ಚಪ್ಪಲಿಯಿಂದ ಶುರುವಾಯ್ತು ವಿರುಷ್ಕಾ ದಂಪತಿ ಪ್ರೇಮ ಕಥೆ!

ನಟಿ ಅನುಷ್ಕಾ ಶರ್ಮಾ  ಮತ್ತು ಕ್ರಿಕೆಟಿಗ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ದಾಂಪತ್ಯ ಜೀವನಕ್ಕೆ ಐದು ವರ್ಷಗಳಾಗುತ್ತಾ ಬಂದಿದೆ. ಈ ಸಂದರ್ಭದಲ್ಲಿ ತಮ್ಮ ಲವ್​ ಸ್ಟೋರಿಯ ಕುರಿತು ಕೊಹ್ಲಿ ಹೇಳಿಕೊಂಡಿದ್ದಾರೆ. 
 

Virat Kohli says he was nervous shivering when he met Anushka Sharma

ವಿರುಷ್ಕಾ ಎಂದೇ ಖ್ಯಾತಿ ಪಡೆದಿರುವ ನಟಿ ಅನುಷ್ಕಾ ಶರ್ಮಾ (Anushka Sharma) ಮತ್ತು ಕ್ರಿಕೆಟಿಗ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅವರ ಅಪರೂಪದ ಜೋಡಿ ಸದಾ ಸುದ್ದಿಯಲ್ಲಿ ಇರುತ್ತದೆ. 2017 ರ ಡಿಸೆಂಬರ್​ 11ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರೋ ಈ ಜೋಡಿ ಕ್ಯೂಟ್​ ಜೋಡಿ ಎಂದೇ ಫೇಮಸ್​ ಆಗಿದೆ.  ಅನುಷ್ಕಾ ಶರ್ಮಾ 2008 ರಲ್ಲಿ ಹಿಂದಿ ಚಲನಚಿತ್ರ ರಬ್ ನೆ ಬನಾ ದಿ ಜೋಡಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ಆರಂಭದಲ್ಲಿಯೇ  ಶಾರುಖ್ ಖಾನ್​ ಜೊತೆ ನಟಿಸುವ ಅವಕಾಶ ಅನುಷ್ಕಾ ಪಾಲಾಗಿತ್ತು. ಈ ಚಿತ್ರ ಬ್ಲಾಕ್​ ಬಸ್ಟರ್​ ಆಯಿತು. ಮೊದಲ ಚಿತ್ರದಿಂದಲೇ ಇವರ ಡಿಮಾಂಡ್​ ಕೂಡ ಹೆಚ್ಚಾಯಿತು. ಸಿನಿಮಾದ ಉತ್ತುಂಗದಲ್ಲಿರುವಾಗಲೇ ಮದುವೆಯಾಗುವ ಮನಸ್ಸು ಮಾಡಿದ್ದರು ಅನುಷ್ಕಾ. ಕೆಲ ವರ್ಷಗಳ ಕಾಲ ಡೇಟಿಂಗ್ ಮಾಡಿದ್ದ ವಿರಾಟ್​ ಕೊಹ್ಲಿ ಅವರ ಜೊತೆ ಇವರ ಮದುವೆಯಾಗಿದ್ದು, ಈ ರೊಮಾಂಟಿಕ್​ ಜೋಡಿಗೆ  2021ರಲ್ಲಿ ವಾಮಿಕಾ ಎಂಬ ಮಗಳು ಜನಿಸಿದಳು.

ಆದರೆ ಈ ಜೋಡಿಯ ಲವ್​ ಸ್ಟೋರಿ ಇಂಟರೆಸ್ಟಿಂಗ್​ ಆಗಿದೆ. ತಮ್ಮ ಮೊದಲ ಭೇಟಿಯನ್ನು ನೆನಪಿಸಿಕೊಂಡಿರುವ  ವಿರಾಟ್ ಕೊಹ್ಲಿ ಅವರು  ಅನುಷ್ಕಾ ಅವರನ್ನು ಮೊದಲ ಬಾರಿಗೆ ಭೇಟಿಯಾದ ಸುದ್ದಿ ಕೇಳಿ ತುಂಬಾ ನರ್ವಸ್ ಆಗಿದ್ದೆ ಎಂದು ಒಪ್ಪಿಕೊಂಡಿದ್ದಾರೆ.  ಮಾಜಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಹ ಆಟಗಾರ ಎ.ಬಿ ಡಿವಿಲಿಯರ್ಸ್ ( A.B.Diwiliars) ಅವರೊಂದಿಗಿನ ಸಂಭಾಷಣೆಯ ಸಮಯದಲ್ಲಿ, ಕೆಲವೊಂದು ಆಸಕ್ತಿಕರ ವಿಷಯವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು,  ಅನುಷ್ಕಾ ಶರ್ಮಾರನ್ನು ಮೊದಲ ಬಾರಿಗೆ ಭೇಟಿಯಾಗಲು ಹೋದಾಗ  ತುಂಬಾ ಆತಂಕಕ್ಕೊಳಗಾಗಿದ್ದರು ಎಂದು ಬಹಿರಂಗಪಡಿಸಿದ್ದಾರೆ.  

ಎಲ್ಲರ ಕಾಲೂ ಎಳೆಯೋ ಕಂಗನಾ ವಿರುಷ್ಕಾರನ್ನು ಈ ಪರಿ ಹೊಗಳಿದ್ಯಾಕೆ?
 
2013ರಲ್ಲಿ ಜಿಂಬಾಬ್ವೆ ಪ್ರವಾಸಕ್ಕೆ ತೆರಳಲಿರುವಾಗ ಅನುಷ್ಕಾ ಜೊತೆಗಿದ್ದ ಜಾಹೀರಾತಿನ ಆಫರ್ ಬಂದಿತ್ತು ಎಂದು ಕೊಹ್ಲಿ ಈ ಸಂದರ್ಭದಲ್ಲಿ ಹೇಳಿದ್ದಾರೆ. ಇವರಿಬ್ಬರು ಮೊದಲ  ಭೇಟಿಯಾಗಿದ್ದು ಈ ಜಾಹೀರಾತು ಚಿತ್ರೀಕರಣದ ಸೆಟ್ ನಲ್ಲಿ. ಈ ಕುರಿತು  ಮಾತನಾಡಿದ್ದಾರೆ.  2013 ರಲ್ಲಿ ಒಂದು ಜಾಹೀರಾತಿನ ಚಿತ್ರೀಕರಣದಲ್ಲಿ ಅವರು ಮೊದಲ ಬಾರಿಗೆ ಅನುಷ್ಕಾ ಅವರನ್ನು ಭೇಟಿಯಾಗಿದ್ದು, ಆಗ ನಾನು ತುಂಬಾನೇ ನರ್ವಸ್ ಆಗಿದ್ದೆ ಎಂದು ವಿರಾಟ್ ನೆನಪಿಸಿಕೊಂಡರು. ಜಿಂಬಾಬ್ವೆ ಪ್ರವಾಸಕ್ಕೆ ಭಾರತ ತಂಡದ ನಾಯಕನಾಗಿ ನೇಮಕಗೊಂಡಾಗ, ಅದೇ ಸಮಯದಲ್ಲಿ ಜಾಹೀರಾತಿನ  ಪ್ರಸ್ತಾಪ ಬಂದಿತ್ತು.  ಅನುಷ್ಕಾ ಜೊತೆ ಜಾಹೀರಾತನ್ನು ಚಿತ್ರೀಕರಿಸಬೇಕು ಎಂದು ಮ್ಯಾನೇಜರ್ (Manager) ಹೇಳಿದಾಗ, ಅವರನ್ನು ಭೇಟಿಯಾಗುವ ಮೊದಲು ತುಂಬಾ ಆತಂಕಗೊಂಡಿದ್ದೆ ಎಂದು ಕೊಹ್ಲಿ ಹೇಳಿದ್ದಾರೆ. 'ನಾನು ಅನುಷ್ಕಾ ಅವರೊಂದಿಗೆ ಒಂದು ಚಿತ್ರೀಕರಣಕ್ಕೆ ಹೋಗುತ್ತಿದ್ದೇನೆ ಎಂದು ತಿಳಿದಾಗ ನಾನು ನಡುಗಲು ಶುರು ಮಾಡಿದ್ದೆ. ಏಕೆಂದರೆ ಅವರು ಆ ಸಮಯದಲ್ಲಿ ಭಾರತದ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿದ್ದರು. ಆಕೆ ದೊಡ್ಡ ನಟಿ ಎಂಬ ಕಾರಣಕ್ಕೆ  ತುಂಬಾನೇ ಆತಂಕಕ್ಕೀಡು ಮಾಡಿತ್ತು' ಎಂದಿದ್ದಾರೆ.

'ನಾನು ಶೂಟಿಂಗ್ ಸೆಟ್ ನಲ್ಲಿ ಐದು ನಿಮಿಷ ಮುಂಚಿತವಾಗಿಯೇ ಬಂದು ಸುಮ್ಮನೆ ನಿಂತಿದ್ದೆ ಮತ್ತು ಆಗ ಅನುಷ್ಕಾ ಸೆಟ್​ಗೆ ಬಂದರು. ಆಕೆ ಎಷ್ಟು ಎತ್ತರವಾಗಿದ್ದಾಳೆಂದು ನನಗೆ ತಿಳಿದಿರಲಿಲ್ಲ, ಸಾಮಾನ್ಯವಾದ ಹೀಲ್ಸ್​ ಧರಿಸಿ ಬಂದಿದ್ದರು. ತುಂಬಾ ಎತ್ತರವಾಗಿರುವ ಹೈ ಹೀಲ್ಸ್​ ಧರಿಸಿದರೆ ವಿರಾಟ್​ಗಿಂತ ಎತ್ತರವಾಗಿ ಕಾಣುವುದಾಗಿ ಯಾರೋ ಹೇಳಿದ್ದರಂತೆ. ಅದಕ್ಕಾಗಿ ಸಾಮಾನ್ಯ ಹೀಲ್ಸ್​ (High Heals) ಧರಿಸಿದ್ದರು.  ಇದು ನನಗೆ ಗೊತ್ತಿರಲಿಲ್ಲ, ಆಕೆಯ ಚಪ್ಪಲಿ ನೋಡಿ,  ಒಳ್ಳೆಯ ಹೈ ಹಿಲ್ಸ್‌ ಸಿಗಲಿಲ್ವಾ ಅಂತಾ ಮೊದಲ ಬಾರಿಗೆ ಅನುಷ್ಕಾ ಜೊತೆ ಮಾತನಾಡಿದ್ದೆ. ಆಕೆಗೆ ತುಸು ಸಿಟ್ಟು ಬಂದಂತೆ ಕಂಡಿತ್ತು. ಆದರೆ ನಮ್ಮಿಬ್ಬರ ಈ ಚಪ್ಪಲಿ ಚಟಾಕಿಯಿಂದ ಇಬ್ಬರೂ ಒಂದಾದೆವು ಎಂದಿದ್ದಾರೆ ವಿರಾಟ್​. ಇಡೀ ದಿನ ಜಾಹೀರಾತನ್ನು ಶೂಟ್ ಮಾಡಿದ ನಂತರ ನಾನು ಅನುಷ್ಕಾಳೊಂದಿಗೆ ತುಂಬಾ ಆರಾಮದಾಯಕವಾಗಿದ್ದೆ. ಆ ಸಮಯದಲ್ಲಿ ಅನುಷ್ಕಾ ಕೂಡ ನನ್ನಂತೆ ಸಾಮಾನ್ಯ ವ್ಯಕ್ತಿ ಎಂದು ನಾನು ಅರಿತುಕೊಂಡೆ. ಅದರ ನಂತರ ನಮ್ಮ ಸ್ನೇಹ ಬೆಳೆದು ನಂತರ ನಾವು ಪರಸ್ಪರ ಡೇಟಿಂಗ್ ಮಾಡಲು ಪ್ರಾರಂಭಿಸಿದ್ದೆವು ಎಂದಿದ್ದಾರೆ.

ಸ್ನೇಹಿತೆಯ ಪತಿಗೇ ಹೃದಯ ಕೊಟ್ಟ ನಟಿ, ಸಚಿವೆ ಸ್ಮೃತಿ ಇರಾನಿ
 

Latest Videos
Follow Us:
Download App:
  • android
  • ios