12 ವರ್ಷ ಕಲಿತದ್ದಕ್ಕಿಂತ 45 ದಿನಗಳಲ್ಲಿ ಆಮೀರ್ ಖಾನ್‌ನಿಂದ ತುಂಬಾ ಕಲಿತೆ; ಮಿಸ್ಟರ್ ಪರ್ಫೆಕ್ಷನಿಸ್ಟ್ ಬಗ್ಗೆ ನಾಗ ಚೈತನ್ಯ ಮಾತು

ನಟ ಆಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಟಾಲಿವುಡ್ ಸ್ಟಾರ್ ನಾಗ ಚೈತನ್ಯ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್‌ನಲ್ಲಿ ನಾಗ ಚೈತನ್ಯ ಅವರ ಒಂದು ದೃಶ್ಯವನ್ನು ಮಾತ್ರ ತೋರಿಸಲಾಗಿದೆ. ಸೈನಿಕ ಪಾತ್ರದಲ್ಲಿ ನಾಗ್ ಚೈತನ್ಯ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಮೂಲಕ ನಾಗ ಚೈತನ್ಯ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಬಾಲಿವುಡ್ ಮೊದಲ ಸಿನಿಮಾ ಮತ್ತು ಆಮೀರ್ ಖಾನ್ ಜೊತೆ ಕೆಲಸ ಮಾಡಿದ ಅನುಭವನ್ನು ನಟ ನಾಗ ಚೈತನ್ಯ ಬಹಿರಂಗ ಪಡಿಸಿದ್ದಾರೆ.

Naga Chaitanya about Laal Singh Chaddha co-star Aamir Khan sgk

ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್(Aamir Khan) ನಟನೆಯ ಬಹುನಿರೀಕ್ಷೆಯ ಲಾಲ್ ಸಿಂಗ್ ಚಡ್ಡಾ(Lal Singh Chaddha) ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಐಪಿಎಲ್ ಫೈನಲ್ ಪಂದ್ಯದದ ವೇಳೆ ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಟ್ರೈಲರ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಈಗಾಗಲೇ ಕುತೂಹಲ ಮತ್ತು ನಿರೀಕ್ಷೆ ಮೂಡಿಸಿರುವ ಲಾಲ್ ಸಿಂಗ್ ಚಡ್ಡಾ ಚಿತ್ರವನ್ನು ತೆರೆಮೇಲೆ ನೋಡಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಸಹ ಕಾಯುತ್ತಿದ್ದಾರೆ. ಸದ್ಯ ಟ್ರೈಲರ್ ನೋಡಿದ ಮೇಲೆ ನಿರೀಕ್ಷೆ ಮತ್ತಷ್ಟು ದುಪ್ಪಟ್ಟಾಗಿದೆ.

ಅಂದಹಾಗೆ ಈ ಸಿನಿಮಾದಲ್ಲಿ ಟಾಲಿವುಡ್ ಸ್ಟಾರ್ ನಾಗ ಚೈತನ್ಯ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್‌ನಲ್ಲಿ ನಾಗ ಚೈತನ್ಯ ಅವರ ಒಂದು ದೃಶ್ಯವನ್ನು ಮಾತ್ರ ತೋರಿಸಲಾಗಿದೆ. ಸೈನಿಕ ಪಾತ್ರದಲ್ಲಿ ನಾಗ್ ಚೈತನ್ಯ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಮೂಲಕ ನಾಗ ಚೈತನ್ಯ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಬಾಲಿವುಡ್ ಮೊದಲ ಸಿನಿಮಾ ಮತ್ತು ಆಮೀರ್ ಖಾನ್ ಜೊತೆ ಕೆಲಸ ಮಾಡಿದ ಅನುಭವನ್ನು ನಟ ನಾಗ ಚೈತನ್ಯ ಬಹಿರಂಗ ಪಡಿಸಿದ್ದಾರೆ. ಪತ್ರಕರ್ತರ ಜೊತೆ ಮಾತನಾಡಿದ ನಟ ನಾಗ ಚೈತನ್ಯ ಆಮಿರ್ ಖಾನ್ ಅವರನ್ನು ಹಾಡಿ ಹೊಗಳಿದ್ದಾರೆ.

ಆಮೀರ್ ಖಾನ್ ಯಾವಾಗಲು ಸಿನಿಮಾ ಕಂಟೆಂಟ್ ಬಗ್ಗೆ ಮಾತನಾಡುತ್ತಾರೆ. ಬಾಕ್ಸ್ ಆಫೀಸ್ ಬಗ್ಗೆ ಮಾತನಾಡುವುದಿಲ್ಲ. ಕೇವಲ ಕಂಟೆಂಟ್ ಹಿಂದೆ ಬೀಳುತ್ತಾರೆ ಎಂದು ಹೇಳಿದ್ದಾರೆ. 'ಒಂದಂತೂ ಖಚಿತ ಕಳೆದ 12 ವರ್ಷಗಳಲ್ಲಿ ನಾನು ಕಲಿತದ್ದನ್ನು 45 ದಿನಗಳಲ್ಲಿ ಅವರಿಂದ ಕಲಿತಿದ್ದೇನೆ. ಅದಕ್ಕಿಂತ ಹೆಚ್ಚಿನದನ್ನು ಅವರು ನನಗೆ ಕಲಿಸಿದ್ದಾರೆ. ಅವರು ಯಾವುದೇ ಪ್ರಯತ್ನ ಪಡದೆ ಜನರ ಮೇಲೆ ಪ್ರಭಾವ ಬೀರುವ ಅದ್ಭುತ ಮ್ಯಾಜಿಕ್ ಹೊಂದಿದ್ದಾರೆ' ಎಂದು ನಾಗ ಚೈತನ್ಯ ಹೇಳಿದ್ದಾರೆ.

ಪಾನಿ ಪುರಿ ಸವಿದ ಆಮೀರ್ ಖಾನ್; ಸೆಲ್ಫಿಗಾಗಿ ಮುಗಿದ್ದ ಫ್ಯಾನ್ಸ್

'ಆಮೀರ್ ಖಾನ್ ಯಾವಾಗಲು ಕಂಟೆಂಟ್ ಹಿಂದೆ ಬೀಳುತ್ತಾರೆ. ನಂಬರ್ ಅಥವಾ ಪ್ಯಾಕೇಜ್ ಬಗ್ಗೆ ಮಾತನಾಡಲ್ಲ. ಕೊನೆಯಲ್ಲಿ ಎಲ್ಲವೂ ಬರುತ್ತದೆ ಆದರೆ ಚಿತ್ರೀಕರಣ ಮಾಡುತ್ತಿರುವಾಗ ಮತ್ತು ಮುಗಿಸುವವರೆಗೂ ಅವರು ವಿಷಯವನ್ನು ಮಾತ್ರ ಬೆನ್ನಟ್ಟುತ್ತಾರೆ. ಇದನ್ನು ನಾನು ಅವರಿಂದ ಕಲಿತಿದ್ದೇನೆ' ಎಂದು ಹೇಳಿದ್ದಾರೆ.

ಆಮೀರ್ ಖಾನ್ ಲಾಲ್ ಸಿಂಗ್ ಚಡ್ಡಾ ಟ್ರೈಲರ್; ಸರಳ ವ್ಯಕ್ತಿಯ ಭಾವನಾತ್ಮಕ ಪಯಣಕ್ಕೆ ಫ್ಯಾನ್ಸ್ ಫಿದಾ

ಚಿತ್ರದಲ್ಲಿ ನಾಯಕಿಯಾಗಿ ಕರೀನಾ ಕಪೂರ್ ಮಿಂಚಿದ್ದಾರೆ. ಅಂದಹಾಗೆ ಲಾಲ್ ಸಿಂಗ್ ಚಡ್ಡಾ ಸಿನಿಮಾ ಹಾಲಿವುಡ್ ಸಿನಿಮಾದ ರಿಮೇಕ್ ಆಗಿದೆ. 1994ರಲ್ಲಿ ರಿಲೀಸ್ ಆಗಿದ್ದ ಟಾಮ್ ಹ್ಯಾಂಕ್ಸ್ ಕ್ಲಾಸಿಕ್ ಅವರ 'ಫಾರೆಸ್ಟ್ ಗಂಪ್' ಚಿತ್ರವನ್ನು ಹಿಂದೆಗೆ ತಂದಿದ್ದಾರೆ ಆಮೀರ್ ಖಾನ್. ಈ ಸಿನಿಮಾಗೆ ಆಮೀರ್ ಖಾನ್‌ಗೆ 'ಸೀಕ್ರೆಟ್ ಸೂಪರ್ ಸ್ಟಾರ್' ನಿರ್ದೇಶಿಸಿದ್ದ ಅದ್ವೈತ್ ಚಂದನ್ ಆಕ್ಷನ್ ಕಟ್ ಹೇಳಿದ್ದಾರೆ. ಬಹುನಿರೀಕ್ಷೆಯ ಚಿತ್ರವು ಆಗಸ್ಟ್ 11ರಂದು ಬಿಡುಗಡೆಯಾಗಲಿದೆ.

 

Latest Videos
Follow Us:
Download App:
  • android
  • ios