Asianet Suvarna News Asianet Suvarna News

ತನ್ನ ಮೊದಲ ಕಾರು ತೋರಿಸಿದ ನಟ ಧರ್ಮೇಂದ್ರ..! ಕೊಟ್ಟಿದ್ದು ಬರೀ 18 ಸಾವಿರ

  • ತಾನು ಖರೀದಿಸಿದ ಮೊದಲ ಕಾರು ತೋರಿಸಿದ ಹಿರಿಯ ನಟ
  • ಆಗ ಆ ಕಾರಿನ ಬೆಲೆ ಬರೀ 18 ಸಾವಿರ ರೂಪಾಯಿ
Actor Dharmendra shares video of his First car bought more than 60 years ago for INR 18000 dpl
Author
Bangalore, First Published Oct 12, 2021, 2:49 PM IST
  • Facebook
  • Twitter
  • Whatsapp

ಹಿರಿಯ ನಟ ಧರ್ಮೇಂದ್ರ ಅವರು 1960 ರಲ್ಲಿ ಖರೀದಿಸಿದ ತಮ್ಮ ಮೊದಲ ಕಾರು(Car) ಫಿಯೆಟ್‌ನ ಫೋಟೋವನ್ನು ಹಂಚಿಕೊಂಡಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳ ಮೂಲಕ ಫೋಟೋ ಶೇರ್ ಮಾಡಿದ್ದು ನೆಟ್ಟಿಗರು ಹಳೆ ಮಾಡೆಲ್ ಕಾರನ್ನು ಕಣ್ತುಂಬಿಕೊಂಡಿದ್ದಾರೆ.

ಕಾರು ಇನ್ನೂ ನಟನ ಬಳಿಯಿದೆ. ಹಾಗೂ ಇನ್ನೂ ಉತ್ತಮ ಸ್ಥಿತಿಯಲ್ಲಿದೆ. ಅವರು ಇದನ್ನು ಹೋರಾಟಗಾರನಿಗೆ ದೇವರ ದೊಡ್ಡ ಆಶೀರ್ವಾದ ಎಂದು ಬಣ್ಣಿಸಿದ್ದಾರೆ. ಅವರು ಅದನ್ನು INR 18,000 ಗೆ ಪಡೆದಿದ್ದರು ಎಂದು ಬಹಿರಂಗಪಡಿಸಿದ್ದಾರೆ. ಧರ್ಮೇಂದ್ರ ಅವರ ಕಿರಿಯ ಪುತ್ರ, ನಟ ಬಾಬಿ ಡಿಯೋಲ್ ಕೂಡ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ನೆನಪನ್ನು ಹಂಚಿಕೊಂಡರು.

Lakme ಫ್ಯಾಷನ್‌ ವೀಕ್‌ನಲ್ಲಿ ಕರೀನಾ: ಮುಖ ಚೌಕವಾಗಿದೆ, ಛೀ ಅಜ್ಜಿ ಎಂದ ನೆಟ್ಟಿಗರು

ಸ್ನೇಹಿತರೇ, ನನ್ನ ಮೊದಲ ಕಾರು.. ನನ್ನ ಮುದ್ದಿನ ಮಗು, ಕಷ್ಟಪಡುತ್ತಿದ್ದ ನನಗೆ ದೇವರ ಆಶಿರ್ವಾದ ಎಂದು ಅವರು ಬರೆದಿದ್ದಾರೆ. ವೀಡಿಯೋದಲ್ಲಿ, 'ಶೋಲೆ' ನಟ ಹಸಿರು ಶರ್ಟ್ ಧರಿಸಿ ತನ್ನ ಕಾರಿನ ಹತ್ತಿರ ನಿಂತು ಹೇಗೆ ಇದು ತನ್ನ ಮೊದಲ ಕಾರು ಎಂದು ವಿವರಿಸುವುದನ್ನು ಕಾಣಬಹುದು.

ಹಾಯ್ ಫ್ರೆಂಡ್ಸ್, ನನ್ನ ಮೊದಲ ಕಾರು. ನಾನು ಅದನ್ನು ₹ 18,000 ಕ್ಕೆ ಮಾತ್ರ ಖರೀದಿಸಿದೆ. ಆ ದಿನಗಳಲ್ಲಿ, ₹ 18,000 ದೊಡ್ಡ ವಿಷಯವಾಗಿತ್ತು. ನಾನು ಅದನ್ನು ಚೆನ್ನಾಗಿ ಇಟ್ಟುಕೊಂಡಿದ್ದೇನೆ. ಚೆನ್ನಾಗಿ ಕಾಣಿಸುತ್ತದೆ ಅಲ್ಲವೇ ? ಅದು ಯಾವಾಗಲೂ ನನ್ನೊಂದಿಗೆ ಇರಬೇಕು ಅದಕ್ಕಾಗಿ ಪ್ರಾರ್ಥಿಸಿ  ಎಂದು ಧರ್ಮೇಂದ್ರ ವಿಡಿಯೋದಲ್ಲಿ ಹೇಳಿದ್ದಾರೆ.

NCB ಆಫೀಸರ್ ಮೇಲೆಯೇ ಪತ್ತೆದಾರಿಕೆ: ಹಿಂಬಾಲಿಸ್ತಿರೋದ್ಯಾರು?

ಧರ್ಮೇಂದ್ರ ಅವರು ಮುಂದೆ ಅನಿಲ್ ಶರ್ಮಾ ಅವರ ಅಪ್ನೆ 2 ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಅವರ ಮೊಮ್ಮಗ ಕರಣ್ ಡಿಯೋಲ್ ಅವರ ಮೊದಲ ಸಿನಿಮಾ ಆಗಿದೆ. ಕರಣ್ ಸನ್ನಿ ಡಿಯೋಲ್ ಮಗ. ಡಿಯೋಲ್ ಕುಟುಂಬದ ಮೂರು ತಲೆಮಾರುಗಳನ್ನು ಒಳಗೊಂಡಿರುವ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

ಧರ್ಮೇಂದ್ರ ಹೇಳಿಕೆಯಲ್ಲಿ, 'ಅಪ್ನೆ ನನ್ನ ಜೀವನದ ಅತ್ಯುತ್ತಮ ಸಿನಿಮಾಗಳಲ್ಲಿ ಒಂದಾಗಿದೆ. ಇಡೀ ತಂಡದ ಜಂಟಿ ಪ್ರಯತ್ನ, ನಿಮ್ಮೆಲ್ಲರಿಂದಲೂ ಚೆನ್ನಾಗಿ ಸ್ವೀಕರಿಸಲ್ಪಟ್ಟಿದೆ. ಈಗ, ನಾನು ತುಂಬಾ ಖುಷಿಯಾಗಿದ್ದೇನೆ. ನಾನು ನನ್ನ ಇಡೀ ಕುಟುಂಬದೊಂದಿಗೆ ಅಪ್ನೆ 2 ಚಿತ್ರೀಕರಣ ಮಾಡುತ್ತೇನೆ - ನನ್ನ ಮಕ್ಕಳಾದ ಸನ್ನಿ, ಬಾಬಿ ಮತ್ತು ನನ್ನ ಮೊಮ್ಮಗ ಕರಣ್. ಇದು ತುಂಬಾ ವಿಶೇಷವಾದ ಸಿನಿಮಾವಾಗಿದೆ ಎಂದಿದ್ದಾರೆ.

Follow Us:
Download App:
  • android
  • ios