Asianet Suvarna News Asianet Suvarna News

ರಾಮಲಲ್ಲಾ ಪ್ರಾಣ ಪ್ರತಿಷ್ಠೆಗೆ ಆಹ್ವಾನಿತರಾಗಿರುವ ಸಿನಿಮಾ, ಕ್ರೀಡಾ ಸೆಲೆಬ್ರಿಟಿಗಳು ಯಾರ್ಯಾರು ಗೊತ್ತಾ?

 ರಾಮಲಲ್ಲಾ ಪ್ರಾಣ ಪ್ರತಿಷ್ಠೆಗೆ ಆಹ್ವಾನಿತರಾಗಿರುವ ಸಿನಿಮಾ ಮತ್ತು ಕ್ರೀಡಾ  ಕ್ಷೇತ್ರಗಳ ಸೆಲೆಬ್ರಿಟಿಗಳ ಸಂಪೂರ್ಣ ಮಾಹಿತಿ ಇಲ್ಲಿದೆ... 
 

Celebs invited for the opening ceremony of the Ram Mandir in Ayodhya suc
Author
First Published Jan 12, 2024, 4:11 PM IST | Last Updated Jan 12, 2024, 4:11 PM IST

ಅಯೋಧ್ಯೆಯಲ್ಲಿನ ರಾಮಲಲ್ಲಾ ಪ್ರಾಣ ಪ್ರತಿಷ್ಠೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಇದೇ 22ರಂದು ನಡೆಯಲಿರುವ ಈ ಮಹಾನ್​ ಕಾರ್ಯಕ್ಕೆ ಭರ್ಜರಿ ತಯಾರಿ ನಡೆದಿದೆ. ಭಾರತ ಮಾತ್ರವಲ್ಲದೇ ಪ್ರಪಂಚದ ಹತ್ತಾರು ದೇಶಗಳು ಈ ಐತಿಹಾಸಿಕ ದಿನಕ್ಕಾಗಿ ಕಾದು ಕುಳಿತಿವೆ. ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಪ್ರಾಣಪ್ರತಿಷ್ಠೆಯ ನೇರ ಪ್ರಸಾರಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಮೆರಿಕ ಒಂದರಲ್ಲಿಯೇ ಕನಿಷ್ಠ 100 ಕಡೆಗಳಲ್ಲಿ ಈ ಸಿದ್ಧತೆ ನಡೆಯುತ್ತಿರುವುದಾಗಿ ವರದಿಯಾಗಿದೆ. ಮುಸ್ಲಿಂ ರಾಷ್ಟ್ರಗಳು ಸೇರಿದಂತೆ ಪ್ರಪಂಚದ ವಿವಿಧ ದೇಶಗಳ ಗಣ್ಯಾತಿಗಣ್ಯರು ಭಾರತಕ್ಕೆ ಆಗಮಿಸಿ ಪ್ರಾಣಪ್ರತಿಷ್ಠೆಯಲ್ಲಿ ಪಾಲ್ಗೊಳ್ಳಲಿದ್ದಾರೆ.   ಇದಾಗಲೇ ಅಯೋಧ್ಯೆ ನಗರಿಯಲ್ಲಿ ಬಿರುಸಿನ ಕಾರ್ಯ ಚಟುವಟಿಕೆಗಳು ನಡೆಯುತ್ತಿದ್ದು, ಎಲ್ಲೆಲ್ಲೂ ಶ್ರೀರಾಮನಾಮವೇ ಮೊಳಗುತ್ತಿದೆ. ಅಯೋಧ್ಯೆ ನವವಧುವಿನಂತೆ ಶೃಂಗಾರಗೊಂಡು ನಳನಳಿಸುತ್ತಿದೆ. ಶ್ರೀರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ಕೆ ಇದಾಗಲೇ ಮನೆಮನೆಗೆ ತೆರಳಿ ಅಕ್ಷತೆ ನೀಡಿ ಆಮಂತ್ರಿಸುವ ಕಾರ್ಯವೂ ನಡೆಯುತ್ತಿದೆ. 500 ವರ್ಷಕ್ಕೂ ಅಧಿಕ ಕಾಲದ ಹೋರಾಟಕ್ಕೆ ಇದೀಗ ಫಲ ಸಿಕ್ಕಿದೆ.

ಇಂಥದ್ದೊಂದು ಐತಿಹಾಸಿಕ ಕ್ಷಣವನ್ನು ಮನೆಯಲ್ಲಿಯೇ ಕುಳಿತು ನೇರಪ್ರಸಾರವನ್ನು ವೀಕ್ಷಿಸುವ ಮೂಲಕ ಎಲ್ಲರೂ ಕಣ್​ತುಂಬಿಸಿಕೊಳ್ಳಬಹುದಾದರೂ, ಸ್ಥಳದಲ್ಲಿಯೇ ಇದ್ದು, ಈ ಪುಣ್ಯಕಾರ್ಯಕ್ಕೆ ಸಾಕ್ಷಿಯಾಗುವ ಅನುಭೂತಿಯೇ ಬೇರೆ. ಇದಾಗಲೇ ಹಲವಾರು ಕ್ಷೇತ್ರಗಳ ಗಣ್ಯರಿಗೆ ಅಂದು ಆಮಂತ್ರಣ ನೀಡಲಾಗಿದೆ. ಸ್ಥಳಾವಕಾಶದ ಕೊರತೆಯಿಂದಾಗಿ ಆಯ್ದ ಕೆಲವರಿಗೆ ಅಯೋಧ್ಯೆಗೆ ಬರಲು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ ವತಿಯಿಂದ ಆಮಂತ್ರಣ ನೀಡಲಾಗಿದೆ. ಇದರಲ್ಲಿ ವಿದೇಶಗಳ ಹಲವು ಗಣ್ಯರೂ ಇದ್ದರೆ, ಭಾರತದಿಂದ ಸಿನಿಮಾ, ಕ್ರೀಡೆ, ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳಿಂದ ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಲಾಗಿದೆ. 

ರಾಮ ಭಕ್ತರ ಆಸೆ ಕೊನೆಗೂ ಈಡೇರಿಸಿದ ಡಾ.ಬ್ರೋ: ರಾಮಲಲ್ಲಾ ಮಂದಿರದ ಮುಖ್ಯದ್ವಾರದಲ್ಲಿ ಗಗನ್​ ವಿವರಣೆ...

ಇನ್ನು ಸಿನಿಮಾ  ಮತ್ತು ಕ್ರೀಡಾ ಕ್ಷೇತ್ರದಿಂದ ಆಮಂತ್ರಿತರಾಗಿರುವವರ ಪಟ್ಟಿ ಬಿಡುಗಡೆಯಾಗಿದೆ. ಇದರಲ್ಲಿ,  ಆಲಿಯಾಭಟ್, ರಣಬೀರ್ ಕಪೂರ್, ಅಮಿತಾಭ್​ ಬಚ್ಚನ್, ರಜನಿಕಾಂತ್, ಜಾಕಿಶ್ರಾಫ್, ಪ್ರಭಾಸ್, ಧನುಷ್, ರಣದೀಪ್ ಹೂಡಾ, ಕಂಗನಾ ರಣಾವತ್, ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್, ಅಕ್ಷಯ್​ ಕುಮಾರ್​,  1987-88ರಲ್ಲಿ ಪ್ರಸಾರ ಆಗುತ್ತಿದ್ದ ರಾಮಾಯಣದಲ್ಲಿ ರಾಮ-ಸೀತೆ ಪಾತ್ರಧಾರಿಯಾಗಿದ್ದ ಅರುಣ್​ ಗೋವಿಲ್​ ಹಾಗೂ  ದೀಪಿಕಾ ಚಿಖಲಿಯಾ ಅವರಿಗೆ ಆಮಂತ್ರಣ ಹೋಗಿದೆ. 

ಈ ಸೆಲೆಬ್ರಿಟಿಗಳು ಅಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇದು ತಮಗೆ ಒದಗಿ ಬಂದಿರುವ ಪುಣ್ಯ ಎಂದು ಸೆಲೆಬ್ರಿಟಿಗಳು ಹೇಳುತ್ತಿದ್ದಾರೆ.  ತಮಗೂ ಆಮಂತ್ರಣ ಸಿಕ್ಕಿದ್ದು 2024ರ ದೀಪಾವಳಿ ನನ್ನ ಪಾಲಿಗೆ ಜನವರಿಯಲ್ಲಿಯೇ ಬಂದಿದೆ ಎಂದು ಸೀತಾ ಪಾತ್ರಧಾರಿ ದೀಪಿಕಾ ಎಂದಿದ್ದಾರೆ. 

ಅಯೋಧ್ಯೆಯ ಶ್ರೀರಾಮನ ಪ್ರಾಣಪ್ರತಿಷ್ಠೆಗೆ 'ಸೀತೆ'ಗೂ ಆಹ್ವಾನ: ನನ್ನ ಪಾಲಿನ ದೀಪಾವಳಿ ಇದು ಎಂದ ನಟಿ

 

Latest Videos
Follow Us:
Download App:
  • android
  • ios