Asianet Suvarna News Asianet Suvarna News

ಶಾರುಖ್‌ಗೆ ಮುಂಬೈ, ಸಲ್ಮಾನ್‌ಗೆ ದೆಹಲಿ, ಬೆಂಗಳೂರು ಯಾರಿಗೆ? ವೈರಲ್ ಪೋಸ್ಟ್ ಶೇರ್ ಮಾಡಿದ ಅನುಷ್ಕಾ ಶರ್ಮಾ

ಶಾರುಖ್‌ಗೆ ಮುಂಬೈ, ಸಲ್ಮಾನ್‌ಗೆ ದೆಹಲಿ ಬೆಂಗಳೂರು ಯಾರಿಗೆ? ಎನ್ನುವ ವೈರಲ್ ಪೋಸ್ಟ್ ಅನ್ನು ಅನುಷ್ಕಾ ಶರ್ಮಾ  ಶೇರ್ ಮಾಡಿದ್ದಾರೆ.

Bombay is Shah Rukh and Delhi is Salman Anushka Sharma shares viral post comparing cities to superstars sgk
Author
First Published Mar 27, 2023, 6:04 PM IST

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತೆ ಸಿನಿಮಾರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಮದುವೆ, ಮಗು ಅಂತ ಸಾಂಸಾರಿಕ ಜೀವನದ ಕಡೆ ಬ್ಯುಸಿಯಾಗಿದ್ದ ಅನುಷ್ಕಾ ಇದೀಗ ಸಿನಿಮಾ ಕಡೆ ಗಮನ ಹರಿಸಿದ್ದಾರೆ. ಸಿನಿಮಾ ಈವೆಂಟ್, ಪ್ರಶಸ್ತಿ ಸಮಾರಂಭ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಕ್ರಿಕೆಟರ್ ಬಯೋಪಿಕ್ ನಲ್ಲಿ ನಟಿಸುತ್ತಿರುವ ಅನುಷ್ಕಾ ಸದ್ಯದಲ್ಲೇ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಈ ನಡುವೆ ಅನುಷ್ಕಾ ವೈರಲ್ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ಅನುಷ್ಕಾ ಹಂಚಿಕೊಂಡಿರುವ ಪೋಸ್ಟ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಅಷ್ಟಕ್ಕೂ ಪೋಸ್ಟ್ ನಲ್ಲಿ ಏನಿದೆ ಅಂತಿರಾ, ಭಾರತದ ಪ್ರಮುಖ ನಗರಗಳು ಯಾವ ಕಲಾವಿದರಿಗೆ ಹೋಲಿಕೆ ಆಗುತ್ತೆ ಎನ್ನುವುದು ಇದೆ. 

ವೈರಲ್ ಪೋಸ್ಟ್ ನಲ್ಲಿ ಮುಂಬೈ ಶಾರುಖ್ ಖಾನ್‌ಗೆ ಹೋಲಿಸಿದರೆ ದೆಹಲಿ ಸಲ್ಮಾನ್ ಖಾನ್‌ಗೆ ಹೋಲಿಸಲಾಗಿದೆ. ವೈರಲ್ ಪೋಸ್ಟ್ ನಲ್ಲಿ ಶಾರುಖ್ ಖಾನ್‌ನಿಂದ ಹಿಡಿದು, ಸಲ್ಮಾನ್, ಶರ್ಮಿಳಾ ಟ್ಯಾಗೋರ್, ಜಿಮ್ ಸರ್ಭ್, ಅನುಷ್ಕಾ ಶರ್ಮಾ ಮತ್ತು ನೀತು ಕಪೂರ್ ಸೇರಿದಂತೆ ಅನೇಕರ ಹೆಸರು ಇದೆ. ವಿವಧ ನಗರಗಳಿಗೆ ಬಾಲಿವುಡ್ ಸ್ಟಾರ್‌ಗಳನ್ನು ಹೋಲಿಸಿದ ಪೋಸ್ಟ್ ಹೀಗಿದೆ. 'ಬಾಂಬೆ ಎಂದರೆ ಶಾರುಖ್. ಇದು ಕನಸಿನ ನಗರ. ದೆಹಲಿ ಎಂದರೆ ಸಲ್ಮಾನ್ ಖಾನ್. ಜಿಮ್ ಮತ್ತು ಜಿನ್ ಗಳ ನಗರವಾಗಿದೆ. ಕೋಲ್ಕತ್ತಾ ಶರ್ಮಿಳಾ ಟ್ಯಾಗೋರ್, ಶಾಂತ, ಘನತೆ ಮತ್ತು ಸುಂದರ ನಗರ' ಎಂದು ಹೇಳಲಾಗಿದೆ. 

ಪತ್ನಿ ಅನುಷ್ಕಾ ಮುಂದೆ ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿದ ಕೊಹ್ಲಿ,ವಿಡಿಯೋ ವೈರಲ್!

'ಪೂನಾ, ಪುಣೆ ಅಲ್ಲ ಇದು ಜಿಮ್ ಸರಭ್‌ಗೆ. ಇಲ್ಲಿ ಪಾರ್ಸಿ ಬೇಕರಿಗಳಿಂದ ಹೊರಹೊಮ್ಮುವ ರುಚಿಕರವಾದ ವಾಸನೆ ಇದೆ. ಚಂಡೀಗಢ ಕಿಯಾರಾ ಅಡ್ವಾಣಿಗೆ, ಅಚ್ಚುಕಟ್ಟಾಗಿ, ಕೀರಲು ಧ್ವನಿಯಲ್ಲಿ ಸ್ವಚ್ಛವಾಗಿದೆ. ದುಬೈ ನೀತು ಕಪೂರ್, ಎವರ್ ಗ್ರೀನ್. ಬೆಂಗಳೂರು ಅನುಷ್ಕಾ ಶರ್ಮಾಗೆ, ನೈಜ, ಸುಂದರ, ಯಾವಾಗಲೂ ಪರಿಪೂರ್ಣ ಮನಸ್ಥಿತಿ ಮತ್ತು ಸುಂದರ ವಾತಾವರಣ, ಅದರೆ ಟ್ರಾಫಿಕ್ ಜಾಮ್‌ಗಳನ್ನು ಟಾಸ್ ಮಾಡಲು ವಿರಾಟ್ ಕೊಹ್ಲಿಯ ಅಗತ್ಯವಿದೆ. ಅರ್ಜುನ್ ಕಪೂರ್‌ಗೆ ಬರ್ಲಿನ್. ಘನ ಮತ್ತು ವಿಶ್ವಾಸಾರ್ಹ' ಎಂದು ಹೇಳಿದ್ದಾರೆ. 

ಚಪ್ಪಲಿಯಿಂದ ಶುರುವಾಯ್ತು ವಿರುಷ್ಕಾ ದಂಪತಿ ಪ್ರೇಮ ಕಥೆ!

ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಮತ್ತಷ್ಟು ನಗರಗಳನ್ನು ಸೇರಿಸಿ ಪೋಸ್ಟ್ ಶೇರ್ ಮಾಡುತ್ತಿದ್ದಾರೆ. ಅನುಷ್ಕಾ ಶರ್ಮಾ ಸಿನಿಮಾ ವಿಚಾರಕ್ಕೆ ಬರುವುದಾದರೆ ಕೊನೆಯದಾಗಿ ಝೀರೋ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಝೋರೋ ಸಿನಿಮಾ 2018ರಲ್ಲಿ ರಿಲೀಸ್ ಆಗಿತ್ತು. ಶಾರುಖ್ ಜೊತೆ ತೆರೆಹಂಚಿಕೊಂಡಿದ್ದರು. ಇದೀಗ ಅನೇಕ ವರ್ಷಗಳ ಬಳಿಕ ಮತ್ತೆ ತೆರೆಮೇಲೆ ಬರಲು ಸಜ್ಜಾಗಿದ್ದಾರೆ. ಚಕ್ದ ಎಕ್ಸ್‌ಪ್ರೆಸ್ ಮೂಲಕ ಅನುಷ್ಕಾ ಶರ್ಮಾ ಅಭಿಮಾನಿಗಳ ಮುಂದೆ ಬರ್ತಿದ್ದಾರೆ.   
 

Follow Us:
Download App:
  • android
  • ios