Rakshith Shetty Birthday; ಸಿಂಪಲ್ ಸ್ಟಾರ್‌ಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ
ಸ್ಯಾಂಡಲ್ ವುಡ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರಿಗೆ ಇಂದು (ಜೂನ್ 6) ಹುಟ್ಟುಹಬ್ಬದ ಸಂಭ್ರಮ. ಸಿಂಪಲ್ ಸ್ಟಾರ್ ಎಂದೇ ಖ್ಯಾತಿಗಳಿಸಿರುವ ನಟಿ ರಕ್ಷಿತ್ ಶೆಟ್ಟಿ ಅವರಿಗೆ ಅಭಿಮಾನಿಗಳು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಸ್ಯಾಂಡಲ್ ವುಡ್ ಸ್ಟಾರ್ ರಕ್ಷಿತ್ ಶೆಟ್ಟಿ(Rakshith shetty) ಅವರಿಗೆ ಇಂದು (ಜೂನ್ 6) ಹುಟ್ಟುಹಬ್ಬದ(Birthday) ಸಂಭ್ರಮ. ಸಿಂಪಲ್ ಸ್ಟಾರ್ ಎಂದೇ ಖ್ಯಾತಿಗಳಿಸಿರುವ ನಟಿ ರಕ್ಷಿತ್ ಶೆಟ್ಟಿ ಅವರಿಗೆ ಅಭಿಮಾನಿಗಳು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ರಕ್ಷಿತ್ ಶೆಟ್ಟಿಯ ಫೋಟೋ, ವಿಡಿಯೋಗಳನ್ನು ಶೇರ್ ಮಾಡಿ ಅಭಿಮಾನಿಗಳು ವಿಶ್ ಮಾಡುತ್ತಿದೆ. ಸ್ಯಾಂಡಲ್ ವುಡ್‌ನಲ್ಲಿ ತನ್ನದೇ ಆದ ಅಭಿಮಾನಿ ಬಳಗ ಹೊಂದಿರುವ ನಟ ರಕ್ಷಿತ್ ಇದೀಗ 777 ಚಾರ್ಲಿ(777 charlie) ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಲು ಸಜ್ಜಾಗಿದ್ದಾರೆ. ರಕ್ಷಿತ್ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದಾರೆ.
ರಕ್ಷಿತ್ ಶೆಟ್ಟಿಗೆ ಈ ಬಾರಿಯ ಹುಟ್ಟುಹಬ್ಬ ತುಂಬಾನೆ ಸ್ಪೆಷಲ್. ಯಾಕಂದರೆ ರಕ್ಷಿತ್ ನಟನೆಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಹೌದು, 777 ಚಾರ್ಲಿ ಸಿನಿಮಾ ಮೂಲಕ ರಕ್ಷಿತ್ ದೇಶದಾದ್ಯಂತ ಸದ್ದು ಮಾಡುತ್ತಿದ್ದಾರೆ. ರಕ್ಷಿತ್ ಸದ್ಯ 777 ಚಾರ್ಲಿ ಸಿನಿಮಾದ ಪ್ರೋಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ದೇಶದಾದ್ಯಂತ ಸಂಚರಿಸುತ್ತಿದ್ದಾರೆ. ಈಗಾಗಲೇ ಅನೇಕ ಕಡೆ ಚಾರ್ಲಿಯ ಮೊದಲ ಪ್ರಿಮಿಯರ್ ಶೋ ಕೂಡ ಆಗಿದೆ. ಸಿನಿಮಾ ನೋಡಿದ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಧರ್ಮ ಮತ್ತು ಚಾರ್ಲಿಯ ಭಾವನಾತ್ಮಕ ಕಥೆಗೆ ಕಣ್ಣೀರಾಕುತ್ತಿದ್ದಾರೆ.
777 Charlie; ಚೆನ್ನೈನಲ್ಲಿ ಕುಳಿತ ಚಾರ್ಲಿ ನೋಡಿ ಬೆರಗಾದ ಫ್ಯಾನ್ಸ್, ಫೋಟೋ ವೈರಲ್
ದೇಶದ ಎಲ್ಲಾಕಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾ ನೋಡಿದ ಅಭಿಮಾನಿಗಳು ಭಾವುಕ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅಭಿಮಾನಿಗಳ ಈ ಫಾಸಿಟಿವ್ ಪ್ರತಿಕ್ರಿಯೇ ರಕ್ಷಿತ್ ಹುಟ್ಟುಹಬ್ಬದ ದೊಡ್ಡ ಗಿಫ್ಟ್ ಆಗಿದೆ. ಈಗಾಗಲೇ 777 ಚಾರ್ಲಿ ಟ್ರೈಲರ್ ಮತ್ತು ಪೋಸ್ಟರ್ ಮೂಲಕ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದೆ. ಜೂನ್ 10ರಂದು ತೆರೆಗೆ ಬರುತ್ತಿರುವ ಚಾರ್ಲಿ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಈಗಾಗಲೇ ಆನ್ ಲೈನ್ ಬುಕ್ಕಿಂಗ್ ಓಪನ್ ಆಗಿದ್ದು ಬಹುತೇಕ ಶೋಗಳು ಹೌಸ್ ಫುಲ್ ಆಗಿವೆ.
ಅಂದಹಾಗೆ 777 ಚಾರ್ಲಿ ಕಿರಣ್ ರಾಜ್ ಸಾರಥ್ಯದಲ್ಲಿ ಬಂದ ಸಿನಿಮಾ. ರಕ್ಷಿತ್ ಅವರ ಪರಂವಾ ಸ್ಟುಡಿಯೋ ಮೂಲಕ ಸಿನಿಮಾ ಮಡಿಬಂದಿದೆ. ಕನ್ನಡದ ಜೊತೆಗೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಅಂದಹಾಗೆ 777 ಚಾರ್ಲಿ ಸಿನಿಮಾದ ಪೇಯ್ಡ್ ಪ್ರೀಮಿಯರ್ ದೇಶದ ಅನೇಕ ಭಾಗಗಳಲ್ಲಿ ಆಗಿದೆ. ಸದ್ಯ ಸಿನಿಮಾತಂಡ ದೆಹಲಿಯಲ್ಲಾದ ಪ್ರೀಮಿಯರ್ ಶೋಗೆ ಬಂದ ಅಭಿಮಾನಿಗಳು ಮತ್ತು ಅವರ ಪ್ರತಿಕ್ರಿಯೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದೆ.
ನನಗೆ ಲವ್ ಫೇಲ್ಯೂರ್ ಆಗಿಲ್ಲ; ರವಿಚಂದ್ರನ್ ಪ್ರಶ್ನೆಗೆ ರಕ್ಷಿತ್ ಶೆಟ್ಟಿಯ ಉತ್ತರ
ರಕ್ಷಿತ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಚಿತ್ರೀಕರಣದಲ್ಲಿ ರಕ್ಷಿತ್ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಪೋಸ್ಟರ್ ಈಗಾಗಲೇ ರಿಲೀಸ್ ಆಗಿದ್ದು ಈ ಸಿನಿಮಾ ಕೂಡ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಾಕಿದೆ. ಇನ್ನು ರಿಚರ್ಡ್ ಆಂಟೋನಿ ಸಿನಿಮಾ ಕೂಡ ರಕ್ಷಿತ್ ಕೈಯಲ್ಲಿದೆ. ಈ ಸಿನಿಮಾಗೆ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುತ್ತಿದೆ. ಇನ್ನು ಕಿರಿಕ್ ಪಾರ್ಟಿ ಸೀಕ್ವೆಲ್, ಪುಣ್ಯಕೋಟಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.