ಅನಿಲ್ ಕಪೂರ್ 10 ಕೋಟಿ ಆಫರ್ ರಿಜೆಕ್ಟ್! ಶಾರುಖ್- ಅಜಯ್ ದೇವಗನ್ ವಿರುದ್ಧ ನೆಟ್ಟಿಗರಿಂದ ಭಾರಿ ಆಕ್ರೋಶ
ಅನಿಲ್ ಕಪೂರ್ 10 ಕೋಟಿ ಆಫರ್ ರಿಜೆಕ್ಟ್ ಮಾಡಿದ್ದು ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದಾರೆ. ಇದೇ ವೇಳೆ ಶಾರುಖ್- ಅಜಯ್ ದೇವಗನ್ ಹಣದ ದುರಾಸೆಗೆ ನೆಟ್ಟಿಗರು ಗರಂ ಆಗಿದ್ದೇಕೆ?
ಜನರ ಹಾದಿಯನ್ನು ತಪ್ಪಿಸಲು, ಅಪರಾಧ ಚಟುವಟಿಕೆಗಳಿಗೆ ಯುವ ಸಮುದಾಯವನ್ನು ನೂಕುವಲ್ಲಿ ಇಂದಿನ ಬಹುತೇಕ ಸಿನಿಮಾಗಳ, ಚಿತ್ರ ತಾರೆಯರ ಕೊಡುಗೆ ಬಹಳ ದೊಡ್ಡದಿದೆ ಎನ್ನುವ ಗಂಭೀರ ಆರೋಪಗಳ ನಡುವೆಯೇ, ವಿಷಕಾರಿ ಜಾಹೀರಾತುಗಳಲ್ಲಿ ಹಣದ ದುರಾಸೆಗಾಗಿ ನಟಿಸುವ ನಟ-ನಟಿಯರ ಸಂಖ್ಯೆಯೂ ಅಪಾರವಾಗಿದೆ. ಇದರಲ್ಲಿ ಕೆಲ ವರ್ಷಗಳಿಂದ ಸದ್ದು ಮಾಡುತ್ತಿರುವ ಜಾಹೀರಾತು ಗುಟ್ಕಾ- ಪಾನ್ ಮಸಾಲಾ. ಈ ಜಾಹೀರಾತಿನಲ್ಲಿ ಕಾಣಿಸಿಕೊಂಡು ಕೊನೆಗೆ ತಾವು ತಪ್ಪು ಮಾಡುತ್ತಿರುವುದನ್ನು ಅರಿತಿರುವ ಅಕ್ಷಯ್ ಕುಮಾರ್ ಈ ಜಾಹೀರಾತಿನಿಂದ ಹಿಂದಕ್ಕೆ ಸರಿದರು. ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅವರು ಈ ಜಾಹೀರಾತಿನಲ್ಲಿ ತಾವು ನಟಿಸಲ್ಲ ಎಂದು ಹೇಳಿದ್ದರು. ಆದರೆ ಇಷ್ಟೆಲ್ಲಾ ಆದರೂ ಸಹಸ್ರಾರು ಕೋಟಿ ರೂಪಾಯಿಗಳ ಒಡೆಯರಾಗಿರುವ ಶಾರುಖ್ ಖಾನ್, ಅಜಯ್ ದೇವಗನ್ ಇಂದಿಗೂ ಈ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಕ್ಷಯ್ ಕುಮಾರ್ ಜಾಗಕ್ಕೆ ಟೈಗರ್ ಶ್ರಾಫ್ ಬಂದಾಗಿದೆ!
ಇದೇ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವಂತೆ ನಟ ಅನಿಲ್ ಕಪೂರ್ ಅವರಿಗೆ ಕಂಪೆನಿ 10 ಕೋಟಿ ರೂಪಾಯಿ ಆಫರ್ ಮಾಡಿದೆ ಎನ್ನುವ ಸುದ್ದಿ ವರದಿಯಾಗಿದೆ. ಆದರೆ ಜನರ ಜೀವನದ ಜೊತೆ ಅದರಲ್ಲಿಯೂ ಯುವ ಸಮುದಾಯದ ಜೀವನದ ಜೊತೆ ಚೆಲ್ಲಾಟವಾಡಲು ನನಗೆ ಇಷ್ಟವಿಲ್ಲ ಎಂದು ಕಾರಣ ಕೊಟ್ಟಿರುವ ಅನಿಲ್ ಕಪೂರ್ ಅವರು, ಈ ಜಾಹೀರಾತಿಗೆ ಸಹಿ ಹಾಕಿಲ್ಲ ಎನ್ನುವ ವಿಷಯ ತಿಳಿದುಬಂದಿದೆ. ನಟನ ನಡವಳಿಕೆಗೆ ಅಭಿಮಾನಿಗಳಿಂದ ಶ್ಲಾಘನೆ ವ್ಯಕ್ತವಾಗಿದೆ. ಆತ್ಮಸಾಕ್ಷಿ ಇಲ್ಲದವರು, ಹಣದ ದುರಾಸೆಯಿಂದ ಜನರ ದಾರಿ ತಪ್ಪಿಸಿ ಅವರನ್ನು ಮೃತ್ಯಕೂಪಕ್ಕೆ ತಳ್ಳುವ ನಟರು ಇಂಥ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಅನಿಲ್ ಕಪೂರ್ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದಿದ್ದಾರೆ..
ವಿಚಿತ್ರ ಬಟ್ಟೆ ಧರಿಸಿ ವೇದಿಕೆಯಲ್ಲಿ ಒಂದೊಂದೇ ಕಳಚಿದ ಉರ್ಫಿ ಜಾವೇದ್! ವಿಡಿಯೋ ನೋಡಿ ಸುಸ್ತಾದ ನೆಟ್ಟಿಗರು
ಅಷ್ಟಕ್ಕೂ, ನಟರು ಮಾಡುವ ಇಂಥ ಕೆಟ್ಟ ಕೃತ್ಯಗಳಿಂದ ಪ್ರಭಾವಿತರಾಗಿ ಇದರ ಚಟಕ್ಕೆ ದಾಸರಾಗಿರುವವರೂ ಲೆಕ್ಕವಿಲ್ಲದಷ್ಟು. ಯಾವಾಗಲೂ ಫಿಟ್ನೆಸ್ ಬಗ್ಗೆ ಮಾತನಾಡುವ ಅಕ್ಷಯ್ ಕುಮಾರ್ ಗುಟ್ಕಾ ಜಾಹೀರಾತಿನಲ್ಲಿ ನಟಿಸಿದ್ದು ಸರಿ ಅಲ್ಲ ಎಂದು ಅನೇಕರು ಕಮೆಂಟ್ ಮಾಡಿದ್ದರು. ಇದಾದ ಬೆನ್ನಲ್ಲೇ ವಿಮಲ್ ಜಾಹೀರಾತಿನಲ್ಲಿ ನಟಿಸುವುದಿಲ್ಲ ಎಂದು ಅಕ್ಷಯ್ ಹೇಳಿದ್ದರು. 2022ರ ಏಪ್ರಿಲ್ನಲ್ಲಿ ಟ್ವೀಟ್ ಮಾಡಿದ್ದ ಅಕ್ಷಯ್, ‘ದಯವಿಟ್ಟು ನನ್ನ ಕ್ಷಮಿಸಿ. ಎಲ್ಲರ ಬಳಿ ನಾನು ಕ್ಷಮೆ ಕೇಳುತ್ತೇನೆ. ನೀವು ನೀಡಿರುವ ಎಲ್ಲಾ ಪ್ರತಿಕ್ರಿಯೆ ನನ್ನ ಮೇಲೆ ಪರಿಣಾಮ ಬೀರಿದೆ. ನಾನು ತಂಬಾಕು ಸೇವನೆ ಉತ್ತೇಜಿಸುವುದಿಲ್ಲ. ಮಾನವೀಯತೆಯ ಕಾರಣದಿಂದ ನಾನು ಈ ಅಡ್ವಟೈಸ್ಮೆಂಟ್ನಿಂದ ಹಿಂದೆ ಸರಿಯುತ್ತೇನೆ. ಇದರ ಸಂಭಾವನೆಯನ್ನು ಒಳ್ಳೆಯ ಉದ್ದೇಶಕ್ಕೆ ನೀಡಲು ಬಯಸಿದ್ದೇನೆ ಎಂದು ಅದರಂತೆ ನಡೆದುಕೊಂಡರು.
ಅಲ್ಲಿಗೆ ಅಕ್ಷಯ್ ಕುಮಾರ್ ಅವರು ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ಆದರೆ ಇದೇ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಶಾರುಖ್ ಮತ್ತು ಅಜೆಯ್ ದೇವಗನ್ ಅವರು ಮೌನವಾಗಿದ್ದಾರೆ. ಇದರಿಂದ ಅವರ ವಿರುದ್ಧ ನೆಟ್ಟಿಗರು ಗರಂ ಆಗುತ್ತಿದ್ದಾರೆ. ಇಂಥವರನ್ನು ದೇವರು ಎಂದು ಪೂಜಿಸುತ್ತಾರೆ ಎಷ್ಟೋ ಮಂದಿ, ನಾಚಿಕೆ ಇಲ್ಲದವರು ಇವರು. ತಾವುಕೋಟಿ ಕೋಟಿ ಹಣ ಪಡೆದು ತಮ್ಮನ್ನು ನಂಬಿ ಪೂಜಿಸುವವರ ಜೀವವನ್ನೇ ಬಲಿ ತೆಗೆಯುವ ಕಟುಕರು ಎಂದೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ಹೊರಹಾಕಲಾಗುತ್ತಿದೆ.
ಇವಳೇ ಅವಳು... ಕಾಜೋಲ್ ಮಗಳು... ಹೇಗಿದ್ಲು ಹೇಗಾದ್ಲು ನೋಡಿ ನೀಸಾ ದೇವಗನ್- ಹಳೆ ಫೋಟೋ ವೈರಲ್