'ಆಕ್ಷನ್ ಕಿಂಗ್', 'ಹೀ ಮ್ಯಾನ್' ಅಂತಲೇ ಜನಪ್ರಿಯರಾಗಿರುವ ಬಾಲಿವುಡ್ ನಟ ಧರ್ಮೇಂದ್ರ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ವಾರವೇ ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ನುರಿತ ವೈದ್ಯರ ತಂಡ ನಿರಂತರವಾಗಿ ಅವರಿಗೆ ಚಿಕಿತ್ಸೆ ನೀಡುತ್ತಿದೆ. 

'ಆಕ್ಷನ್ ಕಿಂಗ್', 'ಹೀ ಮ್ಯಾನ್' ಅಂತಲೇ ಜನಪ್ರಿಯರಾಗಿರುವ ಬಾಲಿವುಡ್ (Bollywood) ನಟ ಧರ್ಮೇಂದ್ರ (Dharmendra) ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ವಾರವೇ ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ನುರಿತ ವೈದ್ಯರ ತಂಡ ನಿರಂತರವಾಗಿ ಅವರಿಗೆ ಚಿಕಿತ್ಸೆ (Treatment) ನೀಡುತ್ತಿದೆ. ಇದೀಗ ಧರ್ಮೇಂದ್ರ ಅವರ ಆರೋಗ್ಯದಲ್ಲಿ ಈಗ ಕೊಂಚ ಚೇತರಿಕೆ ಕಂಡಿದೆ ಎಂದು ಆಪ್ತ ಮೂಲಗಳು ತಿಳಿಸಿವೆ. 

Add Asianetnews Kannada as a Preferred SourcegooglePreferred

ಧರ್ಮೇಂದ್ರ ಅವರಿಗೆ ಕೆಲ ದಿನಗಳ ಹಿಂದೆ ಅನಾರೋಗ್ಯ ಉಂಟಾಗಿತ್ತು. ಮಾತ್ರವಲ್ಲದೇ ಬೆನ್ನು ನೋವಿನ ಸಮಸ್ಯೆ ಎದುರಾದ ಕಾರಣ ಆಸ್ಪತ್ರೆಗೆ (Hospitalised) ದಾಖಲು ಮಾಡಿದೆವು. ಇಂದು ರಾತ್ರಿ ಅವರನ್ನು ಡಿಸ್ಚಾರ್ಜ್ (Discharge) ಮಾಡುವ ​ಸಾಧ್ಯತೆ ಇದೆ. ಈ ಬಗ್ಗೆ ಅಭಿಮಾನಿಗಳು (Fans) ಚಿಂತಿಸುವ ಅಗತ್ಯವಿಲ್ಲ ಎಂದು ಅವರ ಕುಟುಂಬದ ಆಪ್ತರು ಹೇಳಿರುವುದಾಗಿ ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿದೆ. ಧರ್ಮೇಂದ್ರ ಅವರು ಬೇಗ ಚೇತರಿಕೆ ಕಾಣಲಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ. ಅವರ ವಯಸ್ಸು 85 ವರ್ಷ ದಾಟಿದೆ. ಈ ಕಾರಣಕ್ಕೆ ಅವರಿಗೆ ವಯೋ ಸಹಜ ಕಾಯಿಲೆಗಳು ಸುತ್ತಿಕೊಳ್ಳುತ್ತಿವೆ ಎನ್ನಲಾಗಿದೆ. 

ಮದುವೆಯಾಗಲು ತಯಾರಿದ Hema Malini Jeetendra ಜೋಡಿ ತಪ್ಪಿಸಿದ Dharmendra

ಇನ್ನೂ ದೀರ್ಘಕಾಲದವರೆಗೆ ಚಿತ್ರರಂಗದಿಂದ ದೂರ ಉಳಿದಿದ್ದ ಧರ್ಮೇಂದ್ರ ಅವರು ಆಲಿಯಾ ಭಟ್ (Alia Bhatt) ಹಾಗೂ ರಣವೀರ್ ಸಿಂಗ್ (Ranveer Singh) ಅವರು ನಟಿಸುತ್ತಿರುವ ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ (Rocky Aur Rani Ki Prem Kahani) ಸಿನಿಮಾ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಕರಣ್ ಜೋಹರ್ (Karan Johar) ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ವಿಶೇಷವಾಗಿ ಈ ಚಿತ್ರದ ಮೂಲಕ ನಿರ್ದೇಶನಕ್ಕೆ ಕರಣ್ ಅವರ ಮರಳುತ್ತಿದ್ದಾರೆ. ಜಯಾ ಬಚ್ಚನ್ (Jaya Bachchan) ಕೂಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸನ್ನಿ ಡಿಯೋಲ್ (Sunny Deol) ಹಾಗೂ ಬಾಬಿ ಡಿಯೋಲ್ (Bobby Deol) ಧರ್ಮೇಂದ್ರ ಅವರ ಮಕ್ಕಳು.

ತನ್ನ ಮೊದಲ ಕಾರು ತೋರಿಸಿದ ನಟ ಧರ್ಮೇಂದ್ರ..! ಕೊಟ್ಟಿದ್ದು ಬರೀ 18 ಸಾವಿರ

ಇತ್ತೀಚೆಗೆ ಧರ್ಮೇಂದ್ರ ಅವರು 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ'ಯ ಸೆಟ್‌ಗಳಿಂದ ಫೋಟೋಗಳನ್ನು ಪೋಸ್ಟ್ ಮಾಡಿದ್ದರು ಮತ್ತು ಸ್ನೇಹಿತರೇ, ನಾನು ಎಲ್ಲರಿಂದ ತುಂಬಾ ಪ್ರೀತಿ ಮತ್ತು ಗೌರವವನ್ನು ಪಡೆದಿದ್ದೇನೆ ನಾನು ಹೊಸ ಘಟಕದೊಂದಿಗೆ ಕೆಲಸ ಮಾಡುತ್ತಿದ್ದೇನೆ ಎಂದು ನನಗೆ ಅನಿಸಲಿಲ್ಲ ಎಂದು ಹೇಳಿದ್ದರು. ಅವರ ಹುಟ್ಟುಹಬ್ಬದ ಮೊದಲು, ನಟ ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ದೆಹಲಿಯಲ್ಲಿ ಶೂಟಿಂಗ್ ಮುಗಿಸಿ ಹಿಂತಿರುಗಿದ್ದೇನೆ. ಅವರು ಯಾವುದೇ ಹುಟ್ಟುಹಬ್ಬದ ಪ್ಲಾನ್‌ಗಳನ್ನು ಹೊಂದಿಲ್ಲ ಮತ್ತು ತಾವಾತು ಬರ್ತ್‌ಡೇ ಪ್ಲಾನ್‌ ಮಾಡಿಲ್ಲ ಎಂದು ಹೇಳಿದ್ದರು.