ಆನೆ ನೋಡಿಕೊಳ್ಳುತ್ತಿರುವ ಬೊಮ್ಮನ್- ಬೆಳ್ಳಿ ಚಿತ್ರತಂಡದಿಂದ ಮಹಾ ಮೋಸ; 2 ಕೋಟಿ ರೂ. ನೋಟಿಸ್‌ ಕಳುಹಿಸಿದ ದಂಪತಿ!

ನಿರ್ದೇಶಕಿ  ಕಾರ್ತಿಕಿ ವಿರುದ್ಧ ಲೀಗಲ್ ನೋಟಿಸ್‌ ಕಳುಹಿಸಿರುವ ಬೊಮ್ಮನ್ ಮತ್ತು ಬೆಳ್ಳಿ. ಸಂದರ್ಶನದಲ್ಲಿ ಸತ್ಯ ಬಯಲು....

Bomman Bellie send 2 cr legal notice to Elephant Whisperers director for not giving remuneration vcs

ಭಾರತೀಯ ಚಿತ್ರರಂಗದಲ್ಲಿ ಹಿಸ್ಟರಿ ಕ್ರಿಯೇಟ್ ಮಾಡಿದ ದಿ ಎಲಿಫೆಂಟ್ ವಿಸ್ಪರರ್ಸ್‌ ಸಾಕ್ಷ್ಯ ಚಿತ್ರ ಆಸ್ಕರ್ ಅವಾರ್ಡ್‌ ಪಡೆಯಿತ್ತು. ಈ ಸಿನಿಮಾವನ್ನು ಕಾರ್ತಿಕಿ ಗೋನ್ಸಾಲ್ವಿಸ್‌ ನಿರ್ದೇಶನ ಮಾಡಿದ್ದು ಬೆಮ್ಮೊನ್ ಮತ್ತು ಬೆಳ್ಳ ದಂಪತಿ ಆನೆಯನ್ನು ನೋಡಿಕೊಂಡ ರೀತಿ ಪ್ರತಿಯೊಬ್ಬರಿಗೂ  ಮನಸ್ಸು ಮುಟ್ಟಿದೆ. ಈ ಚಿತ್ರದಲ್ಲಿ ಆನೆ ಮತ್ತು ಮನುಷ್ಯನ ನಡುವೆ ಇರುವ ಸಂಬಂಧವನ್ನು ಅದ್ಭುಯವಾಗಿ ವಿವರಿಸಲಾಗಿದೆ. ಆದರೆ ಈಗ ಅದೇ ಜೋಡಿ ಈಗ ನಿರ್ಮಾಪಕರ ವಿರುದ್ಧ ದೂರು ದಾಖಲಿಸಿದ್ದಾರೆ. ಹೀಗಂತ ಅವರೇ ಹೇಳಿದ್ದಾರೆ.

ಹೌದು! ಇತ್ತೀಚಿಗೆ ನಡೆದ ಯುಟ್ಯೂಬ್ ಸಂದರ್ಶನದಲ್ಲಿ ಬೊಮ್ಮನ್ ಮತ್ತು ಬೆಳ್ಳಿ ಸಿನಿಮಾ ತಂಡ ಮತ್ತು ನಿರ್ಮಾಪಕರ ವಿರುದ್ಧ ಲೀಗಲ್ ನೋಟಿಸ್‌ ಕಳುಹಿಸಿರುವುದಾಗಿ ಹೇಳಿದ್ದಾರೆ.  ಸಾಕ್ಷ್ಯಚಿತ್ರ ಚಿತ್ರೀಕರಣ ಮಾಡುವ ಸಂದರ್ಭದಲ್ಲಿ ಒಂದು ಮನೆ ಕಟ್ಟಿಕೊಡುವ ಭರವಸೆ ನೀಡಲಾಗಿತ್ತು, ಒಂದು ವಾಹನ ಹಾಗೂ ಆರ್ಥಿಕ ಸಹಾಯ ಭರವಸೆಯೂ ನೀಡಿದ್ದರು ಆದರೆ ಯಾವುದು ಮಾಡಿಲ್ಲ ಎಂದು ಈಗ 2 ಕೋಟಿ ರೂಪಾಯಿ ಲೀಗಲ್ ನೋಟಿಸ್‌ ಕಳುಹಿಸಿದ್ದಾರೆ. 

ಆಸ್ಕರ್‌ ವಿಜೇತ ಎಲಿಫೆಂಟ್‌ ವಿಸ್ಪರ್ಸ್‌ನ ಬೊಮ್ಮಾ- ಬೆಳ್ಳಿಗೆ ಮೋದಿ ಸನ್ಮಾನ: ಪ್ರಧಾನಿಯಿಂದ ಕಾಡು ಕುರುಬರ ಭೇಟಿ

'ನಮ್ಮನ್ನು ರಿಯಲ್ ಹೀರೋಗಳು ಎಂದು ಎಲ್ಲ ಕಡೆಗಳಲ್ಲೂ ಪರಿಚಯಿಸಲಾಗಿದೆ ಆದರೆ ತಂಡದಿಂದ ನಮಗೆ ಹಣ ಸಹಾಯ ಸಿಕ್ಕಿಲ್ಲ. ತಮಿಳುನಾಡು ಮುಖ್ಯಮಂತ್ರಿಗಳಾದ ಎಂಕೆ ಸ್ಟಾಲಿನ್‌ ಹಾಗೂ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ದೇಣಿಗೆಗಳನ್ನು ಬಂದಿ ಆದರೆ ಅದನ್ನು ತಂಡದವರು ಮಾತ್ರ ಸ್ವೀಕರಿಸಿದ್ದಾರೆ. ನಮಗೆ ಯಾವದೇ ಪರಿಹಾರ ನೀಡಿಲ್ಲ ಸಹಾಯ ಮಾಡಿಲ್ಲ ಅವರೇ ಹಣಕಾಸಿನ ಲಾಭ ಪಡೆದುಕೊಂಡಿದ್ದಾರೆ' ಎಂದು ದಂಪತಿಗಳು ಆರೋಪ ಮಾಡಿದ್ದಾರೆ.

Bomman Bellie send 2 cr legal notice to Elephant Whisperers director for not giving remuneration vcs

ದಿ ಎಲಿಫೆಂಟ್ ವಿಸ್ಪರರ್ಸ್ ಕಿರುಚಿತ್ರ ಆಸ್ಕರ್ ಪ್ರಶಸ್ತಿ ಪಡೆಯುತ್ತಿದ್ದಂತೆ ಇವರಿಗೆ ಒಂದು ಲಕ್ಷ ಬಹುಮಾನ ನೀಡೋ ಮೂಲಕ ತಮಿಳುನಾಡಿನ ಸ್ಟಾಲಿನ್ ಸರ್ಕಾರ ಕೈತೊಳೆದುಕೊಂಡಿದೆ. ಪ್ರಧಾನಿ ಮೋದಿ ಅವರ ಭೇಟಿ ವೇಳೆಯೂ ಇವರಿಗೆ ಸಾಕಷ್ಟು ಭರವಸೆ ದೊರೆತಿದೆ. ಆದರೇ ಅದ್ಯಾವುದೂ ಈಡೇರದಿರುವುದು ವಿಪರ್ಯಾಸ. ಶಿರಾದ ಜನರು ಇವರ ಮನವಿಗೆ ಕರಗಿ ಇಂದು ಸಾಕಷ್ಟು ಸಹಾಯ ಮಾಡಿದ್ದಾರೆ. ವರ್ದಮಾನ್ ಶಾಲೆಯ ಮುಖ್ಯಸ್ಥ ಸಂಜಯ್ ಅವರು ಒಂದು ವಾರದಲ್ಲಿ ಖುದ್ದಾಗಿ ಮುದುಮಲೈಗೆ ತೆರಳಿ ಇವರ ಸೂರಿಗೆ ಬೇಕಾದ ಸಹಾಯ ಮಾಡೋದಾಗಿ ಬೆಳ್ಳಿಬೊಮ್ಮನ್ ದಂಪತಿಗಳಿಗೆ ಭರವಸೆ ನೀಡಿದ್ದಾರೆ.ತಮಿಳುನಾಡಿನವರಾದರೂ ಅವರ ನೋವಿಗೆ ಕರಗಿದ ಶಿರಾದ ಜನರು ಸಾಕಷ್ಟು ರೀತಿಯಲ್ಲಿ ಸಹಾಯ ಹಸ್ತ ಚಾಚಲು ಮುಂದಾಗಿರೋದು ಖುಷಿಯ ಸಂಗತಿ. ಮುದ್ದಾದ ರಘು ಅನ್ನೋ ಆನೆಯನ್ನ ರಕ್ಷಿಸೋ ಮೂಲಕ ಮಾನವೀಯ ಮೌಲ್ಯದ ಅರ್ಥಕ್ಕೆ ಜೀವ ಕೊಟ್ಟ ಈ ಜೋಡಿ ಅಂದು ಇಡೀ ವಿಶ್ವದ ಗಮನಸೆಳೆದು, ಇಂದು ಸಹಾಯಕ್ಕಾಗಿ ಪರಿತಪಿಸುತ್ತಿರೋದು ನಿಜಕ್ಕೂ ವಿಪರ್ಯಾಸವೇ ಸರಿ.

'ಎಲಿಫೆಂಟ್ ವಿಸ್ಪರರ್ಸ್' ಬೊಮ್ಮನ್-ಬೆಳ್ಳಿ ದಂಪತಿಗೆ ವಿಮಾನದಲ್ಲಿ ವಿಶೇಷ ಗೌರವ; ವಿಡಿಯೋ ವೈರಲ್

ಮೋದಿ ಭೇಟಿ:

ನಾನು ಮತ್ತು ನನ್ನ ಪತ್ನಿಗೆ ತಮಿಳುನಾಡು ಮುಖ್ಯಮಂತ್ರಿ(Chief Minister of Tamil Nadu) ಅವರು ತಲಾ ₹1 ಲಕ್ಷ ನೀಡಿ ಗೌರವಿಸಿದ್ದಾರೆ. ಪ್ರಧಾನಿ ಮೋದಿ(PM Narendra Modi) ಅವರು ಬಂಡೀಪುರಕ್ಕೆ(Bandipur national park) ಭೇಟಿ ನೀಡುವ ಒಂದು ತಿಂಗಳ ಮೊದಲು ತಮಿಳುನಾಡು ಮುಖ್ಯಮಂತ್ರಿಗಳು ನನ್ನನ್ನು ಹಾಗೂ ಬೆಳ್ಳಿಯನ್ನು ಚೆನ್ನೈಗೆ ಕರೆಸಿ ಗೌರವಿಸಿದ್ದರು. ತಲಾ .1 ಲಕ್ಷ ನೀಡಿದ್ದರು. ನಂತರ ಅಧಿಕಾರಿಗಳು ಬಂದು ಕ್ಯಾಂಪ್‌ನಲ್ಲಿರೋ 60 ಜನ ಮಾವುತ, ಕಾವಾಡಿಗಳಿಗೂ ತಲಾ .1 ಲಕ್ಷ ಕೊಟ್ಟಿದ್ದಾರೆ ಎಂದರು. .1ಲಕ್ಷದಿಂದ ನಮ್ಮ ಬದುಕಲ್ಲಿ ಯಾವುದೇ ಬದಲಾವಣೆ ಆಗಲ್ಲ. ಹಣ ಬೇಕು ನಿಜ, ಆದರೆ ಬದುಕಲ್ಲಿ ಪ್ರೀತಿಯೂ ಮುಖ್ಯ. ಇಲ್ಲಿ ನಮ್ಮನ್ನು ಯಾರೂ ಬಂದು ನೋಡಲ್ಲ. ಅಂಥದ್ದರಲ್ಲಿ ಖುದ್ದು ಪ್ರಧಾನಿಯೇ ಬಂದು ನಮ್ಮನ್ನು ಮಾತನಾಡಿಸಿದ್ದು ನಮಗೆ ಮಾತ್ರವಲ್ಲ, ಕ್ಯಾಂಪ್‌ ಅಧಿಕಾರಿಗಳು ಮತ್ತು ತಮಿಳುನಾಡಿಗೇ ಖುಷಿ ತಂದಿದೆ ಎಂದರು.

Latest Videos
Follow Us:
Download App:
  • android
  • ios