ನಟ ರಣವೀರ್ ಸಿಂಗ್ ನಗ್ನ ಫೋಟೋ ಶೂಟ್ ದೇಶ ವಿದೇಶದಲ್ಲಿ ಭಾರಿ ಸದ್ದು ಮಾಡಿದೆ. ಅಭಿಮಾನಿಗಳು ಜೈಕಾರ ಹಾಕಿದ್ದಾರೆ. ಪರ ವಿರೋಧಗಳು ವ್ಯಕ್ತವಾಗಿದೆ. ಭಾರಿ ಸೆನ್ಸೇಷನ್ ಕ್ರಿಯೆಟ್ ಮಾಡಿದ್ದ ರಣವೀರ್ ಸಿಂಗ್‌ಗೆ ಇದೀಗ ಸಂಕಷ್ಟ ಎದುರಾಗಿದೆ. ಬೆತ್ತಲಾಗಿ ಫೋಟೋ ಶೋಟೂ ಮಾಡಿಸಿದ ರಣವೀರ್ ಮೇಲೆ ದೂರು ದಾಖಲಾಗಿದೆ.

ಮುಂಬೈ(ಜು.25): ಬಾಲಿವುಡ್ ನಟ ರಣವೀರ್ ಸಿಂಗ್ ಇತ್ತೀಚೆಗೆ ಸಂಪೂರ್ಣ ಬೆತ್ತಲಾಗಿ ಫೋಟೋಶೂಟ್ ಮಾಡಿಸಿಕೊಂಡು ಭಾರಿ ಸದ್ದು ಮಾಡುತ್ತಿದ್ದಾರೆ. ಹಲವರು ಅಮೆರಿಕ ನಟ ಬುರ್ಟ್ ರೆನಾಲ್ಡ್‌ಗೆ ಹೋಲಿಸಿದರೆ, ಮತ್ತೆ ಕೆಲವರು ಭಾರತದ ಬುರ್ಟ್ ಎಂದಿದ್ದಾರೆ. ರಣವೀರ್ ಧೈರ್ಯ ಮೆಚ್ಚಲೇಬೇಕು, ರಣವೀರ್‌ಗಿಂತ ಪತ್ನಿ ದೀಪಿಕಾ ಪಡುಕೋಣೆ ಧೈರ್ಯಕ್ಕೆ ಸಲಾಂ ಎಂದು ಹಲವರು ಪ್ರತಿಕ್ರಿಯಿಸಿದ್ದರು. ದೇಶ ವಿದೇಶಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದ ರಣವೀರ್ ಸಿಂಗ್‌ ಇದೀಗ ತಲೆನೋವು ಹೆಚ್ಚಾಗಿದೆ. ಫೋಟೋಶೂಟ್‌ಗಾಗಿ ಬೆತ್ತಲಾಗಿರುವ ರಣವೀರ್ ಸಿಂಗ್ ವಿರುದ್ಧ ದೂರು ದಾಖಲಾಗಿದೆ. ಮುಂಬೈ ಪೊಲೀಸ್ ಠಾಣೆಯಲ್ಲಿ ರಣವೀರ್ ವಿರುದ್ಧ ದೂರು ದಾಖಲಾಗಿದೆ. ರಣವೀರ್ ಬೆತ್ತಲಾಗುವ ಮೂಲಕ ಮಹಿಳೆಯರ ಭಾವನೆಗೆ ದಕ್ಕೆ ತಂದಿದ್ದಾರೆ ಎಂದು ದೂರು ದಾಖಲಾಗಿದೆ. ಇಷ್ಟು ದಿನ ಪರ ವಿರೋಧ ಎದುರಿಸಿದ ರಣವೀರ್ ಸಿಂಗ್ ಇದೀಗ ಕಾನೂನು ಹೋರಾಟ ಎದುರಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.

ಈ ರೀತಿ ಬೆತ್ತಲಾಗಿರುವ ಫೋಟೋಗಳಿಂದ ಮಹಿಳೆಯರಿಗೆ ಮುಜುಗರ ಮಾತ್ರವಲ್ಲ, ಭಾವನೆಗೆ ಧಕ್ಕೆಯಾಗಿದೆ. ಇದರಿಂದ ಮಕ್ಕಳ ಮನಸ್ಸಿನಲ್ಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ ಹೀಗಾಗಿ ರಣವೀರ್ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು. ಇಷ್ಟೇ ಅಲ್ಲ ಇಂತಹ ಘಟನೆಗಳು, ಬೆತ್ತಲಾಗುವ ಮಾದರಿಗಳು ಯಾರಿಗೂ ಮಾದರಿಯಾಗಬಾರದು. ಘಟನೆಗಳು ಮರುಕಳಿಸಬಾರದು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. 

ನಗ್ನರಾದ ರಣವೀರ್ ಸಿಂಗ್, ಫೋಸ್ ನೋಡಿ ದೀಪಿಕಾ ಗಂಡಂಗೇನಾಯ್ತು ಅಂತಿದ್ದಾರೆ ನೆಟ್ಟಿಗರು!

ಇಂಗ್ಲಿಷ್‌ ನಿಯತಕಾಲಿಕೆ ಪೇಪರ್‌ ಮ್ಯಾಗಜೀನ್‌ಗೋಸ್ಕರ ರಣವೀರ್ ನಗ್ನವಾಗಿ ಫೋಟೋಶೂಟ್‌ ಮಾಡಿಸಿಕೊಂಡಿದ್ದು, ಈ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಹಲವು ಮಂದಿ ರಣ್‌ವೀರ್‌ ಸಿಂಗ್‌ರನ್ನು ಮೆಚ್ಚಿಕೊಂಡರು, ಕೆಲವರು ಅವರ ಈ ನಡೆಯನ್ನು ಪ್ರಶ್ನೆ ಮಾಡಿದ್ದಾರೆ. ಪೇಪರ್‌ ಮ್ಯಾಗಜಿನ್‌ನಲ್ಲಿ ರಣ್‌ವೀರ್‌ ಸಿಂಗ್‌ ಸಂದರ್ಶನ ಪ್ರಕಟವಾಗಿದ್ದು, ಅದರೊಂದಿಗೆ ಈ ಫೋಟೋಗಳು ಪ್ರಕಟವಾಗಿವೆ. ಸಂದರ್ಶನದಲ್ಲಿ ಮಾತನಾಡಿರುವ ರಣ್‌ವೀರ್‌, ‘ನನಗೆ ದೈಹಿಕವಾಗಿ ಬೆತ್ತಲಾಗುವುದು ಸುಲಭ. ಕೆಲವು ಪಾತ್ರ ನಿರ್ವಹಣೆಯಲ್ಲಿಯೂ ನಾನು ಬೆತ್ತಲಾಗಿದ್ದಿದೆ. ಅಲ್ಲಿ ನೀವು ನನ್ನ ಆತ್ಮ ಬೆತ್ತಲಾಗಿದ್ದು ನೋಡಬಹುದು. ಸಾವಿರ ಮಂದಿಯ ಮುಂದೆಯೂ ನಾನು ನಗ್ನವಾಗಿ ನಿಲ್ಲಬಲ್ಲೆ. ಆದರೆ ಅವರೇ ಇರಿಸುಮುರಿಸಿಗೆ ಒಳಗಾಗುತ್ತಾರೆ’ ಎಂದು ಹೇಳಿದ್ದಾರೆ.

ರಣ್‌ವೀರ್‌ ನಗ್ನ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುವಂತೆ ನಟಿ, ಸಂಸದೆ ಮಿಮಿ ಚಕ್ರವರ್ತಿ ಟ್ವೀಟ್‌ ಮಾಡಿದ್ದು, ‘ಒಂದು ವೇಳೆ ಇದೇ ಥರ ನಟಿಯೊಬ್ಬಳು ಫೋಟೋಶೂಟ್‌ ಮಾಡಿದ್ದರೆ ಇದೇ ಥರ ಪ್ರಶಂಸೆ ಬರಲು ಸಾಧ್ಯವಿತ್ತೇ ಎಂದು ಯೋಚಿಸುತ್ತಿದ್ದೇನೆ. ಈ ಥರ ಫೋಟೋಶೂಟ್‌ ಮಾಡಿದ್ದರೆ ಜನರು ಆಕೆ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದರು. ಜೀವ ಬೆದರಿಕೆ ಬರುತ್ತಿತ್ತು’ ಎಂದು ಹೇಳಿದ್ದಾರೆ.