777 Charlie; ಚೆನ್ನೈನಲ್ಲಿ ಕುಳಿತ ಚಾರ್ಲಿ ನೋಡಿ ಬೆರಗಾದ ಫ್ಯಾನ್ಸ್, ಫೋಟೋ ವೈರಲ್
ಸ್ಯಾಂಡಲ್ ವುಡ್‌ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ಭಾರಿ ನಿರೀಕ್ಷೆ ಹುಟ್ಟುಹುಟ್ಟುಹಾಕಿದೆ. ಈಗಾಗಲೇ ಟ್ರೈಲರ್ ಮೂಲಕ ಭಾರಿ ಹೈಪ್ ಕ್ರಿಯೇಟ್ ಮಾಡಿರುವ 777 ಚಾರ್ಲಿ ಬಿಡುಗಡೆಗೆ ದಿನಗಣಗೆ ಪ್ರಾರಂಭವಾಗಿದೆ. ಮನುಷ್ಯ ಮತ್ತು ನಾಯಿಯ ಭಾವನಾತ್ಮಕ ಸಂಬಂಧದ ಬಗ್ಗೆ ಇರುವ ಚಾರ್ಲಿಯನ್ನು ಚಿತ್ರಮಂದಿರಗಳಲ್ಲಿ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ.
ಸ್ಯಾಂಡಲ್ ವುಡ್‌ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ(Rakshith Shetty) ನಟನೆಯ 777 ಚಾರ್ಲಿ(777 Charlie) ಸಿನಿಮಾ ಭಾರಿ ನಿರೀಕ್ಷೆ ಹುಟ್ಟುಹುಟ್ಟುಹಾಕಿದೆ. ಈಗಾಗಲೇ ಟ್ರೈಲರ್ ಮೂಲಕ ಭಾರಿ ಹೈಪ್ ಕ್ರಿಯೇಟ್ ಮಾಡಿರುವ 777 ಚಾರ್ಲಿ ಬಿಡುಗಡೆಗೆ ದಿನಗಣಗೆ ಪ್ರಾರಂಭವಾಗಿದೆ. ಮನುಷ್ಯ ಮತ್ತು ನಾಯಿಯ ಭಾವನಾತ್ಮಕ ಸಂಬಂಧದ ಬಗ್ಗೆ ಇರುವ ಚಾರ್ಲಿಯನ್ನು ಚಿತ್ರಮಂದಿರಗಳಲ್ಲಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಈಗಾಗಲೇ ಸಿನಿಮಾತಂಡ ಭರ್ಜರಿ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರುತ್ತಿರುವ 777 ಚಾರ್ಲಿ ಸಿನಿಮಾದ ಪ್ರಮೋಷನ್ ದೇಶದಾದ್ಯಂತ ನಡೆಯುತ್ತಿದೆ. ರಕ್ಷಿತ್ ಶೆಟ್ಟಿ, ನಿರ್ದೇಶಕ ಕಿರಣ್ ರಾಜ್ ಮತ್ತು ಇಡೀ ತಂಡ ದೇಶದಾದ್ಯಂತ ಸಂಚರಿಸುತ್ತಿದೆ. ವಿಶೇಷ ಎಂದರೆ ರಕ್ಷಿತ್ ಆಂಡ್ ತಂಡದ ಜೊತೆ ಚಾರ್ಲಿ ಕೂಡ ಎಲ್ಲಾ ಕಡೆ ಸಂಚರಿಸುತ್ತಿದೆ. ಎಲ್ಲಾ ಕಡೆ ಪ್ರಮೋಷನ್‌ನಲ್ಲಿ ಭಾಗಿಯಾಗುತ್ತಿರುವ ಚಾರ್ಲಿ ಸಿನಿ ಪ್ರೇಕ್ಷಕರ ಹೃದಯ ಗೆದ್ದಿದೆ.
777 Charlie; ಧರ್ಮ ಹಾಗೂ ಚಾರ್ಲಿಯ ಭಾವನಾತ್ಮಕ ಟ್ರೇಲರ್‌ಗೆ ಫ್ಯಾನ್ಸ್ ಫಿದಾ
ಅಂದಹಾಗೆ 777 ಚಾರ್ಲಿ ಸಿನಿಮಾದ ದೊಡ್ಡ ಕಟೌಟ್ ಈಗ ಎಲ್ಲಾ ಹರಿದಾಡುತ್ತಿದೆ. ಚೆನ್ನೈನಲ್ಲಿ ಕುಳಿತಿರುವ ಚಾರ್ಲಿ ಕಟೌಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಚೈನ್ನೈನ ಸಿನಿಮಾಸ್ ನಲ್ಲಿ ಚಾರ್ಲಿ ಕಟೌಟ್ ನಿಲ್ಲಿಸಲಾಗಿದೆ. ಚಾರ್ಲಿ ಸಿನಿಮಾ ಈಗಾಗಲೇ ಎಲ್ಲಾ ಕಡೆ ಗಮನ ಸೆಳೆಯುತ್ತಿದೆ. ಭಾರಿ ನಿರೀಕ್ಷೆ ಮೂಡಿಸಿರುವ ಈ ಸಿನಿಮಾಗೆ ಬೇರೆ ಬೇರೆ ಭಾಷೆಯ ಸ್ಟಾರ್ ಕಲಾವಿದರು ಸಾಥ್ ನೀಡಿದ್ದಾರೆ. ರಾಣಾ ದಗ್ಗುಬಾಟಿ, ಪೃಥ್ವಿರಾಜ್ ಸುಕುಮಾರನ್, ನಿವಿನ್ ಪೌಲಿ ಸೇರಿದಂತೆ ಅನೇಕರು 777 ಚಾರ್ಲಿ ಸಿನಿಮಾಗೆ ಬೆಂಬಲ ನೀಡಿದ್ದಾರೆ. ಈಗಾಗಲೇ ನಟ ರಾಣಾ ದಗ್ಗುಬಾಟಿ ಸಿನಿಮಾ ವೀಕ್ಷಿಸಿ ಮೊದಲ ವಿಮರ್ಶೆ ಮಾಡಿದ್ದಾರೆ. ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ ಎಂದು ಹಾಡಿಹೊಗಳಿದ್ದಾರೆ.
ಪ್ಯಾನ್ ಇಂಡಿಯಾದಲ್ಲಿ ಚಾರ್ಲಿ ಹವಾ ಜೋರು; ಐಎಂಡಿಬಿ ನಲ್ಲಿ ಅತೀ ಹೆಚ್ಚು ರೇಟಿಂಗ್ ಪಡೆದ ಸಿನಿಮಾ
ಈಗಾಗಲೇ ರಿಲೀಸ್ ಆಗಿರುವ ರಕ್ಷಿತ್ ಶೆಟ್ಟಿ ನಟನೆಯ ಹೊಸ ಸಿನಿಮಾದ ಟ್ರೈಲರ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅನೇಕ ಸೆಲೆಬ್ರಿಟಿಗಳು ಸಹ ಟ್ರೈಲರ್ ಮೆಚ್ಚಿ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಅಂದಹಾಗೆ 777 ಚಾರ್ಲಿ ಕನ್ನಡ, ಮಲಯಾಳಂ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಅಂದಹಾಗೆ ಬಹುನಿರೀಕ್ಷೆಯ ಸಿನಿಮಾ ಜೂನ್ 10ರಂದು ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ನಾಯಿ ಮತ್ತು ಮನುಷ್ಯನ ನಡುವಿನ ಭಾವನಾತ್ಮಕ ಸಂಬಂಧದ ಬಗ್ಗೆ ಇರುವ 777 ಚಾರ್ಲಿ ಕಿರಣ್ ರಾಜ್ ಸಾರಥ್ಯದಲ್ಲಿ ಮೂಡಿಬಂದಿದೆ. ಚಿತ್ರದಲ್ಲಿ ರಕ್ಷಿತ್ ಧರ್ಮ ಪಾತ್ರದಲ್ಲಿ ಮಿಂಚಿದ್ದಾರೆ. ಧರ್ಮ ಮತ್ತು ಚಾರ್ಲಿಯ ಕಥೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.