Bollywood Super Stars: ಈ ಇಬ್ಬರು ನಟರು ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. 90ರ ದಶಕದಲ್ಲಿಯೇ ಕೋಟಿ ಸಂಭಾವನೆ ಪಡೆದ ನಟ ಮತ್ತು ವಿಶ್ವದ ಸುಂದರ ಪುರುಷರ ಪಟ್ಟಿಯಲ್ಲಿ ಸ್ಥಾನ ಪಡೆದ ನಟನ ಬಗ್ಗೆ ಮಾಹಿತಿ ಇಲ್ಲಿದೆ.

ಮುಂಬೈ: ಬಾಲಿವುಡ್ ಹಲವು ಸೂಪರ್‌ ಸ್ಟಾರ್‌ಗಳನ್ನು ಪರಿಚಯಿಸಿದ ಸಿನಿಲೋಕ. ಇಂದು ಬಾಲಿವುಡ್ ಸಿನಿಮಾ ಅಂದ್ರೆ ಭಾರತ ಮಾತ್ರವಲ್ಲ ವಿದೇಶಗಳಲ್ಲಿ ಹೊಸ ಕ್ರೇಜ್ ಸೃಷ್ಟಿಯಾಗುತ್ತದೆ. ಬಿಟೌನ್ ಅಂಗಳದ ಸಿನಿಮಾ ಪ್ಯಾನ್ ವರ್ಲ್ಡ್ ಕಲ್ಪನೆಯಲ್ಲಿ ಇಂದು ಬಿಡುಗಡೆಯಾಗುತ್ತಿವೆ. ಇಂದಿನ ಈ ಸಕ್ಸಸ್‌ಗೆ ಬುನಾದಿ ಹಾಕಿದವರು ಈ ಇಬ್ಬರು ಕಲಾವಿದರು. ಅಂತರಾಷ್ಟ್ರೀಯಮಟ್ಟಕ್ಕೆ ಬಾಲಿವುಡ್ ತೆಗೆದುಕೊಂಡ ಹೋದ ಕೀರ್ತಿ ಈ ಇಬ್ಬರು ಕಲಾವಿದರಿಗೆ ಸಿಗುತ್ತದೆ. ಒಬ್ಬರು 90ರ ದಶಕದಲ್ಲಿಯೇ 1 ಕೋಟಿ ರೂಪಾಯಿ ಸಂಭಾವನೆ ಪಡೆದ ನಟ. ಮತ್ತೊಬ್ಬರು 1970ರ ಕಾಲಘಟ್ಟದಲ್ಲಿ ವಿಶ್ವದ ಸುಂದರ ಪುರುಷರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದರು. ಇತ್ತೀಚೆಗೆ ಬಾಲಿವುಡ್ ನಟ ಹೃತಿಕ್ ರೋಷನ್ ಹೆಸರು ಈ ಪಟ್ಟಿಯಲ್ಲಿತ್ತು. 

ಬಾಲಿವುಡ್ ಸಿನಿಮಾಗಳನ್ನು ಅಂತರಾಷ್ಟ್ರೀಯಮಟ್ಟಕ್ಕೆ ಕರೆದುಕೊಂಡ ಹೋದ ಈ ಇಬ್ಬರು ಇಂದಿಗೂ ಬಣ್ಣದ ಲೋಕದಲ್ಲಿಯೂ ಸಕ್ರಿಯರಾಗಿದ್ದಾರೆ. ಇವರಿಬ್ಬರು ಜೊತೆಯಾಗಿ ನಟಿಸಿದ ಸಿನಿಮಾಗಳು ಸೂಪರ್ ಹಿಟ್‌ ಪಟ್ಟಿಯಲ್ಲಿ ಸೇರಿವೆ. ಈ ಫೋಟೋದಲ್ಲಿರೋದು ಒಬ್ಬರು ಆಂಗ್ರಿ ಯಂಗ್ ಮ್ಯಾನ್ ಅಮಿತಾಭ್ ಬಚ್ಚನ್, ಮತ್ತೊಬ್ಬರು ಹೀ ಮ್ಯಾನ್ ಖ್ಯಾತಿಯ ಧರ್ಮೇಂದ್ರ. ಇವರಿಬ್ಬರ ಜೋಡಿಯ ಶೋಲೆ ಸಿನಿಮಾವನ್ನು ನೋಡಲು ಇಂದಿಗೂ ಇಷ್ಟಪಡುತ್ತಾರೆ. ಶೋಲೆ ಸಿನಿಮಾದಲ್ಲಿ ಜಯ್ ಮತ್ತು ವೀರು ಆಗಿ ಕಾಣಿಸಿಕೊಂಡಿದ್ದರು. ಒಬ್ಬರ ಆಂಗ್ರಿ ಲುಕ್ ಮತ್ತೊಬ್ಬರ ವ್ಯಕ್ತಿತ್ವ ಜನರಿಗೆ ಇಷ್ಟವಾಗಿತ್ತು. ಇವರಿಬ್ಬರ ಜೋಡಿಗೆ ಜನರು ಒಂದು ರೀತಿ ಹುಚ್ಚರಾಗಿದ್ದರು. 

ಇಂದು ಮೇಡಮ್ ಟುಸ್ಸಾಡ್ಸ್ ವಸ್ತುಸಂಗ್ರಹಾಲಯದಲ್ಲಿ ಹಲವರ ಮೇಣದ ಪ್ರತಿಮೆಗಳನ್ನು ಕಾಣಬಹುದು. ಆದ್ರೆ ಇಲ್ಲಿ ಸ್ಥಾಪಿತವಾದ ಮೊದಲ ಬಾಲಿವುಡ್ ನಟನ ಮೇಣದ ಪ್ರತಿಮೆ ಅಂದ್ರೆ ಅದು ಅಮಿತಾಭ್ ಬಚ್ಚನ್ ಅವರದ್ದು. ಅಮಿತಾಭ್ ಬಚ್ಚನ್‌ ಅವರನ್ನು ಇಂದು ಲೆಜೆಂಡ್ ಎಂದು ಗುರುತಿಸಲಾಗುತ್ತಿದ್ದು, ತಮ್ಮ ವೃತ್ತಿ ಜೀವನದಲ್ಲಿ ಲೆಕ್ಕವಿಲ್ಲದಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ಅಮಿತಾಭ್‌ ಬಚ್ಚನ್ ನೀಡಿದ್ದಾರೆ. ಎಪ್ಪತ್ತರ ದಶಕದಲ್ಲಿ, ಅಮಿತಾಬ್ ಅವರ ಚಿತ್ರವನ್ನು ನೋಡಲು ಜನರು ಮಧ್ಯರಾತ್ರಿಯಲ್ಲಿ ಸಿನಿಮಾ ಮಂದಿರಗಳಲ್ಲಿ ಸಾಲುಗಟ್ಟಿ ನಿಲ್ಲುತ್ತಿದ್ದರು. 

ಇದನ್ನೂ ಓದಿ: ಸಂಕಷ್ಟದಲ್ಲಿ ಸಿಲುಕಿದ ಅಮಿತಾಭ್ ಬಚ್ಚನ್ ಅಳಿಯ, FIR ದಾಖಲು: ನಿಖಿಲ್ ನಂದಾ ವಿರುದ್ಧ ಗಂಭೀರ ಆರೋಪ 

ಇನ್ನು ಧರ್ಮೇಂದ್ರ ಸಹ ತಮ್ಮ ಸರಳ ವ್ಯಕ್ತಿತ್ವ ಮತ್ತು ನಟನೆಯಿಂದಲೇ ಪ್ರಪಂಚದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಎಪ್ಪತ್ತರ ದಶಕದಲ್ಲಿ ವಿಶ್ವದ ಅತ್ಯಂತ ಸುಂದರ ಪುರುಷರ ಪಟ್ಟಿಯಲ್ಲಿ ಧರ್ಮೇಂದ್ರ ಅವರ ಹೆಸರನ್ನು ಸೇರಿಸಲಾಗಿತ್ತು. ಈ ಪಟ್ಟಿಯಲ್ಲಿ ಸೇರ್ಪಡೆಯಾದ ಮೊದಲ ಬಾಲಿವುಡ್ ನಟ ಎಂಬ ಹೆಗ್ಗಳಿಕೆಗೆ ಧರ್ಮೇಂದ್ರ ಪಾತ್ರವಾಗಿದ್ದರು. 

ಬಾಲಿವುಡ್ ಸೂಪರ್‌ ಸ್ಟಾರ್ ಗಳಾದ ಅಮಿತಾಭ್ ಬಚ್ಚನ್ ಮತ್ತು ಧರ್ಮೇಂದ್ರ ಹಲವು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ. ಇವರಿಬ್ಬರ ನಟನೆಯ ಶೋಲೆ ಭಾರತ ಚಿತ್ರರಂಗದ ಅತಿದೊಡ್ಡ ಸಿನಿಮಾ ಎಂಬ ಹಿರಿಮೆಗೆ ಪಾತ್ರವಾಗಿದೆ. ಚುಪ್ಕೆ ಚುಪ್ಕೆ, ರಾಮ್ ಬಲರಾಮ್, ಹಮ್ ಕೌನ್ ಹೈ ಚಿತ್ರಗಳಲ್ಲಿ ಜೊತೆಯಾಗಿ ಅಮಿತಾಭ್ ಬಚ್ಚನ್ ಮತ್ತು ಧರ್ಮೇಂದ್ರ ನಟಿಸಿದ್ದಾರೆ. 

ಇದನ್ನೂ ಓದಿ: ಅವರ ಟಚ್ ನನಗೆ..! ಬಚ್ಚನ್ ಜೊತೆಗಿನ ರೊಮ್ಯಾಂಟಿಕ್ ಸೀನ್‌ಗಾಗಿ ಬ್ಲೌಸ್ ಟೈಟ್ ಮಾಡಿಸಿಕೊಂಡಿದ್ರು ಡ್ರೀಮ್ ಗರ್ಲ್!

View post on Instagram