ಆಮೀರ್ ಖಾನ್ ಲಾಲ್ ಸಿಂಗ್ ಚಡ್ಡಾ ಟ್ರೈಲರ್; ಸರಳ ವ್ಯಕ್ತಿಯ ಭಾವನಾತ್ಮಕ ಪಯಣಕ್ಕೆ ಫ್ಯಾನ್ಸ್ ಫಿದಾ

ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್(Aamir Khan) ನಟನೆಯ ಬಹುನಿರೀಕ್ಷೆಯ ಲಾಲ್ ಸಿಂಗ್ ಚಡ್ಡಾ(Lal Singh Chaddha) ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಐಪಿಎಲ್ ಫೈನಲ್ ಪಂದ್ಯದದ ವೇಳೆ ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಟ್ರೈಲರ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

Aamir Khan Starrer Lal Singh Chaddha Trailer released sgk

ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್(Aamir Khan) ನಟನೆಯ ಬಹುನಿರೀಕ್ಷೆಯ ಲಾಲ್ ಸಿಂಗ್ ಚಡ್ಡಾ(Lal Singh Chaddha) ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಐಪಿಎಲ್ ಫೈನಲ್ ಪಂದ್ಯದದ ವೇಳೆ ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಟ್ರೈಲರ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಈಗಾಗಲೇ ಕುತೂಹಲ ಮತ್ತು ನಿರೀಕ್ಷೆ ಮೂಡಿಸಿರುವ ಲಾಲ್ ಸಿಂಗ್ ಚಡ್ಡಾ ಚಿತ್ರವನ್ನು ತೆರೆಮೇಲೆ ನೋಡಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಸಹ ಕಾಯುತ್ತಿದ್ದಾರೆ. ಸದ್ಯ ಟ್ರೈಲರ್ ನೋಡಿದ ಮೇಲೆ ನಿರೀಕ್ಷೆ ಮತ್ತಷ್ಟು ದುಪ್ಪಟ್ಟಾಗಿದೆ.

ಲಾಲ್ ಸಿಂಗ್‌ಗೆ (ಅಮೀರ್ ಖಾನ್) ಬಾಲ್ಯದಲ್ಲಿ ನಡೆಯಲು ಬರುವುದಿಲ್ಲ. ಬಳಿಕ ಕಷ್ಟಪಟ್ಟು ಯಾರ ಸಹಾಯವೂ ಇಲ್ಲದೆ ನಡೆಯಲು ಕಲಿಯುತ್ತಾನೆ. ಓಡಲು ಪ್ರಾರಂಭಿಸುತ್ತಾನೆ. ಪುತ್ರ ಲಾಲ್ ಪ್ರಯತ್ನಗೆ ತಾಯಿ ಸಾಥ್ ನೀಡುತ್ತಾಳೆ. ಬಳಿಕ ಓಡುವದನ್ನು ಕಲಿಯುತ್ತಾನೆ. ಲಾಲ್ ಸಿಂಗ್ ಒಬ್ಬ ವಿಭಿನ್ನ ವ್ಯಕ್ತಿ ಎಂದು ಬಿಂಬಿಸಲಾಗಿತ್ತು. ದೊಡ್ಡವನಾಗಿ ಸೇನೆಯಲ್ಲಿ ಕೆಲಸಕ್ಕೆ ಸೇರುತ್ತಾನೆ. ಈ ಟ್ರೈಲರ್ ಜೀವನದಲ್ಲಿ ಸಾಕಷ್ಟು ಹೋರಾಟ ಮಾಡಿದ ಸರಳ ವ್ಯಕ್ತಿಯ ಭಾವನಾತ್ಮಕ ಪಯಣ ತೋರಿಸಲಾಗಿದೆ. ಕಷ್ಟ, ಶ್ರಮ, ತಾಯಿ ಸೆಂಟಿಮೆಂಟ್, ಪ್ರೀತಿ, ಸ್ನೇಹ, ದುಃಖ ಹೀಗೆ ಎಲ್ಲಾ ಅಂಶಗಳು ಟ್ರೈಲರ್‌ನಲ್ಲಿದೆ.

ಆಮೀರ್‌ಗೆ ನಾಯಕಿಯಾಗಿ ಕರೀನಾ ಕಪೂರ್ ಕಾಣಿಸಿಕೊಂಡಿದ್ದಾರೆ. ಟ್ರೈಲರ್ ನಲ್ಲಿ ಲಾಲ್ (ಆಮೀರ್ ಖಾನ್) ಮಿಮ್ಮಿ (ಕರೀನಾ ಕಪೂರ್)ಯನ್ನು ಮದುವೆಯಾಗಲು ಬಯಸುತ್ತಾನೆ. ಆದರೆ ಮಿಮ್ಮಿ ನಿರಾಕರಿಸುತ್ತಾಳೆ. ಆಮೀರ್ ಅನೇಕ ಅವತಾರಗಳಲ್ಲಿ ಮಿಂಚಿದ್ದಾರೆ ಎನ್ನುವುದು ಟ್ರೈಲರ್‌ನಲ್ಲಿ ಗೊತ್ತಾಗುತ್ತಿದೆ. ಈ ಟ್ರೈಲರ್ ನೋಡಿದ ಮೇಲೆ ಸಿನಿಮಾ ಕೂಡ ಭಾವನಾತ್ಮಕವಾಗಿರಲಿದೆ ಎನ್ನುವುದು ಮೇಲ್ನೋಟಕ್ಕೆ ತಿಳಿದುಬಂದಿದೆ.

ಪಾನಿ ಪುರಿ ಸವಿದ ಆಮೀರ್ ಖಾನ್; ಸೆಲ್ಫಿಗಾಗಿ ಮುಗಿದ್ದ ಫ್ಯಾನ್ಸ್

ಅಂದಹಾಗೆ ಈ ಸಿನಿಮಾದಲ್ಲಿ ತೆಲುಗು ಸ್ಟಾರ್ ನಾಗಚೈತನ್ಯ ಕೂಡ ಕಾಣಿಸಿಕೊಂಡಿದ್ದಾರೆ. ಸೇನೆಯಲ್ಲಿ ನಾಗ್ ಮತ್ತು ಆಮೀರ್ ಇಬ್ಬರು ಒಟ್ಟಿಗೆ ಕೆಲಸ ಮಾಡುವ ಒಂದು ದೃಶ್ಯ ತೋರಿಸಲಾಗಿದೆ. ಅಂದಹಾಗೆ ನಾಗಚೈತನ್ಯಗೆ ಇದು ಮೊದಲ ಹಿಂದಿ ಸಿನಿಮಾವಾಗಿದೆ. ಹಾಗಾಗಿ ಸಿನಿಮಾದ ಮೇಲೆ ಸಖತ್ ಉತ್ಸುಕರಾಗಿದ್ದಾರೆ.

ಬಾಯ್‌ಫ್ರೆಂಡ್ ಜೊತೆ ಬಿಕಿನಿಯಲ್ಲಿ ಇರಾ ಬರ್ತಡೇ ಸೆಲೆಬ್ರೇಟ್; ಫೋಟೋ ಹಂಚಿಕೊಂಡ ಆಮೀರ್ ಪುತ್ರಿ

ಅಂದಹಾಗೆ ಲಾಲ್ ಸಿಂಗ್ ಚಡ್ಡಾ ಸಿನಿಮಾ ಹಾಲಿವುಡ್ ಸಿನಿಮಾದ ರಿಮೇಕ್ ಆಗಿದೆ. 1994ರಲ್ಲಿ ರಿಲೀಸ್ ಆಗಿದ್ದ ಟಾಮ್ ಹ್ಯಾಂಕ್ಸ್ ಕ್ಲಾಸಿಕ್ ಅವರ 'ಫಾರೆಸ್ಟ್ ಗಂಪ್' ಚಿತ್ರವನ್ನು ಹಿಂದೆಗೆ ತಂದಿದ್ದಾರೆ ಆಮೀರ್ ಖಾನ್. ಈ ಸಿನಿಮಾಗೆ ಆಮೀರ್ ಖಾನ್‌ಗೆ 'ಸೀಕ್ರೆಟ್ ಸೂಪರ್ ಸ್ಟಾರ್' ನಿರ್ದೇಶಿಸಿದ್ದ ಅದ್ವೈತ್ ಚಂದನ್ ಆಕ್ಷನ್ ಕಟ್ ಹೇಳಿದ್ದಾರೆ. ಬಹುನಿರೀಕ್ಷೆಯ ಚಿತ್ರವು ಆಗಸ್ಟ್ 11ರಂದು ಬಿಡುಗಡೆಯಾಗಲಿದೆ.

Latest Videos
Follow Us:
Download App:
  • android
  • ios