ಪಠಾಣ್ ತಂಡಕ್ಕೆ ಮತ್ತೊಂದು ಶಾಕ್, ಬೇಷರಂ ರಂಗ್ ಹಾಡಿನ ದೀಪಿಕಾ ಸೀನ್‌ಗೆ CBFC ಕತ್ತರಿ!
ಪಠಾಣ್ ಚಿತ್ರ ಪ್ರತಿ ದಿನ ಒಂದಲ್ಲ ಒಂದು ವಿವಾದಕ್ಕೆ ಸಿಲುಕುತ್ತಿದೆ. ಕೇಸರಿ ಬಕಿನಿ, ಅಶ್ಲೀಲತೆ, ಹಾಡು ಕದ್ದ ಆರೋಪ ಸೇರಿದಂತೆ ಒಂದಲ್ಲ ಒಂದು ವಿಘ್ನ ಎದುರಾಗುತ್ತಲೇ ಇದೆ. ಇದೀಗ ಬೇಷರಂ ಹಾಡಿನಲ್ಲಿ ಬರುವ ಅಶ್ಲೀಲ ಸೀನ್‌ಗೆ ಕತ್ತರಿ ಹಾಕಲು CBFC ಆದೇಶಿಸಿದೆ.
ಮುಂಬೈ(ಜ.05): ಶಾರುಖ್ ಖಾನ್, ದೀಪಿಕಾ ಪಡುಕೋಣೆ ಅಭಿಯನದ ಪಠಾಣ್ ಬಾಲಿವುಡ್ ಚಿತ್ರ ವಿವಾದ ಸುಳಿಯಲ್ಲಿ ಸಿಲುಕಿದೆ. ಹಿಂದೂ ಸಂಘಟನೆಗಳಿಂದ ತೀವ್ರ ವಿರೋಧದ ಬೆನ್ನಲ್ಲೇ ಇದೀಗ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್(CBFC) ಶಾಕ್ ನೀಡಿದೆ. ಬೇಷರಂ ರಂಗ್ ಹಾಡಿನಲ್ಲಿ ದೀಪಿಕಾ ಪಡುಕೋಣೆಯ ನೃತ್ಯ ಕೆಲ ಸೀನ್‌ಗೆ ಕತ್ತರಿ ಹಾಕಲು CBFC ನಿರ್ದೇಶಿಸಿದೆ. ದೀಪಿಕಾ ಪಡುಕೋಣೆ ಬಿಕಿನಿ ಸೀನ್ ಹಾಗೂ ನೆಲದಲ್ಲಿ ಸೊಂಟ ಬಳುಕಿಸಿದ ದೃಶ್ಯ ತೆಗೆದು ಹಾಕಲು CBFC ಸೂಚಿಸಿದೆ. ಚಿತ್ರ ಬಿಡುಗಡೆ ಮಾಡುವಾಗ ನಿರ್ದೇಶಿಸುವ ಸೀನ್ ತೆಗೆದುಹಾಕುವಂತೆ ಖಡಕ್ ಆದೇಶ ನೀಡಿದೆ.
ಬೇಷರಂ ರಂಗ್ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕ್ಲೋಸ್ ಅಪ್ ಶಾಟ್‌ನಲ್ಲಿ ಸೊಂಟ ಬಳುಕಿಸುವ ದೃಶ್ಯ, ಬಂಗಾರದ ಬಣ್ಣದ ಸ್ವಿಮ್ ಸ್ಯೂಟ್‌ನಲ್ಲಿನ ಕೆಲ ದೃಶ್ಯ, ಬಿಕಿನಿಯಲ್ಲಿರುವ ಕೆಲ ದೃಶ್ಯಕ್ಕೆ ಕತ್ತರಿ ಬೀಳಲಿದೆ. ಈ ದೃಶ್ಯಗಳೇ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಸದ್ಯ CBFC ನಿರ್ದೇಶಿಸಿರುವ ಸೂಚನೆಯಲ್ಲಿ ಯಾವೆಲ್ಲಾ ಸೀನ್‌ಗೆ ಕತ್ತರಿ ಬೀಳಲಿದೆ ಅನ್ನೋ ವಿವರ ಲಭ್ಯವಿಲ್ಲ. ಇಷ್ಟೇ ಅಲ್ಲ ದೀಪಿಕಾ ಪಡುಕೋಣೆಯ ಕೇಸರಿ ಬಿಕಿನಿ ದೃಶ್ಯ ಕೂಡ ತೆಗೆದು ಹಾಕಲಾಗುತ್ತದೆಯಾ ಅನ್ನೋ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಇಲ್ಲ.
Besharam Rang Controversy: ಶಾರುಖ್ ಖಾನ್‌ನ ಜೀವಂತವಾಗಿ ಸುಡುತ್ತೇನೆ; ಅಯೋಧ್ಯೆ ಸ್ವಾಮಿ ಕಿಡಿ
ಪಠಾಣ್ ಚಿತ್ರದಿಂದ 10ಕ್ಕೂ ಹೆಚ್ಚು ದೃಶ್ಯಕ್ಕೆ ಕತ್ತರಿ ಹಾಕುವಂತೆ CBFC ಸೂಚಿಸಿದೆ. ಇದೀಗ ಪಠಾಣ್ ಚಿತ್ರ ತಂಡ ಈ ದೃಶ್ಯಗಳಿಗ ಕತ್ತರಿ ಹಾಕಲಿದೆ. ಅಥವಾ ಈ ದೃಶ್ಯಗಳ ಜಾಗದಲ್ಲಿ ಬೇರೆ ದೃಶ್ಯ ಹಾಕುವ ಸಾಧ್ಯತೆ ಇದೆ. ಭಾರಿ ವಿವಾದ ಸೃಷ್ಟಿಸಿರುವ ಪಠಾಣ್ ಚಿತ್ರಕ್ಕೆ ಕತ್ತರಿ ಹಾಕಲು ಸೂಚಿಸಿರುವ CBFC ನಿರ್ಧಾರವನ್ನು ಹಲವು ಹಿಂದೂ ಸಂಘಟನೆಗಳು ಸ್ವಾಗತಿಸಿದೆ.
ವಿಎಚ್‌ಪಿ, ಬಜರಂಗದಳದಿಂದ ಪಠಾಣ್ ಚಿತ್ರದ ಪೋಸ್ಟರ್ ಧ್ವಂಸ
ಬಲಪಂಥೀಯ ಸಂಘಟನೆಗಳಾದ ವಿಶ್ವಹಿಂದು ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರು ಅಹಮದಾಬಾದ್‌ನ ವಸ್ತ್ರಪುರದಲ್ಲಿರುವ ಮಾಲ್‌ವೊಂದರಲ್ಲಿ ಬುಧವಾರ ಗಲಾಟೆ ನಡೆದ್ದಾರೆ. ಬಿಡುಗಡೆಗೆ ಸಿದ್ಧವಾಗಿರುವ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೊಣೆ ಅಭಿನಯದ ಪಠಾಣ್ ಚಿತ್ರದ ಪೋಸ್ಟರ್‌ಗಳನ್ನು ಹರಿದು ಹಾಗೂ ಪ್ರಚಾರ ಸಾಮಗ್ರಿಗಳನ್ನು ನಾಶಗೊಳಿಸಿದ್ದಾರೆ. ಈ ಸಂಬಂಧ ಕೆಲವು ಕಾರ‍್ಯಕರ್ತರನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಲಾಗಿದೆ.
Pathaan Boycott Trend: ಹಸಿರು ಬಣ್ಣವಾಯ್ತು ದೀಪಿಕಾ ಧರಿಸಿದ ಕೇಸರಿ ಬಿಕನಿ: ಮತ್ತೆ ನೆಟ್ಟಿಗರ ಆಕ್ರೋಶ
ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ, ಪಠಾಣ್ ಚಿತ್ರದಲ್ಲಿ ನಟರಿರುವ ಪೋಸ್ಟರ್ ಮತ್ತು ಕಟೌಟ್‌ಗಳನ್ನು ಹರಿದು ಹಾಕುತ್ತಿರುವ ವಿಡಿಯೋವೊಂದನ್ನು ವಿಎಚ್‌ಪಿ ಹಂಡಿಕೊಂಡಿದೆ. ಬೇಶರಮ್ ರಂಗ್ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಕ್ಕೆ ವಿರೋಧ ವ್ಯಕ್ತಡಿಸಿರುವ ಹಿಂದು ಸಂಘಟನೆಗಳು, ಗುಜರಾತ್‌ನಲ್ಲಿ ಚಿತ್ರ ಪ್ರದರ್ಶನಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ಎಂದಿವೆ.
ಈ ಕುರಿತು ಮಾತನಾಡಿರುವ ಗುಜರಾತ್ ವಿಎಚ್‌ಪಿ ವಕ್ತಾರ ಹಿತೇಂದ್ರ ಸಿನ್ಹಾ ರಜಪೂತ್, ನಾವು ಪಠಾಣ್ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ. ಬುಧವಾರ ಅಹಮದಾಬಾದ್‌ನಲ್ಲಿ ನಡೆದ ಪ್ರತಿಭಟನೆಯನ್ನು ಚಿತ್ರಮಂದಿರಗಳ ಮಾಲೀಕರು ಎಚ್ಚರಿಕೆಯನ್ನಾಗಿ ಪರಿಗಣಿಸಿ, ಪಠಾಣ್ ಚಿತ್ರ ಬಿಡುಗಡೆಯಿಂದ ದೂರವಿರಬೇಕು ಎಂದಿದ್ದಾರೆ.