಿಯನ್ನು ನೇರವಾಗಿ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗುತ್ತಿದ್ದಾರೆ. ಆದರೆ ಇಂದು (ಜೂನ್ 6) ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಾರ್ಲಿ ಮಿಸ್ ಆಗಿತ್ತು. ಇಂದಿನ ಪ್ರೆಸ್ ಮೀಟ್‌ನಲ್ಲಿ ಚಾರ್ಲಿಯ ಗೈರು ಎದ್ದು ಕಾಣುತ್ತಿತ್ತು.
ಚಾರ್ಲಿ ಗೈರಾಗಿದ್ದೇಕೆ?
ಅಷ್ಟಕ್ಕೂ ಚಾರ್ಲಿ ಇಂದಿನ ಪ್ರೆಸ್ ಮೀಟ್‌ನಲ್ಲಿ ಭಾಗಿಯಾಗದೆ ಇರಲು ಕಾರಣ, ಹೋಟೆಲ್‌ನಲ್ಲಿ ಪೆಟ್ಸ್ ಗಳಿಗೆ ಅವಕಾಶ ಇಲ್ಲವಂತೆ. ಹಾಗಾಗಿ ಇಂದಿನ ಸುದ್ದಿಗೋಷ್ಠಿಗೆ ಚಾರ್ಲಿಯನ್ನು ಕರೆದುಕೊಂಡು ಬಂದಿಲ್ಲ. ಹಾಗಾಗಿ ಅಭಿಮಾನಿಗಳು ಚಾರ್ಲಿಯನ್ನು ತುಂಬಾ ಮಿಸ್ ಮಾಡಿಕೊಂಡಿದ್ದಾರೆ.
ಚಾರ್ಲಿಗಾಗಿ ವಿಶೇಷ ಕ್ಯಾರವ್ಯಾನ್
ಚಿತ್ರೀಕರಣ ವೇಳೆ ಸಿನಿಮಾತಂಡ ಚಾರ್ಲಿಗಾಗಿ ವಿಶೇಷ ಕ್ಯಾರವ್ಯಾನ್ ವ್ಯವಸ್ಥೆ ಮಾಡಿಕೊಟ್ಟಿತ್ತು ಸಿನಿಮಾತಂಡ. ಆಲ್ ಟೈಂ ಎಸಿ ಕ್ಯಾರವ್ಯಾನ್ ನಲ್ಲಿ ಚಾರ್ಲಿ ರೆಸ್ಟ್ ಮಾಡುತ್ತಿತ್ತು. ಇನ್ನು ಲೊಕೇಷನ್‌ಗೆ ತಂಡ ಹೋಗುವ 10ದಿನಕ್ಕೂ ಮುನ್ನವೇ ಚಾರ್ಲಿ ಲೊಕೇಷನ್ ತಲುಪುತ್ತಿದ್ದು ಚಾರ್ಲಿಗೆ ಲೊಕೇಷನ್ ಸೆಟ್ ಆದ ನಂತರವೇ ಸಿನಿಮಾ ಟೀಂ ಶೂಟಿಂಗ್ ಪ್ರಾರಂಭ ಮಾಡುತ್ತಿತ್ತು ಎಂದು ಚಾರ್ಲಿ ತಂಡ ಮಾಹಿತಿ ಹಂಚಿಕೊಂಡಿದೆ.
777 Charlie; ಚೆನ್ನೈನಲ್ಲಿ ಕುಳಿತ ಚಾರ್ಲಿ ನೋಡಿ ಬೆರಗಾದ ಫ್ಯಾನ್ಸ್, ಫೋಟೋ ವೈರಲ್
ರಿಲೀಸ್‌ಗೂ ಮುಂಚಿತವಾಗಿ ಚಾರ್ಲಿ ಶೋ ಆರಂಭ
ಬೆಂಗಳೂರಿನ ಪ್ರೇಕ್ಷಕರು ಒಂದು ದಿನ ಮುಂಚಿತವಾಗಿಯೇ ರಕ್ಷಿತ್ ಶೆಟ್ಟಿ ಅವರ 777 ಚಾರ್ಲಿ ನೋಡಲು ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕದಲ್ಲಿ ಜೂನ್ 9ರಂದು 100ಸ್ಕ್ರೀನ್‌ನಲ್ಲಿ 777ಚಾರ್ಲಿ ಪ್ರೀಮಿಯರ್ ಮಾಡಲಾಗುತ್ತಿದೆ. ಮೊದಲ ಬಾರಿಗೆ ರಾಜ್ಯದ ಆಯ್ದ ಸಿಂಗಲ್ ಥಿಯೇಟರ್‌ನಲ್ಲಿ 777ಚಾರ್ಲಿ ಪ್ರೀಮಿಯರ್ ಶೋ ಮಾಡುತ್ತಿರುವುದು ವಿಶೇಷ.
Rakshith Shetty Birthday; ಸಿಂಪಲ್ ಸ್ಟಾರ್‌ಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ
ಇನ್ನು ಇವತ್ತಿನ ಪತ್ರಿಕಾಗೋಷ್ಠಿಯಲ್ಲಿ 777 ಚಾರ್ಲಿ ಸಿನಿಮಾದ ಲಿರಿಕಲ್ ವಿಡಿಯೋವನ್ನು ರಿಲೀಸ್ ಮಾಡಲಾಯಿತು. ಈಗಾಗಲೇ 777 ಚಾರ್ಲಿ ದೇಶದ ಅನೇಕ ಭಾಗಗಳಲ್ಲಿ ಪ್ರೀಮಿಯರ್ ಆಗಿದೆ. ಪ್ರೀಮಿಯರ್‌ನಲ್ಲಿ ಚಿತ್ರಕ್ಕೆ ಅದ್ಭುತವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ. ದೆಹಲಿ, ಲಖ್‌ನೌ ಸೇರಿದಂತೆ ಅನೇಕ ಕಡೆ ಪ್ರೀಮಿಯರ್ ಮಾಡಲಾಗಿದ್ದು ಚಾರ್ಲಿಯನ್ನು ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಕಿರಣ್ ರಾಜ್ ಸಾರಥ್ಯದಲ್ಲಿ ಮೂಡಿಬಂದಿರುವ ಬಹುನಿರೀಕ್ಷೆಯ ಚಾರ್ಲಿ ಜೂನ್ 10ರಂದು ರಿಲೀಸ್ ಆಗುತ್ತಿದ್ದು ಭಾರತೀಯ ಸಿನಿ ಅಭಿಮಾನಿಗಳು ಚಿತ್ರಮಂದಿರದಲ್ಲಿ ನೋಡಿ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.
